ಪುಷ್ಕರ (ಬೃಹಸ್ಪತಿ ಗತಿ / ಗತ)
ಗಂಗೆಯೇ ಮೊದಲಾದ ೧೨ ನದಿಗಳಲ್ಲಿ ಸಾರ್ಧ ತ್ರಿಕೋಟಿ ತೀರ್ಥ ಸಹಿತ ಪುಷ್ಕರನು ನಿವಾಸಮಾಡುವ ಕಾಲಕ್ಕೆ "ಪುಷ್ಕರ" ಎಂದು ಹೆಸರು.
ಮೇಷ ಮೊದಲಾದ ೧೨ ರಾಶಿಗಳಲ್ಲಿ ಬೃಹಸ್ಪತಿ (ಗುರು) ಸಂಚರಿಸುವ ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು. ಆಯಾ ನದಿಗಳ ದಂಡೆಯಲ್ಲಿ ವಾಸಿಸುವವರಿಗೆ, ಗುರು ಕೃಪೆಯನ್ನು ಪಡೆಯಲು ಇಚ್ಛಿಸುವವರು ಸಂಬಂಧಿತ ನದಿ ತೀರಗಳಲ್ಲಿ ಹೋಗಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಯತ್ನಿಸಬಹುದು.
ಬೃಹಸ್ಪತಿಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುವನು.
ಆಗ ಆಯಾ ನದಿಗಳಲ್ಲಿ ಮೂರುವರೆಕೋಟಿ ತೀರ್ಥಗಳಿಂದ ಸಹಿತನಾದ ಪುಷ್ಕರನು (ತೀರ್ಥರಾಜ) ಹಾಗೂ ಸಕಲಮುನಿಗಳು ವಾಸಿಸುವರು. ಆದಕಾರಣ ಪ್ರವೇಶ ದಿನದಿಂದ ೧೨ ದಿನಗಳು-ಆದಿಪುಷ್ಕರ ಎಂದೂ, ಕೊನೆಯ ೧೨ ದಿನಗಳು-ಅಂತ್ಯ ಪುಷ್ಕರ ಎಂದು ಪ್ರಸಿದ್ಧಿಯಾಗಿದೆ.
ಈ ದಿನಗಳಲ್ಲಿ ನದೀ ತೀರಗಳಲ್ಲಿಮಾಡುವ ಕ್ಷೇತ್ರೋವಾಸ ತೀರ್ಥ ಶ್ರಾದ್ಧ/ಸ್ನಾನ ದಾನ ವ್ರತ ಜಪ ತಪ ಪೂಜಾದಿಗಳೆಲ್ಲವೂ ಅನಂತ ಫಲಪ್ರದವಾಗಿದೆ.
೬೦ ಸಾವಿರ ವರ್ಷ ಗಂಗೆಯಲ್ಲಿ ಮಿಂದ ಫಲ ಪುಷ್ಕರ ಸಮಯದಲ್ಲಿ ಒಂದು ದಿನ ಸ್ನಾನ ಮಾಡಿದರೆ ಬರುವುದು ಎಂದು ಹೇಳುವುದುಂಟು ಇದರ ಸಾಮಾನ್ಯ ಅರ್ಥದಲ್ಲಿ ಹನ್ನೆರಡೂ ನದಿಗಳಲ್ಲಿ ಬೃಹಸ್ಪತಿ ಪ್ರವೇಶವು ಪ್ರತಿ ರಾಶ್ಯಾಂತರ್ಗತ ಭ್ರಮಣ ಯೋಗ ದಿಂದ ಪ್ರತಿ ೧೨ ವರ್ಷಕ್ಕೊಮ್ಮೆ ಆಯಾ ನದಿಗಳಲ್ಲಿ ಪುಣ್ಯಕಾಲವು ಪ್ರಾಪ್ತವಾಗುತ್ತದೆ
೧) ಮೇಷ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗಂಗಾ ನದಿಗೆ ಪುಷ್ಕರ. (ಮೇಷ ಗತ)
೨) ವೃಷಭ ಪ್ರವೇಶ ಮಾಡಿದಾಗ ನರ್ಮದಾ ನದಿಗೆ ಪುಷ್ಕರ. (ವೃಷಭ ಗತ )
೩) ಮಿಥುನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸರಸ್ವತಿ ನದಿಗೆ ಪುಷ್ಕರ. (ಮಿಥುನ ಗತ )
೪) ಕರ್ಕಾಟಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಯಮುನಾ ನದಿಗೆ ಪುಷ್ಕರ (ಕರ್ಕ ಗತ)
೫) ಸಿಂಹ ರಾಶಿಯಲ್ಲಿ ಪ್ರವೇಶ ಮಾಡಿದಾಗ ಗೋದಾವರೀ ನದಿಗೆ ಪುಷ್ಕರ. ( ಸಿಂಹ ಗತ)
೬) ಕನ್ಯಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕೃಷ್ಣಾ ನದಿಗೆ ಪುಷ್ಕರ ( ಕನ್ಯಾ ಗತ )
೭) ತುಲಾ ರಾಶಿಯಲ್ಲಿ ಪ್ರವೇಶ ಮಾಡಿದಾಗ ಕಾವೇರಿ ನದಿಗೆ ಪುಷ್ಕರ ( ತುಲಾ ಗತ)
೮) ವೃಶ್ಚಿಕ ರಾಶಿಯಲ್ಲಿ ಪ್ರವೇಶ ಮಾಡಿದಾಗ ಭೀಮರಥಿ ನದಿಗೆ ಪುಷ್ಕರ. ( ವೃಶ್ಚಿಕ ಗತ)
೯) ಧನು ರಾಶಿಯಲ್ಲಿ ಪ್ರವೇಶ ಮಾಡಿದಾಗ ಪುಷ್ಕರ ನದಿಗೆ ಪುಷ್ಕರ. ( ಧನು ಗತ)
೧೦) ಮಕರರಾಶಿಯಲ್ಲಿ ಪ್ರವೇಶ ಮಾಡಿದಾಗ ತುಂಗಭದ್ರಾ ನದಿಗೆ ಪುಷ್ಕರ. ( ಮಕರ ಗತ )
೧೧) ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದಾಗ ಸಿಂಧು ನದಿಗೆ ಪುಷ್ಕರ. ( ಕುಂಭ ಗತ )
೧೨) ಮೀನ ರಾಶಿಯಲ್ಲಿ ಪ್ರವೇಶ ಮಾಡಿದಾಗ ಪ್ರಣೀತಾ ನದಿಗೆ ಪುಷ್ಕರ. ( ಮೀನ ಗತ)
ಮೇಷೇ ಗಂಗಾ ವೃಷೇ ರೇವಾ ಗತೇ ಯುಗ್ಮೇ ಸರಸ್ವತಿ
ಯಮುನಾ ಕರ್ಕಟೇ ಚೈವ ಗೋದಾವರ್ಯಪಿ ಸಿಂಹಗೇ
ಕನ್ಯಾಯಾಂ ಕೃಷ್ಣವೇಣೀ ಚ ಕಾವೇರಿ ಚ ತುಲಾಗತೇ
ವೃಶ್ಚಿಕೇ ಸ್ಯಾದ್ಭೀಮರಥೀ ಸಿಂಧುಃ ಪ್ರಣಿತಾ ತಟಿನೀ ಝುಷೇ
ಮೇಷೇಗುರೌ ಪ್ರವಿಷ್ಟೇ ಗಂಗಾ ಪುಷ್ಕರಯುತಾ ಭವತೀತಿವತ್ ಸರ್ವತ್ರಾನ್ವಯಃಜನ್ಮ ಪ್ರಭೃತಿ ಯತ್ಪಾಪಂ ಸ್ತ್ರೀಯಾ ವಾ ಪುರುಷೇಣ ವೆಪುಷ್ಕರೇ ಸ್ನಾತಮಾತ್ರಸ್ಯ ಸರ್ವಮೇವ ಪ್ರಣಶ್ಯತಿ
ಸ್ತ್ರೀಯರಾಗಲಿ ಪುರುಷರಾಗಲೀ ಹುಟ್ಟಿದಾರಾಭ್ಯ ಮಾಡಿದ ಪಾಪಗಳು ನಿವಾರಣೆ ಸಾಧ್ಯ ಪುಷ್ಕರ ಸಮಯದಲ್ಲಿ ಸ್ನಾನ ಮಾಡುವುದರಿಂದ ಅನಂತ ಪುಣ್ಯಫಲ ಪ್ರಾಪ್ತವಾಗುತ್ತದೆ
No comments:
Post a Comment