ಸತ್ಯಮೇವ_ಜಯತೇ_ನಾನೃತಂ
ಮುಂಡಕೋಪನಿಷತ್ತಿನ ಸತ್ಯಮೇವ ಜಯತೇ ಎಂಬ ಘೋಷಣೆಯು ಭಾರತದ ಮೊದಲ ಸಾಲಿನ ಸಂಸ್ಥಾಪಕರಿಗೆ ಅಚ್ಚುಮೆಚ್ಚಾಗಿತ್ತು. 1947 ಜುಲೈದಲ್ಲಿ ಸ್ವತಂತ್ರ್ಯ ಭಾರತದ ಮುಖಂಡರುಗಳು ಅಶೋಕ ಸ್ತಂಭದ ಸಿಂಹದ ಕೆಳಭಾಗದಲ್ಲಿದ್ದ ಚಕ್ರವನ್ನು ಭಾರತದ ರಾಷ್ಟ್ರೀಯ ಧ್ವಜದ ಮಧ್ಯದಲ್ಲಿ ಇರಬೇಕೆಂದು ಭಾರತದ ಸಂವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯಿಸಿದರು. 1947ರ ಡಿಸೆಂಬರ್ ನಲ್ಲಿ ಅಶೋಕ ಸ್ತಂಭದ ಮೇಲಿನ ನಾಲ್ಕು ತಲೆಯ ಸಿಂಹವನ್ನು ಭಾರತದ ರಾಜ್ಯ ಲಾಂಛನವನ್ನಾಗಿ ಸ್ವೀಕರಿಸಲಾಯಿತು. ಅದರೆ ಕೆಳಗೆ "ಸತ್ಯಮೇವ ಜಯತೇ" ಎಂಬ ಉಪನಿಷತ್ ವಾಕ್ಯ ರಾಷ್ಟ್ರೀಯ ಘೋಷವಾಕ್ಯವಾಗಿ ರಾರಾಜಿಸಿತು.
ಕ್ರಿಸ್ತಪೂರ್ವದಲ್ಲಿಯೇ ಅಸ್ತಿತ್ವದಲ್ಲಿದ್ದ ಅಶೋಕನ ಸಿಂಹಲಾಂಛನವು ಸಮಸ್ತ ಭಾರತೀಯರ ಹೆಮ್ಮೆ. ಈ ಸ್ತಂಭವು ಬೌದ್ಧ ಧರ್ಮಕ್ಕೆ ಸೇರಿದೆಯಾದರೂ ಪ್ರತಿಯೊಬ್ಬ ಹಿಂದೂ ಇದನ್ನು ತನ್ನದೆಂದು ಹೆಮ್ಮೆ ಪಡುತ್ತಾನೆ. ಏಕೆಂದರೆ ಇದು ನಮ್ಮ ರಾಷ್ಟ್ರೀಯತೆಯ ಸಂಕೇತವಾಗಿದೆ.
ಆದರೆ ಕಾಶ್ಮೀರದ ಹಜರತ್‍ಬಾಲ್ ದರ್ಗಾದ ಆವರಣದಲ್ಲಿದ್ದ ಫಲಕವೊಂದರಲ್ಲಿ ಈ ಲಾಂಛನವನ್ನು ಕುಟ್ಟಿ ವಿರೂಪಗೊಳಿಸಿದ್ದು ಶುದ್ಧ ದೇಶದ್ರೋಹ.
ಆದರೆ ತಾವೇ ಸ್ಥಾಪಿಸಿದ ಶಿಲಾಫಲಕದಲ್ಲಿ ಅಗತ್ಯವಿರದಿದ್ದರೂ ರಾಷ್ಟ್ರೀಯ ಲಾಂಛನವನ್ನು ಪ್ರಕಟಿಸಿ ನಂತರ ಅದನ್ನು ವಿದ್ರೂಪಗೊಳಿಸಿ ಅದರ ವಿಡಿಯೊ ಮಾಡಿ ಬಹುಸಂಖ್ಯಾತರ ಮನಸ್ಸಿಗೆ ಘಾಸಿ ಉಂಟು ಮಾಡುವ ಇವರ ಉದ್ದೇಶಿತ ಕುತಂತ್ರಗಳು ಸಾಮಾನ್ಯರಿಗೆ ಅರ್ಥವಾಗದ್ದೇನಲ್ಲ. ಮುಂದೆ ಇವೆಲ್ಲಕ್ಕೂ ಕಾಲ ಸರಿಯಾಗಿ ಉತ್ತರ ಕೊಡಲಿದೆ.
ರಾಷ್ಟ್ರೀಯ ಲಾಂಛನದ ಅಡಿಯಲ್ಲಿಯೇ ಇದೆ; "ಸತ್ಯಮೇವ ಜಯತೇ" ಎಂಬ ಘೋಷವಾಕ್ಯ. ಇದು ವಾಕ್ಯವೂ ಅಲ್ಲ; ಒಂದು ಸಾಲು ಕೂಡಾ ಅಲ್ಲ, ಕೇವಲ ಅರ್ಧ ಸಾಲು ಮಾತ್ರ.
ವೈರಾಗ್ಯ ಮಾರ್ಗದ ಮೂಲಕ ಭಗವಂತನನ್ನು ಕಂಡುಕೊಳ್ಳಲು ಸೂಚಿಸುವ ಮುಂಡಕೋಪನಿಷತ್ತು ನಮಗೆ ಬೇಡವಾದದ್ದನ್ನೆ ಮುಂಡನ ಮಾಡಲು ಸೂಚಿಸುತ್ತದೆ. ಮೂರನೆಯ ಮುಂಡಕದ ಒಂದನೆಯ ಖಂಡದ ಆರನೆಯ ಶ್ಲೋಕದ ಮೊದಲರ್ಧ ಸಾಲು ಸತ್ಯಮೇವ ಜಯತೆ ಭಾರತದ ರಾಷ್ಟ್ರೀಯ ಘೋಷವಾಕ್ಯವಾಗಿ ಲಾಂಛನದ ಕೆಳಗೆ ರಾರಾಜಿಸುತ್ತದೆ. ಏಕದೇವೋಪಾಸಕರು ನಾಶ ಮಾಡಿದ್ದು ಕೂಡಾ ಇದೇ ಸಾಲನ್ನು!
ಉಪನಿಷತ್ತಿನ ಆ ಶ್ಲೋಕದ ಪೂರ್ಣಪಾಠ ಹೀಗಿದೆ:
ಸತ್ಯಮೇವ ಜಯತೇ ನಾನೃತಂ
ಸತ್ಯೇನ ಪಂಥಾ ವಿತತೋ ದೇವಯಾನಃI
ಯೇನಾಕ್ರಮಂತ್ಯೃಷಯೋ ಹ್ಯಪ್ತಕಾಮ
ಯತ್ರ ತತ್ ಸತ್ಯಸ್ಯ ಪರಮಂ ನಿಧನಂII
ಎಂದಿಗೂ ಸತ್ಯಕ್ಕೆ ಜಯವೇ ಹೊರತು ಸುಳ್ಳಿಗಲ್ಲ! ಸತ್ಯ ದೈವಿಕ ಮಾರ್ಗವಾಗಿದೆ; ಪರಮಸತ್ಯವನ್ನು ಶೋಧಿಸುವ ವೈರಾಗ್ಯಮೂರ್ತಿಗಳ ಶೋಧನೆಯು ಈ ದಾರಿಯಿಂದ ಮಾತ್ರ ಪೂರ್ಣಗೊಳ್ಳುತ್ತದೆ. ಈ ಸತ್ಯ ಮಾರ್ಗವು ಮಾತ್ರ ಸರ್ವಶ್ರೇಷ್ಠ ನಿಧಿಯಾಗಿರುವ ಆ ಭಗವಂತನತ್ತ ಕರೆದೊಯ್ಯುತ್ತದೆ.
ಅವರಂತೆ ನಮಗೆ ಸ್ವರ್ಗವು (Zion) ಗಮ್ಯವಲ್ಲವೇ ಅಲ್ಲ. ನಮ್ಮದು ಪುನರ್ಜನ್ಮ (matrix) ಪಥ. ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ನಮ್ಮ ಪಯಣ. ನಮ್ಮ ಶರೀರ ಆತ್ಮದ ಲೌಕಿಕ ಭಾಗ ಮಾತ್ರ, ಹಾನಿ ಮಾಡಲಾಗದ ಅವ್ಯಕ್ತ ರೂಪವೇ ನಿಜವಾದ ನಾವು! ಮುಕ್ತಿ ನಮ್ಮ ಬದುಕುಗಳ ಹೋರಾಟದ ಕೊನೆಯ ಬಿಂದು; ನಮ್ಮ ಗಮ್ಯವು ಶರೀರಕ್ಕೆ ಸುಖ ನೀಡುವ ಸ್ವರ್ಗವಲ್ಲವೇ ಅಲ್ಲ. ಆದರೆ ಭೌತಿಕವಾದಿಗಳಾದ "ಅವರ" ತಲೆಗೆ ಇದು ಹೋಗುವುದೇ ಇಲ್ಲ. ಅವರದೇನಿದ್ದರೂ ಹೋರಾಟದ, ಹೊಡೆದಾಟದ ಮಾರ್ಗ. ಮುಕ್ತಿ ಮಾರ್ಗಕ್ಕೆ ಅಗತ್ಯವಿರುವ ಸತ್ಯಮಾರ್ಗವು ಅವರ ತಲೆಗೆ ಹೊಳೆಯುವುದಾದರೂ ಹೇಗೆ?! ಹೀಗಾಗಿ ಕಂಡದ್ದೆಲ್ಲವೂ ಮೂರ್ತಿಯೆಂದು ಭಾವಿಸಿ ವಿಧ್ವಂಸಗೊಳಿಸುವ ಮಾರ್ಗವು ಅವರ ಆಯ್ಕೆಯಾಗಿದೆ. ಮೂರ್ತಿಯ ಅಂತರಂಗದ ಸಂಕೇತಗಳು ಅವರಿಗೆ ಕಾಣುವುದೇ ಇಲ್ಲ, ಅದಕ್ಕೆ ಒಳಗಣ್ಣು ಬೇಕು.
ಸತ್ಯವು ಏಕಮೇವ ಜಯತೆಯಲ್ಲ. ಫಳಫಳ ಹೊಳೆವ ಅನೃತದ ಆವರಣದ ಆಚೆಗಿರುವ ಸತ್ಯವನ್ನು ಶೋಧಿಸಲು ಯತ್ನಿಸುವಾಗ ಕಾಲ ಮಿಂಚಿ ಹೋಗಿರುತ್ತದೆ
ಸತ್ಯ ಮೇವ ಜಯತೇ ನಾನೃತಂ
ವಂದೇ ಮಾತರಂ
No comments:
Post a Comment