ಶ್ರೀ ಅಂಭ್ರಣಿ ಸೂಕ್ತ
( ಶ್ರೀ ದೇವೀ ಸೂಕ್ತ ಅಥವಾ ವಾಗಂಭೃಣೀ ಸೂಕ್ತ )
ಋಗ್ವೇದ ಸಂಹಿತಾ ಮಂಡಲ ೧೦ ಸೂಕ್ತ ೧೨೫
ಶ್ರೀ ಗುರುಭ್ಯೋ ನಮಃ ಹರಿ: ಓಂ
ಅಹಂ ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವದೇವೈ:ಅಹಂ ಮಿತ್ರಾವರುಣೋಭಾ ಬಿಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ ।।೧।।
ಅಹಂ ಸೋಮಮಾಹನಸಂ ಬಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್ಅಹಂ ದಧಾಮಿ ದ್ರವಿಣಂ ಹವಿಷ್ಮತೇ ಸುಪ್ರಾವ್ಯೇsಯಜಮಾನಾಯ ಸುನ್ವತೇ ।।೨।।
ಅಹಂ ರಾಷ್ಟ್ರೀ ಸಂಗಮನೀ ವಸೂನಾಂ ಚಿಕಿತುಷೀ ಪ್ರಥಮಾ ಯಜ್ಞಿಯಾನಾಮ್ತಾಂ ಮಾ ದೇವಾ ವ್ಯದಧು: ಪುರುತ್ರಾ ಭೂರಿಸ್ಥಾತ್ರಾಂ ಭೂರ್ಯಾವೇಶಯಂತೀಮ್ ।।೩।।
ಮಯಾ ಸೋ ಅನ್ನಾಮತ್ತಿ ಯೋ ವಿಪಷ್ಯತಿ ಯಃ ಪ್ರಾಣಿತಿ ಯ ಈಂ ಶೃಣೋತ್ಯುಕ್ತಂಅಮಂತವೋ ಮಾಂ ತ ಉಪ ಕ್ಷಿಯಂತಿ ಶ್ರುಧಿ ಶ್ರುತ ಶ್ರದ್ಧಿವಂ ತೇ ವದಾಮಿ ।।೪।।
ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭೀರುತ ಮಾನುಷೇಭಿ:ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಂ ।।೫।।
ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೇ ಶರವೇ ಹಂತವಾ ಉಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾಪೃಥಿವೀ ಆ ವಿವೇಶ ।।೬।।
ಅಹಂ ಸುವೇಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವ೦ತ ಸಮುದ್ರೇತತೋ ವಿತಿಷ್ಥೆ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ ।।೭।।
ಅಹಮೇವ ವಾತಾ ಇವ ಪ್ರ ವಾಮ್ಯಾರಭಮಾಣಾ ಭುವಾನಾನಿ ವಿಶ್ವಾಪರೋ ದಿವಾ ಪರ ಏನಾ ಪೃಥಿವ್ಯೈತಾವತೀ ಮಹಿನಾ ಸಂಬಭೂವ ।।೮।।
ಇತಿ ಶ್ರೀ ಅಂಭೃಣೀ ಸೂಕ್ತ ಸಮಾಪ್ತಂ. ಶ್ರೀ ಕೃಷ್ಣಾರ್ಪಣಮಸ್ತು
ಅಂಭ್ರಿಣಿ ಸೂಕ್ತ (ಇದನ್ನು ದೇವೀ ಸೂಕ್ತ ಅಥವಾ ವಾಗಂಭೃಣೀ ಸೂಕ್ತ ಎಂದೂ ಕರೆಯುತ್ತಾರೆ) ಋಗ್ವೇದದ ೧೦ನೇ ಮಂಡಲದ ೧೨೫ನೇ ಸೂಕ್ತವಾಗಿದೆ. ವಾಕ್ ಎಂಬ ಮಹಾನ್ ಋಷಿಕುಮಾರಿಯು ಅಂಭ್ರುಣ ಮಹರ್ಷಿಯ ಮಗಳು. ಈ ಸೂಕ್ತದಲ್ಲಿ ದೇವಿಯು ತಾನೇ ಪರಬ್ರಹ್ಮ ಸ್ವರೂಪಿಣಿ, ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳಿಗೆ ಮೂಲಕಾರಣ ಮತ್ತು ಎಲ್ಲ ದೇವತೆಗಳ ಶಕ್ತಿ ತಾನೇ ಎಂದು ಸ್ವತಃ ಸಾರಿದ್ದಾಳೆ.
ಋಷಿ: ವಾಗಂಭೃಣಿ (ವಾಕ್)
ದೇವತಾ: ಆತ್ಮಾ (ಪರಮಾತ್ಮ ಅಥವಾ ಜಗನ್ಮಾತೆ)
ಛಂದಸ್ಸು: ತ್ರಿಷ್ಟುಪ್ ಮತ್ತು ಜಗತೀ
ಒಟ್ಟು ಮಂತ್ರಗಳು: ೮
ಪ್ರಮುಖ ಮಂತ್ರಗಳು ಮತ್ತು ಸಾರಾಂಶ
ಸರ್ವವ್ಯಾಪಕತೆ: ರುದ್ರರು, ವಸುಗಳು, ಆದಿತ್ಯರು ಮತ್ತು ವಿಶ್ವದೇವತೆಗಳೊಂದಿಗೆ ತಾನೇ ಸಂಚರಿಸುವುದಾಗಿ ಹಾಗೂ ಮಿತ್ರ-ವರುಣ, ಇಂದ್ರ-ಅಗ್ನಿ ಮತ್ತು ಅಶ್ವಿನೀ ದೇವತೆಗಳನ್ನು ತಾನೇ ಧರಿಸಿರುವುದಾಗಿ ದೇವೀ ಹೇಳುತ್ತಾಳೆ.
ಶಕ್ತಿ ಮತ್ತು ಐಶ್ವರ್ಯ: ಸಮಸ್ತ ಲೋಕಕ್ಕೆ ಒಡೆಯಳಾಗಿ, ಯಜಮಾನರಿಗೆ ಸಂಪತ್ತು ಮತ್ತು ಹವಿರ್ಭಾಗವನ್ನು ಕರುಣಿಸುವವಳು ತಾನೇ ಎಂದು ವಿವರಿಸಲಾಗಿದೆ.
ಅಭೇದ ದರ್ಶನ: ಬ್ರಹ್ಮಾಂಡದ ಎಲ್ಲ ಚಟುವಟಿಕೆಗಳಿಗೆ, ಉಸಿರಾಟಕ್ಕೆ, ಮಾತನ್ನು ಕೇಳುವುದಕ್ಕೆ ಮತ್ತು ಗ್ರಹಿಸುವುದಕ್ಕೆ ಆಧಾರ ಶಕ್ತಿ ತಾನೇ ಆಗಿದ್ದು, ತನ್ನನ್ನು ಅರಿಯದವರು ಕ್ಷೀಣಗೊಳ್ಳುತ್ತಾರೆ ಎಂದು ಎಚ್ಚರಿಸುತ್ತದೆ.

No comments:
Post a Comment