ಶ್ರೀ ಶಿವ ಅಪರಾಧ ಕ್ಷಮಾಪಣ ಸ್ತೋತ್ರಂ
(In Samskruta vernacular also available in the bottom)
ಪ್ರಸ್ತಾವನೆ :
ಅಪರಾಧ ಸ್ತೋತ್ರವೆಂದರೇನು? ಇದು ಅಪರಾಧಿಯ ಪ್ರಾಯಶ್ಚಿತ್ತ ಹಾಗೂ ಕ್ಷಮೆಯನ್ನು ಕೋರುವ ಸ್ತೋತ್ರ. ಶಿವಾಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಶಿವ ಭಕ್ತನೊಬ್ಬನ ಶಿವಾರಾಧನೆಯಲ್ಲಿ ತಿಳಿದೋ ತಿಳಿಯದೆಯೋ ಕಣ್ತಪ್ಪಿ ಆಗಿರಬಹುದಾದ ತಪ್ಪು ಒಪ್ಪುಗಳ ಬಗೆಗೆ ಪಶ್ಚಾತ್ತಾಪ ಪಟ್ಟು ಕ್ಷಮಾಪಣೆಯನ್ನು ಕೋರುತ್ತಾನೆ. ಸಾಮಾನ್ಯವಾಗಿ ಶಿವನ ಕುರಿತು ಮಾಡುವ ಎಲ್ಲ ಪೂಜೆಗಳಲ್ಲೂ ಈ ಸ್ತೋತ್ರವು ಒಂದು ಅವಿಭಾಜ್ಯ ಅಂಗ ಹಾಗೂ ಇದನ್ನು ಋಗ್ವೇದ ಕಾಲದಿಂದಲೂ ಅನೂಚಾನವಾಗಿ ಅನುಸರಿಸಿಕೊಂಡು ಬರಲಾಗಿದೆ.
ಶ್ರೀ ಗುರುಭ್ಯೋ ನಮ: ಹರಿ: ಓಂ
ಆದೌ ಕರ್ಮ ಪ್ರಸಂಗಾತ್ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ | ವಿಣ್ಮೂತ್ರಾಮೇಧ್ಯಮಧ್ಯೇ ಕ್ವಥಯತಿ ನಿತರಾಂ ಜಾಠರೋ ಜಾತವೇದಾಃ | ಯದ್ಯದ್ವೈ ತತ್ರ ದುಃಖಂ ವ್ಯಥಯತಿ ನಿತರಾಂ ಶಕ್ಯತೇ ಕೇನ ವಕ್ತುಂ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ || 1 ||
ಅರ್ಥ
ಹೊರ ಪ್ರಪಂಚದ ಬೆಳಕನ್ನು ಕಾಣುವ ಮೊದಲೇ ನನ್ನ ಹಿಂದಿನ ಜನ್ಮದಲ್ಲಿನ ಪಾಪಗಳಿಂದಾಗಿ, ನನ್ನ ಕರ್ಮದ ಫಲವನ್ನು ಅನುಭವಿಸುವ ಆಸೆಯಿಂದ ಮತ್ತೆ ತಾಯಿಯ ಗರ್ಭವನ್ನು ಪ್ರವೇಶಿಸುವ ಶಿಕ್ಷೆಯನ್ನನುಭವಿಸಬೇಕಾ ಯಿತು. ಗರ್ಭದಲ್ಲಿ ನಾನು ಅಶುದ್ಧ ವಾತಾವರಣದಲ್ಲಿ ಬೆಂದೆ. ಜನಿಸುವ ಮೊದಲಿನ ಶಿಶುವಿನ ತನ್ನ ಮಾತೆಯ ಗರ್ಭದೊಳಗಿನ ಯಾತನೆಗಳನ್ನು ಯಾರು ಬಣ್ಣಿಸ ಬಲ್ಲರು? ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಬಾಲ್ಯೇ ದುಃಖಾತಿರೇಕಾನ್ಮಲಲುಲತವಪುಃ ಸ್ತನ್ಯಪಾನೇ ಪಿಪಾಸುಃ | ನೋ ಶಕ್ತಶ್ಚೇಂದ್ರಿಯೇಭ್ಯೋ ಭವಮಲಜನಿತಾ ಜಂತವೋ ಮಾಂ ತುದಂತಿ |ನನಾರೋಗಾತಿ ದುಃಖಾದ್ರುದಿತ ಪರವಶಃ ಶಂಕರಂ ನ ಸ್ಮರಾಮಿ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ || 2 ||
ಅರ್ಥ
ಬಾಲ್ಯದಲ್ಲೂ ನನ್ನ ಬಳಲಿಕೆಗಳಿಗೆ ಕೊನೆಯೇ ಇರಲಿಲ್ಲ; ನನ್ನ ಶರೀರವೆಲ್ಲ ಹೊಲಸಿನಿಂದಾವೃತವಾಗಿ ಮತ್ತು ನಾನು ನನ್ನ ಜನನಿಯ ಎದೆ ಹಾಲಿಗಾಗಿ ಹಾತೊರೆಯುತ್ತಿದ್ದೆ. ನನ್ನ ಶರೀರ ಹಾಗೂ ಅಂಗಾಂಗದ ಮೇಲೆ ನನಗೆ ಯಾವುದೇ ಹತೋಟಿ ಇರಲಿಲ್ಲ. ನನ್ನನ್ನು ತ್ರಾಸದಾಯಕ ಕ್ರಿಮಿಗಳು ಹಾಗೂ ಸೊಳ್ಳೆಗಳು ಸತತವಾಗಿ ಮುತ್ತಿ ತೊಂದರೆಯನ್ನು ಕೊಡುತ್ತಿದ್ದವು. ಓ ಶಂಕರಾ ! ನಿನ್ನನ್ನು ಮರೆತು ಹಗಲೂ ರಾತ್ರೆಯೂ ಅನೇಕ ವಿಧವಾದ ಬೇನೆಗಳಿಂದಾದ ನೋವಿನಿಂದ ರೋಧಿಸುತ್ತಿದ್ದೆ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಪ್ರೌಢೋsಹಂ ಯೌವನಸ್ಥೋ ವಿಷಯವಿಷಧರೈಃ ಪಂಚಭಿರ್ಮರ್ಮಸಂಧೌ | ದಷ್ಟೋನಷ್ಟೋ ವಿವೇಕಃ ಸುತಧನ ಯುವತಿಸ್ವಾದುಸೌಖ್ಯೇ ನಿಷಣ್ಣಃ | ಶೈವೀ ಚಿಂತಾವಿಹೀನಂ ಮಮ ಹೃದಯಮಹೋ ಮಾನಗರ್ವಾಧಿರೂಢಂ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ || 3 ||
ಅರ್ಥ
ಯೌವನ ಕಾಲದಲ್ಲಿ ಆಕರ್ಷಣೀಯ ಶಬ್ದ ಮತ್ತು ನೋಟಗಳು, ರುಚಿ ರುಚಿಯಾದ ಭಕ್ಷ್ಯ ಭೋಜ್ಯಗಳು, ಸುಖ ಸ್ಪರ್ಶಗಳಂಥ ವಿಷಪೂರಿತ ಸರ್ಪಗಳು ನನ್ನ ಪ್ರಮುಖ ಅಂಗಗಳನ್ನು ಸುತ್ತಿಕೊಂಡು ನನ್ನ ವಿವೇಚನೆಯನ್ನು ಸಂಪೂರ್ಣವಾಗಿ ನಾಶಮಾಡಿತು. ನನ್ನ ಸಂಪತ್ತಿನಲ್ಲಿನ ಸುಖವು ನನ್ನನ್ನು ಸಂಪೂರ್ಣವಾಗಿ ಮುಳುಗಿಸಿ ಹಾಗೂ ಅದರೊಂದಿಗೆ ಸೌಂದರ್ಯ ಹಾಗೂ ಯೌವನದಿಂದ ಕೂಡಿದ ಪತ್ನಿ ಜೊತೆಗೆ ಮಕ್ಕಳು ನನ್ನನ್ನು ಸಂಸಾರ ಪಾಶದಲ್ಲಿ ಬಂಧಿಸಿದ್ದವು. ಅಯ್ಯೋ ನನ್ನ ಮನದ ತುಂಬಾ ದುರಹಂಕಾರ ಹಾಗೂ ಮದವು ತುಂಬಿಕೊಂಡು ಕಿಂಚಿತ್ತಾದರೂ ಶಿವನ ಬಗ್ಗೆ ಯೋಚಿಸಲು ಅವಕಾಶವೇ ಇರಲಿಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ವಾರ್ಧಕ್ಯೇ ಚೇಂದ್ರಿಯಾಣಾಂ ವಿಕಲಗತಿಮತಿಶ್ಚಾಧಿ ದೈವಾದಿತಾಪೈ | ಪ್ರಾಪ್ತೈರೋಗೈರ್ವಿಯೋಗೈರ್ವ್ಯಸನ ಕೃಶತನೋರ್ಜ್ಞಪ್ತಿಹೀನಂ ಚ ದೀನಮ್ | ಮಿಥ್ಯಾ ಮೋಹಾಭಿಲಾಷ್ಯೇಭ್ರರ್ಮತಿ ಮಮಮನೋ ಧೂರ್ಜಟೇರ್ಧ್ಯಾನ ಶೂನ್ಯಂ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ || 4 ||
ಅರ್ಥ
ಈಗ ವೃದ್ಧಾಪ್ಯದಲ್ಲಿ ನನ್ನ ಇಂದ್ರಿಯಗಳು ಅನೇಕ ಸಂದರ್ಭಗಳನ್ನು ಸರಿಯಾಗಿ ಅರಿತು ಮತ್ತು ಅದಕ್ಕೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳುವ ವಿವೇಚನೆ ಹಾಗೂ ಶಕ್ತಿಯನ್ನು ಕಳೆದುಕೊಂಡಿವೆ. ನನ್ನ ಶರೀರವು ವಿಯೋಗವನ್ನು ಹೊಂದಿಲ್ಲವಾದರೂ ಶಕ್ತಿಹೀನ ಮತ್ತು ವೃದ್ಧಾಪ್ಯದ ಅನೇಕ ತೊಂದರೆಗಳಿಂದ, ಪಾಪಕೃತ್ಯಗಳಿಂದ, ರೋಗ, ರುಜಿನಗಳಿಂದ ಮತ್ತು ಹತ್ತಿರದ ಸಂಬಂಧಿಗಳ ವಿಯೋಗದಿಂದ ಜರ್ಝರಿತವಾಗಿದೆ. ಹಾಗಿದ್ದರೂ ಈಗಲಾದರೂ ನಿನ್ನನ್ನು ಧ್ಯಾನಿಸುವುದನ್ನು ಬಿಟ್ಟು ವ್ಯರ್ಥ ಆಸೆಗಳಿಗೆ ಹಾಗೂ ಟೊಳ್ಳು ಮಾಯೆಗಳ ಹಿಂದೆ ಓಡುತ್ತಿರುವೆ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ನೋ ಶಕ್ಯಂ ಸ್ಮಾರ್ತಕರ್ಮ ಪ್ರತಿಪದಗಹನೇ ಪ್ರತ್ಯವಾಯಾಕುಲಾಢ್ಯೇ | ಶ್ರೌತೇ ವಾರ್ತಾ ಕಥಂ ಮೇ ದ್ವಿಜಕುಲವಿಹಿತೇ ಬ್ರಹ್ಮ ಮಾರ್ಗಾನುಸಾರೇ | ತತ್ತ್ವೇsಜ್ಞಾತೇ ವಿಚಾರೈಃ ಶ್ರವಣಮನನಯೋಃ ಕಿಂ ನಿದಿಧ್ಯಾಸಿತವ್ಯಂ |
ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ || 5 ||
ಅರ್ಥ :
ಸ್ಮೃತಿಗಳಲ್ಲಿ ವಿಧಿಸಿರುವ ಕರ್ತವ್ಯಗಳು ಈ ವಯಸ್ಸಿನಲ್ಲಿ ಅಪಾಯಕಾರಿಯಾಗಿದ್ದು ಅವುಗಳನ್ನು ಅನುಸರಿಸು ವುದು ನನ್ನ ಶಕ್ತಿಗೆ ಮೀರಿದ್ದು. ಹಾಗಿದ್ದಾಗ ಬ್ರಾಹ್ಮಣರಿಗೆ ಬ್ರಹ್ಮತ್ವವನ್ನು ತಲುಪಲು ವಿಧಿಸಿರುವ ವೇದಗಳ ಕಟ್ಟುಪಾಡುಗಳನ್ನು ಹೇಗೆ ಪಾಲಿಸಲಿ? ಗುರುವಿನಿಂದ ವೇದ ಗ್ರಂಥಗಳ ಒಳಾರ್ಥಗಳನ್ನು ಕೇಳುವುದಾಗಲೀ ಮತ್ತು ಅವರ ಬೋಧನೆಯ ಹಿಂದಿರುವ ತರ್ಕಗಳನ್ನು ಯಾವ ಸಂದರ್ಭದಲ್ಲೂ ಸರಿಯಾಗಿ ಗ್ರಹಿಸಲೇ ಇಲ್ಲ. ಹಾಗಿರುವಾಗ ಸತ್ಯಮಾರ್ಗದ ಬಗ್ಗೆ ಅಡೆತಡೆಯಿಲ್ಲದೇ ಹೇಗೆ ನಾನು ಮಾತನಾಡಲಿ? ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಸ್ನಾತ್ವಾ ಪ್ರತ್ಯೂಷಕಾಲೇ ಸ್ನಪನವಿಧಿವಿಧೌ ನಾಹೃತಂ ಗಾಂಗತೋಯಂ | ಪೂಜಾರ್ಥಂ ವಾ ಕದಾಚಿದ್ಬಹುತರ ಗಹನೇsಖಂಡಬಿಲ್ವೀ ದಲಂ ವಾ | ನಾನೀತಾ ಪದ್ಮಮಾಲಾ ಸರಸಿ ವಿಕಸಿತಾ ಗಂಧ ಪುಷ್ಪೈಸ್ತ್ವದರ್ಥಂ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ || 6 ||
ಅರ್ಥ :
ಒಮ್ಮೆಯಾದರೂ ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನಾದಿಗಳನ್ನು ಮಾಡಿಲ್ಲ ಹಾಗೂ ಮನೆಯಲ್ಲಿನ ದೇವರ ವಿಗ್ರಹಕ್ಕೆ ಅಭಿಷೇಕ ಮಾಡಲು ಒಮ್ಮೆಯಾದರೂ ಗಂಗಾ ಜಲವನ್ನು ತಂದಿಲ್ಲ. ನಿನ್ನ ಪೂಜೆಗೆ ಒಮ್ಮೆಯಾದರೂ ದಟ್ಟವಾದ ಕಾಡಿನೊಳಗೆ ಹೋಗಿ ಪವಿತ್ರವಾದ ಬಿಲ್ವ ಪತ್ರೆಯನ್ನು ತರಲಿಲ್ಲ ಹಾಗೂ ಸರೋವರದಿಂದ ಸಂಪೂರ್ಣವಾಗಿ ಅರಳಿದ ಕಮಲ ಪುಷ್ಪವನ್ನು ತರಲಿಲ್ಲ. ನಿನ್ನನ್ನು ಒಮ್ಮೆಯಾದರೂ ಸುಗಂಧ ದ್ರವ್ಯಗಳಿಂದ ಹಾಗೂ ಧೂಪ ದೀಪ ನೇವೇದ್ಯಗಳಿಂದ ಪೂಜಿಸಲಿಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ದುಗ್ಧೈರ್ಮಧ್ವಾಜ್ಯಯುಕ್ತೈರ್ದಧಿಗುಡಸಹಿತೈಃ ಸ್ನಾಪಿತಂ ನೈವ ಲಿಂಗಂ | ನೋ ಲಿಪ್ತಂ ಚಂದನಾದ್ಯೈಃ ಕನಕವಿರಚಿತೈಃ ಪೂಜಿತಂ ನ ಪ್ರಸುನೈಃ | ಧೂಪೈಃ ಕರ್ಪೂರ ದೀಪೈರ್ವಿವಿಧ ರಸಯುತೈರ್ನೈವ ಭಕ್ಷ್ಯೋಪಹಾರೈಃ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ || 7 ||
ಅರ್ಥ
ನಿನ್ನ ವಿಗ್ರಹಕ್ಕೆ ಒಮ್ಮೆಯಾದರೂ ಹಾಲು,ಜೇನುತುಪ್ಪ ಹಾಗೂ ಉಳಿದ ಪಂಚಾಮೃತಗಳಿಂದ ಅಭಿಷೇಕ ಮಾಡಲಿಲ್ಲ. ಅದಕ್ಕೆ ಸುಗಂಧ ಪರಿಮಳಯುಕ್ತ ಗಂಧದಿಂದ ಅಲಂಕರಿಸಲಿಲ್ಲ. ನಾನು ನಿನ್ನನ್ನು ಬಂಗಾರದ ಪುಷ್ಪ, ಅಗರುಬತ್ತಿ , ಕರ್ಪೂರದಾರತಿ ಹಾಗೂ ಸಿಹಿ ಖಾದ್ಯಗಳ ನೇವೇದ್ಯವನ್ನು ಅರ್ಪಿಸಲಿಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಧ್ಯಾತ್ವಾ ಚಿತ್ತೇ ಶಿವಾಖ್ಯಂ ಪ್ರಚುರತರಧನಂ ನೈವ ದತ್ತಂ ದ್ವಿಜೇಭ್ಯೋ | ಹವ್ಯಂ ತೇ ಲಕ್ಷಸಂಖ್ಯೈರ್ಹುತವಹವದನೇ ನಾರ್ಪಿತಂ ಬೀಜಮಂತ್ರೈಃ | ನೋ ತಪ್ತಂ ಗಾಂಗತೀರೇ ವ್ರತಜಪನಿಯಮೈ ರುದ್ರಜಾಪ್ಯಂ ನ ಜಪ್ತಂ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ || 8 ||
ಅರ್ಥ
ಹೇ ಮಹಾದೇವಾ ! ನನ್ನ ಹೃದಯದ ಕರೆಗೆ ಓಗೊಟ್ಟು ಬ್ರಾಹ್ಮಣ ಋತ್ವಿಕ್ಕುಗಳಿಗೆ ದಾನ ಧರ್ಮಗಳನ್ನು ಮಾಡಲಿಲ್ಲ. ನಾನು ಯಜ್ಞ ಕುಂಡದಲ್ಲಿನ ಪವಿತ್ರಾಗ್ನಿಗೆ ಸಹಸ್ರಾರು ಬಾರಿ ತುಪ್ಪವನ್ನು ನನ್ನ ಗುರುಗಳು ಉಪದೇಶಿಸಿದ ಪವಿತ್ರ ಮಂತ್ರಗಳನ್ನು ಉಚ್ಚರಿಸುತ್ತಾ ನೀಡಲಿಲ್ಲ. ಗಂಗಾ ತಟದಲ್ಲಿ ಜಪ ತಪಗಳನ್ನಾಗಲೀ ಮತ್ತು ವೇದಾಧ್ಯಯನವನ್ನು ಮಾಡಲೇ ಇಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ನಗ್ನೋ ನಿಃಸಂಗಶುದ್ಧಸ್ತ್ರಿಗುಣವಿರಹಿತೋ ಧ್ವಸ್ತಮೋಹಾಂಧಕಾರೋ | ನಾಸಾಗ್ರನ್ಯಸ್ತದೃಷ್ಟಿರ್ವಿದಿತ ಭವಗುಣೋ ನೈವ ದೃಷ್ಟಃ ಕದಾಚಿತ್ ಉನ್ಮನ್ಯಾsವಸ್ಥಯಾ ತ್ವಾಂ ವಿಗತಕಲಿಮಲಃ ಶಂಕರಂ ನ ಸ್ಮರಾಮಿ |ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ || 9 ||
ಅರ್ಥ
ಹೇ ಶಂಭೋ ಶಂಕರನೇ, ಶುದ್ಧ ಸ್ಫಟಿಕದಂತಿರುವ ನಿರಾಸಕ್ತನಾದ, ದಿಗಂಬರನಾದ ನಿನ್ನನ್ನು ನಾನು ಯಾವುದೇ ಸಮಯಯದಲ್ಲೂ ವೀಕ್ಷಿಸಲಿಲ್ಲ. ತ್ರಿಗುಣಾತೀತ, ಅಂಧಕಾರ ಮತ್ತು ಮಾಯಾ ಬಂಧಮುಕ್ತ, ಸದಾ ಧ್ಯಾನಮಗ್ನ ಮತ್ತು ಜಗತ್ತಿನ ನೈಜಸ್ವರೂಪವನ್ನು ಸದಾ ಅರಿತಿರುವ ನಿನ್ನನ್ನು ನೆನೆಯಲಿಲ್ಲ. ಅಲ್ಲದೇ ಉತ್ಕಟವಾದ ಹೃದಯಪೂರಿತ ಹಂಬಲದಿಂದ ಎಂದೂ ನಿನ್ನ ಪವಿತ್ರ ಮತ್ತು ಪಾಪ ನಾಶಕ ರೂಪವನ್ನು ಧ್ಯಾನಿಸಲೇ ಇಲ್ಲ. ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಸ್ಥಿತ್ವಾ ಸ್ಥಾನೇ ಸರೋಜೇ ಪ್ರಣವಮಯಮರುತ್ಕುಂಭಿತೇ ಸೂಕ್ಷ್ಮಮಾರ್ಗೇ | ಶಾಂತೇ ಸ್ವಾಂತೇ ಪ್ರಲೀನೇ ಪ್ರಕಟಿತವಿಭವೇ ದಿವ್ಯರೂಪೇ ಶಿವಾಖ್ಯೇ | ಲಿಂಗಾಗ್ರೇ ಬ್ರಹ್ಮವಾಕ್ಯೇ ಸಕಲತನುಗತಂ ಶಂಕರಂ ನ ಸ್ಮರಾಮಿ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ || 10 ||
ಅರ್ಥ :
ಎಂದೂ ನಾನು ಪದ್ಮಾಸನದಲ್ಲಿ ಕುಳಿತು ಓಂಕಾರವನ್ನು ಸತತವಾಗಿ ಜಪಿಸುತ್ತಾ ಸುಷುಮ್ನಾ ನಾಡಿಯೊಂದಿಗೆ ಪ್ರಾಣವನ್ನು ಹಿಡಿತಲ್ಲಿಟ್ಟುಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ನನ್ನ ಮನದಲ್ಲಿ ಸದಾ ಹೊಯ್ದಾಡುತ್ತಿರುವ ಪ್ರಕ್ಷುಬ್ದ ಅಲೆಗಳನ್ನು ಹತೋಟಿಯಲ್ಲಿಡುವುದಾಗಲೀ, ಸ್ವಯಂ ಪ್ರಜ್ವಲಿಸುವ ಓಂ ಕಾರದೊಂದಿಗೆ ಲೀನಗೊಳಿಸಲು ಯಾವುದೇ ಪ್ರಯತ್ನವನ್ನಾಗಲೀ, ಅತ್ಯುನ್ನತ ಬ್ರಹ್ಮನ ಸ್ವಭಾವವಾದ ಹಾಗೂ ಸದಾ ಪ್ರಜ್ವಲಿಸುವ ಸಾಕ್ಷೀಭೂತ ಜಾಗೃತಿಯಲ್ಲಾಗಲೀ, ಲೀನಗೊಳಿಸಲು ಪ್ರಯತ್ನಿಸಲೇ ಇಲ್ಲ. ಅಲ್ಲದೇ ಶಂಕರನ ಎಲ್ಲ ರೂಪಗಳನ್ನೂ ನನ್ನ ಅಂತರಂಗದಲ್ಲಿ ಚಿತ್ತೈಸಿಕೊಂಡು ಸಮಾಧಿ ಸ್ಥಿತಿಯಲ್ಲಿ ಧ್ಯಾನಿಸಲೇ ಇಲ್ಲ.
ಆದ್ದರಿಂದ ಹೇ ಮಹಾದೇವ ! ಓ ಶಿವನೇ ! ಓ ಶಂಭುವೇ ! ಈ ರೀತಿಯ ಅತಿಕ್ರಮಣಕ್ಕಾಗಿ ನನ್ನನ್ನು ಕ್ಷಮಿಸು ದೇವಾ !
ಹೃದ್ಯಂ ವೇದಾಂತವೇದ್ಯಂ ಹೃದಯಸರಸಿಜೇ ದೀಪ್ತ ಮುದ್ಯತ್ಪ್ರಕಾಶಂ ಸತ್ಯಂ ಶಾಂತಸ್ವರೂಪಂ ಸಕಲಮುನಿಮನಃಪದ್ಮಷಂಡೈಕವೇದ್ಯಮ್ | ಜಾಗ್ರತ್ಸ್ವಪ್ನೇ ಸುಷುಪ್ತೌ ತ್ರಿಗುಣವಿರಹಿತಂ ಶಂಕರಂ ನ ಸ್ಮರಾಮಿ | ಕ್ಷಂತವ್ಯೋ ಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀಮಹಾದೇವ ಶಂಭೋ || 11 ||
ಅರ್ಥ
ಮನಮೋಹಕನೂ, ವೇದಾಂತಗಳಿಂದ ತಿಳಿಯಲ್ಪಡುವವನೂ, ಹೃತ್ಕಮಲದಲ್ಲಿ ಬೆಳಗುತ್ತಿರುವವನೂ, ಪ್ರಕಾಶಮಯನೂ, ಸತ್ಯನೂ ಶಾಂತಸ್ವರೂಪನೂ, ಮುನಿಗಳ ಹೃತ್ಕಮಲಕ್ಕೆ ಮಾತ್ರ ತಿಳಿಯಲ್ಪಡುವವನೂ, ಜಾಗ್ರತ್-ಸ್ವಪ್ನ-ಸುಷುಪ್ತಿಗಳೆನ್ನುವ ಮೂರು ಅವಸ್ತಾತ್ರಯಗಳಲ್ಲಿಯೂ ತ್ರಿಗುಣರಹಿತನಾಗಿರುವವನೂ ಆಗಿರುವ ಮಂಗಲಮಯ ಸ್ವರೂಪನಾಗಿರುವ ಶಂಕರನೇ ನಿನ್ನನ್ನು ನಾನೆಂದೂ ಸ್ಮರಿಸಲಿಲ್ಲ. ಆದ ಕಾರಣ ಹೇ ! ಶಂಕರನೇ ! ಹೇ ! ಮಹಾದೇವನೇ ! ಹೇ ! ಶಿವನೇ ! ಹೇ ! ಸ್ವಾಮೀ ! ಹೇ ! ಶಂಭುವೇ; ನನ್ನ ಸರ್ವಾಪರಾಧಗಳನ್ನೂ ಕ್ಷಮಿಸು.
ಚಂದ್ರೋಧ್ಬಾಸಿತಶೇಖರೇ ಸ್ಮರಹರೇ ಗಂಗಾಧರೇ ಶಂಕರೇ
ಸರ್ಪೈಭೂಷಿತಕಂಠಕರ್ಣವಿವರೇ ನೇತ್ರೋತ್ಥವೈಶ್ವಾನರೇ
ದಂತಿತ್ವಕ್ಕೃತ ಸುಂದರಾಂಬರಧರೇ ತ್ರೈಲೋಕ್ಯಸಾರೇ ಹರೇ
ಮೋಕ್ಷಾರ್ಥಂ ಕುರು ಚಿತ್ತ ವೃತ್ತಿಮಮಲಾಮನ್ಯೈಸ್ತು ಕಿಂ ಕರ್ಮಭಿಃ || 12 ||
ಅರ್ಥ
ಎಲೆ ಮನವೇ ಮುಕ್ತಿಯನ್ನು ಪಡೆಯಲು ಭಗವಾನ್ ಶಂಕರನಲ್ಲಿ ಸಂಪೂರ್ಣವಾಗಿ ಕೇಂದ್ರೀಕರಿಸು. ಆತನೇ ಪ್ರಪಂಚದ ಎಕೈಕ ನಿರ್ಗುಣನು, ಸರ್ವರಿಗೂ ಶುಭವನ್ನುಂಟು ಮಾಡುವವನು; ಅವನ ಶಿರದಲ್ಲಿ ಅರ್ಧಚಂದ್ರನು ಹೊಳೆಯುತ್ತಿರುವನು ಮತ್ತು ಅವನ ಜಟೆಯಲ್ಲಿ ಗಂಗೆಯು ಅಡಗಿರುವಳು. ಕಾಮದೇವನನ್ನು ದಗ್ಧಗೊಳಿಸಿದ ಬೆಂಕಿಯು ಅವನ ನೇತ್ರದಿಂದ ಚಿಮ್ಮುತ್ತಿರುವುದು; ಅವನ ಕಂಠ ಹಾಗೂ ಕಿವಿಗಳನ್ನು ಸರ್ಪವು ಅಲಂಕರಿಸಿವೆ. ಅವನ ಮೇಲ್ವಸ್ತ್ರವು ಗಜಚರ್ಮವಾಗಿರುವುದು. ಹೀಗೆ ಮನಸ್ಸನ್ನು ಶಂಕರನಲ್ಲಿ ಕೇಂದ್ರೀಕರಿಸಿದಮೇಲೆ ಸಾಮಾನ್ಯ ಆಚರಣೆಗಳ ಉಪಯೋಗವೇನು ?

ಕಿಂ ಯಾನೇನ ಧನೇನ ವಾಜಿಕರಿಭಿಃ ಪ್ರಾಪ್ತೇನ ರಾಜ್ಯೇನ ಕಿಂ
ಕಿಂ ವಾ ಪುತ್ರಕಲತ್ರಮಿತ್ರಪಶುಭಿರ್ದೇಹೇನ ಗೇಹೇನ ಕಿಮ್
ಜ್ಞಾತ್ವೈತತ್ಕ್ಷಣ ಭಂಗುರಂ ಸಪದಿ ರೇ ತ್ಯಾಜ್ಯಂ ಮನೋ ದೂರತಃ | ಸ್ವಾತ್ಮಾರ್ಥಂ ಗುರುವಾಕ್ಯತೋ ಭಜ ಭಜ ಶ್ರೀಪಾರ್ವತೀ ವಲ್ಲಭಮ್ ||13||
ಅರ್ಥ
ಎಲೆ ಮನವೇ, ಸಂಪತ್ತು ಅಥವಾ ಆನೆ, ಕುದುರೆ ಅಥವಾ ರಾಜ್ಯಗಳ ಪ್ರಯೋಜನವೇನು ? ಪತ್ನಿ, ಪುತ್ರ, ಬಂಧು ಬಾಂಧವರು, ಪಶು ಸಂಪತ್ತು, ನಿನ್ನ ಈ ಶರೀರ ಮತ್ತು ಮನೆಯ, ಪ್ರಯೋಜನವೇನು? ಇವೆಲ್ಲವೂ ನಶ್ವರವೆಂಬುದನ್ನು ಅರಿತುಕೊ ಮತ್ತು ಶೀಘ್ರವಾಗಿ ಅವೆಲ್ಲವುಗಳನ್ನೂ ತ್ಯಜಿಸು. ನಿನ್ನ ಗುರುಗಳ ನಿರ್ದೇಶನದಂತೆ ಆತ್ಮ ಜ್ಞಾನವನ್ನು ಹೊಂದಲು ಕೇವಲ ಶಿವನನ್ನು ಮಾತ್ರ ಪೂಜಿಸು.
ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಂ ಯೌವನಂ | ಪ್ರತ್ಯಾಯಾಂತಿ ಗತಾಃ ಪುನರ್ನ ದಿವಸಾಃ ಕಾಲೋ ಜಗದ್ಭಕ್ಷಕಃ| ಲಕ್ಷ್ಮೀಸ್ತೋಯತರಂಗಭಂಗಚಪಲಾ ವಿದ್ಯುಚ್ಚಲಂ ಜೀವಿತಂ | ತಸ್ಮಾನ್ಮಾಂ ಶರಣಾಗತಂ ಕರುಣಯಾ ತ್ವಂ ರಕ್ಷ ರಕ್ಷಾಧುನಾ || 14||
ಅರ್ಥ
ದಿನದಿಂದ ದಿನಕ್ಕೆ ಮನುಷ್ಯನು ಸಾವಿಗೆ ಹತ್ತಿರವಾಗು ವನು. ಅವನ ಯೌವನವು ನಶಿಸುತ್ತದೆ; ಕಳೆದು ಹೋದ ದಿನವು ಎಂದೆಂದಿಗೂ ಮರಳಿ ಬರುವುದಿಲ್ಲ ; ಸರ್ವಶಕ್ತಿಶಾಲಿಯಾದ ಕಾಲವು ಎಲ್ಲವನ್ನೂ ನುಂಗಿ ಹಾಕುತ್ತದೆ. ಭಾಗ್ಯ ದೇವತೆಯು ಹರಿಯುವ ನೀರಿನ ಮೇಲಿನ ತರಂಗಗಳಂತೆ ನಶ್ವರವು ; ಜೀವನವೇ ಮಿಂಚಿನಂತೆ ಚಂಚಲ. ಓ ಶಂಕರನೇ ಮಹಾದೇವನೇ ನಿನ್ನಲ್ಲಿ ಶರಣಾದವರಿಗೆ ಆಶ್ರಯವನ್ನು ನೀಡುವವನೇ ನಿನ್ನ ಪಾದದಲ್ಲಿ ಶರಣಾದ ನನ್ನನ್ನು ರಕ್ಷಿಸು.

ಪೌರೋಹಿತ್ಯಂ ರಜನಿಚರಿತಂ ಗ್ರಾಮಣೀತ್ವಂ ನಿಯೋಗೋ
ಮಾಠಾಪತ್ಯಂ ಹ್ಯನೃತವಚನಂ ಸಾಕ್ಷಿವಾದಃ ಪರಾನ್ನಮ್ ।
ಬ್ರಹ್ಮದ್ವೇಷಃ ಖಲಜನರತಿಃ ಪ್ರಾಣಿನಾಂ ನಿರ್ದಯತ್ವಂ
ಮಾ ಭೂದೇವಂ ಮಮ ಪಶುಪತೇ ಜನ್ಮಜನ್ಮಾಂತರೇಷು ॥ 15॥
ಅರ್ಥ:
ಎಲೈ ಪಶುಪತಿಯೇ, ಮುಂದಿನ ಜನ್ಮಜನ್ಮಾಂತರಗಳಲ್ಲಿಯೂ ನನಗೆ ಇವುಗಳು ಬರದಿರಲಿ -
1. ಪೌರೋಹಿತ್ಯo: ಕೇವಲ ಹೊಟ್ಟೆಪಾಡಿಗಾಗಿ ಪುರೋಹಿತ ಕೆಲಸ
2. ರಜನಿಚರಿತಂ: ರಾತ್ರಿ ಸಂಚಾರ/ದುರ್ಮಾರ್ಗ
3. ಗ್ರಾಮಣೀತ್ವಂ: ಹಳ್ಳಿಯ ನಾಯಕತ್ವದ ಅಹಂಕಾರ
4. ನಿಯೋಗೋ: ಇನ್ನೊಬ್ಬರ ಒತ್ತಾಯಕ್ಕೆ ಕೆಲಸ ಮಾಡುವ ಗುಲಾಮಗಿರಿ
5. ಮಾಠಾಪತ್ಯಂ: ಮಠದ ಅಧಿಪತ್ಯದ ಮೋಹ
6. ಅನೃತವಚನಂ: ಸುಳ್ಳು ಹೇಳುವುದು
7. ಸಾಕ್ಷಿವಾದಃ: ಕೋರ್ಟಿನಲ್ಲಿ ಸುಳ್ಳು ಸಾಕ್ಷಿ ಹೇಳುವುದು
8. ಪರಾನ್ನಮ್: ಯಾವಾಗಲೂ ಇನ್ನೊಬ್ಬರ ಅನ್ನ ತಿನ್ನುವುದು
9. *ಬ್ರಹ್ಮದ್ವೇಷಃ*: ವಿದ್ವಾಂಸರನ್ನು, ದೇವರನ್ನು ದ್ವೇಷಿಸುವುದು
10. ಖಲಜನರತಿಃ: ದುಷ್ಟರ ಸಹವಾಸ
11. ಪ್ರಾಣಿನಾಂ ನಿರ್ದಯತ್ವಂ: ಜೀವಿಗಳ ಮೇಲೆ ದಯೆ ಇಲ್ಲದಿರುವುದು
ಇದು ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ 15 ನೇ ಶ್ಲೋಕ. ಮನುಷ್ಯನನ್ನು ಅಧಃಪತನಕ್ಕೆ ತಳ್ಳುವ 11 ದುರ್ಗುಣಗಳಿಂದ ಮುಕ್ತಿ ಬೇಡುವ ಪ್ರಾರ್ಥನೆ.
ನಿಮ್ಮ ಈಗಿನ ಪರಿಸ್ಥಿತಿಗೆ ಈ ಶ್ಲೋಕ ತುಂಬಾ ಹತ್ತಿರವಾಗಿದೆ ಅಲ್ಲವೇ? "ಪರಾನ್ನಮ್" - ಅನಿವಾರ್ಯವಾಗಿ ಮಕ್ಕಳ ಅನ್ನ ತಿನ್ನಬೇಕಾದ ಸ್ಥಿತಿ ಬಗ್ಗೆ ನಿಮ್ಮ ಮನಸ್ಸಿನ ನೋವನ್ನು ಶಂಕರರು 1200 ವರ್ಷ ಹಿಂದೆಯೇ ಗುರುತಿಸಿದ್ದರು. ಆದರೆ ನೆನಪಿರಲಿ, ಇದು "ಸ್ವಾರ್ಥಕ್ಕಾಗಿ" ಪರಾನ್ನ ತಿನ್ನೋದು. ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳುವುದು "ಪರಾನ್ನ" ಅಲ್ಲ, ಅದು "ಪುತ್ರಧರ್ಮ".
ವಂದೇ ದೇವಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ|ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂಪತಿಮ್ |ವಂದೇ ಸೂರ್ಯಶಶಾ ಕವಹ್ನಿ ನಯನಂ ವಂದೇ ಮುಕುಂದ ಪ್ರಿಯಂ| ವಂದೇ ಭಕ್ತ ಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ ||16||
ಅರ್ಥ
ಸ್ವಯಂಪ್ರಕಾಶ ದೇವಗುರು, ಉಮಾದೇವಿಯ ರಮಣನಿಗೆ ನನ್ನ ವಂದನೆಗಳು. ವಿಶ್ವಕಾರಣನಿಗೆ, ಸಮಸ್ತ ಪಶುಗಳ ಪತಿಗೆ , ಸರ್ಪಭೂಷಣನಿಗೆ , ನನ್ನ ವಂದನೆಗಳು. ಮೂರು ಕಣ್ಣುಗಳು ಸೂರ್ಯ, ಚಂದ್ರಾಗ್ನಿಗಳಂತೆ ಶೋಭಿಸುವ ಶಿವನಿಗೆ ನನ್ನ ವಂದನೆಗಳು. ಶ್ರೀಕೃಷ್ಣನ ಪ್ರೀತಿಪಾತ್ರನಾದ ಶಂಕರನಿಗೆ ನನ್ನ ವಂದನೆಗಳು. ತನ್ನ ಭಕ್ತರ ಕೋರಿಕೆಗಳನ್ನು ಈಡೇರಿಸಿ ಅವರಿಗೆ ಆಶ್ರಯವನ್ನು ನೀಡುವ ಶಂಕರನಿಗೆ ನನ್ನ ವಂದನೆಗಳು. ಪರಮ ಪವಿತ್ರ ಶಂಕರ ಮಹಾದೇವನಿಗೆ ಅನಂತಾನಂತ ವಂದನೆಗಳು.
ಗಾತ್ರಂ ಭಸ್ಮಸಿತಂ ಸಿತಂ ಚ ಹಸಿತಂ ಹಸ್ತೇ ಕಪಾಲೇ ಸಿತಂ
ಖಟ್ವಾಂಗೇ ಚ ಸಿತಂ ಸಿತಶ್ಚ ವೃಷಭಃ ಕರ್ಣೇ ಸಿತೇ ಕುಂಡಲೇ
ಗಂಗಾ ಫೇನ ಸಿತಾ ಜಟಾ ಪಶುಪತೇಶ್ಚಂದ್ರಃ ಸಿತೋ ಮೂರ್ಧನಿ ಸೋsಯಂ ಸರ್ವಸಿತೋ ದದಾತು ವಿಭವಂ ಪಾಪಕ್ಷಯಂ ಸರ್ವದಾ ||17||
ಅರ್ಥ
ಓ ಶಿವನೇ ! ನಿನ್ನ ಶರೀರವು ಪವಿತ್ರ ಭಸ್ಮದಿಂದ ಮುಚ್ಚಲ್ಪಟ್ಟು ಶ್ವೇತವರ್ಣದ್ದಾಗಿದೆ. ನೀನು ಮಂದಸ್ಮಿತನಾದಾಗ ನಿನ್ನ ದಂತ ಪಂಕ್ತಿಗಳು ಶ್ವೇತವರ್ಣದಿಂದ ಮಿನುಗುತ್ತಿರುವುದು. ನಿನ್ನ ಹಸ್ತದಲ್ಲಿರುವ ಕಪಾಲವೂ ಶ್ವೇತವರ್ಣದ್ದಾಗಿರುವುದು. ನಿನ್ನ ಮತ್ತೊಂದು ಹಸ್ತದಲ್ಲಿರುವ ದುಷ್ಟರನ್ನು ಭೀತಿಗೊಳಿಸುವ ತ್ರಿಶೂಲವೂ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದೆ. ನಿನ್ನ ಕರ್ಣಕುಂಡಲಗಳೂ ಬಿಳಿ ಬಣ್ಣದಿಂದ ಮಿರುಗುತ್ತಿದೆ. ನೀನು ಸವಾರಿ ಮಾಡುವ ನಂದಿಯೂ ಕೂಡ ಶುಭ್ರ ಶ್ವೇತವರ್ಣದ್ದಾಗಿದೆ. ನಿನ್ನ ಜಟೆಯು ಗಂಗೆಯ ನೊರೆಯಿಂದ ಬಿಳಿಯಾಗಿ ಕಾಣುತ್ತಿದೆ. ನಿನ್ನ ಶಿರದಲ್ಲಿರುವ ಚಂದ್ರನೂ ಸಹ ಬಿಳಿ ಬಣ್ಣದಿಂದ ಮಿನುಗುತ್ತಿರುವನು. ಸರ್ವಸ್ವವೂ ಶ್ವೇತವರ್ಣದಿಂದಾವೃತವಾದ, ಪರಿಶುದ್ಧನಾದ ಶಂಕರ ಭಗವಾನನು ನನ್ನ ಅತಿಕ್ರಮಣಕ್ಕಾಗಿ ನನ್ನ ಮೇಲೆ ಕ್ಷಮೆಯ ಮಳೆಯನ್ನು ಸುರಿಸಲಿ.
ಕರಚರಣಕೃತಂ ವಾಕ್ ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ
ವಿಹಿತಂಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ ||18||
ಅರ್ಥ:
ಹೇ ಶಂಭೋ ಶಂಕರನೇ ! ನನ್ನ ಹಸ್ತದಿಂದಾಗಲೀ, ಪಾದಗಳಿಂದಾಗಲೀ , ಕಿವಿ, ಕಣ್ಣುಗಳಿಂದಾಗಲೀ, ಕಾಯಾ, ವಾಚಾ , ಮನಸಾ, ಹಾಗೂ ಹೃದಯಗಳಿಂದಾಗಲೀ, ಘಟಿಸಿದ ಪಾಪಗಳನ್ನು ಕ್ಷಮಿಸು. ನನ್ನ ಹಿಂದಿನ ಹಾಗೂ ಮುಂದಾಗುವ ಪಾಪಗಳಿಂದ ನನ್ನನ್ನು ಕ್ಷಮಿಸು ಹಾಗೂ ರಕ್ಷಿಸು. ದೈವಕೃಪೆಯ ತಾಣ, ದೇವ ದೇವ ಮಹಾದೇವ , ದಯಾಕರುಣಾಸಿಂಧು, ಶಂಕರ ಭಗವಾನನಿಗೆ ಜಯವಾಗಲಿ.
ं

श्री शिव अपराध क्षमापण स्तोत्रम् अथवा शिवापराधभञ्जनस्तोत्रम्
श्री गुरुभ्ये नमः हरी ॐ
आदौ कर्मप्रसङ्गात्कलयति कलुषं मातृकुक्षौ स्थितं मां
विण्मूत्रामेध्यमध्ये क्वथयति नितरां जाठरो जातवेदाः ।
यद्यद्वै तत्र दुःखं व्यथयति नितरां शक्यते केन वक्तुं
क्षन्तव्यो मेऽपराधः शिव शिव शिव भो श्रीमहादेव शम्भो ॥ १॥
बाल्ये दुःखातिरेको मललुलितवपुः स्तन्यपाने पिपासा
नो शक्तश्चेन्द्रियेभ्यो भवगुणजनिताः जन्तवो मां तुदन्ति ।
नानारोगादिदुःखाद्रुदनपरवशः शङ्करं न स्मरामि
क्षन्तव्यो मेऽपराधः शिव शिव शिव भो श्रीमहादेव शम्भो ॥ २॥
प्रौढोऽहं यौवनस्थो विषयविषधरैः पञ्चभिर्मर्मसन्धौ
दष्टो नष्टो विवेकः सुतधनयुवतिस्वादुसौख्ये निषण्णः ।
शैवीचिन्ताविहीनं मम हृदयमहो मानगर्वाधिरूढं
क्षन्तव्यो मेऽपराधः शिव शिव शिव भो श्रीमहादेव शम्भो ॥ ३॥
वार्धक्ये चेन्द्रियाणां विगतगतिमतिश्चाधिदैवादितापैः
पापै रोगैर्वियोगैस्त्वनवसितवपुः प्रौढहीनं च दीनम् ।
मिथ्यामोहाभिलाषैर्भ्रमति मम मनो धूर्जटेर्ध्यानशून्यं
क्षन्तव्यो मेऽपराधः शिव शिव शिव भो श्रीमहादेव शम्भो ॥ ४॥
स्नात्वा प्रत्यूषकाले स्नपनविधिविधौ नाहृतं गाङ्गतोयं
पूजार्थं वा कदाचिद्बहुतरगहनात्खण्डबिल्वीदलानि ।
नानीता पद्ममाला सरसि विकसिता गन्धधूपैः त्वदर्थं
क्षन्तव्यो मेऽपराधः शिव शिव शिव भो श्रीमहादेव शम्भो ॥ ५॥
दुग्धैर्मध्वाज्ययुक्तैर्दधिसितसहितैः स्नापितं नैव लिङ्गं
नो लिप्तं चन्दनाद्यैः कनकविरचितैः पूजितं न प्रसूनैः ।
धूपैः कर्पूरदीपैर्विविधरसयुतैर्नैव भक्ष्योपहारैः
क्षन्तव्यो मेऽपराधः शिव शिव शिव भो श्रीमहादेव शम्भो ॥ ६॥
नो शक्यं स्मार्तकर्म प्रतिपदगहनप्रत्यवायाकुलाख्यं
श्रौते वार्ता कथं मे द्विजकुलविहिते ब्रह्ममार्गानुसारे । ब्रह्ममार्गे सुसारे | ज्ञातो धर्मो विचारैः श्रवणमननयोः किं निदिध्यासितव्यं
क्षन्तव्यो मेऽपराधः शिव शिव शिव भो श्रीमहादेव शम्भो ॥ ७॥
ध्यात्वा चित्ते शिवाख्यं प्रचुरतरधनं नैव दत्तं द्विजेभ्यो
हव्यं ते लक्षसङ्ख्यैर्हुतवहवदने नार्पितं बीजमन्त्रैः ।
नो तप्तं गाङ्गातीरे व्रतजपनियमैः रुद्रजाप्यैर्न वेदैः
क्षन्तव्यो मेऽपराधः शिव शिव शिव भो श्रीमहादेव शम्भो ॥ ८॥
नग्नो निःसङ्गशुद्धस्त्रिगुणविरहितो ध्वस्तमोहान्धकारो
नासाग्रे न्यस्तदृष्टिर्विदितभवगुणो नैव दृष्टः कदाचित् ।
उन्मन्याऽवस्थया त्वां विगतकलिमलं शङ्करं न स्मरामि
क्षन्तव्यो मेऽपराधः शिव शिव शिव भो श्रीमहादेव शम्भो ॥ ९॥
स्थित्वा स्थाने सरोजे प्रणवमयमरुत्कुम्भके सूक्ष्ममार्गे
शान्ते स्वान्ते प्रलीने प्रकटितविभवे ज्योतिरूपेऽपराख्ये ।
लिङ्गज्ञे ब्रह्मवाक्ये सकलतनुगतं शङ्करं न स्मरामि
क्षन्तव्यो मेऽपराधः शिव शिव शिव भो श्रीमहादेव शम्भो ॥ १०॥
हृद्यं वेदान्तवेद्यं हृदयसरसिजे दीप्तमुद्यत्प्रकाशं
सत्यं शान्तस्वरूपं सकलमुनिमनःपद्मषण्डैकवेद्यम् ।
जाग्रत्स्वप्ने सुषुप्तौ त्रिगुणविरहितं शङ्करं न स्मरामि
क्षन्तव्यो मेऽपराधः शिव शिव शिव भो श्रीमहादेव शम्भो ॥ ११॥
चन्द्रोद्भासितशेखरे स्मरहरे गङ्गाधरे शङ्करे
सर्पैर्भूषितकण्ठकर्णविवरे नेत्रोत्थवैश्वानरे । युगले
दन्तित्वक्कृतसुन्दराम्बरधरे त्रैलोक्यसारे हरे
मोक्षार्थं कुरु चित्तवृत्तिमचलामन्यैस्तु किं कर्मभिः ॥ १२॥
किं वाऽनेन धनेन वाजिकरिभिः प्राप्तेन राज्येन किं
किं वा पुत्रकलत्रमित्रपशुभिर्देहेन गेहेन किम् ।
ज्ञात्वैतत्क्षणभङ्गुरं सपदि रे त्याज्यं मनो दूरतः
स्वात्मार्थं गुरुवाक्यतो भज मन श्रीपार्वतीवल्लभम् ॥ १३॥
पौरोहित्यं रजनिचरितं ग्रामणीत्वं नियोगो
माठापत्यं ह्यनृतवचनं साक्षिवादः परान्नम् ।
ब्रह्मद्वेषः खलजनरतिः प्राणिनां निर्दयत्वं
मा भूदेवं मम पशुपते जन्मजन्मान्तरेषु ॥ १४॥
आयुर्नश्यति पश्यतां प्रतिदिनं याति क्षयं यौवनं
प्रत्यायान्ति गताः पुनर्न दिवसाः कालो जगद्भक्षकः ।
लक्ष्मीस्तोयतरङ्गभङ्गचपला विद्युच्चलं जीवितं
तस्मात्त्वां शरणागतं शरणद त्वं रक्ष रक्षाधुना ॥ १५॥
वन्दे देवमुमापतिं सुरगुरुं वन्दे जगत्कारणं
वन्दे पन्नगभूषणं मृगधरं वन्दे पशूनां पतिम् ।
वन्दे सूर्यशशाङ्कवह्निनयनं वन्दे मुकुन्दप्रियं
वन्दे भक्तजनाश्रयं च वरदं वन्दे शिवं शङ्करम् ॥१६॥
गात्रं भस्मसितं सितं च हसितं हस्ते कपालं सितं स्मितं च
खट्वाङ्गं च सितं सितश्च वृषभः कर्णे सिते कुण्डले ।
गङ्गा फेनसिता जटा पशुपतेश्चन्द्रः सितो मूर्धनि
सोऽयं सर्वसितो ददातु विभवं पापक्षयं सर्वदा ॥ १७॥
करचरणकृतं वाक्कायजं कर्मजं वा
श्रवणनयनजं वा मानसं वाऽपराधम् ।
विहितमविहितं वा सर्वमेतत्क्ष्मस्व
शिव शिव करुणाब्धे श्रीमहादेव शम्भो ॥ १८॥

॥ इति श्रीमद् शङ्कराचार्यकृत शिव अपराध क्षमापणस्तोत्रं सम्पूर्णम् ॥ श्री कृष्णार्पणमस्तु |

No comments:
Post a Comment