ಸಂಗ್ರಹಿತ
ರಾಹು-ಕೇತು ಗ್ರಹಗಳು Moon's Upper & Lower node
ರಾಹು-ಕೇತು ಗ್ರಹಗಳು Moon's Upper & Lower node
ರಾಹು-ಕೇತು ಕೂಡ ಕಣ್ಣಿಗೆ ಕಾಣುವ ಗ್ರಹಗಳು.
ರಾಹು-ಕೇತು ಗ್ರಹದೇವತೆಗಳು ಎಂದು ಪುರಾಣಗಳಲ್ಲಿ ವರ್ಣಿಸಿದ್ದಾರೆ. ವೇದಮಂತ್ರಗಳಿವೆ, ಉಪನಿಷತ್ತುಗಳಲ್ಲಿ ದೋಷ ಪರಿಹಾರದ ಉಪಾಯಗಳನ್ನೂ ತಿಳಿಸಿದ್ದಾರೆ.
ಆದರೆ, ಇಂದಿನ ಆಧುನಿಕ ವಿಜ್ಞಾನದ ಪ್ರಕಾರ ರಾಹು-ಕೇತುವಿಗೆ ಯಾವದೇ ಮಹತ್ವವಿಲ್ಲ. ಹಾಗಾದರೆ ರಾಹು-ಕೇತು ಗ್ರಹಗಳಲ್ಲವೇ ? ಗುರು-ಶನಿ ಗ್ರಹಗಳಂತೆ ಇದನ್ನೂ ನೋಡಬಹುದೇ ?
ಒಂದು ಪ್ರಯೋಗ ಮಾಡಿ. ಕೈಯಲ್ಲಿ ಒಂದು ಫುಟ್ ಬಾಲ್ ಹಿಡಿದುಕೊಳ್ಳಿ, ಅದನ್ನೇ ಸೂರ್ಯ ಅಥವಾ ಚಂದ್ರ ಎಂದು ತಿಳಿಯಿರಿ.
ಈಗ ಯೋಚಿಸಿ ಗ್ರಹಣ ಕಾಲದಲ್ಲಿ ಗ್ರಹಣದ ನೆರಳು ನಿಮ್ಮ ಕೈಯಲ್ಲಿರುವ ಚಂಡಿನ ಯಾವ ಭಾಗದಿಂದ ಆರಂಭವಾಗುತ್ತದೆ ? ಮೇಲಿನಿಂದಲೋ ? ಕೆಳಗಿನಿಂದಲೋ ?
ಎಡಭಾಗವೋ ? ಬಲಭಾಗವೋ ?
ಇದು ನಾವು ನೀವೆಲ್ಲ ಕಲಿತ ವಿಜ್ಞಾನದ ಪುಸ್ತಕದಲ್ಲಿ ಬಂದಿಲ್ಲ. ಗ್ರಹಣಗಳ ಬಗ್ಗೆ ಆಧುನಿಕ ಬುದ್ಧಿಜೀವಿಗಳು ಬರೆದ ಪುಸ್ತಕಗಳಲ್ಲಿಯೂ ಇಲ್ಲ ಅಲ್ಲವೇ ?
ಗ್ರಹಣ ಕಾಲದಲ್ಲಿ ಗ್ರಹಣದ ನೆರಳು ಚೆಂಡಿನ (ಚಂದ್ರ/ಸೂರ್ಯ) ಮೇಲಿನಿಂದ ಆರಂಭವಾಗಿ ಮೇಲಿನಿಂದಲೇ ಮುಕ್ತಾಯವಾದರೆ ಅದೇ ರಾಹುಗ್ರಸ್ತ !
ಅದರಂತೆ ಕೆಳಗಿನಿಂದಲೇ ಆರಂಭವಾಗಿ ಕೆಳಗಿನಿಂದಲೇ ಮುಕ್ತಾಯವಾದರೆ ಅದು ಕೇತುಗ್ರಸ್ತ !
ನೆನಪಿಡಿ, ಮೇಲಿನಿಂದ ಬಂದು ಮೇಲೆಯೇ ಸರಿದು ಹೋದರೆ ರಾಹುಗ್ರಸ್ತ, ಕೆಳಗಿನಿಂದ ಕೆಳಗೆ ಹೋದರೆ ಕೇತುಗ್ರಸ್ತ.
ಇದನ್ನು ಸ್ಫಷ್ಟವಾಗಿ ನೋಡಬೇಕಾದರೆ ಪಂಚಾಂಗದಲ್ಲಿ ಬರೆದ ಗ್ರಹಣ ಕಾಲವನ್ನು ಗುರುತಿಸಿ, ಆ ಸಮಯವನ್ನು ಸಾಧಿಸಿ, ಗ್ರಹಣ ಕಾಣಿಸುವ ಸ್ಥಳದಲ್ಲಿಯೇ ಇದ್ದು ಪರೀಕ್ಷಿಸ ಬೇಕು.
ಪಂಚಾಂಗದಲ್ಲಿ ಸ್ಫರ್ಷ, ಮಧ್ಯ, ಮೋಕ್ಷ ಸಮಯವನ್ನು ಕೊಟ್ಟಿರುತ್ತಾರೆ. ಕನಿಷ್ಟ ಈ ಮೂರೂ ಸಮಯದಲ್ಲಿ ನೇರವಾಗಿ ನೋಡಬೇಕು. ಈ ಕ್ರಮಕ್ಕೆ "ಗ್ರಹವೀಕ್ಷಣೆ" (observation) ಎಂದು ಕರೆಯುತ್ತಾರೆ.
ಟಿ.ವಿ, ಇಂಟರ್ ನೆಟ್, ಸೆಟಲೈಟ್ ಚಿತ್ರಗಳಲ್ಲಿ ನೀವು ಇದನ್ನು ಕಾಣಲು ಸಾಧ್ಯವಿಲ್ಲ.
ಅದರಲ್ಲಿ ಎಡದಿಂದ ಬಲಕ್ಕೆ ನೆರಳು ಸರಿದು ಹೋದಂತೆ ಕಾಣುವದು.
ಕೇವಲ ಒಂದು ಚಿತ್ರ ವೀಕ್ಷಣೆಯಿಂದ ಇದು ಅರ್ಥವಾಗಲು ಸಾಧ್ಯವಿಲ್ಲ. ಶಾಂತಚಿತ್ತರಾಗಿ ಪೂರ್ಣವಾಗಿ ಮತ್ತು ನೇರವಾಗಿ ದೃಷ್ಟಿಯಿಂದ ನೋಡಿದಾಗ ಮಾತ್ರ ಅರ್ಥವಾಗುತ್ತದೆ.
ವೈಜ್ಞಾನಿಕ ಪುಸ್ತಕಗಳಲ್ಲಿ ಹೇಳಿರುವ moon's upper node/ lower node ಅಂದರೆ ರಾಹು ಮತ್ತು ಕೇತು, perigy, apogy ಅಂದರೆ ಉತ್ತರಾಯಣ, ದಕ್ಷಿಣಾಯನ ಕಾಲದ ಗ್ರಹಣ.
ವೈಜ್ಞಾನಿಕವಾಗಿ ಇತ್ತೀಚಿನ ಒಂದು ಚಂದ್ರಗ್ರಹಣದ ಕಾಲದಲ್ಲಿ ಚಂದ್ರನು 14% ದೊಡ್ಡದಾಗಿ ಕಾಣಿಸುವನು ಎಂದು ಹೇಳಲಾಗಿತ್ತು,
ದಕ್ಷಿಣಾಯನದ ರಾತ್ರಿಯ ಕಾಲಮಾನ ತಿಳಿದವರಿಗೆ ಇದು ಹೊಸದು ಅಥವಾ ಇದರಲ್ಲಿ ಯಾವದೇ ವಿಷೇಶ ಇಲ್ಲ ಎನ್ನುವದು ತಿಳಿದೇ ಇರುತ್ತದೆ. ಅದನ್ನೇ ತಿರುಚಿ ಹೇಳಲಾಗಿತ್ತು !
ಕೆಂಪುರಕ್ತ ಚಂದ್ರ, ತೋಳ (redmoon, wolfmoon) ಇತ್ಯಾದಿ ಎಲ್ಲವೂ ಪಾಶ್ಚ್ಯಾತ್ಯರ ಮೂಢನಂಬಿಕೆ ಇದರಲ್ಲಿ ಯಾವದೇ ವೈಜ್ಞಾನಿಕ ಅಂಶ ಇಲ್ಲ. ವಿಜ್ಞಾನದ ಹೆಸರಿನಲ್ಲಿ ಅಮಾಯಕ ಜನರನ್ನು ಹೆದರಿಸುವ ಪ್ರಯತ್ನ ಮಾಡಲಾಗಿತ್ತು.
ದೇವರಲ್ಲಿ ಭಕ್ತಿ ಹೆದರಿಕೆಯಿಂದ ಬರುವದಿಲ್ಲ ಬದಲಾಗಿ ಸೃಷ್ಟಿಯ ಅಗಾಧತೆಯನ್ನು ಕಂಡಾಗ ತಾನಾಗಿಯೇ ಹುಟ್ಟುತ್ತದೆ.
ಕುರುಡನಿಗೆ ಸೂರ್ಯನ ಬಗ್ಗೆ ಎಷ್ಟೇ ವರ್ಣಿಸಿದರೂ ಬೆಳಕನ್ನು ತೋರಿಸಲು ಆಗುವದಿಲ್ಲ ಹಾಗೇ ಆಕಾಶವನ್ನೇ ನೋಡದವರಿಗೆ ರಾಹು-ಕೇತು ಕಲ್ಪನೆ ಎಂದೇ ಅನಿಸುತ್ತದೆ.
"ಯೋಗವಿದು ನಿಜಯೋಗಸಿದ್ಧರಿಗಾಗಮಜ್ಞರಿಗಾಗಮು ಮೇಣ್
ಭೋಗಿಭೂಷಣನಮಲ ನಿಜಸುಜ್ಞಾನ ಸಿದ್ಧರಿಗೆ"
ಇದನ್ನು ಋಷಿಮುನಿಗಳು ಸಿದ್ಧಸಾಧ್ಯರು ಇದನ್ನು ಕಂಡು ಜಗಕೆ ಸಾರಿದ್ದಾರೆ. ಸಾಮಾನ್ಯರಿಗೆ ಇದು ಅರ್ಥವಗುವದು ಕಷ್ಟಸಾಧ್ಯ.
ನೆರಳೂ ಕೂಡ ದೇವರು ಅದೇ ರಾಹು-ಕೇತು, ನೆರಳಿಲ್ಲದೇ ಬದುಕು ಅಸಾಧ್ಯ. ಇದನ್ನು ತಿಳಿಯುವದೇ ಫಲಭಾಗ. ಬೆಳೆಗಳನ್ನು ರಾಹು ಇರುವ ನಕ್ಷತ್ರದ ಮೇಲಿನಿಂದಲೇ ತಿಳಿಯುವ ಕ್ರಮ ಜ್ಯೋತಿಷ್ಯಶಾಸ್ತ್ರದಲ್ಲಿದೆ.
ನೆರಳಿನ ಅಧ್ಯಯನ ಭಾರತದಲ್ಲಿ ಮೊದಲಿನಿಂದಲೂ ಇದೆ. ಒಂದು ನಿರ್ಧಾರಿತ ಎತ್ತರದ ಕಂಬವನ್ನು ನಿರ್ಧಾರಿತ ಸಮಯದಲ್ಲಿ ನೆಟ್ಟು ಅದರ ನೆರಳನ್ನು ಗುರುತಿಸಿದರು. ಅದಕ್ಕೆ ಪಲಭಾ ಎಂದು ಕೆರೆದರು. ಅದರ ಮೂಲಕ ಆಕಾಶದಲ್ಲಿಯ ಗ್ರಹಗಳನ್ನು ಅಳೆದರು ! ಅಂದರೆ ನೆರಳನ್ನು ಅಳತೆಗೋಲಾಗಿ (medium of measurement) ಆಗಿ ಬಳಸಿದ ಕೀರ್ತಿ ಬಾರತೀಯ ಜ್ಯೋತಿಷಿಗಳಿಗಿದೆ.
ಪಾಶ್ಚಾತ್ಯ ಪದ್ಧತಿ ಅನುಸರಿಸುವ ಆಧುನಿಕ ಗಣಿತಶಾಸ್ತ್ರ ಇದೂವರೆಗೂ ಈ ಹಂತವನ್ನು ತಲುಪಿಲ್ಲ !!
ಇತ್ತೀಚೆಗೆ ಹೊರದೇಶಗಳಲ್ಲಿಯೂ "sciography" ಎಂಬ ಹೆಸರಿನಿಂದ ನೆರಳಿನ ಅಭ್ಯಾಸ ಮಾಡುತ್ತಿದ್ದಾರೆ. ಇದನ್ನು design engineering ವಿಷಯವಾಗಿ ಪರಿಗಣಿಸಿದ್ದಾರೆ.
ರಾಹು-ಕೇತು ಎಂದರೆ ಭಾರತೀಯ ಗಣಿತಶಾಸ್ತ್ರದ ದ್ಯೂತಕವಾಗಿದೆ. ಹಾಗೂ ಅಭಿಮಾನಪಡಬೇಕಾದ ವಿಷಯವಾಗಿದೆ.
ಗ್ರಹಣ ಕಾಲದ ರಾಹು ಕೇತು ದೋಷ ಪರಿಹಾರಕ್ಕೆ ಕೂಷ್ಮಾಂಡ ದಾನ (ಶಾಸ್ತ್ರಪ್ರಮಾಣ)
ರಾಹು ಅಥವಾ ಕೇತು ದಶಾ ಇರುವಾಗ, ಗ್ರಹಣದ ದೋಷ ಇರುವಾಗ ಅಥವಾ ಗ್ರಹಗಳು ಅನಿಷ್ಟ ಸ್ಥಾನದಲ್ಲಿ ಇರುವಾಗ ಕೂಷ್ಮಾಂಡ ದಾನ ಮಾಡಿದರೆ ದೋಷ ಪರಿಹಾರವಾಗುತ್ತದೆ.
ದೊಡ್ಡದಾದ ಕುಂಬಳಕಾಯಿಯನ್ನು ತಂದು ಅದರಲ್ಲಿ ಶ್ರೀವಿಷ್ಣು ಪ್ರತಿಮೆ ಹಾಗೂ ದಕ್ಷಿಣೆಯನ್ನು ಹಾಕಿ ಕೆಂಪುವಸ್ತ್ರದಿಂದ ಕಟ್ಟಿ ವಿಧಿಪೂರ್ವಕವಾಗಿ ಶ್ರೀವಿಷ್ಣುವನ್ನು ಪೂಜಿಸಿ ಅಂದರೆ ಶ್ರೀವಿಷ್ಣುಸಹಸ್ರನಾಮ ಮೊದಲಾದ ಸ್ತೋತ್ರಗಳಿಂದ ಪೂಜೆ ಮಾಡಬೇಕು.
ನಂತರ ಆ ಕುಂಬಳಕಾಯಿಯನ್ನು ದಾನ ಕೊಡಬೇಕು. ಕ್ರಮವನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಬಹುದು ಅಂದರೆ ಪೂಜೆಮಾಡಿ ಮಠಗಳಲ್ಲಿ ಸಮರ್ಪಿಸ ಬಹುದು. ಅದರಂತೆ ಮೃತ್ಯುಂಜಯ ಜಪವನ್ನೂ ಕೂಡ ಹೇಳಿದ್ದಾರೆ.
ಪ್ರಮಾಣಶ್ಲೋಕಗಳು--
ಕೇತೋರಂತರ್ಗತೇ ರಾಹೌ ಕೇಂದ್ರ ತ್ರಿಕೋಣ ಸ್ಥಿತೋಪಿವಾ |
ದ್ವಿಸಪ್ತಮಾದಿಯುತೇ ಪಾಪಗ್ರಹಯುತೇ ಬಲೀ |
ನೀಚಾಂಶೆ ನೀಚರಾಶಿಸ್ಥೆ ಷಷ್ಠಾಷ್ಟಮ ವ್ಯಯರಾಶಿಗೆ|
ತದ್ಭುಕ್ತೌ ಪಿತ್ರ ಪೀಡಾಸ್ಯ ಬ್ರಹ್ಮರಾಕ್ಷಸ ಪೀಡಕಂ |
ಅಪಸ್ಮಾರ ಭಯಂ ಚೈವ ಭೂತಾವೇಶ ಜ್ವರಾದ್ಭಯಂ|
ವಿಧವಾ ಕಲಹಂ ಚೈವ ಮರಣ ದಾರಿದ್ರ್ಯ ಪೀಡನಂ |
ನೀಚಸೇವಾ ಮಾನಭಂಗೋ ಸ್ವಸ್ತ್ರೀವಾಧಿ ಪ್ರಪೀಡನಂ |
ತದ್ದೋಷ ಪರಿಹಾರಾರ್ಥಂ ಮೃತ್ಯುಂಜಯ ಜಪಂ ಚರೇತ್ |
ಮಹಾಕೂಷ್ಮಾಂಡ ದಾನೇನ ಹ್ಯಾಯುರಾರೋಗ್ಯ ವರ್ಧನಂ | ರುದ್ರಯಾಮಳೆ |
ಪಿತಾಮಹ ಉವಾಚ ||
ಅಥದಾನಂ ಪ್ರವಕ್ಷಾಮಿ ಕೂಷ್ಮಾಂಡ ಫಲಸಂಜ್ಞಿಕಂ |
ಬ್ರೂಣಹತ್ಯಾದಿ ಪಾಪಾನಾಂ ರಹಸ್ಯಂ ಮಹತಾಮಪಿ |
ತತ್ಸಂಸರ್ಗಾದಿ ಪಾಪಾನಾಂ ಸಮಾನಾಮುತ ಪಾಪಿನಾಂ |
ಸಧ್ಯಸಂಶೋಧನಂ ಪುಣ್ಯಂ ಪುತ್ರಸಂತಾನ ವರ್ಧನಂ |
ಸಂಕ್ರಾಂತೌರಥಸಪ್ತಿಮ್ಯಾಂ ಪಾವೈಧೃತಿ ಜನ್ಮಭೇ |
ಗ್ರಹಣ ದ್ವೀತಿಯೇ ಮಾಯಾಂಶೈಕಾದಶಿದಿನೇ |
ದಾನಮೇತತ್ತು ಕರ್ತವ್ಯಂ ವಿಧಿನಾ ಶ್ರಾಧ್ಧಯಾಮುದಾ|
ಮಹಚ್ಛ್ಯೇತಂಶತಂದದ್ಯಾತ್ ಪಾದೋ ನಮತಿಪಾತಕೇ |
ದಧ್ಯಾತ್ಸಮೇಷು ಪಂಚಾಶತ್ತೀಶತಂಚೋಪಪಾತಕೇ |
ವಿಂಶತೀಸಂ ಕರಾಧ್ಯೇಷು ದಶೋನುನಕ್ಯಚಿತ್ ಸ್ಮೃತಮ್ |
ಕೂಷ್ಮಾಂಡಾನಿ ಸಮಾನೀಯ ದೃಢಸ್ಥೂಲಾವೃಣಾನಿಚ |
ಸುವರ್ಣೇನಸುವರ್ಣೇನ ಪಷ್ಪಂತಸ್ಯ ಪ್ರಕಾರಯೇತ್ |
ಫಲಂ ಚ ಕಲಧೌತಸ್ಯ ವೃತ್ತಮೇಕೈಕಮರ್ಪಯೇತ್ |
ತಿಲದ್ರೋಣೇನ ಸಂಛಾದ್ಯ ರಕ್ತವಸ್ತ್ರೇಣ ವೇಷ್ಟಯೇತ್ |
ಅಭ್ಯಚ್ರ್ಯಬಾಹ್ಮಣಾನ್ ಭಕ್ತ್ಯಾ ಪಂಚಾಭರಣ ವಸ್ತ್ರಕೈಃ |
ಲಕ್ಷ್ಮೀನಾರಾಯಣ ಪ್ರೀತ್ಯೇ ದದ್ಯಾದೇಕೈಕಶಃಫಲಂ |
ದಾನಮಂತ್ರ-
ಬ್ರಹ್ಮಹತ್ಯಾಪನೋದಾರ್ಥಂ ಬ್ರಹ್ಮಣಾನಿರ್ಮಿತಂಪುರಾ |
ಕೂಷ್ಮಾಂಡ ಬಹುಬೀಜಾಢ್ಯಂ ಅಥಶ್ಶಾಂತಿ ಪ್ರಯಚ್ಛತಿ |
ದಶಪಂಚಾಪಿನಿಷ್ಕಾನ್ ದಕ್ಷಿನಾಂ ಸಂಪ್ರದಾಯೇತ್ |
ನಿಷ್ಕತ್ರಯಮಥೈಕಂ ವಾ ವತ್ತಶಾಠ್ಯವಿವರ್ಜಿತಃ |
ಏವಂಕ್ರತ್ವಾ ವಿಧಾನೇನ ಸರ್ವಪಾಪೈಃಪ್ರಮುಚ್ಚತೆ |
ಪುತ್ರಾನಾ ಯುಷ್ಯತೋ ಲಬ್ಧಾ ವಿಷ್ಣುಲೋಕಂಸಗಚ್ಛತಿ |
ಇತಿ ಬ್ರಹ್ಮಾಂಡ ಪುರಾಣೋಕ್ತಂ ಮಹಾ ಕೂಷ್ಮಾಂಡ ದಾನ ವಿಧಿ ||
ಶ್ರೀಕೃಷ್ಣಾರ್ಪಣಮಸ್ತು ||
No comments:
Post a Comment