Thursday, February 26, 2026

The path taken by this scripture, Sri Shanishchara Charitam ಶ್ರೀ ಶನೈಶ್ಚರ ಚರಿತಂ ಈ ಗ್ರಂಥ ನಡೆದು ಬಂದ ದಾರಿ

The path taken by this scripture, Sri Shanishchara Charitam
ಶ್ರೀ ಶನೈಶ್ಚರ ಚರಿತಂ ಈ ಗ್ರಂಥ ನಡೆದು ಬಂದ ದಾರಿ




        ತಂದೆಯವರಾದ ವೇ ಶಾ ಸಂ ಶ್ರೀಧರಾಚಾರ್ಯ ಕಟ್ಟಿಯವರು ಸೋಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಕರ್ನಾಟಕ ಸೀಮೆಯಲ್ಲಿರುವ ಭೀಮಾ ತೀರದ ಅಂಕಲಗಿ ಗ್ರಾಮದಲ್ಲಿ  ಕನ್ನಡ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರೆಂದು ಕೆಲಸ ನಿರ್ವಹಿಸುತ್ತಿದ್ದಾಗ ಬಂದ ವಿಚಾರವೇ ಈ ಗ್ರಂಥ ರಚನೆ.
ಶ್ರೀ ಶನೈಶ್ಚರ ಚರಿತಂ ಗ್ರಂಥ ಕಚ್ಚಾ ಪ್ರತಿಯಾಗಿದ್ದು ಛಂದೋಬದ್ಧವಾಗಿದ್ದರೂ ನವ್ಯಕಾವ್ಯವೆನಿಸುತ್ತಿತ್ತು ಮತ್ತು ಕ್ರಮಬದ್ಧವಾಗಿ ಇರಲಿಲ್ಲ.   ಊರು ಪ್ರತಿಷ್ಠಿತರ ಅಗ್ರಹದ ಮೇರೆಗೆ ಮೊದಲ ಸಲ ಮಾಡಿದ ವಾಚನ, ಅಂಕಲಗೆ ತಾ.ಅಕ್ಕಲಕೋಟದಲ್ಲಿ ವಾಶಿಸುತ್ತಿದ್ದಾಗ ಗ್ರಾಮದೇವತೆ ಬಸವಣ್ಣ ದೇವರ ಜಾತ್ರೆ, ಮತ್ತು ಅಷ್ಟಗ್ರಹ ಯೋಗ ಬಂದಾಗ  
1. ಗ್ರಾಮ ದೇವರ ಜಾತ್ರೆ ಶ್ರೀ ಬಸವಣ್ಣ ಕಟ್ಟೆಯ ಸಮ್ಮುಖದಲ್ಲಿ,
2. ಗರಡಿ ಮನೆಯ ಶ್ರೀ ಹನುಮಂತ ದೇವರ ಮುಂದೆ,
3. ಶ್ರೀ ಹನುಮಂತ ದೇವರ ದೇವಾಲಯದ ಪ್ರಾಂಗಣದಲ್ಲಿ, ಮೊದಲದಿನ ಅಷ್ಟಗ್ರಹ ಯೋಗ ಪೂಜೆಯ ನಂತರ, 
4. ಎರಡನೆ ದಿನ ಹೋಮದ ಪೂರ್ಣಾಹುತಿ ನಂತರ,
5. ಶ್ರೀ ವೀರಂತಯ್ಯ ಸ್ವಾಮಿಗಳ ಮನೆಯಲ್ಲಿ, 
6. ಶ್ರೀ ಬಸವಣ್ಣ ದೇವರ ಕಟ್ಟೆಯ ಎದುರಿಗೆ ಇರುವ ಊರ ಗೌಡರ ಹೊಲದಲ್ಲಿರುವ ಬಿಳಿಗುಡಿಯಲ್ಲಿ,( ನಿಜವಾಗಿ ಅದು ಗುಡಿಯಲ್ಲ, ಗುಡಿಯಂತೆ ಕಟ್ಟಿರುವ ಊರ ಹಿರಿಯ ಗೌಡರ ಸಮಾಧಿ )
7. ಶ್ರೀ ನಿಂಬಣ್ಣ ಉಪಾಸೆಯವರ ಮನೆಯಲ್ಲಿ, 
8. ಕೊನೆಯದಾಗಿ  ಗ್ರಂಥ ರಚನಾಕಾರರ ಅಂಕಲಗೆ ಗ್ರಾಮದ ಮನೆಯಲ್ಲಿ 
--------------
ಮೇಲ್ಕಾಣಿಸಿದ ಗ್ರಂಥಕ್ಕೆ ಪೂರಕವಾಗಿ ಇನ್ನೂ ಎರಡು ಅಧ್ಯಾಯಗಳು ಜೋಡಿಸಲಾಯಿತು   ಮೊದಲನೇದಾಗಿ  ಉಮರಜ ತಾ: ಇಂಡಿ ಗ್ರಾಮದ ಒಂದು ಪುರಾತನ ಮಠದಲ್ಲಿ ದೊರೆತ ಜೀರ್ಣ ತಾಳೆ ಎಲೆಯ ಮೇಲೆ ಶ್ರೀ ಶನೈಶ್ಚರ ದೇವರಿಗೆ ಸಂಬಂಧಪಟ್ಟ ಕಥೆಯೊಂದಿದ್ಧು ಅದನ್ನು ನಾನು ಹೇಳಿದಂತೆಯೇ ಬರೆಯಬೇಕು ಎಂದು ಅಜ್ಜನವರಾದ ಶ್ರೀ ವೇ ಶಾ ಸಂ. ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಎಂಬ ಬಿರುದನ್ನು ಹೊಂದಿದ್ದ ಶ್ರೀ ಸೀತಾರಾಮಾಚಾರ್ಯ ದ್ವೈಪಾಯನಾಚಾರ್ಯ ಕಟ್ಟಿ ಉಮರಜಕರ ರವರ ಆದೇಶದಂತೆ ಭಾಮಿನಿ ಮತ್ತು ವಾರ್ಧಕ ತ್ರಿಪದಿಗಳಲ್ಲಿ ಬರೆದು ಜೋಡಿಸಲಾಯಿತು. ಎರಡನೇ ಕಥೆ ಅಂದರೇ ಶ್ರೀ ಶನೈಶ್ಚರ ದೇವರ ಜನನ, ಬಾಲ್ಯ, ಹಟ, ಕಾಲು ಕುಂಟಾಗುವಿಕೆ, ಅಭ್ಯಾಸ, ತಪಸ್ಸು, ತಪಸ್ಸಿಗೆ ಫಲ, ದೇವರುಗಳಿಂದ ವರಪ್ರಸಾದ, ತಂದೆ ತಾಯಿಯರ ನಿಜ ರೂಪ ಪಡೆಯುವಿಕೆ, ಇತ್ಯಾದಿ ವಿವರಗಳನ್ನು ಕಾಶೀ ಖಂಡ ಪುರಾಣದಿಂದಲೂ ಆಯ್ದುಕೊಂಡು ಭಾಮಿನಿ ತ್ರಿಪದಿಗಳ ತೆರ ಬರೆದು ಜೋಡಿಸಲಾಯಿತು. ಇನ್ನು ಉಳಿದ ಕಥೆಗಳು ಸಹಿತ ಭಾಮಿನಿ ತ್ರಿಪದಿಗಳಲ್ಲಿ ಪರಿವರ್ತನೆ ಮಾಡಿ ಶ್ರೀ ಶನೈಶ್ಚರ ಚರಿತಂ ಗ್ರಂಥವನ್ನು ಕ್ರಮಭದ್ಧವಾಗಿ, ಛಂದೋಬದ್ಧವಾಗಿ ಪೂರೈಸಿ ಸಂತೋಷದಿಂದ ಸಂಪನ್ನವಾಗಿಸಿ ಕೃತ ಕೃತ್ಯರಾದೆವು.
ಪೂರ್ಣ ಗ್ರಂಥದ ವಾಚನ

ಪೂರ್ಣಗೊಂಡ ಶ್ರೀ ಶನೈಶ್ಚರ ಚರಿತಂ ಗ್ರಂಥ ವಾಚನವನ್ನು ವಾಗದರಿ ಗ್ರಾಮದ   ಸ್ವಂತ ಮನೆಯಲ್ಲಿ,ಆ ಮನೆ ಖರೀದಿಸಿದ ಮೊದಲದರಲ್ಲಿ ಮಾಡಲಾಯಿತು. ಮತ್ತು  ಊರ ವಿರಕ್ತ ಮಠದಲ್ಲಿ, ಶ್ರೀ ಹನುಮಂತ ದೇವರ ಗುಡಿಯಲ್ಲಿ ಶ್ರಾವಣ ಮಾಸದಲ್ಲಿಯೂ, ಸತ್ಸಂಗದ ಸ್ಥಳದಲ್ಲಿ ಪ್ರತಿ ವರ್ಷವೂ ವಾಚನ ಮಾಡಲಾಗುತ್ತಿತ್ತು.


ಸರ್ವೇ ಜನಾ ಸುಖಿನೋ ಭವಂತು

No comments:

Post a Comment