ಶ್ರೀ ಗುರುಭ್ಯೋ ನಮಃ ಹರಿಃ ॐ
ಉಪನೀತನಾದೆ ಮುದ್ದು ಮಗುವೆ ಉಪವೀತ ಧರಿಸು ಬಾ || ಪ ||
ದೀಪವೆಂಬ ಜ್ಞಾನದಿಂದ ಬೆಳಗಿಸಲ್ಕೆ ಮನದ ಗುಡಿಯ
ರೂಪಕಾರ ಗುರುವಿನಡಿಗೆ ಶಿರಸಿ ನಮಿಸು ಬಾ || ಅ ಪ ||
ಬ್ರಹ್ಮಸೂತ್ರಧಾರಿ ಇನ್ನು ಬ್ರಹ್ಮಯಜ್ಞ ಕರ್ಮಿಯಾಗು
ಬ್ರಹ್ಮಜ್ಞಾನ ಮನನಿಯಾಗು ಬ್ರಹ್ಮಚಾರ ಧರ್ಮಿಯಾಗು
ಬ್ರಹ್ಮಪಾರ ವೇದ್ಯನಡಿಗೆ ಶಿರಸಿ ನಮಿಸು ಬಾ || ೧ ||
ಶಬ್ದ ಕರ್ಮ ಮನಸಿನಿಂದ ಶುದ್ಧ ಬುದ್ಧ ಕರ್ಮಿಯಾಗು
ಲುಬ್ಧ ದೇಹದಾಸೆ ಜಯಿಸಿ ವಿರಾಗಚಿತ್ತ ಧರ್ಮಿಯಾಗು
ಅಬ್ಧಿಶಯನ ಋದ್ಧನಡಿಗೆ ಶಿರಸಿ ನಮಿಸು ಬಾ || ೨ ||
ದೇವ-ವೇದ ನಿಧಿಗಳೆರಡ ಪಡೆಯೆ ನಿತ್ಯ ಕರ್ಮಿಯಾಗು
ಭಾವ ಭಕ್ತಿಯಿಂದ ಬದುಕು ಸತ್ಯ ಪಿತೃ ಧರ್ಮಿಯಾಗು
ಸಾವಲೇಪ ಹರಿಯ ಅಡಿಗೆ ಶಿರಸಿ ನಮಿಸು ಬಾ ||೩||

(ಜಾನಕಿರಾಮ)
ಸೀತಾರಾಮ ಸುಧೀರ ಕಟ್ಟಿ ಯಲಗೂರು
No comments:
Post a Comment