Tuesday, September 11, 2018

PANCHAANGA NAMASKAARA ( ಪಂಚಾಗ ನಮಸ್ಕಾರ )


                                                                                                       ಸಂಗ್ರಹಿತ

                        

                               ಮಹಿಳೆಯರು ದೇವಸ್ಥಾನದಲ್ಲಿ ಹೇಗೆ ನಮಸ್ಕಾರ ಮಾಡಬೇಕು ?
                                ಸ್ತ್ರೀಯರ ಪಂಚಾಗ ನಮಸ್ಕಾರವೇ ಸಾಷ್ಟಾಂಗ ನಮಸ್ಕಾರ 

             ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಮತ್ತು ದೇವರ , ಹಿರಿಯರ ಸನ್ನಿಧಾನದಲ್ಲಿದ್ದಾಗ ಮಹಿಳೆಯರು  'ಪಂಚಾಂಗ ನಮಸ್ಕಾರ' ಮಾಡಬೇಕು .

ತಲೆ, ಎರಡು ಕೈಗಳು ಮತ್ತು ಮೊಣಕಾಲುಗಳನ್ನು ನೆಲದಮೇಲಿಟ್ಟು ನಮಸ್ಕರಿಸಬೇಕು . ಇದೇ ‘ ಪಂಚಾಗ’ ನಮಸ್ಕಾರ. ಸ್ತ್ರೀಯರು ಇಂತಹ ನಮಸ್ಕಾರವನ್ನು ಮಾತ್ರ ಮಾಡಬೇಕು ಎಂಬುದು ಶಾಸ್ತ್ರವಿಧಿ . ಈ ನಮಸ್ಕಾರ ಮಾಡುವಾಗ ಎಡಪಾದದ ಮೇಲೆ ಬಲಪಾದವನ್ನು ಇಟ್ಟಿರಬೇಕು.

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಯಾಕೆ ಮಾಡಬಾರದು ?

ವೇದಗಳಲ್ಲಿ ಹೇಳಿರುವಂತೆ, ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡಬಾರದು. ಏಕೆಂದರೆ ಮಹಿಳೆಯ ಎದೆಯ ಭಾಗ ಮತ್ತು ಕಿಬ್ಬೊಟ್ಟೆಯ ಭಾಗ ಭೂಮಿಯನ್ನು ಸ್ಪರ್ಶಿಸಬಾರದು ಎಂಬುದು ನಿಯಮ. 

ಮಹಿಳೆಯರು ಪಂಚಾಂಗ ನಮಸ್ಕಾರವನ್ನು ಮಾತ್ರ ಮಾಡಬೇಕು,  ಸಾಷ್ಟಾಂಗ ನಮಸ್ಕಾರವನ್ನು ಮಾಡಬಾರದು. ಪಂಚಾಗ ನಮಸ್ಕಾರದಲ್ಲಿ ಮಹಿಳೆಯು ಮಂಡಿಯೂರಿ ನಮಸ್ಕಾರವನ್ನು ಮಾಡುತ್ತಾಳೆ. ಮಹಿಳೆಯ ಸ್ತನದ ಭಾಗವು ಮಗುವಿನ ಪೋಷಣೆಯನ್ನು ಮಾಡುತ್ತದೆ , ಅಂತೆಯೇ ಆಕೆಯ ಹೊಟ್ಟೆಯ ಭಾಗವು ಮಗುವನ್ನು ಹೊರುವ ಕಾರ್ಯವನ್ನು ಮಾಡುವುದರಿಂದ ಈ ಭಾಗಗಗಳು ಭೂಮಿಯನ್ನು ಸ್ಪರ್ಶಿಸುವುದು ನಿಷಿದ್ಧ ಎಂಬುದು ಶಾಸ್ತ್ರ ಪ್ರಮಾಣವಾಗಿದೆ

No comments:

Post a Comment