Wednesday, December 30, 2020

VAISHWA DEVA BALI HARANAM ವೈಶ್ವದೇವ ಬಲಿಹರಣ೦

Click hereVaishwadeva Bali haranam  ವೈಶ್ವದೇವ  ಬಲಿಹರಣO   

ಪ್ರತಿದಿನ ಊಟಕ್ಕೂ ಮುಂಚೆ. ಗೃಹಸ್ಥರು ಈ "ವೈಶ್ವದೇವ"ಯಜ್ನವನ್ನು ಮಾಡುತ್ತಾರೆ. ಅಂದರೆ, ಅಗ್ನಿಗೆ,  ಮಾಡಿದ ಅಡಿಗೆಯ ಸ್ವಲ್ಪ ಭಾಗವನ್ನು ಅರ್ಪಿಸುವುದು..ಈ ಯಜ್ಞದ ಅವಶ್ಯಕತೆ ಏನು?                                           बलिहरण चक्रम्                                    


ಅದೇನೆಂದರೆ, ನಾವು ಸಸ್ಯಾಹಾರಿಗಳೂ, ಸಸ್ಯಗಳನ್ನು ಕಡಿದು ಕೊಂದು ಆ ಪಾಪ ದಿಂದ ಲೇಪಿತ ರಾಗಿರುತ್ತೇವೆ..

ಅದನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಯೇ, ಆ ಭಾಗವನ್ನು ಅಗ್ನಿಗೆ ಅರ್ಪಿಸುವುದು..ಅಂದ ಮೇಲೆ, ಒಂದಂತೂ ಸ್ಪಷ್ಟವಾಯಿತು.. ಕೇವಲ ಪ್ರಾಣಿವಧೆ ಯೊಂದೆ ಹಿಂಸೆಯಲ್ಲ.. ಸಸ್ಯಹಿಂಸೆಯೂ ಹಿಂಸೆಯೇ..ಪಾಪದ ಪ್ರಾಯಶ್ಚಿತ್ತವೆ "ವೈಶ್ವದೇವ."

ಕೃಷಿ ಮಾಡುವಾಗ ಅದೆಷ್ಟು ಗೋಚರ ಅಗೋಚರ ಪ್ರಾಣಿ, ಪಕ್ಷಿ, ಕೀಟಗಳ ವಧೆ ನಡೆಯುತ್ತದೆ  ಸಸ್ಯಾಹಾರಿಗಳು ಅಡುಗೆ ಬೇಯಿಸುವಾಗ, ಬೀಸುವಾಗ, ರುಬ್ಬುವಾಗ ಅದೆಷ್ಟು ಜೀವಿಗಳ ಬಲಿಯಾಗುತ್ತದೆ

ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಆಗುವ ಹಿಂಸೆಗೆ ಪ್ರಾಯಶ್ಚಿತ್ತವಾಗಿ ವೈಶ್ವದೇವ ಹೋಮವನ್ನು ಪ್ರತಿನಿತ್ಯ ಕಡ್ಡಾಯ ಮಾಡಲಾಗಿದೆ. 

ಖಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ ಗೃಹಸ್ಥಸ್ಯ ತಾಭಿಃ ಸ್ವರ್ಗಂ ನ ವಿಂದತಿ ||

ಧಾನ್ಯವನ್ನು ತೆನೆಯಿಂದ ಬಿಡಿಸುವಾಗ, ಕುಟ್ಟಿ ಬೀಸುವಾಗ, ಒಲೆಯ ಮೇಲಿಟ್ಟು ಬೇಯಿಸುವಾಗ, ನೀರು ಕಾಯಿಸುವಾಗ, ಒಲೆ ಸಾರಿಸುವಾಗ ನಮಗೆ ಗೊತ್ತಿಲ್ಲದಂತೆ ಆಗುವ ಹಿಂಸೆಯ ಪ್ರಾಯಶ್ಚಿತ್ತಕ್ಕಾಗಿ ವೈಶ್ವದೇವ ಔಪಾಸನೆಯನ್ನು ಹೇಳಲಾಗಿದೆ.

"ಮಣಿಕ":-  ಅಗ್ನಿಹೋತ್ರ ಮಾಡುವಾಗ ಬಳಿಯಲ್ಲಿ ಇಟ್ಟಿರುವ ಒಂದು ಶೇಷಪಾತ್ರೆ.

"ವೈಶ್ವದೇವ":-   ಆಹಾರ ಸಮರ್ಪಣೆ, ಸೇವನೆ ಎಂದರ್ಥ.

ಯಾವುದೇ ವ್ಯಕ್ತಿಯು ತಾನು ಆಹಾರವನ್ನು ಸೇವಿಸುವುದಕ್ಕೆ ಮೊದಲು ಎಲ್ಲ ದೇವತೆಗಳಿಗೂ, ಪ್ರಾಣಿಗಳಿಗೂ, ಅತಿಥಿಗಳಿಗೂ ಸಾಂಕೇತಿಕವಾಗಿ ಆಹಾರವನ್ನು ಸಮರ್ಪಿಸಿ, ಅನಂತರವೇ ಅಂದರೆ ಅವರೆಲ್ಲರೂ ತೃಪ್ತರಾಗಿದ್ದಾರೆ ಎಂದು ತಿಳಿದ ಬಳಿಕ ತಾನು ಆಹಾರವನ್ನು ಸೇವಿಸಬೇಕು.‌ಪ್ರತಿಯೊಬ್ಬನ ಹೊಟ್ಟೆಯಲ್ಲೂ 'ವೈಶ್ವಾನರ' ಎಂಬ ಅಗ್ನಿಯಿರುತ್ತಾನೆ.ಅವನಿಗೆ ಅನ್ನವೆಂಬ ಹವಿಸ್ಸನ್ನು ಸಮರ್ಪಿಸಬೇಕು            

         BHAGAVAD GITA  (ch15-Sl14).

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ  | ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ಇಲ್ಲಿ 'ಪಚಾಮ್ಯನ್ನಂ ಚರ್ತುವಿಧಮ್' ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ" ಎಂದರ್ಥ. ಅನ್ನವೆಂದರೆ ಎಲ್ಲಾ ರೀತಿಯ 'ಆಹಾರ’. "ಪ್ರಾಣಿನಾಂ ದೇಹಮಾಶ್ರಿತಃ" ಎಂದರೆ 'ಪ್ರಾಣಿ’ಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.

ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು)

ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು).

ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು.

ಚೋಷ್ಯ = ಕುಡಿಯಲು ಯೋಗ್ಯವಾದುದು.

ಈ ನಾಲ್ಕು ವಿಧದ ’ಅನ್ನ’ವನ್ನು ಸೇವಿಸುವ ಎಲ್ಲಾ ಜೀವಿಗಳ ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆಯಲ್ಲಿ ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವನು ಚತುರ್ಭುಜ.

ಎಲ್ಲಾ ಆಹಾರ ಮಣ್ಣು-ನೀರು-ಬೆಂಕಿಯಿಂದ ಆಗಿರುತ್ತದೆ. ಆಹಾರದ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗು ಸ್ಥೂಲ ಭಾಗ ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ ಹಾಗು ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ ಇದಕ್ಕೆ 'ಪ್ರಾಣಾಗ್ನಿಹೋತ್ರ'ವೆಂದು ಕರೆಯುತ್ತಾರೆ.

ವೈಶ್ವದೇವ ಮಹತ್ವ

ಖಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ ಗೃಹಸ್ಥಸ್ಯ ತಾಭಿಃ ಸ್ವರ್ಗಂ ನ ವಿಂದತಿ||

ಜೀವನೋಪಯುಕ್ತವಾಗಿ ಆಹಾರವನ್ನು ಸಿದ್ಧಪಡಿಸಿಕೊಳ್ಳುವಾಗ ಹಿಂಸಾ ರೂಪವಾದ ಐದು ದೋಷಗಳು ತಪ್ಪದೇ ಬರುವವು.ಅವನ್ನುಪಂಚ ಸೂನಾ ಎಂಬುದಾಗಿ ಶಾಸ್ತ್ರದಲ್ಲಿ ಕರೆದಿರುವರು.

ಅವು  ಯಾವುವೆಂದರೆ :- 

೧) ಖಂಡನೀ = ಭತ್ತದ ಧಾನ್ಯವನ್ನು ಸಂಗ್ರಹಿಸುವಾಗ ಪೈರನ್ನು ಕುಯ್ಯಿವುದರಿಂದ ಸಸ್ಯ ಹಿಂಸೆ

೨) ಪೇಷಣೀ = ಧಾನ್ಯವನ್ನು ಬಡಿದು , ಕುಟ್ಟಿ ಬೀಸುವಾಗ ಸಂಭವಿಸಬಹುದಾದ ಸಸ್ಯ ಹಿಂಸೆ

೩) ಚುಲ್ಲೀ = ಒಲೆಯೊಳಗೆ ಬೆಂಕಿ ಹಾಕಿ ಉರಿಸುವಾಗ ಸಂಭವಿಸುವ ಸಸ್ಯ ಹಿಂಸೆ

೪) ಉದಕುಂಭೀ = ನೀರನ್ನು ತರುವಾಗ ,ಕಾಯಿಸುವಾಗ ಸಂಭವಿಸುವ  ಹಿಂಸೆ

೫) ಮಾರ್ಜನೀ = ಒಲೆ ಮುಂತಾದುವನ್ನು ಗುಡಿಸಿ ಸಾರಿಸುವಾಗ ಸಂಭವಿಸುವ  ಹಿಂಸೆ.  

ಇವೆ ಪಂಚಸೂನಾ = ಐದು ಪಾಪಗಳು ಇವು ಸದ್ಗತಿಗೆ ಪ್ರತಿಬಂಧಕವು . ಇವು ವೈಶ್ವದೇವ ಮಾಡುವುದರಿಂದ ಪರಿಹಾರವಾಗುತ್ತವೆ. ಆದ ಕಾರಣ ವೈಶ್ವದೇವ ಬಲಿಹರಣಾದಿಗಳನ್ನು ಮಾಡಿ ಈ ಪಾಪಗಳನ್ನು ಪರಿಹರಿಸಿಕೊಂಡು ಉಳಿದ ಅನ್ನವನ್ನು ಭುಂಜಿಸುವುದು ಶ್ರೇಷ್

वैश्वदेवमन्त्राः

(महानारायणोपनिषत्)

अग्नये स्वाहा। विश्वेभ्यो देवेभ्यस्स्वाहा। ध्रुवाय भूमाय स्वाहा॥ ध्रुवक्षितये स्वाहा॥  अच्युतक्षितये स्वाहा॥  

अग्नये स्विष्टकृते स्वाहा॥  धर्माय स्वाहा॥  अधर्माय स्वाहा॥ अद्भ्य-स्स्वाहा।

ओषधिवनस्पतिभ्य-स्स्वाहा॥ रक्षोदेवजनेभ्य-स्स्वाहा। गृहाभ्य-स्स्वाहा। अवसानेभ्य-स्स्वाहा।

अवसानपतिभ्य-स्स्वाहा। सर्व-भूतेभ्य-स्स्वाहा।

कामाय स्वाहा। अन्तरिक्षाय स्वाहा। यदेजति जगति यच्च चेष्टति नाम्नो भागोऽयं नाम्ने स्वाहा॥

पृथिव्यै स्वाहा। अन्तरिक्षाय स्वाहा॥ दिवे स्वाहा। सूर्याय स्वाहा। चन्द्रमसे स्वाहा। नक्षत्रेभ्यस्स्वाहा । इन्द्राय स्वाहा। बृहस्पतये स्वाहा। प्रजापतये स्वाहा।ब्रह्मणे स्वाहा।स्वधा पितृभ्य-स्स्वाहा । 

नमो रुद्राय पशुपतये स्वाहा। देवेभ्य-स्स्वाहा। पितृभ्य-स्स्वधाऽस्तु । भूतेभ्यो नमः। मनुष्येभ्यो हन्ता।  

प्रजापतये स्वाहा । परमेष्ठिने स्वाहा। यथा कूप-श्शतधार-स्सहस्रधारो अक्षितः। एवं मे अस्तु धान्यँ 

सहस्रधारमक्षितम्।धनधान्यै स्वाहा। ये भूताः प्रचरन्ति दिवानक्तं बलि-मिच्छन्तोवितुदस्य प्रेष्याः। 

तेभ्यो बलिं पुष्टिकामो हरामि मयि पुष्टिं पुष्टिपति-र्दधातु स्वाहा । ओं तद्ब्रह्म ।ओं तद्वायुः।ओं तदात्मा। 

ओं तथ्सत्यम्। ओं तथ्सर्वम्। ओं तत्पुरो-र्नमः।अन्तश्चरति भूतेषु गुहायां विश्वमूर्तिषु। त्वं यज्ञस्त्वं

वषट्कार-स्त्वमिन्द्र-स्त्वँ रुद्र-स्त्वं विष्णु-स्त्वं ब्रह्म त्वं प्रजापतिः। त्वं तदाप आपो ज्योती रसोऽमृतं

ब्रह्म भू-र्भुव-स्सवरोम् ॥

ಪ್ರತಿನಿತ್ಯದ ದೇವ ಪೂಜಾ ನಂತರ  ಮಡಿಯಿಂದ ಮಾಡಿದ ಅನ್ನವನ್ನು ಒಂದು ಪತ್ರೋಳಿಯಲ್ಲಿ ತೆಗೆದುಕೊಂಡು ಆ ಅನ್ನದಲ್ಲಿ ಎರಡು ಭಾಗಮಾಡಿ ಎರಡಕ್ಕೂ ಅಭಿಗಾರ ಹಾಕಿ  ಪಿರಮಿಡ ಆಕಾರದ ತಾಮ್ರ ಪಾತ್ರದಲ್ಲಿ ಚನ್ನಾಗಿ ನಿಗಿನಿಗಿಯಾಗಿ ಹೊತ್ತಿಸಿದ ಅಗ್ನಿಯನ್ನು ಹಾಕಿಕೊಂಡು ಭೂ ಪ್ರೋಕ್ಷಣೆ ಮಾಡಿ ಪಾತ್ರವನ್ನು ಮೇಲಿಟ್ಟು ಹರಿಣಿಪತಿ ,ಧರಣಿಪತಿ ಶ್ರೀ ಪರಶುರಾಮ ದೇವರನ್ನು ಆವಾಹಿಸಿ ಮೊದಲ ಭಾಗದಲ್ಲಿರುವ ಅನ್ನದಲ್ಲಿಂದ  ಅಂಗುಷ್ಠ , ತರ್ಜನಿ , ಮಧ್ಯಮ ಬೆರಳುಗಳಲ್ಲಿ ಹಿಡಿಯುವಷ್ಟೇ  ಅನ್ನ  ತೆಗೆದುಕೊಂಡು  ಮೇಲೆ ಹೇಳಿದಂತೆ ಸ್ವಾಹಾ ಅಂದಾಗಲೋಮ್ಮೆ ಅಗ್ನಿಯಲ್ಲಿ ಹಾಕುತ್ತ ಹೋಗುವುದು.

                  ಎರಡನೇ ಭಾಗದಲ್ಲಿಯ ಅನ್ನದಲ್ಲಿಂದ ಬಲಿಹರಣ ಮಾಡಬೇಕು  ಸ್ಥಳವನ್ನು ಪ್ರೋಕ್ಷಿಸಿ  ವರ್ತುಳಾಕಾರವಾಗಿ ಗುರುತಿಸಿ ಚಿತ್ರದಲ್ಲಿ ತೋರಿಸಿದಂತೆ ಮೂರು ಬೆರಳುಗಳಲ್ಲಿ ಹಿಡಿಯುವಷ್ಟೇ ಅನ್ನವನ್ನು ನಿರ್ದಿಷ್ಟ ಸ್ಥಳದಲ್ಲಿ ಇಡುತ್ತ ಹೋಗಬೇಕು. ವೈಶ್ವದೇವ ಬಲಿಹರಣ ಮಧ್ಯದಲ್ಲಿ  ನಿಲಾಂಜನವನ್ನಿಟ್ಟು ತುಪ್ಪದ ಹೂಬತ್ತಿಯಿಂದ ಆರತಿ ಮಾಡಿ ನಮಸ್ಕರಿಸಬೇಕು. ಪತ್ರೋಳಿಯಲ್ಲಿಯ ಉಳಿದ ಅನ್ನವನ್ನು ಭೂತಬಲಿ  ಯೆಂದು ಪಂಚಮಹಾ ಭೂತಗಳಿಗೂ, ನಿಸರ್ಗದ ಪಕ್ಷಿ ಪ್ರಾಣಿಗಳಿಗೂ ಅರ್ಪಿಸುವ ಉದ್ದೇಶದಿಂದ ಮನೆಯ ಹೊರಭಾಗಲ್ಲಿ ಇಡುವ  ಪರಿಪಾಠವಿದೆ .       


No comments:

Post a Comment