ಅಂಬಾಗಾರುತಿಯನ್ನು
ಅಂಬಾಗಾರುತಿಯನ್ನು ರಂಬೇರು ಬೆಳಗಿರೆ
ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ ||
ಕುಂಬಕುಚ ಜಗದಂಬೆ ನಿನ್ನ ಪಾದ
ನಂಬಿಕೊಂಡೆನು ನರಶರೀರದಿ
ಅಂಬುಕೇಶನ ರಾಣಿ ಶರಣರ
ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||
ಕೆಟ್ಟ ದ್ಯೆತ್ಯರನೆಲ್ಲ ಮೆಟ್ಟಿ ಕುತ್ತಗಿ ಕೊಯ್ದು
ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ
ಬ್ರಷ್ಟಮಹಿಷನ ಹೊಟ್ಟೆ ಬಗೆದು
ಬೆಟ್ಟ ಕೊಳ್ಳಕ ಇಳಿದ ರೇಣುಕಾ
ಸೃಷ್ಟಿಯೊಳು ಪಟ್ಟದ ಬ್ರಹ್ಮನ
ಶಿರವನ್ಹರಿಸಿದ ಪರಮಪಾರ್ವತಿಗೆ ||1||
ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು
ರುಂಡಮಾಲೆಯ ಧರಿಸಿದ ಚಾಮುಂಡಿಗೆ ಶಾಂಭವಿಗೆ
ಮಂಡಲದೊಳ ಮೆರೆವಂಥ ಭಂಡರ
ತುಂಡುಮಾಡಿದ ಅಖಂಡ ದೇವತೆ
ಕುಂತಳೇ ಶಿಶುನಾಳಧೀಶನ
ಕಂಡೆ ನಿನ್ನಯ ಪಾದನೇತ್ರದಿ ||2||
,..........ಶಿಶುವಿನಾಳ ಶರೀಫರು
No comments:
Post a Comment