Wednesday, February 26, 2025

JAGADABHIRAAM. ಜಗದಭಿರಾಮ

                          ಜಗದಭಿರಾಮರು


ಸುಂದರ ಸುಂದರ ನೇತ್ರಾಂಬುಜ ಕರ 
ಚಾಪಬಾಣಧರ ಮನೋಹರ 
ತವಕರುಣಾಮಯ ಆಶೀರ್
ವಚನಾದ್ಧನ್ಯ ಧನ್ಯ ಹೇ ಸೀತಾವರ

ನಮಾಮಿ ಮಾತಾ ಹಠ ಪೂರಕನೇ 
ಹತಬಲ ತಂದೆಯ ಬಲವಾದವನೇ
ಲಕ್ಷ್ಮಣನಿಗೆ ಸುಲಕ್ಷಣ ನೀನೇ 
ಭರತಗೆ ಭಕ್ತಿಯ ಭರತವು ನೀನೇ
ಶತ್ರುಂಜಯ ಶತ್ರುಘ್ನನ ಪಾಲಿಗೆ ಸಾಮಾನ್ಯರಿಗೆ ಉತ್ತುಂಗನರ 

ನಮಾಮಿ ರಾಜಸಸುಖವನು 
ತ್ಯಜಿಸಿ ಮಾನನ ಕಾನನ ಪೊಕ್ಕವನೇ
ಮಿತ್ರನಿಗೆ ಸುಮಿತ್ರನು ನೀನೇ 
ದಾಸಗೆ ಸದ್ವಿಲಾಸನೂ ನೀನೇ
ಬಾಂಧವ್ಯಗಳ ಗಂಧವತಿಳಿಸಿದ ಹೇ ಮರ್ಯಾದಾ ಪುರಸ್ಸರ 

ನಮಾಮಿ ಗಿರಿಜನ ದಂಡನು ಸೇರಿಸಿ 
ಸಾಗರ ಲಂಘಿಸಿ ಗೆಲುವಾದವನೇ
ಸೀತೆಯ ಸೆರೆಯಿಂ ಕಲ್ಪಿಸಿ 
ಮುಕ್ತಿಯ ಕೈಕಸಿ ಸುತನ ಸಂಹರಿಸಿದನೇ

ಜಾನಕಿರಾಮ ಜಗದಭಿರಾಮ ರಘುಕುಲ ಸೋಮ ಯುಗಂಧರ

                                                .... ಜಾನಕಿ ರಾಮ

No comments:

Post a Comment