Thursday, February 26, 2026

The diversity and Miscellaneous of mantras related to Shanaishchara ಶ್ರೀ ಶನೈಶ್ಚರ ದೇವರಿಗೆ ಸಂಬಂಧಪಟ್ಟ ಮಂತ್ರ ವಿವಿಧತೆ ಮತ್ತು ಸಂಕೀರ್ಣತೆ

The diversity and Miscellaneous of mantras related to Lord Shani
ಶ್ರೀ ಶನೈಶ್ಚರ ದೇವರಿಗೆ ಸಂಬಂಧಪಟ್ಟ ಮಂತ್ರ ವಿವಿಧತೆ ಮತ್ತು ಸಂಕೀರ್ಣತೆಗಳು



ಪ್ರಮುಖವಾದ ಶನಿದೇವರ ಶಾಂತಿ ಮಂತ್ರಗಳು:
ಮೂಲ ಮಂತ್ರ: ಓಂ ಶಂ ಶನೈಶ್ಚರಾಯ ನಮಃ.
ಶ್ರೀ ಶನೈಶ್ಚರ ದೇವರ ವೇದ ಮಂತ್ರ :
ಓಂ ಶಮಗ್ನಿರಗ್ನಿ ಭಿ:ಕರಶ್ಚನ್ನ ಸ್ತಪತೋ ಸೂರ್ಯಾ: | ಶಂವಾತೋ ವಾತ್ವರಪಾ ಅಪಶ್ರುಧಾ: ||
ಶನಿ ಗಾಯತ್ರಿ ಮಂತ್ರ: 
ಓಂ ಶನ್ನೋದೇವೀರ್ಭೀಷ್ಟಯ ಆಪೋ ಭವಂತು ಪೀತಯೇ ಶಂಯೋರ್ಭಿಶ್ರವಂತು ನಃ |
ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹಿ। 
ತನ್ನೋ ಮಂದಃ ಪ್ರಚೋದಯಾತ್.|

ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ
ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ ॥ 
ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜ ಟಾಯ ಚ । 
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ ॥ 
ನಮಃ ಪೌರುಷಗಾತ್ರಾಯ ಸ್ಥೂಲ ರೋಮಾಯ ತೇ ನಮಃ । 
ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತೃಪ್ತಾಯ ತೇ ನಮಃ ॥
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ । 
ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಸ್ತು ತೇ ॥ 
ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ । 
ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಸ್ತು ತೇ ॥ 
ಸೂರ್ಯಪುತ್ತ್ರ ನಮಸ್ತೇಸ್ತು ಭಾಸ್ವರೋಭಯ ದಾಯಿನೇ । 
ಅಧೋದೃಷ್ಟೇ ನಮಸ್ತೇಸ್ತು ಸಂವರ್ತಕ ನಮೋಸ್ತು ತೇ ॥ 
ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ । 
ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ ॥ 
ಜ್ಞಾನಚಕ್ಷುರ್ನಮಸ್ತೇಸ್ತು ಕಾಶ್ಯಪಾತ್ಮಜಸೂನವೇ । 
ತುಷ್ಟೋ ದದಾಸಿ ರಾಜ್ಯಂ ತ್ವಂ ಕ್ರುದ್ಧೋ ಹರಸಿ ತತ್‍ ಕ್ಷಣಾತ್ ॥ 
ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ ।
ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ ॥
ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ ।
ತ್ವಯಾವಲೋಕಿತಾಸ್ಸೌರೇ ದೈನ್ಯಮಾಶುವ್ರಜಂತಿತೇ ॥
ಬ್ರಹ್ಮಾ ಶಕ್ರೋಯಮಶ್ಚೈವ ಮುನಯಃ ಸಪ್ತತಾರಕಾಃ ।
ರಾಜ್ಯಭ್ರಷ್ಟಾಃ ಪತಂತೀಹ ತವ ದೃಷ್ಟ್ಯಾವಲೋಕಿತಃ ॥
ತ್ವಯಾವಲೋಕಿತಾಸ್ತೇಪಿ ನಾಶಂ ಯಾಂತಿ ಸಮೂಲತಃ । 
ಪ್ರಸಾದಂ ಕುರು ಮೇ ಸೌರೇ ಪ್ರಣತ್ವಾಹಿತ್ವಮರ್ಥಿತಃ ॥

ಓಂ ಭಗಭವಾಯ ವಿದ್ಮಹೈ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|

ಶನಿ ಬೀಜ ಮಂತ್ರ: 
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ.
ಶನಿ ಸ್ತುತಿ ಮಂತ್ರ: 
ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ। 
ಛಾಯಾಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ. 
ಶನಿ ದೋಷ ನಿವಾರಣೆ ಮಂತ್ರ :
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ | 
ಊರ್ವಾರೂಕಮಿವ ಬಂದನಾನ್‌ ಮೃತ್ಯೋರ್ಮುಕ್ಷೀಯಮಾಮೃತಾತ್‌''

ಶನಿದೇವನ ಆಶೀರ್ವಾದವನ್ನು ಪಡೆಯಲು ಅನೇಕ ಪರಿಹಾರಗಳನ್ನು ಸೂಚಿಸಲಾಗಿದ್ದರೂ, ಶನಿದೇವನು ತನ್ನ ಹೆಂಡತಿಯರ ನಾಮ ಮಂತ್ರದಿಂದ ಸಾಕಷ್ಟು ಸಂತುಷ್ಟನಾಗುತ್ತಾನೆ. ಶನಿದೇವನಿಗೆ 8 ಹೆಂಡತಿಯರಿದ್ದರು ಎಂದು ಹೇಳಲಾಗುತ್ತದೆ. ಅವರ ಹೆಸರುಗಳು ಧ್ವಜಿನಿ, ಧಾಮಿನಿ, ಕಂಕಾಲಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಷಿ ಮತ್ತು ಅಜ. ಇವರುಗಳ ಆಧಾರದ ಮೇಲೆ ಶನಿ ಪತ್ನಿ ಎಂಬ ಮಂತ್ರವಿದೆ, ಇದನ್ನು ಪ್ರತಿ ಶನಿವಾರ ಪಠಿಸುವುದರಿಂದ ಶನಿದೇವನ ಅನುಗ್ರಹವನ್ನು ಪಡೆಯಬಹುದು.
ಧ್ವಜಿನೀ ಧಾಮಿನೀ ಚೈವ ಕಂಕಾಲೀ । ಕಂಟಕೀ ಕಲಿಹಿ ಚಾತ ತುರಂಗೀ ಮಹಿಷಿ ಆಜಾ। ಶಾನೇರ್ನಾಮಾನಿ ಪತ್ನಿ ನಾಮೇತಾನಿ ಸಂಜಪನ್ ಪುಮಾನ್ ॥ ದುಃಖಾನಿ ನಾಶಯೇನ್ತ್ಯಂ ಸೌಭಾಗ್ಯ ಮೇಧತೇ ಸುಖಮ್ ।

ಪಠಿಸುವ ವಿಧಾನ ಮತ್ತು ಪ್ರಯೋಜನಗಳು:
ಶನಿವಾರದಂದು, ನೀಲಿ ಬಣ್ಣದ ಬಟ್ಟೆ ಧರಿಸಿ, ಜಪ ಮಾಲೆಯನ್ನು ಬಳಸಿ ಜಪಿಸುವುದು ಉತ್ತಮ.
ಈ ಮಂತ್ರಗಳ ಪಠಣೆಯಿಂದ ಶನಿ ಸಾಡೇಸಾತಿ, ಪಂಚಮ, ಅಷ್ಟಮ ಶನಿ ದೋಷಗಳ ತೀವ್ರತೆ ಕಡಿಮೆಯಾಗುತ್ತದೆ. ಮಾನಸಿಕ ಶಾಂತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿರತೆ ಲಭಿಸುತ್ತದೆ. 
ಶನಿವಾರದಂದು ಬೆಳಿಗ್ಗೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ಶನಿ ದೇವಾಲಯಕ್ಕೆ ಭೇಟಿ ನೀಡಿ ಅಥವಾ ಮನೆಯಲ್ಲಿ ಚಿತ್ರದ ಮುಂದೆ ಕುಳಿತು ಪಠಿಸಿ.
ಪಶ್ಚಿಮ ದಿಕ್ಕಿಗೆ ಮುಖ ಮಾಡಿ, ಸಾಧ್ಯವಾದರೆ ಕಪ್ಪು ಎಳ್ಳು ಮತ್ತು ಸಾಸಿವೆ ಎಣ್ಣೆಯನ್ನು ದೇವರಿಗೆ ಅರ್ಪಿಸಿ, 108 ಬಾರಿ ಜಪಿಸಿ. 
ಪ್ರಯೋಜನಗಳು:

ಶನಿ ಸಾಡೇಸಾತಿ (ಏಳೂವರೆ ಶನಿ) ಮತ್ತು ದೋಷಗಳ ತೀವ್ರತೆ ಕಡಿಮೆ ಆಗುತ್ತದೆ. ಮಾನಸಿಕ ಮತ್ತು ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ. ತಾಳ್ಮೆ, ಶಿಸ್ತು ಮತ್ತು ಯಶಸ್ಸು ಲಭಿಸುತ್ತದೆ. 

ಸರ್ವೇ ಜನಾ ಸುಖಿನೋ ಭವಂತು 

No comments:

Post a Comment