Tuesday, September 29, 2026

Hosagannu Enage. ಹೊಸಗಣ್ಣು ಎನಗೆ ಹಚ್ಚಲಿಬೇಕು

ಹೊಸಗಣ್ಣು ಎನಗೆ ಹಚ್ಚಲಿಬೇಕು


ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ || ಪ ||

ಘಸಣಿಯಾಗುವೆ ಭವ ವಿಷಯ ವಾರುಧಿಯೊಳು | ಶಶಿಮುಖಿಯೆ ಕರುಣದಿ ಕಾಯೆ || ಅ.ಪ ||

ಪರರ ಅನ್ನವನುಂಡು ಪರರ ಧನವ ಕೊಂಡು | ಪರಿ ಪರಿಯ ಕ್ಲೇಶಗಳನುಂಡು | ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ  ||‌ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ  || ೧ ||

ಮಂದಹಾಸಿನಿ ಭವಸಿಂಧುವಿನೊಳಗಿಟ್ಟು | ಚಂದವೇ ಎನ್ನ ನೋಡುವುದು | ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ |  ಮಂದರಧರನ ತೋರಮ್ಮ || ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ || ೨ ||

ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ | ಬಂಧನಕೆಲ್ಲ ಕಾರಣವು | ಇಂದಿರೇಶನ ಪಾದ ದ್ವಂದ್ವವ ತೋರಿ |ಹೃನ್ಮಂದಿರದೊಳು ಬಂದು ಬೇಗ. ||  ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ || ೩ ||

                                                                                   .....ಇಂದಿರೇಶ


No comments:

Post a Comment