Wednesday, October 31, 2018

Mangalaarati Swikaara (ಉತ್ತರ ನೀರಾಂಜನ ಸ್ವೀಕರಿಸುವ ಕ್ರಮ)

                                                                                                                                  ಸಂಗ್ರಹಿತ 
                                        ಉತ್ತರ ನೀರಾಂಜನ ಸ್ವೀಕರಿಸುವ ಕ್ರಮ:

ಪರಮಾತ್ಮನಿಗೆ ಸಮರ್ಪಿಸಲಾಗುವ ಉತ್ತರನೀರಾಂಜನ ಅಥವಾ ಮಂಗಳಾರತಿಯನ್ನು ಕೇವಲ ಒಂದು ಕೈಯಿಂದ ತೆಗೆದುಕೊಳ್ಳಬೇಕು. ಉತ್ತರನೀರಾಂಜನದ ಸಂದರ್ಭದಲ್ಲಿ ಪರಮಾತ್ಮನ ಮುಖಾರವಿಂದದ ದರ್ಶನವು ಕೋಟಿ ಬ್ರಹ್ಮಹತ್ಯಾದೋಷ ಮತ್ತು ಕೋಟಿ ಅಗಮ್ಯಾಗಮನ ದೋಷವನ್ನು ಪರಿಹರಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. 

ಶ್ರೀ ವರಾಹದೇವರು ತಮ್ಮ ಪತ್ನಿಗೆ ಹೇಳುವ ಒಂದು ಶ್ಲೋಕವು ಹೀಗಿದೆ.
ಆರ್ತಿಕ್ಯ ಗ್ರಹಣೇ ಕಾಲೇ ಏಕ ಹಸ್ತೇನ ಯೋಜಯೇತ್ |
ಯದಿ ಹಸ್ತದ್ವಯೇನೈವ ಮಮ ದ್ರೋಹೀ ನ ಸಂಶಯಃ  ||

ಮಂಗಳಾರತಿಯನ್ನು ಎರಡೂ ಕೈಗಳಿಂದ ಸ್ವೀಕರಿಸಬಾರದು. ಕೇವಲ ಬಲಗೈಯಿಂದ ಮಂಗಳಾರತಿಯನ್ನು ಸ್ವೀಕರಿಸಬೇಕು. ಆರತಿಯನ್ನು ಮೊದಲು ತಲೆಯಮೇಲೆ ತೆಗೆದುಕೊಂಡು, ಹೃದಯವನ್ನು ಸ್ಪರ್ಶಿಸಿ ನಂತರ ನಾಭಿಯ ಎಡಭಾಗದಲ್ಲಿ ಮುಟ್ಟಿಸಬೇಕು. 
ಇದರ ಅನುಸಂಧಾನಕ್ರಮ ಹೀಗಿದೆ: ಶಿರದಲ್ಲಿರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿರುವ ಪಾಪಪುರುಷನನ್ನು ವಿನಾಶಗೊಳಿಸಬಹುದು. ಹೀಗೆ ಮಾಡುವುದರಿಂದ ದಿನಂಪ್ರತಿ ನಾವು ಅರಿತೋ, ಅರಿಯದೆಯೋ ಮಾಡುವ ಪಾಪಗಳಿಂದ ಮುಕ್ತರಾಗಿ ಶುಚಿರ್ಭೂತರಾಗುತ್ತೇವೆ ಎಂದು ಶಾಸ್ತ್ರಗಳಲ್ಲಿ ಕಂಡುಬರುತ್ತದೆ 

No comments:

Post a Comment