ಶನಿ ಪ್ರದೋಷ ಪೂಜಾ ವಿಧಿ
ಪ್ರದೋಷ ಎಂದರೆ ಪಾಪಗಳಿಂದ ಮುಕ್ತಿ ಎಂದರ್ಥ.
ಶನಿವಾರದಂದು ಶನಿದೇವರ ಪ್ರೀತ್ಯರ್ಥವಾಗಿ ಉಪವಾಸವನ್ನು ಮಾಡುತ್ತಾರೆ. ಶನಿವಾರದಂದು ಪ್ರದೋಷ ಬಂದಾಗ ಆ ದಿನ ಶಿವ ಮತ್ತು ಶನಿದೇವರು ಇಬ್ಬರನ್ನೂ ಆರಾಧಿಸುವುದರಿಂದ ಹೆಚ್ಚು ಫಲ ಪ್ರಾಪ್ತಿಯಾಗುವುದು.
ಶನೈಶ್ಚರನು ಕರ್ಮಕಾರಕ ಗ್ರಹನಾಗಿದ್ದು, ಶನಿವಾರದಂದು ಆತನ ಪ್ರಭಾವ ಹೆಚ್ಚಾಗಿರುತ್ತದೆ. ಆದ್ದರಿಂದ ಶನಿ ಪ್ರದೋಷದ ದಿನದಂದು ಆರಾಧಿಸಿ, ಶಿವನಿಗೆ ನಿಮ್ಮ ಪ್ರಾರ್ಥನೆ ಸಲ್ಲಿಸುವುದರಿಂದ ನಿಮ್ಮ ಪಾಪ ಮತ್ತು ಕರ್ಮದ ಪರಿಣಾಮಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ.
ಭಗಂತನಾದ ಶಿವನು ಶನಿಯ ಅಧಿದೇವತೆ. ಶಿವನು ರೂಪಾಂತರ ಮತ್ತು ಲಯದ ಅಧಿಪತಿ, ಹಾಗೆಯೇ ಶನಿಯು ನ್ಯಾಯದ ಪ್ರಭುವಾಗಿದ್ದಾನೆ. ಶನಿಯು, ತಪ್ಪು ಮಾರ್ಗದಿಂದ ಒಬ್ಬ ವ್ಯಕ್ತಿಯು ಪಡೆದ ಖ್ಯಾತಿ, ಅಧಿಕಾರವನ್ನು ನಾಶಪಡಿಸುತ್ತಾನೆ, ಮತ್ತು ಆ ವ್ಯಕ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ನಂಬಿಕೆಯನ್ನು ಪುನಃ ಸ್ಥಾಪಿಸಿ, ಉತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾನೆ. ಈ ರೂಪಾಂತರವು ಶಿವನನ್ನು ತಲುಪುವ ಅಂತಿಮ ಮಾರ್ಗವಾಗಿದೆ. ಒಂದು ಶನಿ ಪ್ರದೋಷ ವ್ರತ ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.
ಶನಿವಾರ ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ. ಸಾಡೇಸಾತಿಯ ಪ್ರಭಾವ ಸಹ ಕಡಿಮೆಯಾಗುತ್ತದೆ. ಈ ದಿನ ಈಶ್ವರ ಮತ್ತು ಶನಿದೇವ ಇಬ್ಬರನ್ನು ಪೂಜೆ ಮಾಡಬೇಕು.
ಶನಿ ಪ್ರದೋಷ ವ್ರತಾಚರಣೆ ಸಾಮಾನ್ಯವಾಗಿ ಜನರು ಪ್ರದೋಷದ ದಿನದಂದು ಕಟ್ಟುನಿಟ್ಟಾದ ಉಪವಾಸವನ್ನು ತಮ್ಮನ್ನು ತಾವು ತಿನ್ನುವುದು ಮತ್ತು ಕುಡಿಯುವುದರಿಂದ ದೂರವಿದ್ದು ಆಚರಿಸುತ್ತಾರೆ. ಸಂಜೆಯ ವೇಳೆ ಶಿವನ ಜೊತೆಯಲ್ಲಿ ಶನಿದೇವರ ಪೂಜೆಯನ್ನು ಮಾಡುವ ಮೂಲಕ ಈ ಉಪವಾಸವನ್ನು ಕೊನೆಗೊಳಿಸುತ್ತಾರೆ. ಸೂರ್ಯಾಸ್ತದ 1.5 ಗಂಟೆಗಳ ಮೊದಲು ಮತ್ತು 1.5 ಗಂಟೆಗಳ ನಂತರದ ಸಮಯ, ಪ್ರದೋಷದ ಪೂಜೆಯನ್ನು ಮಾಡಲು ಸೂಕ್ತ.
ಷೋಡಶೋಪಚಾರ ಪೂಜೆ ಆವಾಹನಂ ಸಮರ್ಪಯಾಮಿ ||ಆಸನಂ ಸಮರ್ಪಯಾಮಿ || ಪಾದ್ಯಂ ಸಮರ್ಪಯಾಮಿ || ಅರ್ಘ್ಯಂ ಸಮರ್ಪಯಾಮಿ || ಆಚಮನಂ ಸಮರ್ಪಯಾಮಿ || ಸ್ನಾನಂ ಸಮರ್ಪಯಾಮಿ || ವಸ್ತ್ರಂ ಸಮರ್ಪಯಾಮಿ ||
ಆಭರಣಂ ಸಮರ್ಪಯಾಮಿ|| ಗಂಧಂ ಸಮರ್ಪಯಾಮಿ ||
ಅಕ್ಷತಾನ್ ಸಮರ್ಪಯಾಮಿ || ಪುಷ್ಪಾಣಿ ಸಮರ್ಪಯಾಮಿ || (ಎಲ್ಲದಕ್ಕೂ ಒಂದೊಂದು ಹೂ ಹಾಕುವುದು.)
[ಪ್ರತಿಮಂತ್ರಕ್ಕೂ ಹೇಳಿದ ಬೆರಳುಗಳನ್ನು ಹೆಬ್ಬೆರಳಿನಿಂದ ಸ್ಪರ್ಶಮಾಡಿ ದೇವರಕಡೆ ಸಮರ್ಪಣೆ ತೋರಿಸುವುದು ]
|| ಕನಿಷ್ಠಾನಾಮಿಕ ಅಂಗುಷ್ಠೈಃ | ಓಂ ಪ್ರಾಣಾಯ ಸ್ವಾಹಾ ||ಅನಾಮಿಕಾಮಧ್ಯಮಾ ಅಂಗುಷ್ಠೈಃ |ಓಂ ಅಪಾನಾಯ ಸ್ವಾಹಾ || ಮಧ್ಯಮಾ ತರ್ಜನಿ ಅಂಗುಷ್ಠೈಃ | ಓಂ ವ್ಯಾನಾಯ ಸ್ವಾಹಾ || ಕನಿಷ್ಠತರ್ಜನಿ ಅಂಗುಷ್ಠೈಃ |ಓಂ ಉದಾನಾಯ ಸ್ವಾಹಾ || ಸರ್ವಾಭಿಃ ಅಂಗುಲೀಭಿಃ |ಓಂ ಸಮಾನಯ ಸ್ವಾಹಾ || ಇತಿ ಪಂಚ ಮುದ್ರಾ ಪ್ರದರ್ಶ್ಯ || ಓಂ ಬ್ರಹ್ಮಣೇ ಸ್ವಾಹಾ || ಸೂರ್ಯ ಗಣಪತ್ಯಂಬಿಕಾ ಶಿವ ವಿಷ್ಣು ದೇವೇಭ್ಯೋ ನಮಃ|| ಇಷ್ಟದೇವತಾಭ್ಯೋನಮಃ [ಶ್ರೀ ಲಕ್ಷ್ಮಿ ನಾರಾಯಣೇಭ್ಯೋ ನಮಃ : [ಹೀಗೆ ಇಷ್ಟದೇವರ ಹೆಸರು ಹೇಳುವುದು] || ನೈವೇದ್ಯಂ ಸಮರ್ಪಯಾಮಿ [ವಿಸರ್ಜಯಾಮಿ] [ ಪುನಃ ತುಲಸೀದಲ ಮಿಶ್ರಿತ ಜಲೇನ ನೈವೇದ್ಯಂ ಪರಿಷಿಚ್ಯ ತುಲಸೀದಲಂ ದೇವೇ ಅರ್ಪಯೇತ್ || ನೀರು ತುಲಸೀದಲದಿಂದ ಸುಳಿದು ಮಂತ್ರ ಹೇಳಿ ದೇವರಿಗೆ ಅರ್ಪಿಸುವುದು ] || ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ|| ಓಂ ಅಮೃತಾಪಿಧಾನಮಸಿ ಸ್ವಾಹಾ || ಪಾರ್ಷದ ಗಣೇಭ್ಯೋ ನಮಃ || ತೃಪ್ತಿರಸ್ತು|| ಹಸ್ತ ಪ್ರಾಕ್ಷಾಲನಂ ಮುಖ ಪ್ರಾಕ್ಷಾಲನಂ ಸಮರ್ಪಯಾಮಿ || ಪೂಗೀಫಲ ತಾಂಬೂಲಂ ಸಮರ್ಪಯಾಮಿ|| ಪುಷ್ಪಂ ಸಮರ್ಪಯಾಮಿ || ಸರ್ವೋಪಚಾರ ಪೂಜಾಂ ಸಮರ್ಪಯಾಮಿ ||
ಸೃಷ್ಟಿಯಲ್ಲಿ ಅಸಮತೋಲನ ಕಂಡಾಗ ಅಥವಾ ದುಷ್ಟ ಶಕ್ತಿಯ ಆರ್ಭಟ ಹೆಚ್ಚಿದಾಗ ಶಿವನು ಅತ್ಯಂತ ಕೋಪಕ್ಕೆ ಒಳಗಾಗುವನು. ಜೊತೆಗೆ ಆ ದುಷ್ಟ ಸಂಗತಿಗಳ ನಿರ್ಮೂಲನೆ ಮಾಡುವನು. ಹಾಗಾಗಿಯೇ ಶಿವನನ್ನು ರುದ್ರ ಎಂಬ ಹೆಸರಿನಿಂದ ಕರೆಯಲಾಗುವುದು. ಶಿವನ ಉಗ್ರ ರೂಪವನ್ನು ರುದ್ರ ಎನ್ನುವ ಪದವು ಪ್ರತಿನಿಧಿಸುತ್ತದೆ. ರುದ್ರನಾಗಿರುವಾಗ ಶಿವನಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪವಿತ್ರ ಸ್ನಾನ ಅಥವಾ ಅಭಿಷೇಕವನ್ನು ಕೈಗೊಂಡರೆ ಅವನು ಶಾಂತನಾಗುತ್ತಾನೆ. ಜೊತೆಗೆ ಬೇಕಾದ ವರವನ್ನು ನೀಡುವನು. ಅಂತಹ ಒಂದು ವಿಶೇಷ ಹಾಗೂ ಪವಿತ್ರವಾದ ಅಭಿಷೇಕ ಎಂದರೆ ರುದ್ರಾಭಿಷೇಕ. ಶಿವನನ್ನು ಮೆಚ್ಚಿಸಲು ಕೈಗೊಳ್ಳಲಾಗುವ ಈ ಅಭಿಷೇಕವು ಅತ್ಯಂತ ಶ್ರೇಷ್ಠತೆಯಿಂದ ಕೂಡಿದೆ. ಇದನ್ನು ಯಾರು ಕೈಗೊಳ್ಳುತ್ತಾರೆ, ಅವರ ಆರೋಗ್ಯ, ಸಂಪತ್ತು ಮತ್ತು ಸಂತೋಷವು ಹೆಚ್ಚುವುದು. ಅಲ್ಲದೆ ಶತ್ರು, ನಕಾರಾತ್ಮಕ ಶಕ್ತಿ ಮತ್ತು ದುಷ್ಟರ ವಿರುದ್ಧ ರಕ್ಷಣೆ ನೀಡುತ್ತದೆ.
ಪ್ರದೋಷ ವ್ರತದ ದಿನ ಮಾಡಬೇಕಾದ ಪೂಜೆಗಳು ಅರ್ಚನೆ, ಶಿವ ಅಷ್ಟೋತ್ತರದ ಸಮೇತ
– ಹಾಲಿನ ಅಭಿಷೇಕ
– ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ
– ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ
ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು
ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ
ಪಂಚಾಮೃತ – ಸಂಪತ್ತನ್ನು ನೀಡುತ್ತದೆ
ತುಪ್ಪ – ಮೋಕ್ಷವನ್ನು ನೀಡುತ್ತದೆ
ಹಾಲು – ದೀರ್ಘಾಯುಷ್ಯ
ಮೊಸರು – ಮಕ್ಕಳ ಭಾಗ್ಯ
ಜೇನುತುಪ್ಪ – ಉತ್ತಮ ಧ್ವನಿ
ಅಕ್ಕಿ ಹಿಟ್ಟು – ಸಾಲಗಳಿಂದ ಮುಕ್ತಿ
ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ
ನಿಂಬೆ ರಸ – ಸಾವಿನ ಭಯದಿಂದ ದೂರ ಮಾಡುತ್ತದೆ
ಎಳನೀರು – ಸಂತೋಷ ಮತ್ತು ಜೀವನ ಆನಂದ
ಅನ್ನ – ಜೀವನವನ್ನು ಅದ್ಭುತ ಗೊಳಿಸುತ್ತದೆ.
ಚಂದನ – ಲಕ್ಷ್ಮಿ ಕಟಾಕ್ಷ
ಸಕ್ಕರೆ – ಶತ್ರು ನಾಶ
|| ಮಂಗಲ ನೀರಾಜನಂ ಕರಿಷ್ಯೇ ||
ಓಂ ನಮೋ ಭಗವತೇ ರುದ್ರಾಯ
ಓಂ ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ| ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ| ಯಾ ತ ಇಷುಃ ಶಿವತಮಾ ಶಿವಂ ಬಭೂವ ತೇ ಧನುಃ| ಶಿವ ಶರವ್ಯಾ ಯಾ ತವ ತಯಾ ನೋ ರುದ್ರ ಮೃಡಯ| ಯಾ ತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ| ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ||
ಮಂಗಲ ನೀರಾಜನಂ ಸಮರ್ಪಯಾಮಿ ||
ಓಂ ಯೋ ವೇದಾದೌ ಸ್ವರಃ ಪ್ರೋಕ್ತೋ ವೆದಾಂತೇಚ ಪ್ರತಿಷ್ಠಿತಃ | ತಸ್ಯ ಪ್ರಕೃತಿ ಲೀನಸ್ಯ ಯಃ ಪರಃ ಸ ಮಹೇಶ್ವರಃ ||
ಮಂತ್ರಪುಷ್ಪಂ ಸಮರ್ಪಯಾಮಿ ||
|| ತೀರ್ಥ ಸ್ವೀಕಾರ ||
ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ |
ಸರ್ವದುರಿತೋಪಶಮನಂ ವಿಷ್ಣು ಪಾದೋದಕಂ ಶುಭಮ್ || ಇತಿ ತೀರ್ಥಂ ಸ್ವೀಕೃತ್ಯ- ಈ ಮಂತ್ರ ಹೇಳಿ ತೀರ್ಥ ಸ್ವೀಕಾರ ಮಾಡುವುದು ||
ಶನಿ ಪ್ರದೋಷದ ಮಹತ್ವ ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತ್ತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ.
ಅದು ಶ್ರಾವಣ ಮಾಸದ ಶನಿವಾರದ ದಿನವಾಗಿರುತ್ತದೆ. ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭೀಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು. ಅಂದು ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳ್ಳೆಯದು. ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.
ಶನಿ ಪ್ರದೋಷ ಶನಿವಾರ ತ್ರಯೋದಶಿ ದಿನ ಬಂದಾಗ, ಅದನ್ನು ಪ್ರದೋಷ, ಶನಿ ಪ್ರದೋಷ ಎಂದು ಕರೆಯಲಾಗುತ್ತದೆ. ಆದ್ದರಿಂದ, ಇಂದು ಶನಿ ಪ್ರದೋಷ ಉಪವಾಸ ಮಾಡುತ್ತಿದ್ದು, ಶನಿ ಪ್ರದೋಷ ದಿನದಂದು ಭಗವಾನ್ ಶಿವನ ಪೂಜೆಯೊಂದಿಗೆ ಶನೈಶ್ಚರ ಸ್ವಾಮಿಯ ಪೂಜೆಯು ಬಹಳ ಮುಖ್ಯವಾಗಿದೆ. ಶನಿ ಪ್ರದೋಷ ವ್ರತದಂದು ನಾವು ಏನು ಮಾಡಬೇಕು..? ಏನು ಮಾಡಬಾರದು..? ಈ ದಿನ ಯಾವ ಕೆಲಸ ಮಾಡಿದರೆ ಶುಭ..?
ವೃತ್ತಿಜೀವನದ ಗುರಿ ಹೊಂದುವಿರಿ
ಭವಿಷ್ಯದಲ್ಲಿ ನಮ್ಮ ವೃತ್ತಿಜೀವನಕ್ಕೆ ಯಾವುದೇ ಗುರಿಗಳನ್ನು ಹೊಂದಿಸಲು ನಿಮಗೆ ಸಾಧ್ಯವಾಗದಿದ್ದರೆ, ಶನಿ ಪ್ರದೋಷ ವ್ರತದ ದಿನದಂದು ನೀವು ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಬೆರೆಸಿದ ನೀರನ್ನು ಅಭಿಷೇಕಿಸಬೇಕು ಮತ್ತು ಅಭಿಷೇಕ ಮಾಡುವಾಗ 'ಓಂ ನಮಃ ಶಿವಾಯ ' ಎನ್ನುವ ಪದವನ್ನು ಜಪಿಸಬೇಕು.
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದು
ಕೆಲವು ಕೆಲಸಗಳನ್ನು ಮಾಡುವಾಗ ಉತ್ತಮ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ, ಶನಿ ಪ್ರದೋಷ ದಿನದಂದು ನೀವು ಭಗವಾನ್ ಶನಿಯ ಮಂತ್ರವನ್ನು 11 ಬಾರಿ ಜಪಿಸಬೇಕು. ಶನಿ ದೇವರ ಮಂತ್ರ ಹೀಗಿದೆ: "ಶಂ ಹ್ರೀಂ ಶಂ ಶನೈಶ್ಚರಾಯ ನಮಃ". ಈ ಮಂತ್ರವನ್ನು ಪಠಿಸಬೇಕು.
ಜೀವನದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನಿಮ್ಮ ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆದು ಸಂತೋಷದ ಜೀವನವನ್ನು ನಡೆಸಲು ನೀವು ಬಯಸಿದರೆ, ಶನಿ ಪ್ರದೋಷ ವ್ರತದ ದಿನದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ. ಅಷ್ಟು ಮಾತ್ರವಲ್ಲದೇ, ಭಗವಾನ್ ಶನಿಯ ಮಂತ್ರವಾದ "ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ" ಎನ್ನುವ ಮಂತ್ರವನ್ನು ಸುಮಾರು 21 ಬಾರಿ ಜಪಿಸಬೇಕು.
ಉತ್ತಮ ವಧು-ವರರಿಗಾಗಿ ನಿಮ್ಮ ಹುಡುಗಿ ಅಥವಾ ಹುಡುಗನಿಗಾಗಿ ನೀವು ಬಹಳ ಸಮಯದಿಂದ ಸಂಬಂಧವನ್ನು ಹುಡುಕುತ್ತಿದ್ದರೆ, ಆದರೆ ನಿಮಗೆ ಉತ್ತಮ ಸಂಬಂಧವನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ಶನಿ ಪ್ರದೋಷ ವ್ರತದಂದು ನೀವು ಶಿವ ದೇವಸ್ಥಾನಕ್ಕೆ ಹೋಗಿ ಶಿವ ಮತ್ತು ಮಾತಾ ಪಾರ್ವತಿಯನ್ನು ಕಲವಾ ದಾರದಲ್ಲಿ ಬಂಧ ಮಾಡಿ. ಅಲ್ಲದೆ ಪಾರ್ವತಿ ದೇವಿಗೆ ಕೆಂಪು ಚುನಾರಿಯನ್ನು ಅರ್ಪಿಸಬೇಕು.
ಆರ್ಥಿಕ ಲಾಭಕ್ಕೆ ಮಂತ್ರ ನೀವು ಆರ್ಥಿಕವಾಗಿ ಲಾಭ ಪಡೆಯಲು ಬಯಸಿದರೆ, ಇಂದು ನೀವು ನೀಲಿ ಬಣ್ಣದ ಹೂವನ್ನು ತೆಗೆದುಕೊಂಡು ಹೋಗಿ ಅರಳಿ ಮರಕ್ಕೆ ಅರ್ಪಿಸಿ, ಅರಳಿ ಮರವನ್ನು ಪೂಜಿಸಿ. ನಂತರ ಮನೆಗೆ ಬಂದು ಶನಿ ದೇವರ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ನೀವು ಪಠಿಸಬೇಕಾದ ಮಂತ್ರ ಹೀಗಿದೆ: "ಓಂ ಶಂ ಶನೈಶ್ಚರಾಯ ನಮಃ".
ಪರೀಕ್ಷೆಯಲ್ಲಿ ನಿರೀಕ್ಷಿಸಿದ ಫಲಿತಾಂಶ ಸಿಗುವುದು
ಪರೀಕ್ಷೆಯಲ್ಲಿ ನಿಮ್ಮ ಫಲಿತಾಂಶದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಸಾಕಷ್ಟು ಶ್ರಮವಹಿಸಿದ್ದರೂ, ಫಲಿತಾಂಶದ ಬಗ್ಗೆ ನಿಮಗೆ ಸಕಾರಾತ್ಮಕ ಭಾವನೆ ಇಲ್ಲವಾದರೆ, ಆಗ ನೀವು ಶನಿ ಪ್ರದೋಷ ವ್ರತದ ದಿನದಂದು ವಿದ್ಯಾ ಯಂತ್ರವನ್ನು ತೆಗೆದುಕೊಂಡು ಅದನ್ನು ವಿಧಿ - ವಿಧಾನಗಳ ಮೂಲಕ ಪೂಜಿಸಬೇಕು ಮತ್ತು ಪೂಜೆಯ ನಂತರ ಅದನ್ನು ನೀವು ಓದುವ ಕೋಣೆಯಲ್ಲಿ ಇಟ್ಟುಕೊಳ್ಳಬೇಕು. ನಂತರ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು.
ಇದರಿಂದ ಗೌರವ ಸಿಗುವುದು
ನೀವು ಜೀವನದಲ್ಲಿ ಹೆಸರನ್ನು, ಗೌರವವನ್ನು ಹಾಗೂ ಸ್ಥಾನ - ಮಾನವನ್ನು ಸಂಪಾದಿಸಲು ಬಯಸಿದರೆ, ಶನಿ ಪ್ರದೋಷ ದಿನದಂದು ನೀವು ಶಿವಲಿಂಗಕ್ಕೆ ಶಮಿ ಪತ್ರೆಯನ್ನು ಅರ್ಪಿಸಬೇಕು. ಅಲ್ಲದೆ ನೀವು ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. "ಓಂ ನಮಃ ಶಿವಾಯ" ಎನ್ನುವುದು ಶಿವ ಪಂಚಾಕ್ಷರಿ ಮಂತ್ರ.
ವೈವಾಹಿಕ ಜೀವನದಲ್ಲಿ ಹೊಸತನ ಬರುವುದು
ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಹೊಸದನ್ನು ತರಲು ಬಯಸಿದರೆ, ಇಂದು ನೀವು ಶಿವಲಿಂಗಕ್ಕೆ 11 ಹೂವುಗಳು ಮತ್ತು 11 ಬಿಲ್ವಪತ್ರೆಗಳಿಂದ ಮಾಡಿದ ಹಾರವನ್ನು ಅರ್ಪಿಸಬೇಕು. ಶೀಘ್ರದಲ್ಲೇ ನಿಮ್ಮ ವೈವಾಹಿಕ ಜೀವನದಲ್ಲಿ ಹೊಸತನ ಇರುತ್ತದೆ.
ಕಚೇರಿಯಲ್ಲಿ ಸೌಹಾರ್ದತೆ ಹೆಚ್ಚಾಗುವುದು
ನಿಮ್ಮ ಸಹೋದ್ಯೋಗಿಗಳೊಂದಿಗೆ ಕಚೇರಿಯಲ್ಲಿ ಸೌಹಾರ್ದತೆಯಿಂದ ಮತ್ತು ಪ್ರೀತಿಯಿಂದ ಇರಲು ನೀವು ಬಯಸಿದರೆ, ಇಂದು ಸಾಸಿವೆ ಎಣ್ಣೆಯ ದೀಪವನ್ನು ಬೆಳಗಬೇಕು ಮತ್ತು ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು. ಅಲ್ಲದೆ ಭಗವಾನ್ ಶನಿಯ "ಶಂ ಓಂ ಶಂ ನಮಃ" ಎನ್ನುವ ಮಂತ್ರವನ್ನು 21 ಬಾರಿ ಜಪಿಸಬೇಕು.
ಶನಿ ಪ್ರದೋಷ ಪೂಜೆ
ಶನಿ ಪ್ರದೋಷ ದಿನದಂದು ಭಗವಾನ್ ಶನಿದೇವನನ್ನು ಸಂಜೆ ಪೂಜಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದರೆ ಶಿವನನ್ನು ಬೆಳಗ್ಗೆ ಪೂಜಿಸಲಾಗುತ್ತದೆ. ಶನಿ ಪ್ರದೋಷ ವ್ರತವನ್ನು ಆಚರಿಸುವಾಗ ಶನಿ ಚಾಲೀಸ ಪಠಿಸುವುದು ಬಹಳ ಮುಖ್ಯ.
ಇವುಗಳನ್ನು ತಿನ್ನದಿರಿ
ಪ್ರದೋಷ ವ್ರತ ಸಮಯದಲ್ಲಿ ಕೆಂಪು ಮೆಣಸಿನಕಾಯಿ, ಧಾನ್ಯ, ಅಕ್ಕಿ ಮತ್ತು ಪುಡಿ ಉಪ್ಪನ್ನು ತಿನ್ನಬಾರದು. ಈ ದಿನ ನೀವು ಆದಷ್ಟು ಹಣ್ಣು, ಹಣ್ಣಿನ ರಸವನ್ನು ಸೇವಿಸಬಹುದು. ಈ ವ್ರತವು ನಿಮಗೆ ಪೂರ್ವಜರ ಆಶೀರ್ವಾದವನ್ನು ನೀಡುತ್ತದೆ. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿಯು ಈ ಉಪವಾಸವನ್ನು ಮಾಡಿದರೆ, ಅವನು ಗೋದಾನದ ಸದ್ಗುಣವನ್ನು ಪಡೆಯುತ್ತಾನೆ. ಇದಲ್ಲದೆ, ಈ ಉಪವಾಸವು ನಿಮ್ಮ ಮಕ್ಕಳ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ಹೇಳಲಾಗುತ್ತದೆ.
No comments:
Post a Comment