Thursday, December 21, 2017

Shri KATTI Dwaipayanacharyah GOV (प्रपितामह श्री द्वैपायनाचार्याः)

                प्रपितामह श्री द्वैपायनाचार्याः                                  
            
              श्री द्वैपायनाचार्य रामाचार्य कट्टी (पत्नी सौ भागीरथीबाई) (उमरज ग्रामे जोशी) पिता श्री रामाचार्य तथा माता सौ रमाबाई  स्य च एकमात्र पुत्र: । श्री द्वैपायनाचार्यः स्वेच्छया अग्रे शिक्षणार्थं स्वग्रामं त्यक्तवान् । तस्मिन् समये नवाब आदिलशाहः विजयपुर संस्थानस्य शासनं करोति स्म । विजयपुरे एव अध्ययनस्य इच्छां कृत्वा विजयपुरतः आगतः । सः ग्रामे ब्राह्मणानां गृहेषु पूजादिकं कृत्वा चतुर्थं यावत् कन्नड भाषायां माध्यमे अध्ययनं कृतवान् । स्वस्य परमलक्ष्यस्य प्रति दृढनिश्चयेन सः आङ्ग्लमाध्यमे प्रथमश्रेणीया सह सप्तमश्रेणीं सम्पन्नवान्, सफलतया च उत्तीर्णः अभवत् । तस्मिन् समये मुल्कीपरीक्षा उत्तीर्णत्वेन अस्याः परीक्षायाः प्रतिष्ठा, सम्मानः च आसीत् । उमरजग्रामं प्रति प्रत्यागत्य सः ग्रामस्य बालकान् यत् ज्ञातवान् तत् पाठयितुम् इच्छति स्म, अतः सः ग्रामस्य पादे गौडायाः पुरातनं गृहं गृहीत्वा स्वेच्छया स्वप्रेरणया विद्यालयं प्रारब्धवान् यत् सर्वेषां बालकानां शिक्षणस्य सुविधा भवति।आङ्ग्लभाषायां तथा गणितशास्त्रे च सः उत्कृष्टः आसीत् । यतः सः मङ्गळवेढे ग्रामे वेदविद्यापीठे पारम्परिक वैदिक. व्यवसाये शिक्षां प्राप्तवान् आसीत्, तस्मात् सः प्रतिदिनं ग्रामस्य जनानां कृते कार्यं करोति स्म, कृषिकार्यं अपि पश्यति स्म ।

कतिपयेभ्यः मासेभ्यः अनन्तरं यदृच्छया ब्रिटिश नियन्त्रक कार्यालयस्य एकः अधिकारी विजयपुर राज्यस्य आदिलशाह नवाबः ब्रिटिश नियन्त्रक कार्यालयस्य आदेशेन उमरजग्रामे आचार्यस्य गृहं प्राप्तवान् । गुरुदेव विभो ! वयं ब्रिटिश-अधिकारिणः खावन्द-आदिलशाहस्य च निर्णयं सहितं आदेशरूपेण आगताः। अमलदारस्य (तहसीलदारस्य) पदस्य नियुक्तिरूपेण चयनितः अस्मि अतः मया एतत् आदेशपत्रं स्वीकारणीयम्। वयं गुरुं निवेदयामः यत् सः कृपया तत् स्वीकुर्यात्। अतीव उत्तमम्, धन्यवादः। त्वं आतपे आगतः, गुडं घृतं च गृहीत्वा आरामं कुरु।

परन्तु यतः म्लेन्छ-तुर्क-जनाः मम मातृभूमिं छलेन गृहीतवन्तः! मम आत्मा म्लेन्छस्य तुर्कस्य वा न्यायालये कर्तव्यं कर्तुं न, कदापि, कदापि, न स्वीकुर्यात्, न स्वीकुर्यात्। अस्मिन् समये भारतं स्वाभिमानी भावनाभिः परिपूर्णम् अस्ति । वयं शृङ्खलाभ्यः बहिः गत्वा स्वातन्त्र्यं प्राप्तुं उत्सुकाः स्मः। भवता स्वसर्वकारस्य उत्तरं दातव्यं यत् वयं स्वतन्त्रतां प्राप्नुमः।  धन्यवादः, तान् ब्रिटिश-अधिकारिणः, कर्मचारिणः च विदां कुर्वन्तु। एषा घटना श्री दादा संस्कृतेन लिखिता।

१ ) श्री मद्गोविन्दराजदेवर सन्निधिस्य उच्चशिलापीठस्य परिसरः गोविन्दपुरक्षेत्रे अश्वथनिम्बकवृक्षरूपेण स्थितः अस्ति, उमरज ग्रामात् गोविन्दपुरग्रामपर्यन्तं त्रिमाइलपर्यन्तं स्थितः अस्ति । श्री द्वैपायनाचार्यस्य दैनन्दिन कार्याणि कृषिकार्यं, मुख्यतया बालकान् अध्यापनं च अन्तर्भवति। यदा कदा भगवतः नित्यभक्तानाम् आग्रहानुसारं भगवतः सान्निध्यं आगतानां जनानां इच्छां, आग्रहं च पूर्णं कर्तुं श्री गोविन्दराजदेवरं पूजयित्वा याचयितुम् प्रथा आसीत् । २ ) पश्चात् १८८६ तमे वर्षे अहमदनगरस्य कुतुबशाहः स्मृतौ विजयपुराम् आमन्त्रयन् प्रस्तावान् विनयेन अङ्गीकृत्य श्री द्वैपायनाचार्यस्य नाम्ना कृषिभूमिं उपहाररूपेण दत्तवान् । इयं कृषिभूमिः उमरजग्रामस्य तटे अतीव समीपे अस्ति । इति अस्माकं पितामहस्य श्रीसीतामाचार्यस्य हस्तलेखे तस्य वचनम् अस्ति। ३ ) उमराजग्रामस्य प्रमुखः व्यक्तिः श्री रेवप्पा गौडा बहुवर्षेभ्यः गम्भीरव्याधिना पीडितः आसीत्, दिने दिने दुर्बलः भवति स्म । एकदा गौडादम्पती श्रीद्वैपायनाचार्यगुरुस्य गृहम् आगत्य रोगस्य भविष्यस्य च विषये पृष्टवन्तौ। एतत् भवतः पूर्वकर्मपरिणामं शारीरिकव्याधिरूपं प्रकटितम् । सः अवदत् यत् उत्तमौषधेन, भोजनेन च भवन्तः अवश्यमेव सुस्थाः भविष्यन्ति। इति श्रुत्वा गौडः उत्थाय गतः, परन्तु गौडस्य पत्नी तुष्टा न अभवत् । गौडः रात्रौ अन्धकारे निर्गत्य किमपि दृष्ट्वा भयं कथयित्वा सर्वाणि वेदनाः प्रक्षिप्तवान्। कालप्रश्नानुसारं अष्टम / द्वादशग्रहस्थानस्य भाग्यं ज्ञात्वा भवतः पतिः प्रायः सार्धद्वयं वा वर्षद्वयं पूर्वं घोरं हत्यां कृतवान् नगरस्य नैर्ऋत्ये निर्जनक्षेत्रे तस्यैव नगरस्य एकः पुरुषः द्वेषात् श्वः इव खण्डितः ताडितः, ततः क्षिप्तः एतत् एव अस्याः आपदायाः मुख्यकारणम् । यदि एतस्य निराकरणस्य सम्भावना अस्ति तर्हि कथयतु अहं यथावदसि तथा करिष्यामि।

यथा मया उक्तं तथा कर्तुं शक्नोषि, चिकित्सां द्रष्टुं धैर्यस्य आवश्यकता वर्तते, श्रद्धा आवश्यकी, सर्वाणि कर्माणि गौडया एव कर्तव्यानि, भवता तस्य हस्तेन करणीयम्, तत् चिकित्सां भवेत् वा न वा, सम्भावना अस्ति यत् सः परिवर्त्य मयि प्रतिक्रियां करिष्यति। ध्यायी भवेत। किं चिकित्सा? आचार्य, गरुडपुराणे उल्लिखितस्य भूतस्य मारण उच्चाटन, तारण वधस्य, भूतस्य पतिहार, भूतस्य अन्तिमसंस्कारस्य सह अन्तिमसंस्कारः करणीयः। गौडा पूर्वोक्तं कार्यं शनैः कृत्वा भूतमामन्त्रयेत्। रुद्रभूमि-भीम-नद्याः तटे समीपे श्री रेवणसिद्धेश्वर मन्दिरस्य समीपे नदीप्रवाहे निमग्नाः भूत्वा सर्वे संस्काराः सम्पन्नाः भवेयुः। भवन्तः पीतले पात्रे जलं स्थापयित्वा तस्मिन् पूर्णरात्रौ अश्वत्थ शुष्कपत्राणि, वल्कलानि, नीमपत्राणि च स्थापयित्वा, रुद्रभूमिं आनयन् सुष्ठु क्वाथ्य, निष्कास्य, तेन जलेन गौडाय स्नानं कृत्वा मार्जयित्वा सूर्ये शुष्कं कुर्वन्तु, तदा अहम् आगमिष्यामि। द्वादशदिनानि सर्वाणि और्ध्वदैहिक शरीरकार्याणि पृथक् पृथक् करिष्यामि । त्रयोदशे दिने स्वपरम्परानुसारं पञ्च जीवान् मधुरभोजनेन पोषयित्वा यावद् ज्ञात्वा दानं कुर्वन्तु । साधु भविष्यति। कालान्तरे गौडायाः स्वभावः शरीरं च सर्वथा उत्तमः स्वस्थः च अभवत्, येन सः बलवान् सुखी च अभवत्.. सहसा एकस्मिन् दिने दम्पती आचार्यस्य गृहम् आगत्य प्रणामं कृत्वा तेभ्यः यत् दक्षिणा दातव्यं तत् पृष्टवान्....... एतादृशाः घोराः, घातकाः, विनाशकाः च कार्याणि भविष्ये मम परिवारस्य च बहु दुःखं जनयितुं शक्नुवन्ति। अतः कदाचिदपि दक्षिणां न गृह्णामि कदाचिदपि रूपेण। मया पूर्वमेव दुःखं प्राप्य शारीरिकं मानसिकं च स्वास्थ्यं प्राप्तम्, तत् पर्याप्तम्, अहं च दम्पत्योः वचनं प्रत्यक्षतया अङ्गीकृतवान्। आचार्यस्य वचनं समाप्तस्य पूर्वं गौडस्य पत्नी आचार्यस्य चरणयोः पतित्वा रोदिति स्म, किञ्चित् समाधानं सूचयतु, कृपया, अहं गौडात् किमपि भौतिकं वा मौद्रिकं वा दानं न स्वीकुर्याम्। तदा सा महिला अवदत्, "महामहिम, चिन्ता मा कुरु, अहं बीजापुरमण्डलस्य मुत्तगीग्रामस्य महिला अस्मि। मम गृहात् प्राप्तेन धनेन अहं उमराजस्य शिवरीग्रामे एकं क्षेत्रं क्रीत्वा आचार्यमहोदयस्य कृते दानं करिष्यामि। कृपया तत् स्वीकुरुत। वयं कृतज्ञाः स्मः... दम्पती प्रणामं कृत्वा गच्छतः। धन्यवादः।


ಶ್ರೀಯುತ ದ್ವೈಪಾಯನಾಚಾರ್ಯ ರಾಮಾಚಾರ್ಯ ಕಟ್ಟಿ ( ಪತ್ನಿ ಸೌ ಭಾಗೀರಥಿಬಾಯಿ ) (ಉಮರಜ ಗ್ರಾಮ) ಜೋಶಿ ತಂದೆ ಶ್ರೀ ರಾಮಾಚಾರ್ಯ ಮತ್ತು ತಾಯಿ ಸೌ ರಮಾಬಾಯಿ ರವರ ಏಕೈಕ ಪುತ್ರರು. ಶ್ರೀದ್ವೈಪಾಯನಾಚಾರ್ಯ ಅವರು ತಮ್ಮ ಸ್ವಂತ ಇಚ್ಛೆಯಿಂದ ಮುಂದಿನ ಶಿಕ್ಷಣಕ್ಕಾಗಿ ತಮ್ಮ ಗ್ರಾಮದಿಂದ ದೂರಾದರು. ಆಗ ವಿಜಯಪುರ ಗ್ರಾಮದಲ್ಲಿ ನವಾಬ್ ಆದಿಲ್ ಷಾ ಅವರ ಸಲ್ತನತ್ವ. ವಿಜಾಪುರ ದಲ್ಲಿಯೆ ಕಲಿಯುವ ಅಪೇಕ್ಷೆಯಿಂದ ಬಂದವರು ಊರಲ್ಲಿಯ ಬ್ರಾಹ್ಮಣರ ಮನೆಗಳಲ್ಲಿ ಪೂಜೆ ಇತ್ಯಾದಿ ಕೈಂಕರ್ಯಗಳ ಮಾಡುತ್ತಾ ನಾಲ್ಕನೇ ಈಯತ್ತೆವರೆಗೆ ಕನ್ನಡದಲ್ಲಿ ಕಲಿತವರು ತಮ್ಮ ಅಂತಿಮ ಉದ್ದೇಶ ಗುರಿಯಕಡೆಗೆ ಧೃಡ ನಿಶ್ಚಯ ಹೊಂದಿ ಇಂಗ್ಲಿಷ್ ಮಾಧ್ಯಮದಲ್ಲಿ ಕಠಿಣ ಪರಿಶ್ರಮದಿಂದ ಅವರು ಏಳನೇ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿ ಯಶಸ್ವಿಯಾಗಿ ಉತ್ತೀರ್ಣರಾದರು . ಆಗ ಈ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಪಾಸಾದವರು ಎಂಬ ಆಢ್ಯತೆ ಮತ್ತು ಗೌರವವಿತ್ತು. ತಿರುಗಿ ಉಮರಜ ಗ್ರಾಮಕ್ಕೆ ಬಂದು ತಾನು ಕಲಿತದ್ದನ್ನು ಊರ ಮಕ್ಕಳಿಗೆ ಕಲಿಸಬೇಕೆಂದು ಊರ ತಳವಾರ ಗೌಡರ ಒಂದು ಹಳೆಯ ಮನೆಯನ್ನು ಪಡೆದು ಎಲ್ಲಾ ಮಕ್ಕಳಿಗೆ ಕಲಿಸಲು ಅನುಕೂಲವಾಗುವಂತೆ ಐಚ್ಛಿಕವಾಗಿ ಸ್ವಯಂ ಸ್ಪೂರ್ತಿಯಿಂದ ಪಾಠಶಾಲೆ ಪ್ರಾರಂಭಿಸಿರು. ಆಂಗ್ಲ ಭಾಷೆ ಮತ್ತು ಗಣಿತದಲ್ಲಿ ಇವರದು ಎತ್ತಿದ ಕೈ , ಜೊತೆಗೆ ಇವರು ಮಂಗಳವೇಢೆ ಗ್ರಾಮದಲ್ಲಿರುವ ವೇದವಿದ್ಯಾಪೀಠದಲ್ಲಿ ಸಾಂಪ್ರದಾಯಿಕ ವೈದಿಕ ವೃತ್ತಿಯಲ್ಲಿ ಶಿಕ್ಷಣ ಪಡೆದದ್ದರಿಂದ ಊರಲ್ಲಿಯ ಜನರ ನಿತ್ಯ ಕೆಲಸಮಾಡುತ್ತಲಿದ್ದು ಜೊತೆಗೆ ಕೃಷಿಯ ಕಡೆಗೂ ಗಮನಿಸುತ್ತಿದ್ದರು.

ಕೆಲ ತಿಂಗಳುಗಳ ನಂತರ ಆಕಸ್ಮಿಕವಾಗಿ ಬ್ರಿಟಿಷ ನಿಯಂತ್ರಕ ಕಛೇರಿಯ ಅಧಿಕಾರಿ, ವಿಜಾಪುರ ಸಂಸ್ಥಾನದ ಆದಿಲ್‌ಶಾಹ ನವಾಬ್‌ನ ಆದೇಶದೊಂದಿಗೆ ಒಬ್ಬ ಭಟ ಉಮರಜ ಹಳ್ಳಿಯಲ್ಲಿರುವ ಆಚಾರ್ಯರ ಮನೆಗೆ  ಆಗಮಿಸುತ್ತಾರೆ. ಗುರುದೇವ ವಿಭೋ! ರವರೇ , ಬ್ರಿಟಿಷ್ ಅಧಿಕಾರಿ ಮತ್ತು ಖಾವಂದ್ ಆದಿಲಷಾರವರಿಬ್ಬರ ನಿರ್ಧಾರವೂ ಸೇರಿದಂತೆ ಆದೇಶದ ರೂಪದಲ್ಲಿ ಬಂದಿದ್ದೇವೆ. ಅಮಲ್ದಾರ್ (ತಹಶೀಲ್ದಾರ್) ಹುದ್ದೆಯ ನೇಮಕಾತಿ ಆಗಿ ತಮ್ಮನ್ನು ಆಯ್ಕೆ ಮಾಡಲಾಗಿದ್ದು  ಈ ಆದೇಶ ಪತ್ರವನ್ನು ಸ್ವೀಕರಿಸಬೇಕು. ಸ್ವೀಕೃತಿ ಯನ್ನು ದಯಪಾಲಿಸಬೇಕೆಂದು ಗುರುವರ್ಯರಲ್ಲಿ ಕೇಳಿಕೊಳ್ಳುತ್ತೇವೆ. ತುಂಬಾ ಒಳ್ಳೆಯದು, ಕೃತಜ್ಞತೆಗಳು. ಬಿಸಿಲಲ್ಲಿ ಬಂದಿದ್ದೀರಿ ಬೆಲ್ಲ ಮಜ್ಜಿಗೆ ತೆಗೆದುಕೊಂಡು ದಣಿವಾರಿಸಿಕೊಳ್ಳಿರಿ.

ಆದರೆ ನನ್ನ ಮಾತೃಭೂಮಿಯನ್ನು ಮೋಸದಿಂದ ಮ್ಲೇಂಛರು, ತುರ್ಕರು ತಮ್ಮ ಕಪಿ ಮುಷ್ಟಿಯಲ್ಲಿ ಕಬಳಿಸಿಕೊಂಡ ಕಾರಣ ! ಮ್ಲೆಂಛನ, ತುರ್ಕನ ಅನುಯಾಯಿಯಾಗಿ ಅವನ ಆಸ್ಥಾನದಲ್ಲಿ ಕರ್ತವ್ಯವನ್ನು ಮಾಡಲು ನನ್ನ ಆತ್ಮ ಸಾಕ್ಷಿ ಒಪ್ಪುವುದಿಲ್ಲ, ಎಂದಿಗೂ, ಎಂದೆಂದಿಗೂ, ಸ್ವೀಕರಿಸಲಾರೆ, ಒಪ್ಪಿಕೊಳ್ಳಲಾರೇ. ಈ ಸಮಯದಲ್ಲಿ ಭಾರತವು ಸ್ವಾಭಿಮಾನಿ ಸ್ಫುಲ್ಲಿಂಗಗಳಿಂದ ತುಂಬಿದೆ  ಸಂಕೋಲೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆಯುವ ಹುಮ್ಮಸ್ಸಿನಲ್ಲಿ ಹುನ್ನಾರದಲ್ಲಿದ್ದೇವೆ. ಸ್ವಾತಂತ್ರ್ಯ ಪಡೆದೇ ತೀರುತ್ತೇವೆ ಎಂದು ನೀವು ತಮ್ಮ ಸರ್ಕಾರಕ್ಕೆ ಉತ್ತರಿಸಿರಿ. ಹಿಂತಿರುಗಿರಿ, ಧನ್ಯವಾದಗಳು  ಹೀಗೆಂದು ಹೇಳಿ ಆ ಬ್ರಿಟಿಷ ಅಧಿಕಾರಿ ಮತ್ತು ಸಿಬ್ಬಂದಿ ಭಟರನ್ನು ಬೀಳ್ಕೊಟ್ಟ ಘಟನೆ ವೈ ಶ್ರೀ ದಾದಾರವರು ಸಂಸ್ಕೃತದಲ್ಲಿ ಬರೆದಿಟ್ಟಿದ್ದಿದೆ.

ಶ್ರೀ ಮದ್ ಗೋವಿಂದರಾಜ ದೇವರ ಸನ್ನಿಧಿ ಉತ್ತುಂಗ ಶಿಲಾ ಪೀಠದ ಆವರಣವು ಅಶ್ವತ್ಥ ನಿಂಬಕ ವೃಕ್ಷ ರೂಪದಲ್ಲಿ ಗೋವಿಂದಪುರ ಪ್ರದೇಶದಲ್ಲಿದೆ ಮತ್ತು ಉಮರಜ ಗ್ರಾಮದಿಂದ ಗೋವಿಂದಪುರ ಗ್ರಾಮಕ್ಕೆ ಮೂರು ಮೈಲಿ ದೂರದಲ್ಲಿದೆ. ಶ್ರೀ ದ್ವೈಪಾಯನಾಚಾರ್ಯರು ದೈನಂದಿನ ಚಟುವಟಿಕೆಗಳಾದ ಕೃಷಿ ಕೆಲಸ, ಮುಖ್ಯವಾಗಿ ಮಕ್ಕಳಿಗೆ ಪಾಠ ಹೇಳಿಕೊಡುವುದು.  ಸಾಂದರ್ಭಿಕವಾಗಿ ದೇವರ ನಿತ್ಯ ನೈಮಿತ್ತಿಕ ಭಕ್ತರ ಆಗ್ರಹಕ್ಕನುಸಾರ  ಭಗವಂತನ ಸನ್ನಿಧಿಗೆ ಬರುವ ಜನರ ಇಚ್ಛೆಗಳು ಬೇಡಿಕೆಗಳೂ ದಯಪಾಲಿಸಲು ಶ್ರೀ ಗೋವಿಂದರಾಜ ದೇವರಲ್ಲಿ ಪೂಜಿಸಿ ಬೇಡಿಕೊಳ್ಳುವುದು ವಾಡಿಕೆ ಕೆಲಸವಾಗಿತ್ತು 


2 ) ನಂತರ, 1886 ರಲ್ಲಿ, ಅಹ್ಮದನಗರದ ಕುತುಬ್ ಷಾ ಅವರು ನೆನಪಿನಿಂದ ವಿಜಾಪುರಕ್ಕೆ ಆಮಂತ್ರಿಸಿ ಅಮಲ್ದಾರಿಕೆಯನ್ನು ಸವಿನಯವಾಗಿ ನಿರಾಕರಿಸಿದಕ್ಕೆ ಶ್ರೀ ದ್ವೈಪಾಯನಾಚಾರ್ಯರ ಹೆಸರಿನಲ್ಲಿ ಒಂದು ಕೃಷಿ ಭೂಮಿಯನ್ನು ಉಡುಗೊರೆಯಾಗಿ ನೀಡಿದರಂತೆ. ಈ ಕೃಷಿ ಎರೆಭೂಮಿ ಉಮರಜ ಗ್ರಾಮದ ದಡಕ್ಕೆ ಬಹಳ ಹತ್ತಿರದಲ್ಲಿದೆ. ಇದು ನಮ್ಮ ಅಜ್ಜನವರಾದ ಶ್ರೀ ಸೀತಾರಾಮಾಚಾರ್ಯರ ಕೈಬರಹದಲ್ಲಿ ಇದೆ ಮತ್ತು ಅವರ ಹೇಳಿಕೆಯಾಗಿದೆ.                                    

3 )         ಉಮರಜ ಗ್ರಾಮದ ಗಣ್ಯರಾದ ಶ್ರೀ ರೇವಪ್ಪಗೌಡ ಅವರು ಹಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಯಾವುದೇ ಉಪಚಾಗಳಿಂದ ಗುಣ ಕಂಡು ಬಂದಿರಲಿಲ್ಲ ದಿನ ಕಳೆದಂತೆ ಕ್ಷೀಣವಾಗಿದ್ದರು . ಒಂದು ದಿನ  ಗೌಡ ದಂಪತಿಗಳು ಶ್ರೀ ದ್ವೈಪಾಯನಾಚಾರ್ಯ ಶಿಕ್ಷಕರ ಮನೆಗೆ ಬಂದು ರೋಗದ ಮತ್ತು ಭವಿಷ್ಯದ ಬಗ್ಗೆ ಕೇಳಿದರು. ಇದು ನಿಮ್ಮ ಪೂರ್ವ ಕರ್ಮದ ಫಲ, ಶರೀರ ಪೀಡೆಯ ರೂಪದಲ್ಲಿ ಕಾಣಿಸಿ ಕೊಂಡಿದೆ. ಉತ್ತಮ ಔಷಧಿ ಊಟೋಪಚಾರಗಳಿಂದ ಖಂಡಿತ ಗುಣಮುಖರಾಗುತ್ತಿರಿ ಎಂದು ಹೇಳಿದರು. ಗೌಡರು ಕೇಳಿ ಎದ್ದು ಹೋದರು ಆದರೇ ಗೌಡಅವರ ಪತ್ನಿಗೆ ಸಮಾಧಾನವಾಗಲಿಲ್ಲ. ಗೌಡರು ರಾತ್ರಿ  ಭಯದಿಂದ ಬೆಚ್ಚಿಬೀಳುವರು, ಕತ್ತಲೆಯಲ್ಲಿ ಹೊರಗೆ ಹೋಗಿ ಏನನ್ನೋ ನೋಡುತ್ತ ಕೂಡುವ ವಿಷಯವನ್ನು ಹೇಳಿ ತಮ್ಮ ಎಲ್ಲಾ ನೋವುಗಳನ್ನು ತೋಡಿ ಕೊಂಡರು, ಸಮಯ ಪ್ರಶ್ನೆಯ ಪ್ರಕಾರ ಭಾವ ರೂಪ ಎಂಟನೇ / ಹನ್ನೆರಡನೇ ಗ್ರಹ ಸ್ಥಾನದ ಭವಿಷ್ಯವನ್ನು ತಿಳಿದು, ನಿಮ್ಮ ಪತಿ ಸುಮಾರು ಎರಡು ಅಥವಾ ಎರಡೂವರೆ ವರ್ಷಗಳ ಹಿಂದೆ ಒಂದು ಘೋರ ಕೊಲೆ ಮಾಡಿದ್ದಾರೆ. ಊರ ನೈಋತ್ಯದಲ್ಲಿರುವ ನಿರ್ಜನ ಪ್ರದೇಶದಲ್ಲಿ ಇದೇ ಊರಿನ ಒಬ್ಬ ವ್ಯಕ್ತಿಯನ್ನು ದ್ವೇಷದಿಂದ ನಾಯಿಗೆ ಬಡಿದಂತೆ ಬಡಿದು ತುಂಡರಿಸಿ ಒಗೆದು ಬಂದಿದ್ದಾರೆ ಅದು ನಿಮಗೆ ಈ ವಿನಾಶ ಬರಲು ಮುಖ್ಯ ಕಾರಣ.  ಇದನ್ನು ನಿವಾರಿಸುವ ಸಾಧ್ಯತೆ ಇದ್ದರೇ ಹೇಳಿರಿ ತಾವು ಹೇಳಿದಂತೆ ಮಾಡುತ್ತೇವೆ

ನೀವೇನೋ ನಾನು ಹೇಳಿದಂತೆ ಮಾಡಲೂ ಬಹುದು, ಗುಣ ಕಾಣಲು ತಾಳ್ಮೆ ಬೇಕು, ನಂಬುಗೆ ಅವಶ್ಯಕ, ಎಲ್ಲಾ ಕ್ರಿಯೆಗಳು ಗೌಡರೇ ಮಾಡಬೇಕು ನೀವು ಅವರ ಕೈಯಿಂದ ಮಾಡಿಸಬೇಕು ಗುಣವಾಗಬಹುದು ಆಗದೆಯೂ ಇರಬಹುದು, ತಿರುಗಿ ನನ್ನ ಮೇಲೆ ಪ್ರತಿಕ್ರಿಯೆ ತೋರಿಸುವ ಸಾಧ್ಯತೆಯೂ ಇರುತ್ತದೆ. ಎಚ್ಚರಿಕೆಯಿಂದಿರಬೇಕು. ಚಿಕಿತ್ಸೆ ಏನು? ಆಚಾರ್ಯರು ಗರುಡ ಪುರಾಣದ  ಪ್ರೇತ ಕಾಂಡ ಉಲ್ಲೇಖಿಸಲಾದ ಮಾರಣ, ಉಚ್ಚಾಟಣ, ತಾರಣ, ಪತಿಹಾರ ಕಾರ್ಯನ ಅಂತಿಮ ಆಚರಣದ ಜೊತೆ ಪ್ರೇತದ ಅಂತ್ಯ ಕ್ರಿಯೆಯನ್ನೂ ಮಾಡುವುದು ಅವಶ್ಯವಾಗಿದೆ ನಿಧಾನಗತಿಯಲ್ಲಿ ಗೌಡರು ಮೇಲೆ ಹೇಳಿದ ಕೆಲಸ ಮಾಡುತ್ತಾ ಪ್ರೇತವನ್ನು ಆಹ್ವಾನಿಸಬೇಕು.  ರುದ್ರಭೂಮಿ ಮತ್ತು ಭೀಮಾ ನದಿ ದಂಡೆಯ ಬಳಿ ಶ್ರೀ ರೇವಣಸಿದ್ಧೇಶ್ವರ ದೇವಾಲಯದ ಸಮೀಪ ನದಿಯಮಡುವಿನ ಹರಿವಿನಲ್ಲಿ ಮುಳುಗಿ ಎಲ್ಲಾ ಆಚರಣೆಗಳನ್ನು ಪೂರ್ಣಗೊಳಿಸಬೇಕು.  ನೀವು ಒಂದು ಹಿತ್ತಾಳೆಯ ಕಲಶದಲ್ಲಿ ನೀರು ಹಾಕಿ ಅದರಲ್ಲಿ ಅರಳಿಯ ಒಣ ಎಲೆಗಳು ತೊಗಟೆ ಮತ್ತು ಬೇವಿನ ಎಲೆಗಳನ್ನು ರಾತ್ರಿ ಇಡೀ ಹಾಕಿ ಹಾಗೆಯೇ ರುದ್ರ ಭೂಮಿಗೆ ತಂದು ಚೆನ್ನಾಗಿ ಕುದಿ ಬರುವಂತೆ ಕಾಯಿಸಿ ಆರಿಸಿ ,ಆ ನೀರಿನಿಂದಾಗಿ ಗೌಡರಿಗೆ ಸ್ನಾನ ಮಾಡಿಸಿ ಒರೆಸದೆ ಹಾಗೆಯೇ ಬಿಸಿಲಲ್ಲಿ ಕುತ್ತಿರಲಿ ಆಗ ನಾನು ಬರುವೆ. ಎಲ್ಲಾ ಔರ್ಧ್ವದೈಹಿಕ ಕ್ರಿಯೆಗಳನ್ನು ಹನ್ನೆರಡು ದಿನಗಳ ವರೆಗೆ ಬೇರೆಯಾಗಿ ಮುಗಿಸುತ್ತೇನೆ.  ಹದಿಮೂರನೇ ದಿನ ನಿಮ್ಮ ಸಾಂಪ್ರದಾಯದಂತೆ ಐದು ಜಂಗಮರಿಗೆ ಸಿಹಿ ಊಟ ಹಾಕಿಸಿ ತಿಳಿದಂತೆ ದಾನ ಮಾಡಿರಿ ಒಳ್ಳೆಯದಾಗುತ್ತದೆ

            ಕಾಲಕ್ರಮೇಣ,  ಗೌಡರ ಸ್ವಭಾವವು, ಶರೀರವೂ ಎಲ್ಲ ರೀತಿಯಲ್ಲಿ ಉತ್ತಮವಾಗಿ ಆರೋಗ್ಯಕರವಾಗಿ ಬೆಳೆದು ಅವರು ಬಲಶಾಲಿ ಮತ್ತು ಸಂತೋಷದಾಯಕವಾಗಿಸುವಂತೆ ನೆರವಾಯಿತು.. 

           ಇದ್ದಕ್ಕಿದ್ದಂತೆ ಒಂದು ದಿನ ಆಚಾರ್ಯ ಶಿಕ್ಷಕರ ಮನೆಗೆ ದಂಪತಿಗಳು ಬಂದು ನಮಸ್ಕರಿಸಿ ತಮಗೆ ಕೊಡಬೇಕಾದ ದಕ್ಷಿಣೆಯ ಬಗ್ಗೆ ಕೇಳಿದರು....... ಈ ಬಗೆಯ ಭಯಾನಕ ಮಾರಕ ಸಂಹಾರಕ ಕಾರ್ಯಗಳು ಭವಿಷ್ಯದಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ನೋವು ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ರೂಪದಲ್ಲಿ ದಕ್ಷಿಣೆಯನ್ನೂ ದಾನವನ್ನು ಎಂದಿಗೂ ಸ್ವೀಕರಿಸಲಾರೆ. ನಿಮ್ಮಗಳ ಪೀಡೆಹೋಗಿ, ಶಾರೀರಿಕ ಮಾನಸಿಕ ಆರೋಗ್ಯ ಪಡೆದಿರಲ್ಲ, ಅಷ್ಟೇ ಸಾಕು ಎಂದು ದಂಪತಿಗಳ ಮಾತನ್ನು ನೇರವಾಗಿ ನಿರಾಕರಿಸಿ ಬಿಟ್ಟರು. ಆಚಾರ್ಯರ ಮಾತು ಮುಗಿಯುವ ಮೊದಲೇ, ಗೌಡರು ಅವರ ಪತ್ನಿ ಆಚಾರ್ಯರ ಪಾದಗಳಿಗೆ ಬಿದ್ದು ಅಳುತ್ತಾ ಏನಾದರೂ ಉಪಾಯ ತಿಳಿಸಿ ಕೃಪೆ ಮಾಡಿರಿ, ಗೌಡರ ವಂತಿಗೆಯ ಯಾವುದೇ ವಸ್ತು ಹಣ ಸ್ವೀಕರಿಸುವುದಿಲ್ಲ. ಆಗ  ಆ ಮಹಿಳೆ, ಮಹಾರಾಜರೇ ಚಿಂತಿಸಬೇಡಿ ನಾನು ಬಿಜಾಪುರ ಜಿಲ್ಲೆಯ ಮುತ್ತಗಿ ಗ್ರಾಮದ ಮಹಿಳೆ, ನನ್ನ ತವರುಮನೆ ಕಡೆಯಿಂದ ಬಂದ ಹಣದಲ್ಲಿ ಉಮರಜ ಗ್ರಾಮದ ಶಿವಾರಿನಲ್ಲಿ ಹೊಲ ಕೊಂಡು ಆಚಾರ್ಯ ಮಹೋದಯರಿಗೆ ಒಂದು ಕೃಷಿ ಭೂಮಿಯನ್ನು ದಾನವಾಗಿ ನೀಡುತ್ತೇನೆ, ಸ್ವೀಕರಿಸಬೇಕು. ನಾವು ಧನ್ಯರು...... ದಂಪತಿಗಳು ಸಷ್ಟಾಂಗ ನಮಸ್ಕಾರದೊಂದಿಗೆ ಹೋಗುತ್ತಾರೆ. ಧನ್ಯವಾದಗಳು






 

No comments:

Post a Comment