Monday, February 18, 2019

Theory of Evolution in our Tradition (ಮಾನವ ವಿಕಾಸ ಚಕ್ರ, ಪೂರ್ವಿಕರ ವೈಖರಿ)

ಮಾನವ ವಿಕಾಸ ಚಕ್ರ, ಪೂರ್ವಿಕರ ವೈಖರಿ

'ದಶಾವತಾರ' ಪರಿಕಲ್ಪನೆಯ ಹಿಂದಿನ ಅಂತರಾರ್ಥ.
ವಿಷ್ಣುವಿನ ಅವತಾರಗಳಲ್ಲಿ ಹತ್ತು ಅವತಾರಗಳನ್ನು 'ದಶಾವತಾರ'
ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ಮೊದಲ ಮೂರು ಅವತಾರಗಳು ಮತ್ಸ್ಯ, ಕೂರ್ಮ, ವರಾಹ ಅವತಾರಗಳನ್ನು ಸಾಂಕೇತಿಕ ಅವತಾರ ಎಂದು ಕರೆಯುತ್ತಾರೆ. ಈ ರೂಪದಲ್ಲಿ ವಿಷ್ಣುವಿನ ಪೂಜೆಯಾಗುವುದು ಅಪರೂಪವೇ. ಪ್ರಳಯದಿಂದ ಕಾಪಾಡಿದ ಎಂದು ನಂಬಲಾದ ಮತ್ಸ್ಯ ಅವತಾರ ಚಲನೆಯನ್ನು ಸೂಚಿಸಿದರೆ, ಸಮುದ್ರ ಮಥನಕ್ಕೆ ಆಧಾರವಾದ ಕೂರ್ಮಾವತಾರ ಸ್ಥಿತಿಯನ್ನು ಸೂಚಿಸುತ್ತದೆ. ಹಾಗೆಯೇ, ಭೂಮಿಯನ್ನು ತನ್ನ ಕೋರೆಗಳಿಂದ ಎತ್ತಿದ ಎಂದು ವಿವರಿಸಲಾದ ವರಾಹವು, ಕ್ರಿಯೆಯನ್ನು ಸೂಚಿಸುವ ಅವತಾರ. ಚಲನೆ, ಸ್ಥಿತಿ ಮತ್ತು ಕ್ರಿಯೆಗಳು ಸೃಷ್ಟಿಯ ಬಹುಮುಖ್ಯ ಲಕ್ಷಣಗಳೆಂಬುದನ್ನು ಈ ಅವತಾರಗಳು ಸೂಚಿಸುತ್ತದೆ. ಇನ್ನು ನರಸಿಂಹ, ವಾಮನ, ಪರಶುರಾಮ. ಈ ಮೂರು ಅವತಾರಗಳನ್ನು ಅರ್ಧಾವತಾರಗಳು ಎಂದು ಕರೆಯುತ್ತಾರೆ. ನರಸಿಂಹ ಅವತಾರದಲ್ಲಿ ಪ್ರಹ್ಲಾದನನ್ನು, ಅವನ ತಂದೆ, ಹಿರಣ್ಯ ಕಶ್ಯಪುವೇ ಹಿಂಸಿಸುತ್ತಿರುವಾಗ ಮಹಾವಿಷ್ಣು ಅರ್ಧಸಿಂಹ ಮತ್ತು ಅರ್ಧ ಮಾನವನ ರೂಪತಾಳಿ, ಹಿರಣ್ಯ ಕಶ್ಯಪುವನ್ನು ಸಂಹರಿಸುತ್ತಾನೆ. ಸಿಂಹ ಪ್ರಾಣಿಗಳಲ್ಲೇ ಬಲಿಷ್ಠವಾದದ್ದು. ಅದಕ್ಕೆ ವೀರ ಗುಣವುಳ್ಳ ಮಾನವ ದೇಹವೂ ಸೇರಿದರೆ ಸರ್ವಶಕ್ತಿ ಜೊತೆಗೂಡಿದಂತೆಯೇ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬುದ್ಧಿಯಲ್ಲಿ ಮಾನವ ಮಿಗಿಲು ಎಂಬುದು ಸಹಜವಾದ ಎಣಿಕೆ. ಆದರೆ, ನರಸಿಂಹ ಅವತಾರದಲ್ಲಿ ತಲೆ ಪ್ರಾಣಿಯದಾಗಿದ್ದು, ದೇಹ ಮಾನವನದು. ಇದು ಅವತಾರದ ಅರ್ಧಸ್ವರೂಪಕ್ಕೆ ನಿದರ್ಶನವಾದಂತೆ ಅದು ಆವೇಶದ ಅಭಿವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಇನ್ನು ವಾಮನ ಬಲಿಯನ್ನು ತ್ರಿವಿಕ್ರಮ ರೂಪತಾಳಿ ಪಾತಾಳಕ್ಕೆ ತಳ್ಳಿದ ಅವತಾರ. ಇಲ್ಲಿ ವಾಮನ ಮತ್ತು ತ್ರಿವಿಕ್ರಮ ಎರಡೂ ಒಂದೇ ಶಕ್ತಿಯ ರೂಪಗಳು ಎಂಬುದನ್ನು ಗಮನಿಸಬೇಕು. ನೋಡಲು ವಾಮನನಂತಿದ್ದರೂ, ಅವನಲ್ಲಿ ತ್ರಿವಿಕ್ರಮಶಕ್ತಿ ಅಡಗಿರಬಹುದು ಎಂಬುದನ್ನು ಈ ಅವತಾರವು ಸೂಚಿಸುತ್ತದೆ. ಪರಶುರಾಮನು ತನ್ನ ಅವತಾರದಲ್ಲಿ ಪ್ರಜಾಪೀಡಕರಾದ ಕ್ಷತ್ರಿಯರನ್ನೆಲ್ಲ ನಾಶ ಮಾಡಿದ ಚಿತ್ರ ಕಣ್ಮುಂದೆ ಬರುತ್ತದೆ. ಆಡಳಿತ ನಡೆಸುವವರು ಅಹಂಕಾರ ತೋರಿದರೆ, ಭಗವಂತನು ಅವರನ್ನು ಶಿಕ್ಷಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. ಅಷ್ಟೇ‌ ಅಲ್ಲ, ಮುಂದಿನ ಅವತಾರದಲ್ಲಿ ವಿಷ್ಣುವು ಕ್ಷತ್ರಿಯನಾಗಿಯೇ ಜನಿಸುತ್ತಾನೆ. ಇದು ಈ ಪ್ರಕ್ರಿಯೆಯಲ್ಲಿರುವ ಸಂಕೀರ್ಣತೆಗೆ ನಿದರ್ಶನವಾಗಿದೆ. ಈ ಮೂರು ಅವತಾರಗಳಲ್ಲಿ ಸಂದೇಶವಿದೆ. ಆದರೆ ಭಗವಂತನ ಸ್ವರೂಪ ಇಲ್ಲೆಲ್ಲ ಸೀಮಿತ ಅವಧಿಯಲ್ಲಿ ಬಂದು ಹೋಗುತ್ತದೆ. ಹಾಗಾಗಿಯೇ ಇವುಗಳನ್ನು ಅರ್ಧಾವತಾರಗಳು ಎಂದು ಹೇಳಲಾಗುವುದು. ಇವನ್ನೆಲ್ಲಾ ಆವೇಶಾವತಾರ ಅಥವಾ ವಿಷ್ಣುವು ತಾತ್ಕಾಲಿಕವಾಗಿ ಧರಿಸಿದ್ದ ಅವತಾರ ಎಂದು ವಿಶ್ಲೇಷಿಸುವುದೂ ಇದೆ. 


ರಾಮ, ಕೃಷ್ಣರನ್ನು, ವಿಷ್ಣುವಿನ ಪೂರ್ಣಾವತಾರಗಳು ಎಂದು ಹೇಳಲಾಗುತ್ತದೆ. ವಿಷ್ಣುವು ಹೆಚ್ಚಾಗಿ ಪೂಜಿತನಾಗುವುದು ಈ ರೂಪಗಳಲ್ಲೇ. ಶ್ರೀರಾಮನ ಜೀವನ ಚಿತ್ರಣವೇ ಆದರ್ಶದ ಪ್ರತಿರೂಪವಾಗಿದೆ. ಜೀವನದ ವಿವಿಧ ಸವಾಲುಗಳನ್ನು, ಮಾನವನು ಹೇಗೆ ಎದುರಿಸಬೇಕು ಎಂಬುದನ್ನು ಸ್ವತಃ ಭಗವಂತನೇ ಅಭಿನಯಿಸಿ ತೋರಿಸಿದ ಅವತಾರಗಳೇ ಇವು. ಶ್ರೀರಾಮನ ಅವತಾರದಲ್ಲಿ ಬಹಳ ಮುಖ್ಯವಾಗಿ ಕಾಣುವುದು ಕೌಟುಂಬಿಕ ಚಿತ್ರಣ. ಶ್ರೀರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ. ಸೀತೆ, ಲಕ್ಷ್ಮಣ, ಹನುಮಂತ, ರಾಮನ ಜೊತೆಯಲ್ಲಿ ಇರುತ್ತಾರೆ. ಕೆಲವೊಮ್ಮೆ ಭರತ ಮತ್ತು ಶತ್ರುಘ್ನ ಕೂಡ ಜೊತೆಗಿರುತ್ತಾರೆ. ಇಂತಹ ತುಂಬಿದ ಕುಟುಂಬವೇ‌ ರಾಮಾವತಾರದ ಸಂದೇಶ. ರಾಮಾಯಣದಲ್ಲಿ ಕುಟುಂಬ ಎಂಬುದು ವಿಶಾಲವಾದ ನೆಲೆಯಲ್ಲಿ ಚರ್ಚಿತವಾಗಿದೆ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ. ಇಡೀ ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಹೀಗಾಗಿ ಅಲ್ಲಿ ಹನುಮಂತ, ಸುಗ್ರೀವ, ಜಾಂಬುವಂತರಂತಹ ವೀರರಿಗೆ ಮಾತ್ರವಲ್ಲ, ಅಳಿಲಿಗೂ ಒಂದು ಮಹತ್ತರ ಸ್ಥಾನವಿದೆ. ಬೇಜವಾಬ್ದಾರಿಯ ಅಗಸನ ಮಾತಿಗೂ ಇಲ್ಲಿ ಒಂದು ಬೆಲೆ ಇದೆ. ಈ ಅರ್ಥದಲ್ಲಿ ಪರಿಪೂರ್ಣತೆ ರಾಮಾವತಾರಕ್ಕೆ ಇದೆ. ಅಷ್ಟೇ‌ ಅಲ್ಲ, ಆಕಾರದಲ್ಲಿಯೂ ಶ್ರೀರಾಮನು ಪರಿಪೂರ್ಣ ಪುರುಷಾಕೃತಿ ಎಂಬುದು ಇಲ್ಲಿ ಗಮನಾರ್ಹ. ಅದಕ್ಕಾಗಿ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ನಮ್ಮ ಜೀವನದಲ್ಲಿ ನಡೆ-ನುಡಿಗಳು ಒಂದೇ ರೀತಿಯಿದ್ದರೆ, ಮಾದರಿಯಾಗಿ ಇತರರಿಗೆ ಸಂದೇಶವಾಗಬಲ್ಲದೇ ವಿನಾ ಕೇವಲ ಆಚರಣೆ ಇಲ್ಲದ ಉಪದೇಶದಿಂದಲ್ಲ ಎಂಬ ಸಂದೇಶ ಶ್ರೀರಾಮನ ಅವತಾರದಲ್ಲಿದೆ. 

ಶ್ರೀಕೃಷ್ಣನು ಸಮುದಾಯದ ದೇವತೆ. ಈ ಅವತಾರದ ವ್ಯಾಪ್ತಿಯೂ ಬಹಳ ದೊಡ್ಡದು. ಇವನನ್ನು ಅವತಾರವೆನ್ನದೆ ವಿಷ್ಣುವಿನ ಪರಿಪೂರ್ಣ ಅಂಶವೆಂದೇ ಕರೆಯುವುದೂ ಇದೆ. ಶ್ರೀಕೃಷ್ಣನ ಅವತಾರದ ವೈಶಿಷ್ಟ್ಯವೆಂದರೆ, ಈತ, ತಾನೇ ಘಟನಾವಳಿಯ ಕೇಂದ್ರವಾಗಿ, ಸಾಧಿಸಿದ್ದಕ್ಕಿಂತಲೂ ಹೆಚ್ಚಾಗಿ, ಯಾರಿಂದ ಯಾವ ಕೆಲಸವನ್ನು ತೆಗೆದುಕೊಳ್ಳಬೇಕು ಎಂಬ ಕುಶಲಿಯಾಗಿ ಕಾಣಿಸುತ್ತಾನೆ. ರಾಜನೀತಿ ತಜ್ಞನನ್ನಾಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಇಡೀ ಮಹಾಭಾರತವೇ‌ ಇದೆ. ಕೃಷ್ಣನ ಬಾಲಲೀಲೆಗಳಲ್ಲಿಯೇ‌ ಅಸುರ ಸಂಹಾರದ ಕಥೆಗಳು ಹಾಸು ಹೊಕ್ಕಾಗಿ ಬಂದಿವೆ. ಸೃಷ್ಟಿ ವ್ಯಾಪಾರವನ್ನು ಮುಗಿಸಿ, ಆಲದೆಲೆಯ ಮೇಲೆ ಮಲಗಿ, ನಿಶ್ಚಿಂತೆಯಿಂದ ನೀರಿನ ಮೇಲೆ ತೇಲುತ್ತಾ, ತಾನು ಆಡುತ್ತಿರುವ ಜೀವನ ನಾಟಕವನ್ನು ನೆನೆಸಿಕೊಂಡು ಆನಂದ ಪಡುವ ಬಾಲಕೃಷ್ಣನ ಚಿತ್ರ ಚಿರಪರಿಚಿತ. ಇದು ಶ್ರೀಕೃಷ್ಣಾವತಾರದ ಸಂದೇಶವೂ ಹೌದು. ಸಂಸಾರದೊಳಗಿದ್ದು ಇಲ್ಲದಂತೆ, ಸಕಲವೂ ತಾನಾಗಿಯೂ, ಸಕಲವನ್ನು ಅನುಭವಿಸುತ್ತಾ ಸ್ಥಿತಪ್ರಜ್ಞನಾಗುವ ಜ್ಞಾನಿಯ ಚಿತ್ರಣ ಇಲ್ಲಿದೆ. ಭಾರತೀಯ ಚಿಂತನಾ ಪರಂಪರೆಯ ಸಾರವೇ ಆಗಿರುವ ಭಗವದ್ಗೀತೆಯ ಬೋಧಕನೇ ಶ್ರೀಕೃಷ್ಣ. ಬದುಕಿನ ಸಾರವನ್ನೇ ಹೇಳುವ ಈ ಗ್ರಂಥವು, ಕೃಷ್ಣಾವತಾರದ ಸಾರರೂಪವೂ‌ ಆಗಿದೆ. ಉಳಿದಂತೆ ಚಾರಿತ್ರಿಕವಾದ ಬೌದ್ಧಿಕತೆಯ ಕಾರಕವಾದ ಬುದ್ಧನನ್ನೂ, ಬುದ್ಧಿ ಜೀವಿಗಳನ್ನೂ  ಒಂಭತ್ತನೆಯ ಅವತಾರವೆಂದೂ ಗುರುತಿಸಲಾಗುವುದು. ಕ್ರಿಯಾತ್ಮಕವಾದ ಎಲ್ಲಾ ಅವತಾರಗಳ ಜಂಜಾಟವನ್ನು ಮುಗಿಸಿ ಶಾಂತ ಮನಃಸ್ಥಿತಿ ಪಡೆಯುವ ಚಿತ್ರಣವನ್ನು ಬೌದ್ಧಾವತಾರದಲ್ಲಿ ಕಾಣಬಹುದು. ಪರಮಾತ್ಮನ ಸೃಷ್ಟಿ ನಿರಂತರ ಮತ್ತು ನವನವೀನ ಎಂದು ಸೂಚಿಸುವ ಸಲುವಾಗಿಯೇ ಇನ್ನೂ ಆಗಬೇಕಾಗಿರುವ ಕಲ್ಕಿ ಎಂಬ ಹತ್ತನೆಯ ಅವತಾರವನ್ನು ಧರ್ಮ್ ಗ್ಲಾನಿಯ ನಿರ್ಬೃಹಣಾರ್ಥವಾಗಿ ಸೂಚಿಸಲಾಗಿದೆ. 

ದಶಾವತಾರ ಪರಿಕಲ್ಪನೆಯಲ್ಲಿ ಜೀವವಿಕಾಸದ ಚಿತ್ರಣವೂ ಇದೆ. ಮೊದಲು ಕಾಣಿಸಿಕೊಂಡಿದ್ದು ಜಲಚರ ಜೀವಿಗಳು ಎಂಬುದನ್ನು ಮತ್ಸ್ಯಾವತಾರ ಸೂಚಿಸಿದರೆ, ಜಲ ಮತ್ತು ಭೂಮಿಗಳೆರಡರಲ್ಲಿಯೂ ಓಡಾಡಬಲ್ಲ ಉಭಯವಾಸಿ ಜೀವಿಗಳು ಸೃಷ್ಟಿಯಾದವೆಂಬುದನ್ನು ಕೂರ್ಮಾವತಾರವು ಸೂಚಿಸುತ್ತದೆ. ನಂತರ ಬಂದ ಸಸ್ತನಿಗಳನ್ನು ವರಾಹ ಅವತಾರ ಸೂಚಿಸಿದರೆ, ಪ್ರಾಣಿ ಸ್ಥಿತಿಯಿಂದ ಮಾನವ ವಿಕಾಸಗೊಂಡಿದ್ದನ್ನು ನರಸಿಂಹ ಅವತಾರ ಸೂಚಿಸುತ್ತದೆ. ಆರಂಭದಲ್ಲಿ ಕಾಣಿಸಿಕೊಂಡ ಕುಬ್ಜ ಮಾನವರನ್ನು ವಾಮನ ಅವತಾರ ಸೂಚಿಸಿದರೆ, ವಿಕಾಸಗೊಂದ ಆದರ್ಶವಾದಿ ಮಾನವನನ್ನು ರಾಮಾವತಾರ ಸೂಚಿಸುತ್ತದೆ. ರಾಜನೀತಿ ತಜ್ಞನ ಪಾತ್ರವನ್ನು ಕೃಷ್ಣನೂ, ಆಧ್ಯಾತ್ಮಿಕ ವಿಕಸನವನ್ನು ಬುದ್ಧನೂ ಸೂಚಿಸುತ್ತಾನೆ. ಕಲ್ಕಿಯು ಆಧುನಿಕ ಮಾನವನ ಸ್ವರೂಪ. ಹೀಗೆ ದಶಾವತಾರ ಕಲ್ಪನೆಯಲ್ಲಿ ಮಾನವ ವಿಕಾಸ ಚಕ್ರವಿರುವುದನ್ನು ಗಮನಿಸಬಹುದು.

 ದಶಾವತಾರ ಯೋಜನೆಯಲ್ಲಿ ಗರ್ಭಸ್ಥ ಶಿಶುವಿನ ಒಂಭತ್ತು ತಿಂಗಳು ಹತ್ತು ದಿವಸಗಳ ಬೆಳವಣಿಗೆಯ ಹಂತದಸೂಕ್ಷತೆಗಳನ್ನೂ ಪ್ರತ್ಯಕ್ಷವಾಗಿ ಕಂಡಂತೆ ನಿರೂಪಿಸಿದ ನಮ್ಮ ಪೂರ್ವಿಕರ ವೈಖರಿ ಅದಮ್ಯ.

ಒಂದು ಸಂಭಾಷಣೆ 

ಅಮ್ಮ :(ನಗುತ್ತ) ಹೌದು, ಡಾರ್ವಿನ್ ಬಗ್ಗೆ ನನಗೆ ಗೊತ್ತಿದೆ. ಅವನು ಯಾವುದೆಲ್ಲ ಶೋಧನೆ ಮಾಡಿದ್ದಾನೆ ಅದು ವಾಸ್ತವದಲ್ಲಿ ಸನಾತನ ಧರ್ಮಕ್ಕೆ ಬಹಳ ಹಳೆಯ ವಿಷಯ. ಒಂದು ವೇಳೆ ನೀನೇನಾದರು ಬುದ್ಧಿವಂತನಾಗಿದ್ದರೆ ಅದನ್ನು ಕೇಳು. (ತಾಯಿ ಪ್ರತಿಸ್ಪರ್ಧಿಯಾಗಿಯೇ ಉತ್ತರ ಕೊಟ್ಟಳು)






ನೀನೇನಾದರು ದಶಾವತಾರದ ಬಗ್ಗೆ ಕೇಳಿದ್ದಿಯಾ?
Mum: (Laughter) Yes, I know about Darwin. What he researched is in fact an old Sanatan Dharma thought. If you are intelligent then listen to it. (Mother questions as a rival)
Have you heard about Dashavathaara?
ಮಗ :ವಿಷ್ಣುವಿನ ಹತ್ತು ಅವತಾರ ಅಲ್ಲವೇನಮ್ಮಾ? ಆದರೆ ನನ್ನ ಸಂಶೋಧನೆಗೂ ದಶಾವತಾರಕ್ಕೂ ಎಲ್ಲಿಯ ಸಂಭಂಧ?
Son: Is it not the ten incarnations of Vishnu, you are talking about Mother? But where is the relationship between my research and Dashavatar?
ಅಮ್ಮ :ಸಂಬಂಧ ಇದೆ. ನೀನು ಮತ್ತು ಡಾರ್ವಿನ್ ಏನು ತಿಳಿದುಕೊಂಡಿಲ್ಲ ಅದನ್ನು ನಾನು ನಿನಗೆ ತಿಳಿಸುತ್ತೇನೆ.
ಮೊದಲ ಅವತಾರ ಆಗಿತ್ತು 'ಮತ್ಸ್ಯ' ಅಂದರೆ ಮೀನು. ಹೀಗೆ ಯಾಕೆಂದರೆ ಮಾನವನ ಜೀವನ ನೀರಿನಿಂದಲೇ ಆರಂಭವಾಗಿದೆ. ಇದು ಸತ್ಯ ಹೌದೋ ಅಲ್ಲವೋ?
(ಮಗ ಈಗ ಲಕ್ಷ್ಯಕ್ಕೊಟ್ಟು ಕೇಳಲಾರಂಭಿಸಿದ)
Mum: There is a relationship. You and Darwin do not know something that I am going to tell you now.
The first avatar was 'matsya' meaning fish. This is because human life has begun with water. Is it not it true?
(Son now begs to ask for)
ಅದರ ನಂತರ ಬಂತು ಎರಡನೇ ಅವತಾರ 'ಕೂರ್ಮ' ಅರ್ಥಾತ್ ಆಮೆ. ಅದು ಸಮುದ್ರದಿಂದ ಜಮೀನಿನಕಡೆ ವಿಕಾಸ ತೋರಿಸಿತು. ಮೂರನೇ ಅವತಾರ 'ವರಾಹ' ಅಂದರೆ ಹಂದಿ. ಅದರ ಅರ್ಥ ಕಾಡುಪ್ರಾಣಿ. ಅದರಲ್ಲಿ ಅಧಿಕ ಬುದ್ಧಿ ಇರುವುದಿಲ್ಲ. ನೀನು ಅದಕ್ಕೆ ಡಾಯನಾಸೋರ ಎನ್ನುತ್ತೀಯಾ. (ಮಗ ಕಣ್ಣು ಹೊರಳಿಸಿ ಒಪ್ಪಿಗೆ ಸೂಚಿಸಿದ) ನಾಲ್ಕನೇ ಅವತಾರ 'ನರಸಿಂಹ' ಅರ್ಧ ಮಾನವ ಅರ್ಧ ಪಶು ಅದು ತೋರಿಸಿತು ಕಾಡು ಪ್ರಾಣಿಯಿಂದ ಬುದ್ಧಿವಂತ ಜೀವಿಯ ವಿಕಾಸ.
It was followed by the second incarnation of the 'kurma' turtle. It evolved from the sea to the ground. The third incarnation is 'Varaha' ie pig. It means wildlife. It does Dinosaursnot have much intelligence. You call it as Dinosaurs. The fourth incarnation of 'Narasimha', half human beast showed that it evolved from the wild creature.
ಐದನೇ ಅವತಾರ 'ವಾಮನ' ಕುಳ್ಳ. ವಾಸ್ತವವಾಗಿ ಎತ್ತರಕ್ಕೆ ವೃದ್ಧಿ ಯಾಗಲು ಶಕ್ಯನಾಗುತ್ತಿದ್ದ ಅದು ಯಾಕೆಂದು ನೀನೇನಾದರು ಗೊತ್ತಾ? ಯಾಕೆಂದರೆ ಮನಷ್ಯರಲ್ಲಿ ಎರಡು ಪ್ರಕಾರ 1. ಹೋಮೋಇರೆಕ್ಟಸ(ನರವಾನರ) 2.ಹೋಮೋಸೆಪಿಅಂಸ(ಮಾನವ)ಮತ್ತು ಹೋಮೋಸೆಪಿಅಂಸ ಹೋರಾಟವನ್ನು ಗೆದ್ದುಬಿಟ್ಟ. (ಮಗ ದಶಾವತಾರದ ಪ್ರಸಂಗವನ್ನು ಕೇಳಿ ಸ್ತಬ್ಧನಾಗಿ ಹೋದನು. 
ಅಮ್ಮ ಹೇಳುವುದನ್ನು ಮುಂದುವರಿಸಿದಳು)
The fifth avatar is 'Vamana'. Do you really know why it was so upset to rise to height? Because of the two types of human beings 1A centaur or occasionally hippocentaur (nara vanara) 2. homosapiens (human) and won the fight. (The son heard a dashavatar incident and went quiet. Mom continued to say)
ಆರನೇ ಅವತಾರ 'ಪರಶುರಾಮ' ಅವನ ಕೈಯಲ್ಲಿ ಶಸ್ತ್ರ (ಕೊಡಲಿ) ದ ತಾಕತ್ತು ಇದೆ. ಅದು ನಮಗೆ ತೋರಿಸುತ್ತದೆ ಏನೆಂದರೆ ಆ ಮಾನವನಿಗೆ ಗುಹೆ ಅಥವಾ ಕಾಡಿನಲ್ಲಿರುವುದು ಅಸಮಂಜಸ ಮತ್ತು ಅಸಾಮಾಜಿಕ
ಏಳನೇ ಅವತಾರ 'ಶ್ರೀ ರಾಮ' ಮರ್ಯಾದಾಪುರುಷೋತ್ತಮ. ವಿಚಾರಯುಕ್ತ ಪ್ರಥಮ ಸಾಮಾಜಿಕ ವ್ಯಕ್ತಿ. ಅವನು ಸಮಾಜದ ನಿಯಮ ಮತ್ತು ಸಮಸ್ತ ಸಂಬಂಧಗಳ ಮರ್ಯಾದೆ ತಯಾರಿಸಿದನು.
The sixth incarnation of 'Parashurama'. He has in his hand the weapon (ax). It shows us that the humans are not supposed to be leaving in the caves, it is not permissible and nihilistic.
The seventh avatar is of 'Sri Rama'. The first social Etiquette and best of all men.. He made the law of society and the respect of all relations. 
ಎಂಟನೇ ಅವತಾರ 'ಶ್ರೀ ಕೃಷ್ಣ' ರಾಜನೇತಾ, ರಾಜನೀತಿಜ್ಞ,ಅದು ಏನು ಕಲಿಸಿತೆಂದರೆ, ಸಮಾಜದ ನಿಯಮಗಳ ಆನಂದ ತೆಗೆದುಕೊಳ್ಳುತ್ತಾ ಸಾಮಾಜಿಕ ಚೌಕಟ್ಟಿನಲ್ಲಿ ಇದ್ದುಕೊಂಡೇ ಯಾವ ರೀತಿ ಇರಲು ಶಕ್ಯ ಎಂಬುದನ್ನು. (ಮಗ ಆಶ್ಚರ್ಯಚಕಿತನಾಗಿ ಕೇಳುತ್ತಲೇ ಇದ್ದ. ಅಮ್ಮ ಜ್ಞಾನದ ಗಂಗೆಯನ್ನು ಹರಿಸುತ್ತಿದ್ದಳು.)
The eighth incarnation of 'Sri Krishna' is a leader of kings, a politician, who taught us what it means to be in the social framework, to enjoy the rules of society and to be able to live. (The son was listening to astonishment. Mama is throwing a ring of knowledge.)
ಒಂಬತ್ತನೇ ಅವತಾರ ' ಈಗಿನ ಬುಧ್ಧಿ ಜೀವಿ ' ಇದು ಏನು ತಿಳಿಸುತ್ತದೆಯೆಂದರೆ ವ್ಯಕ್ತಿ ನರಸಿಂಹದಿಂದ ಎದ್ದು ಮಾನವನ ನಿಜವಾದ ಸ್ವಭಾವವನ್ನು ಶೋಧಿಸಿದನು. ಅವನು ಜ್ಞಾನದ ಅಂತಿಮ ಶೋಧನೆಯ ಪರಿಚಯ ಮಾಡಿಕೊಟ್ಟನು.
ಕೊನೆಯಲ್ಲಿ ಹತ್ತನೆಯ ಅವತಾರ 'ಕಲ್ಕಿ'. ಆ ಮಾನವ ಯಾವುದೆಂದರೆ, ಅದರ ಮೇಲೆ ನೀನು ಶೋಧ ಮಾಡುತ್ತಿದ್ದಿಯಾ. ಆ ಮಾನವ ಅನುವಂಶಿಕ ರೂಪದಿಂದ ಶ್ರೇಷ್ಠನಾಗುವನು. (ಮಗ ಅಮ್ಮನನ್ನು ದಂಗಾಗಿ ನೋಡುತ್ತಲೇ ಇದ್ದ. ಕೊನೆಗೆ ಹೇಳಿದ)
The ninth avatar is ' Buddhdhi Jivi ' which means what a person rises from nervousness and searches for human nature. He introduced the final search of knowledge.
The tenth incarnation of the  'kalki'. That human is what you are searching for now. That's a great human genetic form. (The son was looking at mother stunnedfor a moment finally said)
ಮಗ:ಅಮ್ಮ! ಇದು ಅದ್ಭುತವಾಗಿದೆ. ಹಿಂದು ದರ್ಶನ ವಾಸ್ತವದಲ್ಲಿ ಅರ್ಥಪೂರ್ಣವಾಗಿದೆ.
ವೇದ, ಪುರಾಣ, ಗ್ರಂಥ, ಉಪನಿಷತ್ತು, ಇತ್ಯಾದಿಗಳೆಲ್ಲವೂ ಅರ್ಥಪೂರ್ಣವಾಗಿದೆ. ಕೇವಲ ಅವುಗಳನ್ನು ನೋಡುವ ದೃಷ್ಟಿಕೋನ ಸರಿಯಾಗಿರಬೇಕು. ಅದು ಧಾರ್ಮಿಕವಾಗಿರಲೀ ಅಥವಾ ವೈಜ್ಞಾನಿಕವಾಗಿರಲಿ.
Son: mum! It's great. Hindu vision is actually meaningful.

Veda, Purana, Granth, Upanishad, etc. are all meaningful. The point of viewing them is to be correct. Whether it's religious or scientific.

No comments:

Post a Comment