Thursday, January 23, 2025

CLAN GOD. ಕುಲದೈವ , ಇಷ್ಟದೈವ, ಆರಾಧ್ಯದೈವ

 ಇಷ್ಟದೈವ, ಆರಾಧ್ಯ ದೈವ, ಕುಲದೈವ, ಮನೆ ದೇವರು, 

ಇಷ್ಟದೈವ                                                                           ನಾವು ಮನಃ ಪೂರ್ವಕವಾಗಿ ಮೆಚ್ಚಿ ನಂಬಿ ಆರಾಧಿಸುವ ದೇವರು. ನಮ್ಮ ಮನಸ್ಸಿನ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುವ ದೈವವೇ ಇಷ್ಟದೈವ. ಇಷ್ಟ ದೈವವು ಕೇವಲ ಈ ಜನ್ಮಕ್ಕೆ ಮಾತ್ರ ಮೀಸಲಾಗಿರುವುದು.

ಆರಾಧ್ಯ ದೈವ
ಆರಾಧ್ಯದೈವವೆಂದರೆ ಜನ್ಮ ಜನ್ಮಗಳಲ್ಲೂ ಆತ್ಮ ಸಮರ್ಪಣಾಭಾವದಿಂದ ಆರಾಧಿಸುವುದು.
ಈ ದೈವವು ಆತ್ಮಕ್ಕೆ ಸಂಬಂಧಪಟ್ಟಿದ್ದು, ನಾನು ಯಾರು ? ಎಂಬುದನ್ನು ತಿಳಿಸುವ ದೈವ. ಸೃಷ್ಟಿಯಲ್ಲಿ ಜನಿಸಿದ ಮೊದಲ ಜನ್ಮದಿಂದ ಹಿಡಿದು ಕೊನೆಯ ಜನ್ಮದವರೆಗೂ ನಮ್ಮ ಆತ್ಮದಲ್ಲಿ ಬೇರೆತಿರುವಂತಹ ದೈವ. ಈ ದೈವದಿಂದ ಸೃಷ್ಟಿಯಲ್ಲಿ ನಾವು ಏನು ಬೇಕಾದರೂ ಹೊಂದಬಹುದು.

ಕುಲದೈವ                                                                  ಏಳು ತಲೆಮಾರಿನಿಂದ ಆರಾಧಿಸಿಕೊಂಡು ಬಂದ‌ ದೇವರು. ಒಬ್ಬ ವ್ಯಕ್ತಿಗೆ ಒಂದು ದೈವ ಸಾಕ್ಷಾತ್ಕಾರವಾಯಿತು ಅಂದರೆ ಅದರ ಪ್ರಭಾವ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಆ ವ್ಯಕ್ತಿಯ ಏಳು ತಲೆಮಾರಿನ ವರೆಗೂ ಇರುತ್ತದೆ. ಅಲ್ಲಿಂದ ಎಲ್ಲಾ ಪೀಳಿಗೆಗಳು ಆ ದೈವವನ್ನು ಕುಲದೈವ ವೆಂದು ಆರಾಧಿಸುತ್ತಾ ಬರುತ್ತಾರೆ. ಅದರ ಪ್ರಭಾವವನ್ನು ವಂಶದ ಮೇಲೆ ಪ್ರಬಲವಾಗಿ  ಬೇರೂರಿರುವ ಕಲ್ಪವೃಕ್ಷದ ಹಾಗೆ ವಂಶವನ್ನು ರಕ್ಷಿಸಲೆಂದು ಆರಾಧಿಸುತ್ತಾರೆ.
ಆ ಕುಲದೈವದ ಆರಾಧನೆಯಿಂದ ವಂಶಕ್ಕೆ ಒದಗಿಬರುವ ಆಪತ್ತುಗಳನ್ನು ತಡೆಯುವ ಶಕ್ತಿ ಇರುತ್ತದೆ. ಮತ್ತು ವಂಶವನ್ನು ಉದ್ದಾರದೆಡೆಗೆ ಕೊಂಡೊಯ್ಯುತ್ತದೆ.

ಮನೆದೇವರು
ಮನೆ ದೇವರು ಎಂದರೆ ಅದು ಮೂರು ತಲೆಮಾರಿನವರಿಗೆ ಮಾತ್ರ ಇರುತ್ತದೆ. ಈ ಮನೆದೇವರನ್ನು ಕುಲದೇವರೆಂದು ಆರಾಧಿಸುವ ಮನೆಯನ್ನು ನಾವು ನೋಡಬಹುದು ಅವರು ಹಲವು ದೈವವನ್ನು ಮೊರೆಹೋಗುತ್ತಾರೆ.                                  

ಜಾತಕ ರೀತಿಯಲ್ಲಿ         ‌                                            ಇನ್ನು ಲಗ್ನ, ಪಂಚಮ, ನವಮ ಸ್ಥಾನಕ್ಕೆ ಸಂಬಂಧಿಸಿದ ದೈವವನ್ನು ಆರಾಧಿಸುವುದು, ಈಗಿನ ಜನ್ಮದ ಪ್ರಾರಬ್ಧ ಕರ್ಮ ಗಳ ಮುಕ್ತಿಗಾಗಿ ಆರಾಧಿಸುತ್ತಾರೆ.
ಮೊದಲ ಮನೆ ಅಥವಾ ಆರೋಹಣ ಮನೆ: ಇದು ಪ್ರಕೃತಿ ಮನೆ ಸ್ವಭಾವ ಗುಣ ಜಾತಕದ ಮೊದಲ ಮನೆ ನಿಮ್ಮ ಸ್ವಭಾವವನ್ನು ಹೇಳುತ್ತದೆ.
ಎರಡನೇ ಮನೆ: ಇದು ಹಣ ಮತ್ತು ಕುಟುಂಬಕ್ಕೆ ಸಂಬಂಧಿಸಿದೆ. ಜಾತಕದ ಎರಡನೇ ಮನೆ ಹಣ ಮತ್ತು ಕುಟುಂಬದ ಬಗ್ಗೆ ಹೇಳುತ್ತದೆ.
ಮೂರನೇ ಮನೆ: ಇದು ಒಡಹುಟ್ಟಿದವರು ಮತ್ತು ಶೌರ್ಯದೊಂದಿಗೆ ಸಂಬಂಧಿಸಿದೆ. ಜಾತಕದ ಮೂರನೇ ಮನೆ ಸಹೋದರರು, ಸಹೋದರಿಯರು ಮತ್ತು ಶೌರ್ಯದ ಬಗ್ಗೆ ಹೇಳುತ್ತದೆ.
ನಾಲ್ಕನೇ ಮನೆ: ಇದು ತಾಯಿ, ಸಂತೋಷ, ಆಸ್ತಿ ಮತ್ತು ಭಾವನಾತ್ಮಕ ಸ್ಥಿರತೆಗೆ ಸಂಬಂಧಿಸಿದೆ.  ಜಾತಕದ ನಾಲ್ಕನೇ ಮನೆ ತಾಯಿ ಮತ್ತು ಸಂತೋಷದ ಬಗ್ಗೆ ಹೇಳುತ್ತದೆ.
ಐದನೇ ಮನೆ: ಇದು ಮಕ್ಕಳು, ಶಿಕ್ಷಣ, ಸೃಜನಶೀಲತೆ, ಬುದ್ಧಿವಂತಿಕೆ ಮತ್ತು ಪ್ರೀತಿಯ ಸಂಬಂಧಗಳೊಂದಿಗೆ ಸಂಬಂಧಿಸಿದೆ. ಜಾತಕದ ಐದನೇ ಮನೆ ಮಕ್ಕಳು ಮತ್ತು ಜ್ಞಾನದ ಬಗ್ಗೆ ಹೇಳುತ್ತದೆ.
ಆರನೇ ಮನೆ: ಇದು ಶತ್ರುಗಳು, ರೋಗಗಳು, ಚಿಂತೆಗಳು ಮತ್ತು ಸೇವೆಗಳೊಂದಿಗೆ ಸಂಬಂಧಿಸಿದೆ. ಜಾತಕದ ಆರನೇ ಮನೆ ಶತ್ರುಗಳು ಮತ್ತು ರೋಗಗಳ ಬಗ್ಗೆ ಹೇಳುತ್ತದೆ.
ಏಳನೇ ಮನೆ: ಇದು ಮದುವೆ, ಪಾಲುದಾರಿಕೆ ಮತ್ತು ಸಂಬಂಧಗಳೊಂದಿಗೆ ಸಂಬಂಧಿಸಿದೆ. ಜಾತಕದ ಏಳನೇ ಮನೆ ಮದುವೆ ಮತ್ತು ಪಾಲುದಾರಿಕೆಯ ಬಗ್ಗೆ ಹೇಳುತ್ತದೆ.
ಎಂಟನೇ ಮನೆ: ಇದು ವಯಸ್ಸು, ಜೀವನದ ನಿಗೂಢ ಮತ್ತು ರಹಸ್ಯ ವಿಷಯಗಳು, ಸಾವು, ಪುನರ್ಜನ್ಮ ಮತ್ತು ಆನುವಂಶಿಕತೆಗೆ ಸಂಬಂಧಿಸಿದೆ. ಜಾತಕದ ಎಂಟನೇ ಮನೆ  ವಯಸ್ಸಿನ ಬಗ್ಗೆ ಹೇಳುತ್ತದೆ.
ಒಂಬತ್ತನೇ ಮನೆ: ಇದು ಅದೃಷ್ಟ, ತಂದೆ, ಧರ್ಮ, ದೀರ್ಘ ಪ್ರಯಾಣ, ಉನ್ನತ ಶಿಕ್ಷಣ ಮತ್ತು ತತ್ತ್ವಶಾಸ್ತ್ರದೊಂದಿಗೆ ಸಂಬಂಧಿಸಿದೆ. ಜಾತಕದ ಒಂಬತ್ತನೇ ಮನೆ ಅದೃಷ್ಟ, ತಂದೆ ಮತ್ತು ಧರ್ಮದ ಬಗ್ಗೆ ಹೇಳುತ್ತದೆ.
 ಹತ್ತನೇ ಮನೆ - ಜಾತಕದ ಹತ್ತನೇ ಮನೆ ವೃತ್ತಿ ಮತ್ತು ವ್ಯವಹಾರದ ಬಗ್ಗೆ ಹೇಳುತ್ತದೆ.
 ಹನ್ನೊಂದನೇ ಮನೆ - ಜಾತಕದ ಹನ್ನೊಂದನೇ ಮನೆ ನಿಮ್ಮ ಆದಾಯ ಮತ್ತು ಲಾಭಗಳ ಬಗ್ಗೆ ಹೇಳುತ್ತದೆ.
 ಹನ್ನೆರಡನೇ ಮನೆ  - ಜಾತಕದ ಹನ್ನೆರಡನೇ ಮನೆ ನಿಮ್ಮ ಖರ್ಚು ಮತ್ತು ನಷ್ಟಗಳ ಬಗ್ಗೆ ಹೇಳುತ್ತದೆ.
         ತೃತೀಯ, ಅಷ್ಟಮ, ದ್ವಾದಶ ಸ್ಥಾನದ ದೇವತೆಗಳನ್ನು ಹಿಂದಿನ ಜನ್ಮಗಳ ಸಂಚಿತ ಕರ್ಮ ಗಳ ಮುಕ್ತಿಗಾಗಿ ಆರಾಧಿಸುತ್ತಾರೆ.
       ಚತುರ್ಥ ಮತ್ತು ಸಪ್ತಮದ ದೇವತೆಗಳನ್ನು ಭವಿಷ್ಯದ ಆಗಾಮಿ ಕರ್ಮ ಫಲಗಳಿಗಾಗಿ ಆರಾಧಿಸುತ್ತಾರೆ.
ಮೊದಲನೆಯ  ಎಂಟನೆಯ ಮನೆಯ ಅಧಿಪತಿ ಮಂಗಳ.
 ಎರಡನೇ ಏಳನೆಯ ಮನೆಯ ಅಧಿಪತಿ ಶುಕ್ರ.
 ಮೂರನೇ ಆರನೇ ಮನೆಯ ಅಧಿಪತಿ ಬುಧ
 ನಾಲ್ಕನೇ ಮನೆಯ ಅಧಿಪತಿ ಚಂದ್ರ.
 ಐದನೇ ಮನೆಯ ಅಧಿಪತಿ ಸೂರ್ಯ.
 ಒಂಬತ್ತನೇ ಹನ್ನೆರಡನೆಯ ಮನೆಯ ಅಧಿಪತಿ ಗುರು
 ಹತ್ತನೇ ಮನೆಯ ಹನ್ನೊಂದನೇ ಮನೆಯ ಅಧಿಪತಿ ಶನಿ. 
ಜಾತಕದ 12 ಮನೆಗಳ ಅಧಿಪತಿಯನ್ನು ಭಾವೇಶ ಎಂದು ಕರೆಯಲಾಗುತ್ತದೆ.
    ಅಧಿಪತಿಗಳು  ವಿಷಯಗಳನ್ನು ಸಂಘಟಿಸುತ್ತಾರೆ ಮತ್ತು ಕೇವಲ ಆಶೀರ್ವಾದ ಮತ್ತು ಅನುಕೂಲಗಳನ್ನು ನೀಡುತ್ತಾರೆ.
ಪ್ರತ್ಯಧಿದೇವತೆ ತೊಂದರೆ ನಿವಾರಕ ಮತ್ತು ದೋಷಗಳನ್ನು ನಿವಾರಿಸುತ್ತದೆ.
ಸೂರ್ಯನ ಅಧಿದೇವತೆ ಶಿವ  ಪ್ರತ್ಯಧಿದೇವತೆ  ಅಗ್ನಿ.
ಚಂದ್ರನ ಅಧಿದೇವತೆ ಪಾರ್ವತಿ  ಪ್ರತ್ಯಧಿದೇವತೆ ಜಲ
ಮಂಗಳನ ಅಧಿದೇವತೆ ಸ್ಕಂಧ ಪ್ರತ್ಯಧಿದೇವತೆ ಭೂಮಿ.
ಬುಧದ ಅಧಿದೇವತೆ ವಿಷ್ಣು, ಪ್ರತ್ಯಧಿದೇವತೆ ವಿಷ್ಣು
ಗುರುವಿನ ಅಧಿದೇವತೆ ಬ್ರಹ್ಮ ಪ್ರತ್ಯಧಿದೇವತೆ ಇಂದ್ರ
ಶುಕ್ರನ ಅಧಿದೇವತೆ ಇಂದ್ರ, ಪ್ರತ್ಯಧಿದೇವತೆ.ಇಂದ್ರಾಣಿ
ಯಮ, ಶನಿಯ ಅಧಿದೇವತೆ  ಪ್ರತ್ಯಧಿದೇವತೆ ಪ್ರಜಾಪತಿ
ಕಾಲವು ರಾಹುವಿನ ಅಧಿದೇವತೆ  ಪ್ರತ್ಯಧಿದೇವತೆ ಸರ್ಪ
ಚಿತ್ರಗುಪ್ತ ಕೇತುವಿನ ಅಧಿದೇವತೆ ಬ್ರಹ್ಮ ಪ್ರತ್ಯಧಿದೇವತೆ
         ಸಂಬಂಧಪಟ್ಟವರು ತಮ್ಮ ತಮ್ಮ ದೋಷ ಪರಿಹಾರಕ್ಕಾಗಿ, ಅಭಿವೃದ್ಧಿಗೆ ಪುಷ್ಟಿಗೆ  ತಮ್ಮ ಇಷ್ಟ ದೇವರ, ಕುಲದೇವರ ಆರಾಧನೆಯನ್ನು ಜಾತಕದ ಜನ್ಮ ಅಥವಾ ಲಗ್ನ ಕುಂಡಲಿಯಲ್ಲಿ ಸ್ಥಾನ ಪರತ್ವೇ ಉಪಸ್ಥಿತರಿದ್ದ ಗ್ರಹಗಳ ಅಧಿದೇವತೆ, ಪ್ರತ್ಯಧಿದೇವತೆಗಳನ್ನು ಆರಾಧಿ‌ಸುವುದು ಒಳಿತು 
ಧನ್ಯವಾದಗಳು 

No comments:

Post a Comment