ಪರಿಮಳಾರ್ಯರೆಂದರೇನೇ ಜ್ಞಾನ ಪರಿಮಳ
ಜ್ಞಾನ ತೃಷೆಯ ನೀಡಿರೆಮಗೆ ಹರಸಿ ಮಂಗಳ IIಪII
ಮಧ್ವಮತದ ತೋಟದಲ್ಲಿ
ಬೆಳೆದ ನೂರು ಸಸಿಗಳಲ್ಲಿ
ಸದಾಕಾಲ ಅರಳಿನಿಂತ
ವಿವಿಧ ರಂಗ ಸುಮಗಳಲ್ಲಿ
ಘಮಘಮಿಸುವ ಪರಾಸುಖದ ಜ್ಞಾನ ಪರಿಮಳ II ೧ II
ದ್ವೈತ ಪಂಥದಬ್ಧಿಯಿಂದ
ತತ್ವವೆಲ್ಲ ಆವಿಯಾಗಿ
ಯತಿವರೇಣ್ಯರಿಂದ ಘನಿಸಿ
ಸುಧಾ ನಾಮ ಹನಿಗಳಾಗಿ
ಎದೆಗೆ ಸುರಿವ ಅಮರ ವರದ ಜ್ಞಾನ ಪರಿಮಳ II೨II
ಶ್ರವಣದಿಂದ ಇಳಿವ ಜ್ಞಾನ
ಮನನದಿಂದ ಉಳಿವ ಜ್ಞಾನ
ಧ್ಯಾನದಿಂದ ಬೆಳೆವ ಜ್ಞಾನ
ಭಕ್ತಿಯಿಂದ ಹೊಳೆವ ಜ್ಞಾನ
ಜ್ಞಾನಸೂರ್ಯ ರಾಘವೇಂದ್ರರೆಂಬ ಪರಿಮಳ II೩II
ಹರಿಯ ನಾಮ ಕ್ಷೀರದಿಂದ
ಜಪಿಸಿ ತಪಿಸಿ ಕೆನೆಯ ತೆಗೆದ
ಮಥನಿದಂಡದಿಂದ ಕಡೆದು
ಕೃಷ್ಣನೆಂಬ ಬೆಣ್ಣೆ ಪಡೆದ
ಜಾನಕೀ ರಾಮನನ್ನು ನುತಿಪ ಪರಿಮಳ ।। ೪ ।।
ಜ್ಞಾನ ತೃಷೆಯ ನೀಡಿರೆಮಗೆ ಹರಸಿ ಮಂಗಳ IIಪII
ಮಧ್ವಮತದ ತೋಟದಲ್ಲಿ
ಬೆಳೆದ ನೂರು ಸಸಿಗಳಲ್ಲಿ
ಸದಾಕಾಲ ಅರಳಿನಿಂತ
ವಿವಿಧ ರಂಗ ಸುಮಗಳಲ್ಲಿ
ಘಮಘಮಿಸುವ ಪರಾಸುಖದ ಜ್ಞಾನ ಪರಿಮಳ II ೧ II
ದ್ವೈತ ಪಂಥದಬ್ಧಿಯಿಂದ
ತತ್ವವೆಲ್ಲ ಆವಿಯಾಗಿ
ಯತಿವರೇಣ್ಯರಿಂದ ಘನಿಸಿ
ಸುಧಾ ನಾಮ ಹನಿಗಳಾಗಿ
ಎದೆಗೆ ಸುರಿವ ಅಮರ ವರದ ಜ್ಞಾನ ಪರಿಮಳ II೨II
ಶ್ರವಣದಿಂದ ಇಳಿವ ಜ್ಞಾನ
ಮನನದಿಂದ ಉಳಿವ ಜ್ಞಾನ
ಧ್ಯಾನದಿಂದ ಬೆಳೆವ ಜ್ಞಾನ
ಭಕ್ತಿಯಿಂದ ಹೊಳೆವ ಜ್ಞಾನ
ಜ್ಞಾನಸೂರ್ಯ ರಾಘವೇಂದ್ರರೆಂಬ ಪರಿಮಳ II೩II
ಹರಿಯ ನಾಮ ಕ್ಷೀರದಿಂದ
ಜಪಿಸಿ ತಪಿಸಿ ಕೆನೆಯ ತೆಗೆದ
ಮಥನಿದಂಡದಿಂದ ಕಡೆದು
ಕೃಷ್ಣನೆಂಬ ಬೆಣ್ಣೆ ಪಡೆದ
ಜಾನಕೀ ರಾಮನನ್ನು ನುತಿಪ ಪರಿಮಳ ।। ೪ ।।
- ಜಾನಕಿರಾಮ

No comments:
Post a Comment