Brahmana society. Extinction, Survival
ಬ್ರಾಹ್ಮಣ ಸಮಾಜ-ಅಳಿವು, ಉಳಿವು
ಜಗತ್ತಿನ ಅತಿ ಪುರಾತನ ಜನಾಂಗ ಬ್ರಾಹ್ಮಣ. ಜಗತ್ತಿನ ಯಾವುದೇ ದೇಶದಲ್ಲೂ ಬ್ರಾಹ್ಮಣರು ಇದ್ದಾರೆ. ಬ್ರಾಹ್ಮಣರು ಜಗತ್ತಿನ ನಾಲ್ಕನೇ ಅತಿ ಶ್ರೀಮಂತ ಜನಾಂಗ, ಹಣದಿಂದ ಅಲ್ಲ. ವಿಶ್ವದಲ್ಲೇ ಅತಿ ಪ್ರಭಾವಿ ಜನಾಂಗ ಬ್ರಾಹ್ಮಣ. ಪ್ರಾಮಾಣಿಕ ಜನಾಂಗ, ಅತಿ ಹೆಚ್ಚು ಬುದ್ದಿವಂತರು ತಂತ್ರಜ್ಞಾನ ಜಗತ್ತು ವಿಜ್ಞಾನರಂಗ ಸೇರಿದಂತೆ ಎಲ್ಲ ರಂಗದಲ್ಲೂ ಬ್ರಾಹ್ಮಣ ಸಮೂದಾಯದ ಅಗ್ರಗಣ್ಯರಿದ್ದಾರೆ.
ದುರಂತ ನೋಡಿ ವಿಶ್ವದ ಅತ್ಯಂತ ವಿಶಿಷ್ಟ ಸಮೂದಾಯ ಇಂದು ಅತ್ಯಂತ ವೇಗವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಾ ಹೋಗುತ್ತಿದೆ.
ಉನ್ನತ ಹಂತದಲ್ಲಿರುವ ಪ್ರತಿಶತ ತೊಂಬತ್ತು ಭಾಗದ ಬ್ರಾಹ್ಮಣರು ನಾವು ಬ್ರಾಹ್ಮಣ ಎನ್ನಲೇ ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣ ಪ್ರಸ್ತುತ ಭ್ರಷ್ಟ ಶಾಸನ .! ಯಾವುದೇ ಪಕ್ಷದ ಸರ್ಕಾರ ಈ ದೇಶವನ್ನು ಆಳುತ್ತಿದ್ದರೂ ಕೆಲವು ಬ್ರಾಹ್ಮಣ ಮಠಾದೀಶರು ಪ್ರಧಾನಿಯನ್ನೇ ತಮ್ಮ ಮಠಕ್ಕೆ ಕರೆಸಿ ಮಾತನಾಡುವಷ್ಟು ಪ್ರಭಾವಿಗಳಿದ್ದಾರೆ. ಇಷ್ಟೆಲ್ಲ ಹಿರಿಮೆ ಗರಿಮೆ ಇದ್ದರೂ ಬಹುಶಃ ಬ್ರಾಹ್ಮಣ ಜಾತಿಯ ಮೇಲಾದಷ್ಟು ದಾಳಿ ಬೇರಾವ ಜಾತಿಯ ಮೇಲೂ ಆಗಿಲ್ಲ. ಹಾಗೂ ಆಗತ್ತಲೇ ಇದೆ. ಅನಿಷ್ಟಕ್ಕೆಲ್ಲ ಅಂಗಾರಕನೇ ಕಾರಣ ಎನ್ನುವ ಹಾಗೆ...ಹಿಂದೂ ಧರ್ಮದ ಮೇಲೆ ದಾಳಿ ಮಾಡುವಾಗಲೆಲ್ಲಾ ಮೊದಲ ಗುರಿ ಬ್ರಾಹ್ಮಣ ಜಾತಿಯ ಮೇಲೇ. ಈಗಲಾದರೂ ಏನು ಪ್ರಸ್ತುತ ಶಾಸನ ಮಾಡುತ್ತಿರುವುದಾದರೂ ಅದೇ ಅಲ್ಲವೇ..
ಆಗಾಗ ಅರೆಹುಚ್ಚ ತಲೆಹಿಡುಕರು ಯಾವುದನ್ನು ಚೆನ್ನಾಗಿ ತಿಳಿದುಕೊಳ್ಳದೆ ಸತ್ಯಾಸತ್ಯತೆಯನ್ನು ಯೋಚಿಸಿದೆ ಹಿಂದಿಲ್ಲದೇ ಮುಂದಿಲ್ಲದೇ ಬ್ರಾಹ್ಮಣ ಜಾತಿಯನ್ನು ಗುರಿಯಾಗಿಸಿ ನಿಂದಿಸಿ ಆ ಮೂಲಕ ದಲ್ಲಿ ಹೆಸರನ್ನು ಗಳಿಸಲು ಪ್ರಯತ್ನ ಮಾಡುತ್ತಾರೆ..!! ಬ್ರಾಹ್ಮಣ ಜಾತಿಯನ್ನು ಬೈದು ಜೀರ್ಣ ಮಾಡಿ ಕೊಳ್ಳುವಷ್ಟು ಸಲೀಸಾಗಿ ಬೇರಾವುದೇ ಜಾತಿಯನ್ನು ಬೈದು ಯಾರಿಗಾದರೂ ಸುಧಾರಣೆ ಮಾಡಿ ಕೊಳ್ಳಲು ಸಾದ್ಯವೇ....... ಅಷ್ಟೊಂದು ಸಹಿಷ್ಣುತೆ ಹುಟ್ಟಿನಿಂದಲೇ ಹೊಂದಿರುವ ಬ್ರಾಹ್ಮಣ ಸಮಾಜ.
ಸಮಾಜ ವ್ಯವಸ್ಥೆ ಯಲ್ಲಿ ಯಾವ ಜಾತಿಯನ್ನು ನಿಂದನೆ ಮಾಡಿದರೂ ಅದು ಶಿಕ್ಷಾರ್ಹ ಅಪರಾಧ. ಕಾನೂನು ಕ್ರಮ ತೆಗೆದು ಕೊಳ್ಳಬೇಕು. ಹಾಗೆಯೇ ಆಗಿ ಆತ ಕ್ಷಮೆ ಕೋರುವುದರೊಂದಿಗೆ ಆ ಪ್ರಕರಣ ಮುಕ್ತಾಯವಾಗಿದೆ. ಆದರೆ ಬ್ರಾಹ್ಮಣ ಸಮಾಜದ ಅವಹೇಳನ ಮಾಡಿ ಪ್ರತಿಯೊಬ್ಬರೂ ಭೇಷ್ ಅನ್ನಿಸಿಕೊಳ್ಳುತ್ತಾರೆ. ಕಾರಣ ಬ್ರಾಹ್ಮಣ ಸಮಾಜ ಪ್ರತಿಭಟನೆ ಮಾಡುವುದಿಲ್ಲ
ಆದರೆ ಇವತ್ತು ಬ್ರಾಹ್ಮಣ ಸಮಾಜ ಎಷ್ಟು ಅಪಾಯದಲ್ಲಿದೆ ಎಂಬುದು ಯಾರಾದರೂ ಏಕೆ ಸ್ವತಃ ಬ್ರಾಹ್ಮಣ ಸಮಾಜದವರೆ ಅವಲೋಕನ ಮಾಡಿದ್ದಾರೆಯೇ...? ವಿಶ್ವದ ಅತಿವೇಗವಾಗಿ ನಾಶವಾಗುತ್ತಿರುವ ಜಾತಿ
ಬ್ರಾಹ್ಮಣ....! ಇತಿಹಾಸ ಅವಲೋಕಿಸಿದರೆ ರಾಜ ಪ್ರಭುತ್ವ ಇದ್ದಾಗ ಆಗುತ್ತಿದ್ದ ಪ್ರಾಣಾಘಾತ ದಾಳಿಯ ನಡುವೆ ಬ್ರಾಹ್ಮಣ ಜಾತಿ ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡು ಬಂದು ಈಗ ಈ ಜಾಗತಿಕರಣವಾದ ಕೇವಲ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಬ್ರಾಹ್ಮಣ ಜಾತಿಯ ಅಸ್ತಿತ್ವವೇ ಇಲ್ಲವಾಗುವ ದಿಕ್ಕಿನಲ್ಲಿ ಸಾಗುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಹೀಗೆಯೇ ಈ ನಾಶ ಮುಂದುವರಿದಲ್ಲಿ ಬ್ರಾಹ್ಮಣ ಸಮುದಾಯ ಮುಂದಿನ ಶತಮಾನದಲ್ಲಿ ಬೆರಳೆಣಿಕೆಯಷ್ಟು ಮಂದಿ ಬ್ರಾಹ್ಮಣರು ಮಾತ್ರ ಉಳಿಯುತ್ತಾರೆ. ಮುಂದೆ ನಾವು ಎಚ್ಚತ್ತು ಕೊಳ್ಳದೆ ಹೋದರೆ ಹೇಳ ಹೆಸರಿಲ್ಲದಂತೆ ಅಳಿಸಿಹೊಗಬಹುದು .ಇವತ್ತು ಪಾರ್ಸಿ ಸಮುದಾಯದ ಸ್ಥಿತಿ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಬ್ರಾಹ್ಮಣ ಸಮೂದಾಯ ಎಚ್ಚೆತ್ತುಕೊಳ್ಳದಿದ್ದಲ್ಲಿ ಬರುತ್ತದೆ.
ಈ ಜಾಗತಿಕರಣದ ನಂತರ ಅತಿ ದೊಡ್ಡ ಪೆಟ್ಟು ಬಿದ್ದದ್ದು ಕುಟುಂಬ ವ್ಯವಸ್ಥೆಯಮೇಲೆ.ಅಜ್ಜ ಮಗ ಮೊಮ್ಮಗ ಹೀಗೆ ಮೂರು ತಲೆಮಾರಿನವರು ಒಂದೇ ಮನೆಯಲ್ಲಿದ್ದು ಬ್ರಾಹ್ಮಣ ಜಾತಿಯ ಸಂಸ್ಕೃತಿ ಆಚಾರ ವಿಚಾರಗಳು ಅಜ್ಜನಿಂದ ಮೊಮ್ಮಗನಿಗೆ ಸಲೀಸಾಗಿ ಹರಿದು ಬಂದು ಉಳಿದು ಬೆಳೆಯುತ್ತಿತ್ತು. ಇದು ಸಾವಿರಾರು ವರ್ಷಗಳಿಂದ ಬ್ರಾಹ್ಮಣ ಸಮಾಜ ಉಳಿದುಬಂದ ಕ್ರಮ. ಮನೆಯಲ್ಲಿರುವ ಗಂಡು ಮಕ್ಕಳು ಸಂಸ್ಕೃತ ಸಂಸ್ಕೃತಿ ಕಲಿತರೆ ಹೆಣ್ಣು ಮಕ್ಕಳು ಮಡಿ ಮೈಲಿಗೆ ಅಡಿಗೆ ಆಚಾರ ವಿಚಾರ ಹಾಡು ಹಸೆ ಕಲಿತು ಸಮಾಜ ಸಂಸ್ಕೃತಿಯ ಉಳಿವಿಗೆ ಕಾರಣವಾಗಿದ್ದರು. ಬ್ರಾಹ್ಮಣ ಸಮಾಜ ತಮ್ಮಷ್ಟಕ್ಕೆ ಇರುವುದನ್ನು ಮೊದಲು ಕಲಿಯಬೇಕಾಗಿದೆ ಸಾಮಾಜಿಕ ಕಳಕಳಿ,ಸಮಾಜ ಅಭಿವೃದ್ಧಿ ಎಲ್ಲವೂ ಬಿಟ್ಟರೆ ಉತ್ತಮ. ಬ್ರಾಹ್ಮಣರು ಇತರ ಸಮಾಜಕ್ಕೂ , ಸರ್ಕಾರಕ್ಕೂ ಬೇಕಾಗಿಲ್ಲವೆಂದಾಗ ಬ್ರಾಹ್ಮಣರು ಅದಕ್ಕೆ ತಲೆ ಕೆಡಿಸಿಕೊಳ್ಳದೆ ಇರಬೇಕು ಬ್ರಾಹ್ಮಣ ಸಮಾಜ ಸರ್ವ ನಾಶದ ದಿಕ್ಕಿಗೆ ಬಂದು ನಿಂತಿದೆ.
ಬ್ರಾಹ್ಮಣ ಸಮಾಜದ ಕುಟುಂಬ ವರ್ಗಕ್ಕೆ ತಮ್ಮ ಮಕ್ಕಳಿಗೆ ಬ್ರಹ್ಮೋಪದೇಶ ಮಾಡುವುದು ನೂತನ ವಟುವಿಗೆ ಗಾಯತ್ರಿ ಮಂತ್ರೋಪದೇಶದ ಮಹತ್ವ , ಗಾಯತ್ರಿ ಜಪದಿಂದ ಸಿಗುವ ಸತ್ ಪ್ರಯೋಜನಗಳ ಬಗ್ಗೆ , ಬ್ರಾಹ್ಮಣ ಸಂಸ್ಕಾರದ ಬಗ್ಗೆ ತಿಳುವಳಿಕೆ ಹೇಳುವ ವ್ಯವಸ್ಥೆ ತಕ್ಕಮಟ್ಟಿಗೆ ಇದ್ದರೂ ಮುಂದಿನ ಪೀಳಿಗೆಗೆ ಈ ಬಗ್ಗೆ ಅರಿವಿಲ್ಲದೇ ದಿಶೆಗೆಟ್ಟಿದೆ..!!
ಯಾಕೆಂದರೆ ಈಗ ನಮ್ಮಲ್ಲಿ ಕುಟುಂಬ ವಿಭಜನೆಯಾಗುವುದು, ಮಕ್ಕಳನ್ನು ಹೊರಗಡೆ ಬಿಟ್ಟು ಓದಿಸುವುದು ಮುಂತಾದ ಕಾರಣದಿಂದ ಈಗ ಕೂಡು ಕುಟುಂಬಗಳು ಇಲ್ಲ. ಇವತ್ತು ಬ್ರಾಹ್ಮಣ ಕುಟುಂಬಗಳು ಬಂಧು ಮಿತ್ರರು ಒಂದಾಗೋದು ಮದುವೆ ಮುಂಜಿ ವಾಸ್ತು ಶಾಂತಿ ಮತ್ತಿತರ ನಿತ್ಯ ನೈಮಿತ್ತಿಕ ಕಾರಣಗಳಿಂದ ಮನೆಗಳಲ್ಲಿ /ಮನೆಗಳಿಗಾಗಿ ಮಾತ್ರ ಎಂಬುದು ವಿಷಾದನೀಯ ಸತ್ಯ ಸಂಗತಿ. ಕುಟುಂಬ ಒಡೆದ ಮೇಲೆ ಒಗ್ಗಟ್ಟು ಒಡೆದು ಹೋಗಿ ಸಮುದಾಯ ಪ್ರಜ್ಞೆ ಅಳಿದು ಹೋಗಿ ಸ್ವಾರ್ಥಿಗಳಾಗಿ ಹೋಗುತ್ತಿದೆ ಸಮಾಜ. ಕೇವಲ ಮೂವತ್ತು ವರ್ಷಗಳ ಹಿಂದೆ ಕೈಲಿ ಮೂರು ಕಾಸಿಲ್ಲದೇ ಕೇವಲ ಊರು ಮನೆಯವರ ಸಹಕಾರದಿಂದಲೇ ಮಕ್ಕಳ ಮದುವೆ ಮಾಡುತ್ತಿದ್ದರು. ಇವತ್ತು ಎಲ್ಲವೂ ಹಣ ಕೇಂದ್ರಿತ. ದುಡ್ಡಿದ್ದರೆ ಮಾತ್ರ ಸಾಧ್ಯ ಎಂಬಲ್ಲಿಗೆ ಬಂದಿದೆ.
ಕುಟುಂಬ ಒಡೆದು ಚಿಕ್ಕ ಚಿಕ್ಕ ಕುಟುಂಬವಾಗಿವೆ. ಆದಕಾರಣ ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಭವಿಷ್ಯಕ್ಕಾಗಿ ಆರ್ಥಿಕ ಭದ್ರತೆಗಾಗಿ ಹೊರಗಿನ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ವಿಧ್ಯಾಭ್ಯಾಸ ಕ್ಕಾಗಿ ಬಿಡುವುದು ಅನಿವಾರ್ಯವಾಗಿದೆ. ಅಪ್ಪ ಅಮ್ಮನ ಜೊತೆಗಿಲ್ಲದ ಮಕ್ಕಳು ಬ್ರಾಹ್ಮಣ ಸಮಾಜದ ಯಾವ ಆಚಾರ ವಿಚಾರವೂ ಕಲಿಯಲು ಅವಕಾಶ ಇಲ್ಲದಾಗಿ ಹೊರಗಿನವರ ಬ್ರಾಹ್ಮಣ ಜಾತಿಯ ವಿಶ್ಲೇಷಣೆಯನ್ನೇ ನಂಬಿ ತಾವು ಬ್ರಾಹ್ಮಣ ಎಂಬುವುದನ್ನೆ ಮರೆತು ಹಿಂದೆ ಮುಂದೆ ನೋಡು ವಂತಾಗಿದ್ದಾರೆ.!! ಇದು ಇಂದಿನ ಆಧುನಿಕ ಭಾರತದ ಬ್ರಾಹ್ಮಣ ಸಮಾಜಕ್ಕೆ ಬಿದ್ದು ಮೊದಲ ಕೊಡಲಿ ಪೆಟ್ಟು.
ಈ ಜಾಗತಿಕರಣದ ನಂತರ ಹಳ್ಳಿ ಹಳ್ಳಿಗಳಲ್ಲಿ ವಯೋವೃದ್ದ ಬ್ರಾಹ್ಮಣರು ಮಕ್ಕಳಿಂದ ದೂರಾಗಿ ಕಾಲದೂಡುತ್ತಿದ್ದಾರೆ.ಅವರು ಆ ಹಳ್ಳಿಗಳಲ್ಲಿ ಸತ್ತು ಹೋದರೂ ಕೇಳುವವರಿಲ್ಲದಂತಾಗಿರುವ ಪರಿಸ್ಥಿತಿ ಬಹುತೇಕ ಕಡೆಗಳಲ್ಲಿ ಇದೆ.ಮಕ್ಕಳು ದೇಶ ವಿದೇಶಗಳಲ್ಲಿ ನೆಲಸಿದ್ದಾರೆ ...!! ಅವರಿಲ್ಲಿ ಬಂದು ಈ ಹಿರಿಯರ ಜೊತೆಗೆ ಬಂದು ನೆಲಸರು. ಈ ವೃದ್ದರು ಅಲ್ಲಿಹೋಗಿ ಮಕ್ಕಳ ಜೊತೆಗೆ ಹೋಗಿ ಇರಲು ಆಗುವುದಿಲ್ಲ...!ಇವರ ಬಳಿ ಆಸ್ತಿ ಹಣ ಎಲ್ಲಾ ಇದೆ... "ಆಸರೆ" ಹೊರತಾಗಿ....ಇವರುಗಳ ಕಥೆ ಏನು....?
ಇದೇ ಜಾಗತಿಕರಣದ ನಡುವೆ ಕೆಲವು ಮಕ್ಕಳು ಓದಿಯೂ ಅಥವಾ ಓದದೇ ಅಪ್ಪ ಅಮ್ಮರಿಗೆ ಆಸರೆಯಾಗಿ ಹಳ್ಳಿ ಮನೆಯಲ್ಲಿ ಉಳಿಯುತ್ತಿದ್ದರು. ಈಗಿನ ಟ್ರೆಂಡ್ ನಲ್ಲಿ ಅತ್ತೆ ಮಾವ ಅಂದರೆ ರಾಹು ಕೇತು, ಹಳ್ಳಿ ಮನೆ ತೋಟ ಗದ್ದೆ ಬೇಡ, ಅಡಿಗೆ ವೃತ್ತಿ ಬೇಡ, ಚಿಕ್ಕ ಉತ್ಪತ್ತಿಯ ನೌಕರಿಯವ ಬೇಡ, ಪೌರೋಹಿತ್ಯ ಮಾಡುವವ ಬೇಡ... ಹೀಗೆಲ್ಲ ಕಾರಣದಿಂದ ತಿರಸ್ಕೃತನಾಗಿ ತಮ್ಮದಲ್ಲದ ತಪ್ಪಿಗೆ ಸ್ವಜಾತಿಯ ಹೆಣ್ಣು ಸಿಗದೆ ಸ್ವ ಜಾತಿಯ ಸಂಸ್ಕೃತಿ ಆಚಾರ ವಿಚಾರಗಳಿಗೆ ಪೆಟ್ಟು ಬೀಳುತ್ತದೆ , ಸಾಮಾಜಿಕ ಕಾರಣ ಇತರೆ ಕಾರಣಕ್ಕಾಗಿ ತಮ್ಮ ಪ್ರಕೃತಿ ಸಹಜ ಕಾಮನೆಗಳನ್ನ ಅದುಮಿಟ್ಟು ಈ ಪವಿತ್ರ ಶ್ರೇಷ್ಠ ಬ್ರಾಹ್ಮಣ ಸಮಾಜಕ್ಕೆ ತಮ್ಮ ಅಮೂಲ್ಯ ಜೀವನವನ್ನೇ ತ್ಯಾಗ ಮಾಡಿದ ಬ್ರಾಹ್ಮಣ ಅವಿವಾಹಿತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರನ್ನು ಇದುವರೆಗೂ ಯಾವುದಾದರೂ ಬ್ರಾಹ್ಮಣ ಸಂಘಗಳು , ಮಠಗಳು ಗಣನೆಗೆ ತೆಗೆದುಕೊಂಡಿವೆಯೇ...? ಅವರ ತ್ಯಾಗಕ್ಕೆ ಬ್ರಾಹ್ಮಣ ಸಂಘ ಮಠಗಳು ಏನು ಬೆಲೆ ಕೊಡುತ್ತವೆ . ? ಹೀಗೆ ವಿಶ್ಲೇಷಣೆ ಮಾಡಿದರೆ ಈ ಅವಿವಾಹಿತರು ಬ್ರಾಹ್ಮಣ ಮಠ ಮತ್ತು ಬ್ರಾಹ್ಮಣ ಸಂಘಗಳಿಗಿಂತ ದೊಡ್ಡ ಮಟ್ಟದ ಕೊಡುಗೆಯನ್ನು ತಮ್ಮ ತ್ಯಾಗದ ಮೂಲಕ ಬ್ರಾಹ್ಮಣ ಸಮಾಜಕ್ಕೆ ನೀಡುತ್ತಲಿದ್ದಾರೆ.
ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಪೌರೋಹಿತ್ಯ ಹಾಗೂ ಅಡುಗೆ ಕೆಲಸ ಮಾಡುವವರು, ಆ ವೃತ್ತಿಯಲ್ಲಿನ ವಿಶೇಷತೆ ಹಾಗೂ ಪುರೋಹಿತರು ಮತ್ತು ಅಡುಗೆ ಕೆಲಸದವರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ ಇರುವ ಅನುಕೂಲತೆಗಳನ್ನು ವಿವರಿಸುವ ಪ್ರಯತ್ನಪಡುತ್ತೇನೆ .
ಪೌರೋಹಿತ್ಯ ಅನ್ನೋದು ಬ್ರಾಹ್ಮಣ ಆದವನಿಗೆ ಮೊದಲ ಆಯ್ಕೆಯ ವೃತ್ತಿ. ನೀವು ಯಾರನ್ನೂ ಸಂಭಾವನೆ ಇಷ್ಟೇ ನೀಡಿ ಎಂದು ಕೇಳುವ ಅಗತ್ಯ ಅವನಿಗೆ ಇಲ್ಲ. ಹಾಗೂ ಬ್ರಾಹ್ಮಣ ಜನಾಂಗ ಯಾರ ಮನೆಗೂ ಹೋಗಿ ನಾನು ಬಹಳ ಸಂಕಟದಲ್ಲಿ ಇದ್ದೇನೆ ನನಗೆ ಹಣ ಕೊಡಿ ಇಲ್ಲವೇ ಕೆಲಸ ಕೊಡಿ ಎಂದು ಕೇಳಿದ್ದೆ ಇಲ್ಲ, ಆದರೆ ಇಂದಿನ ದಿನಮಾನಕ್ಕೆ ತಕ್ಕ ಹಾಗೆ ದಕ್ಷಿಣೆ ಸಿಗುತ್ತದೆ.ಇದರ ಜತೆಗೆ ದಿನಸಿ, ವಸ್ತ್ರ ಮತ್ತಿತರ ವಸ್ತುಗಳು ದಾನದ ರೂಪದಲ್ಲಿ ಸಿಗುತ್ತವೆ. ಹಾಗಂತ ಯಾರನ್ನೋ ಬಲವಂತವಾಗಿ ಕೇಳಬೇಕಾದ ಅನಿವಾರ್ಯ ಇಲ್ಲಿಲ್ಲ. ಶ್ರದ್ಧೆ- ಭಕ್ತಿಯಿಂದ ಪೂಜೆ ಮಾಡಿ, ಕರ್ತೃವಿಗೆ ಶುಭವಾಗಲಿ ಎಂದು ಮನಸಾರೆ ಸಂಕಲ್ಪ ಮಾಡಿದರೆ ಸಾಕು. ಈಗಿನ ಸಮಾಜ ಬ್ರಾಹ್ಮಣರನ್ನು ಹೀನಾಯವಾಗಿ ನೋಡುತ್ತಿದ್ದರೂ ಕರೆದಾಗ ಮಾತ್ರ ಯಜಮಾನ ಎನ್ನಿಸಿಕೊಂಡವರ ಮನೆಗೆ ಹೋಗಿ ಅವರ ಅಗತ್ಯತೆ ಪೂರೈಸಿ ಶುಭ ಹಾರೈಸುತ್ತಾನೆ ಹೊರತು ದ್ವೇಷ ಸಾಧಿಸಲಾರ.
ಜ್ಞಾನ, ವಿದ್ವತ್, ಅನುಷ್ಠಾನ ಇರಿಸಿಕೊಂಡ ಪುರೋಹಿತರಿಗೆ ಒಂದು ಧಾರ್ಮಿಕ ಕಾರ್ಯ ಕ್ರಮಕ್ಕೆ ಸಾಕಷ್ಟು ಹಣ ದಕ್ಷಿಣೆ ರೂಪದಲ್ಲಿ ಸಿಗುತ್ತದೆ. ಅದರ ಹೊರತಾಗಿ ಗೌರವ ಕೂಡ ಇದೆ. ಹಾಗೂ ಎಲ್ಲರೂ ಉದ್ಯೋಗ ಮಾಡುವುದು ಪುಡಿ ಕಾಸಿಗಾಗಿಯೇ, ಆದರೇ ಬೇಡಿಕೊಂಡು ಅಂಗಲಾಚಿ ಯಾವ ಬ್ರಾಹ್ಮಣರು ಬೇಡುವುದಿಲ್ಲ ಯಾವ ಯಜಮಾನರು ಕೊಡುವುದಿಲ್ಲ.
ಒಂದು ಕಂಪೆನಿಯಲ್ಲೋ ಸಂಸ್ಥೆಯಲ್ಲೋ ಕೆಲಸ ಮಾಡುವವರಂತೆ ಎಲ್ಲಾದರೂ ಹೋಗಬೇಕು ಅಂದರೆ ರಜೆ ಕೇಳಬೇಕು, ಅದಕ್ಕಾಗಿ ತಿಂಗಳುಗಟ್ಟಲೆ ಮುಂಚೆ ಅನುಮತಿ ಪಡೆಯಬೇಕು ಅಂತಿಲ್ಲ.ನಮ್ಮ ಆದಾಯಕ್ಕೆ ನಾವು ಕೂಡ ತೆರಿಗೆ ಕೊಡ್ತೀವಿ, ಬ್ಯಾಂಕ್ ನಲ್ಲಿ ಸಾಲ ಸಿಗುತ್ತದೆ. ನಿವೃತ್ತಿ ಅನ್ನೋದಂತೂ ದೂರದ ಮಾತಾಯಿತು.
ಹಿಂದೂ ಧರ್ಮ ಏಳ್ಗೆ ಈಗಿನ ಇಂಥ ದಿನಗಳಲ್ಲೂ ತುಂಬ ಸೊಗಸಾಗಿ ಆಗುತ್ತಿದೆ. ಕದಿರೇನಹಳ್ಳಿಯಿಂದ ಅಮೆರಿಕದಲ್ಲಿನ ನ್ಯೂಜೆರ್ಸಿಯಲ್ಲಿರುವ ದೇವಸ್ಥಾನಗಳವರೆಗೆ ಪುರೋಹಿತರ ಅಗತ್ಯ ಇದೆ.ಕಾಸ್ಟ್ ಕಟಿಂಗ್ ಅಂತ ಆದರೂ ಪುರೋಹಿತರನ್ನೇ ಕೆಲಸದಿಂದ ತೆಗೆದುಬಿಡಿ ಅನ್ನೋ ಮಾತು ಬರುವುದೇ ಇಲ್ಲ.
ಪೂಜೆಗೆ ತೆರಳಿದಾಗ ದಂಪತಿ ಸಮೇತ ಬರುವುದಕ್ಕೆ ಹೇಳ್ತಾರೆ. ನಮ್ಮ ಪಾಲಿನ ಗೌರವದಲ್ಲಿ ಹೆಂಡತಿಗೂ ಪಾಲಿದೆ.ನಮ್ಮ ಧಾರ್ಮಿಕ ಪ್ರವೃತ್ತಿಗೆ ದುಶ್ಚಟಗಳಂತೂ ದೂರದ ಮಾತಾಯಿತು. ನಾವು ಮಾಡಬಹುದಾದಷ್ಟು ದಾನ ಹಾಗೂ ಉಳಿತಾಯ ಇನ್ಯಾರಿಂದಲೂ ಸಾಧ್ಯವಿಲ್ಲ. ನೈಟ್ ಶಿಫ್ಟ್ ಮಾಡಬೇಕು, ವರ್ಷಕ್ಕೊಮ್ಮೆ ಸಿಗುವ ಇನ್ ಕ್ರಿಮೆಂಟ್, ಪ್ರಮೋಷನ್ ಗೆ ಕಾಯಬೇಕು ಅಂತೇನಿಲ್ಲ.
ಅಡುಗೆ ಕಾಂಟ್ರ್ಯಾಕ್ಟ್ ತೆಗೆದುಕೊಳ್ತಾರಲ್ಲ ಅವರನ್ನು ಒಮ್ಮೆ ಮಾತನಾಡಿಸಿ ನೋಡಿ, ಒಂದು ಕೆಲಸ ಒಪ್ಪಿದರೆ ಅವರಿಗೆ ಎಷ್ಟು ಹಣ ಉಳಿಯುತ್ತೆ ಅಂತ ಕೇಳಿ ನೋಡಿ. ಅಡುಗೆ ಕೆಲಸ ಮಾತ್ರ ಪ್ರಾಮಾಣಿಕತೆಯಿಂದ ಅಚ್ಚುಕಟ್ಟಾಗಿ ರುಚಿಕಟ್ಟಾಗಿ ಜೊತೆಗೆ ಬಡಿಸುವ ಕೆಲಸವೂ ಮಾಡಿದರೆ ಅವರ ಕೈ ಹಿಡಿಯುವವರಾರಿಲ್ಲ . ನಾವು ಮನೆಯಲ್ಲಿದ್ದಾಗ ಹೆಂಡತಿ ಅಡುಗೆ ಮಾಡಬೇಕು ಅಂತ ಯಾವ ಕಡ್ಡಾಯವೂ ಇಲ್ಲ. ನಾವೇ ಅಡುಗೆ ಮಾಡಿ, ಅವಳಿಗೂ ಬಡಿಸ್ತೀವಿ. ಎಲ್ಲಿವರೆಗೆ ಊಟ ಮಾಡುವ ಮಂದಿ ಇರುತ್ತಾರೋ ಅಲ್ಲಿವರೆಗೆ ಮುಂದೇನು ಅನ್ನೋ ಹೆದರಿಕೆ ಇಲ್ಲದೆ ಕಳೆಯುತ್ತದೆ, ತರಕಾರಿ ಹೆಚ್ಚಿ, ನೀರು ಬಡಿಸಿ ಬರ್ತೀನಿ ಅಂದರೂ ಒಂದು ವರ್ಷದಲ್ಲಿ ಎರಡು-ಎರಡೂವರೆ ಲಕ್ಷ ಸಂಪಾದನೆಗೆ ಮೋಸವಿಲ್ಲ. ಜತೆಗೆ ಊಟ-ತಿಂಡಿಯೂ ಕೇಳದೇ ಸಿಗುತ್ತದೆ ನಾವಾಗಿಯೇ ವಾಲಂಟರಿ ರಿಟೈರ್ ಮೆಂಟ್ ಅಂತ ತಗೊಂಡರೂ ಯಾರ ಮನೆಗಾದರೂ ಹೋಗಿ ಅಡುಗೆ ಮಾಡಿಟ್ಟು ಬಂದರೂ ಒಂದೆರಡು ಗಂಟೆ ಕೆಲಸಕ್ಕೆ ಸಾವಿರಾರು ರುಪಾಯಿ ಸಂಬಳ ಸಿಗುತ್ತದೆ.
ನಮ್ಮ ಕೆಲಸದಲ್ಲಿ ರಿಟೈರ್ ಮೆಂಟೂ ಇಲ್ಲ, ಕೆಲಸದಿಂದ ತೆಗೆದು ಹಾಕ್ತಾರೇನೋ ಅನ್ನೋ ಭಯವೂ ಇಲ್ಲ
ಜಾಬ್ ಸೆಕ್ಯೂರಿಟಿ ಬೇಕು ಅಂತ ಇಲ್ಲ, ಮುಂದೇನು ಎಂಬ ಚಿಂತೆ ಇಲ್ಲ, ಕುಟ್ಟೋ-ರುಬ್ಬುವಂಥ ದೈಹಿಕ ಶ್ರಮದ ಕೆಲಸ ಮಾಡುವುದರಿಂದ ಆರೋಗ್ಯದ ಸಮಸ್ಯೆಯೂ ಇಲ್ಲ
ಇಷ್ಟೆಲ್ಲ ಪ್ಲಸ್ ಪಾಯಿಂಟ್ ಯಾರಿಗಿದೆ ಹೇಳಿ.........ಪ್ರತಿ ಊರಿನ ಮನೆ ಮನೆಗಳಲ್ಲಿ ಮೂವತ್ತೈದು ದಾಟಿದ ಬ್ರಾಹ್ಮಣ ಸಮಾಜದ " ವೈವಾಹಿಕ ತಿರಸ್ಕೃತ" ಅವಿವಾಹಿತರು ಇದ್ದಾರೆ...ಬ್ರಾಹ್ಮಣರ ವೈಶಿಷ್ಟ್ಯ ಪೂರ್ಣ ಆಚರಣೆಗಳು ಶ್ರದ್ದೆಗಳು ಇದ್ದು ಅವು ಉಳಿದಿದ್ದೇ ಹಳ್ಳಿಗಳಲ್ಲಿ... ಅಂತಹ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ರೈತಾಪಿ ಬ್ರಾಹ್ಮಣ ಯುವಕರಿಗೆ ಮದುವೆ ಆಗದಿದ್ದಲ್ಲಿ ಅತ್ಯವಶ್ಯಕ ಪೂರ್ವ ಬ್ರಾಹ್ಮಣ ಸಂಸ್ಕೃತಿ ಆಚರಣೆಗಳು ಭವಿಷ್ಯದಲ್ಲಿ ಬಹುತೇಕ ನಾಶವೇ ಆಗಿಬಿಡುವ ಸಂಭವ ಇದೆ. ಇಂತಹ ಕಾರಣಗಳಿಂದ ಹಳ್ಳಿ ಮನೆಗಳ ಅವಿವಾಹಿತರ ವಿವಾಹ ಆಗಲೇ ಬೇಕಿದೆ...! ಇವರ ವಿವಾಹ ಸಮಸ್ಯೆ ಗೆ ಪರಿಹಾರವೇ ಇಲ್ಲವೇ...? ಇವರ ನಾಳೆಗಳ ಗತಿ ಏನು...? ಈ ವಿವಾಹ ಸಮಸ್ಯೆ ಬಗ್ಗೆ ಬ್ರಾಹ್ಮಣ ಮಠ ಮತ್ತು ಸಂಘಗಳಲ್ಲಿ ಎಷ್ಟು ಚೆರ್ಚೆ ಗಳಾಗಿವೆ.. ..?
ಈ ಎರಡು ದಶಕದ ಈಚೆಗೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಕ್ಕ ಮುಕ್ತ ಅವಕಾಶ ಬ್ರಾಹ್ಮಣ ಹೆಣ್ಣು ಮಕ್ಕಳು ಉನ್ನತ ವಿಧ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಏರಿದ್ದಾರೆ. ಇದು ನಿಜಕ್ಕೂ ಅತ್ಯಂತ ಹೆಮ್ಮೆ ಪಡುವ ವಿಷಯ. ಇವತ್ತು ಭಾರತದ ಎಲ್ಲ ಧರ್ಮ ಜಾತಿಯಲ್ಲಿನ ಹೆಣ್ಣು ಮಕ್ಕಳು ಗಂಡುಮಕ್ಕಳಿಗಿಂತ ವಿಧ್ಯಾಭ್ಯಾಸದಲ್ಲಿ ಮುಂದಿದ್ದಾರೆ. ಹೆಚ್ಚು ವಿದ್ಯಾಭ್ಯಾಸ ಮಾಡಿ ದೊಡ್ಡ ಸ್ಥಾನದಲ್ಲಿ ಹೆಚ್ಚಿನ ಸಂಬಳದಲ್ಲಿ ಕೆಲಸ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಸಹಜವಾಗಿ ತಮಗಿಂತ ಕಡಿಮೆ ಸಂಬಳ ಪಡೆವ ಯುವಕರನ್ನು ಮದುವೆ ಆಗಲು ಕಷ್ಟ. ಆದರೆ ಈ ಸಮಸ್ಯೆಗೆ ಹೊಂದಾಣಿಕೆ ಮನಸ್ಥಿತಿ ಇದಕ್ಕೆ ಪರಿಹಾರ . ಉಳಿದ ಸಮುದಾಯದಲ್ಲಿ ವ್ಯಕ್ತಿ ವ್ಯಕ್ತಿತ್ವ ಉತ್ತಮ ಕುಟುಂಬದ ಹಿನ್ನಲೆಯನ್ನೇ ಪರಿಗಣನೆ ಮಾಡಿ ಈ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಆದರೆ ಬ್ರಾಹ್ಮಣ ಹೆಣ್ಣು ಮಕ್ಕಳಲ್ಲಿ ಹೆಚ್ಚಿನವರು ಅಂತರ್ಜಾತಿಯ ವಿವಾಹವದ ಪರಿಹಾರ ಕಂಡುಕೊಂಡಿದ್ದು ಗಮನಾರ್ಹ ವಿಷಾದನೀಯ ಸಂಗತಿ.
ಆದರೆ ಇದಕ್ಕಿಂತ ವಿಷಾದನೀಯ ಸಂಗತಿ ಏನೆಂದರೆ ಬ್ರಾಹ್ಮಣೇತರರು ಉದ್ದೇಶ ಪೂರ್ವಕವಾಗಿ ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಬಲೆಯಲ್ಲಿ ಕೆಡವಿ ದೊಡ್ಡ ಪ್ರಮಾಣದಲ್ಲಿ ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಮದುವೆ ಆಗುತ್ತಿದ್ದಾರೆ. ಇದರಲ್ಲಿ ಲವ್ ಜಿಹಾದು ಸೇರಿದೆ. ಬ್ರಾಹ್ಮಣ ಹೆಣ್ಣುಮಕ್ಕಳು ಇದನ್ನು ತಿಳಿದುಕೊಂಡು ಎಚ್ಚತ್ತು ಕೊಳ್ಳದಿದ್ದಲ್ಲಿ ತಮ್ಮದೇ ಮತ್ತು ತಮ್ಮ ಕುಟುಂಬದ ಸರ್ವ ನಾಶ ಖಂಡಿತ. ಬ್ರಾಹ್ಮಣ ಜಾತಿಯ ವಿಶಿಷ್ಟತೆಯ ಪರಂಪರೆಯನ್ನು ಮುರಿಯುವ ಪ್ರಯತ್ನವಿದು. ಇದರಲ್ಲಿ ಬಹಳ ಸೂಕ್ಷ್ಮವಾದ ಕಾರಣಗಳಿವೆ...! ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಶದ ಬೇರಾವ ಜಾತಿಯ ಹೆಣ್ಣು ಮಕ್ಕಳೂ ಅಂತರ್ಜಾತಿ ವಿವಾಹ ವನ್ನು ಆಗುತ್ತಿಲ್ಲ...!! ಇದರ ಉದಾಹರಣೆಗಳು ಸಾಕಷ್ಟಿವೆ. ನೆನಪಿಡಿ ಇಂದು ಬ್ರಾಹ್ಮಣ ಸಮಾಜದ ಪ್ರತಿ ಹೆಣ್ಣು ಹುಡುಗಿಯನ್ನು ಹೊರಗಿನ ಸಮಾಜ ಈ ಪ್ರೀತಿ ಪ್ರೇಮದಿಂದ ಆಕರ್ಷಿಸಿ ಮದುವೆ ಆಗಲು ಪ್ರಯತ್ನ ಮಾಡುತ್ತದೆ. ಈ ಪ್ರಯತ್ನ ದಲ್ಲಿ ವಿಚಲಿತರಾದ ಹೆಣ್ಣು ಮಕ್ಕಳು ಬಲಿಯಾಗುತ್ತಾರೆ. ಇದು ಬ್ರಾಹ್ಮಣ ಸಮಾಜದ ಪ್ರತಿ ಹೆಣ್ಣು ಮಕ್ಕಳೂ,ಪೋಷಕರೂ ಅರ್ಥ ಮಾಡಿಕೊಂಡು ಎಚ್ಚೆತ್ತುಕೊಳ್ಳಬೇಕಾದ ವಿಷಯ. ಬ್ರಾಹ್ಮಣ ಹೆಣ್ಣು ಮಕ್ಕಳ ಅಂತರ್ಜಾತಿ ವಿವಾಹ ಖಂಡಿತವಾಗಿಯೂ ಅನಿವಾರ್ಯವಲ್ಲ. ಒಂದು ವಿಪರ್ಯಾಸಕರ ಸಂಗತಿ ಏನೆಂದರೆ ಬ್ರಾಹ್ಮಣ ಅವಿವಾಹಿತರಿಗೆ ಮದುವೆಗೆ ವಧುವಿನ ಅಲಭ್ಯತೆ ಇದ್ದರೂ ಕೂಡ ಅಂತರ್ಜಾತಿ ವಿವಾಹಕ್ಕೆ ಸಿದ್ದರಿಲ್ಲ. ..!! ಅದೇ ಹೆಣ್ಣು ಮಕ್ಕಳು ಅವರಿಗೆ ಸೂಕ್ತ ವರರು ಸ್ವಜಾತಿಯಲ್ಲೇ ಲಭ್ಯವಿದ್ದರೂ ಅನ್ಯ ಜಾತಿಯ ಹುಡುಗರನ್ನು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇದು ಅವರವರ ಅವಿವೇಕದ ಪರ್ಯಾಪ್ತ ಸ್ತಿಥಿ ಇದನ್ನು ಬ್ರಾಹ್ಮಣ ಸಮಾಜದ ಪ್ರಮುಖರು ಅರ್ಥ ಮಾಡಿಕೊಳ್ಳ ಬೇಕು. ಈ ಅಂತರ್ಜಾತಿ ವಿವಾಹಕ್ಕೆ ಮದ್ದು ತಿಳಿದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬ್ರಾಹ್ಮಣ ಸಮಾಜಕ್ಕೆ ಬಹಳ ದೊಡ್ಡ ಏಟು ಬೀಳಲಿದೆ. ಬ್ರಾಹ್ಮಣ ಮಠ ಮತ್ತು ಸಂಘಗಳು ಬ್ರಾಹ್ಮಣ ಕುಟುಂಬದ ಹೆಣ್ಣು ಮಕ್ಕಳ ಪೋಷಕರನ್ನು ಈ ಸಂಬಂಧ ಎಚ್ಚರಿಸಿ ಅವರೊಂದಿಗೆ ಗಟ್ಟಿಯಾಗಿ ನಿಲ್ಲುವ ಕೆಲಸ ಮಾಡಬೇಕು.ಬ್ರಾಹ್ಮಣರಲ್ಲಿ ಎಲ್ಲರೂ ಶ್ರೀಮಂತ ಸ್ಥಿತಿವಂತರಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬಡ ಮದ್ಯಮ ವರ್ಗದ ವರು ಇದ್ದಾರೆ. ಬ್ರಾಹ್ಮಣ ವರ್ಗದ ಶ್ರೀಮಂತರು ಈ ವರ್ಗವನ್ನು ಹಿಡಿದೆತ್ತಿ ಅವರನ್ನು ತಲೆ ಎತ್ತಿ ನಡೆವಂತೆ ಮಾಡ ಬೇಕಿದೆ .ದೇಶದ ಉಳಿದೆಲ್ಲ ಜಾತಿಯ ಶ್ರೀಮಂತರಲ್ಲಿ ತಮ್ಮ ಜಾತಿಯ ಉಳಿದ ಬಡವರ ಬಗ್ಗೆ ಕಾಳಜಿ ಜಾಗೃತಿ ಮೂಡತೊಡಗಿದೆ. ಹಾಗೆಯೇ ವಿವೇಕಿಗಳೂ ಬುದ್ದಿವಂತರೂ ಆಗಿರುವ ಬ್ರಾಹ್ಮಣ ಸಮೂದಾಯದ ಶ್ರೀಮಂತರು ಬ್ರಾಹ್ಮಣ ಸಮಾಜದ ನೊಂದು ಬೆಂದ ಬಡ ಮದ್ಯಮ ವರ್ಗದ ಜನರಿಗೆ ಸೂಕ್ತ ಪರಿಣಾಮಕಾರಿ ಸಹಾಯ ಮಾಡುವ ಮನಸು ಮಾಡಬೇಕಿದೆ.
ಬ್ರಾಹ್ಮಣ ಸಮಾಜ ಹಣಕೇಂದ್ರಿತ ವ್ಯವಸ್ಥೆ ಯಿಂದ ಗುಣ ಕೇಂದ್ರಿತ ವ್ಯವಸ್ಥೆಯ ಬಗ್ಗೆ ಆಕರ್ಷಿತ ರಾಗಬೇಕಿದೆ. ಬಡವ ಬಲ್ಲಿದ ಶ್ರೇಷ್ಠ ಕನಿಷ್ಠ ವರ್ಗ ತೊಡೆದು ಹೋಗಿ ಬ್ರಾಹ್ಮಣರೆಲ್ಲ ಒಂದೇ ಎಂಬ ಮನೋಭಾವವನ್ನು ಹೊಂದುವಂತವರಾಗ ಬೇಕು.
ಬ್ರಾಹ್ಮಣ ಸಮಾಜದ ಸಂಘ ಸಂಸ್ಥೆಗಳು ಮಠ ಮಾನ್ಯಗಳು ಬಾಹ್ಯ ಇಟ್ಟಿಗೆ ಸಿಮೆಂಟ್ ನ ಕಲ್ಲಿನ ಕಟ್ಟಡ ಕಟ್ಟುವ, ಆಸ್ತಿ ಕಟ್ಟುವ ಸಂ ಸ್ಕೃತಿಯಿಂದ ಹೊರ ಬಂದು ಬ್ರಾಹ್ಮಣ ಸಮಾಜದ ಅಂತರಂಗದ ಶಿಥಿಲವಾಗು ತ್ತಿರುವ ಕಟ್ಟಡವನ್ನು ಮೊದಲು ಸರಿಪಡಿಸಿ ಬೀಳ ದಂತೆ ತಡೆದು ಕಟ್ಟಡ ಭದ್ರವಾಗುವಂತೆ ಮಾಡವುದತ್ತ ಚಿಂತನೆ ನಡೆಸಬೇಕಿದೆ.
ಬ್ರಾಹ್ಮಣ ಸಂಘಗಳು ಕಲ್ಯಾಣ ಮಂದಿರ ಕಟ್ಟಿ ವಿಸ್ತರಣೆ ಮಾಡಿ ಏನು ಪ್ರಯೋಜನ...? ಸಮುದಾಯದ ಹುಡುಗರಿಗೇ ಮದುವೆ ಇಲ್ಲ.ಸಂಘಗಳು ಭಜನೆ ಸ್ಪರ್ದೆ, ರಂಗೋಲಿ ಸ್ಪರ್ಧೆಇತ್ಯಾದಿ ಚಟುವಟಿಕೆಗಳ ಬಗ್ಗೆ ಆಸಕ್ತಿ ತೋರಿಸುವುದಕ್ಕಿಂತ ಮೊದಲು ಈ ವೈವಾಹಿಕ ಸಮಸ್ಯೆ, ವೃದ್ಯಾಪ್ಯ , ಸಮೂದಾಯದವರಲ್ಲಿ ಆರ್ಥಿಕ ವಾಗಿ ಕುಸಿಢದಿರುವವರ ಬಗ್ಗೆ ಗಮನಹರಿಸುವುದು ಸೂಕ್ತ . ಸಮುದಾಯದವರ ವಿಧ್ಯಾಭ್ಯಾಸಕ್ಕೆ ನೆರವು ನೀಡುವುದು, ಸಮುದಾಯದ ಯುವ ಪೀಳಿಗೆ ಉದ್ಯಮಿಗಳಿಗೆ ನೆರವು ನೀಡುವುದು, ಸಮುದಾಯದ ಬಡವರ ಆರೋಗ್ಯ ಸಮಸ್ಯೆಗೆ ಸಹಾಯ ಹಸ್ತ ನೀಡುವುದು, ಇತ್ಯಾದಿಗಳ ಬಗ್ಗೆ ಸಂಘಗಳು ಗಮನಹರಿಸಿ ಕಾರ್ಯತತ್ಪರವಾಗ ಬೇಕು.
ಶ್ರೀ ಆಚಾರ್ಯತ್ರಯರು ಕೇವಲ ತಮ್ಮ ಆಯಸ್ಸಿನಲ್ಲೇ ಭರತಖಂಡದ ಸುತ್ತ ಪಾದಯಾತ್ರೆಯ ಮೂಲಕ ಇಪ್ಪತ್ತು ಸಾವಿರದ ನೂರಾ ಮೂವತ್ತೆರಡು ಕಿಲೋಮೀಟರ್ ಸುತ್ತಿ ನಾಲ್ಕು ದಿಕ್ಕಿನಲ್ಲೂ ಹಿಂದೂ ಧರ್ಮ ಉಳಿಸಿ ಬೆಳಸುವ ನಿಟ್ಟಿನಲ್ಲಿ ಧಾರ್ಮಿಕ ಪೀಠ ಸ್ಥಾಪನೆ ಮಾಡಿ ಅಲ್ಲಿಂದ ಇಲ್ಲಿಯ ತನಕ ಹಿಂದೂ ಧರ್ಮದ ಮೇಲಾದ ಎಲ್ಲ ರೀತಿಯ ದಾಳಿಯಲ್ಲೂ ಹಿಂದೂ ಧರ್ಮ ಉಳಿಯಲು ಕಾರಣವಾಗಿದ್ದಾರೆ. ಇಂದಿನ ಮಠಾದೀಶರುಗಳು ಈ ತಂತ್ರಜ್ಞಾನದ ಉತ್ಕಂಠತೆಯಲ್ಲಿ ಧರ್ಮ ಸಮುದಾಯದ ಸಮಸ್ಯೆ ಬಗೆಹರಿಸಲು ಅವರಷ್ಟು ಕಷ್ಟ ಪಡಬೇಕಾದ್ದೇನಿಲ್ಲ. ಪ್ರಸ್ತುತ ಸಮಸ್ತ ಹಿಂದು ಧರ್ಮವನ್ನು ಉಳಿಸಿಕೊಳ್ಳುವ ಹೋರಾಟವಿರಲಿ, ಕನಿಷ್ಟ ಬ್ರಾಹ್ಮಣ ಜಾತಿಯ ಮೇಲಾಗುತ್ತಿರುವ ದಾಳಿ, ಬ್ರಾಹ್ಮಣ ಜಾತಿಯೊಳಗೆ ನಡೆಯುತ್ತಿರುವ ನಕಾರಾತ್ಮಕ ಚಟುವಟಿಕೆಗಳ ಬಗ್ಗೆ ಯಾದರೂ ಗಮನಿಸಿ ಆ ನಿಟ್ಟಿನಲ್ಲಿ ಮುಂದಡಿಯಿಡಲು ಬ್ರಾಹ್ಮಣ ಸಂಘಗಳು ಬ್ರಾಹ್ಮಣ ಪ್ರಮುಖರು, ಮಠಾಧೀಶರುಗಳು ಮಾರ್ಗದರ್ಶನ ಮಾಡಬೇಕು. ಅಷ್ಟೂ ಮಾಡದಿದ್ದಲ್ಲಿ ಬ್ರಾಹ್ಮಣ ಸಮಾಜ ಖಂಡಿತವಾಗಿಯೂ ವಿನಾಶ ಹೊಂದು ವುದರಲ್ಲಿ ಯಾವುದೇ ಸಂದೇಹವೂ ಇಲ್ಲ....!
ಈ ಕಾಲದಲ್ಲಿನ ಬ್ರಾಹ್ಮಣ ಜಾತಿಯೊಳಗಿನ ಪ್ರಸಕ್ತ ಆಂತರಿಕ ಸಮಸ್ಯೆಯನ್ನು ಬಗೆ ಹರಿಸುವುದು ಅಷ್ಟು ದೊಡ್ಡ ಸವಾಲು ನಮ್ಮ ಮಠಾದೀಶರುಗಳಿಗೆ ಇಲ್ಲ. ಇದು ಖಂಡಿತವಾಗಿಯೂ ಬ್ರಾಹ್ಮಣ ಮಠ ಮತ್ತು ಬ್ರಾಹ್ಮಣ ಸಂಘಗಳ ಜವಾಬ್ದಾರಿ. ಹೀಗೆ ನನ್ನ ಜವಬ್ದಾರಿ ಅಲ್ಲ ಅಂತ ಸುಮ್ಮನೆ ಕೂತರೆ ಆ ಕಾಲದ ಧರ್ಮ ಉಳಿಸುವ ಕಳಕಳಿಯ ಶ್ರಮ ಸಾಹಸಕ್ಕೆ ಮಾಡಿದ ಅವಮಾನ ವಾಗುತ್ತದೆ.ಇಂದು ಹಿಂದೂ ಧರ್ಮದ ರಕ್ಷಣೆಗೆ ಪ್ರತಿ ಜಾತಿ ಜಾತಿಗೂ ಪ್ರತ್ಯೇಕ ಮಠ ಮಾನ್ಯಗಳಿವೆ. ಬ್ರಾಹ್ಮಣ ಮಠಗಳಿಗೆ ಈ ಕಾರಣದಿಂದಾಗಿ ಸ್ವಲ್ಪ ಜವಬ್ದಾರಿ ಕಡಿಮೆಯಿದೆ ಎಂದು ವಿಶ್ಲೇಷಣೆ ಮಾಡಬಹುದು. ಬ್ರಾಹ್ಮಣ ಮಠಗಳು ಈಗ ಕುಸಿಯುತ್ತಿರುವ ಬ್ರಾಹ್ಮಣ ಸಮುದಾಯದ ಆಸರೆಗಾದರೂ ಧಾವಿಸಿ ಸಮಾಜವನ್ನು ಕಟ್ಟುವ ಕೆಲಸ ಮಾಡಲೆಂದು ಆಶಯವನ್ನು ಹೊಂದೋಣ.
ಬ್ರಾಹ್ಮಣ ಸಂಘಗಳು ಈ ವ್ಯವಸ್ಥೆ ಜೊತೆಗೆ ಕೈ ಜೊಡಿಸಿ ಬ್ರಾಹ್ಮಣ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಬ್ರಾಹ್ಮಣ ಸಮಾಜಕ್ಕೆ ದೈರ್ಯ ಶಕ್ತಿ ನೀಡಲೆಂದು ಬಯಸೋಣ..ನಾನು ಬ್ರಾಹ್ಮಣ ಎಂದು ಹೆಮ್ಮೆ ಯಿಂದ ಹೇಳುವಂತವರಾಗೋಣ..
ಕಷ್ಟದಲ್ಲಿರುವ ಸಮುದಾಯದ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಭರವಸೆ ಮೂಡಿಸುವ ಕೆಲಸ ಮಾಡುವ ಕೆಲಸ ಮಾಡಬೇಕಿದೆ. ಸಾವಿರಾರು ವರ್ಷಗಳಿಂದ ಬ್ರಾಹ್ಮಣ ಸಮುದಾಯದ ಹೆಚ್ಚಿನ ಜನರು ರಾಜಾಶ್ರಯ ದಲ್ಲೋ, ಯಾರದ್ದೋ ಉಂಬಳಿ ಗೇಣಿಯಲ್ಲೋ ದಾನ ಧರ್ಮಕ್ಕೆ ಕೈ ಚಾಚಿ ದೇವಾಸ್ಥಾನಗಳ ಪೂಜೆ ಪುನಸ್ಕಾರ ಮಾಡುತ್ತ ಬಲು ಕಷ್ಟದಿಂದ ಜೀವನ ಸವೆಸಿದವರು ಸ್ವಾತಂತ್ರ್ಯ ನಂತರ ವಿದ್ಯೆ ಕಲಿಯುವ ಹೆಚ್ಚಿನ ಅವಕಾಶ ಸದುಪಯೋಗ ಮಾಡಿಕೊಂಡು ಕಷ್ಟ ಪಟ್ಟು ಕಲಿತು ವಿದ್ಯೆ ಬುದ್ದಿಯಿಂದಲೇ ಇಂದು ದಾನ ಕೊಡುವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ. ಎಲ್ಲೋ ಈ ಸಾಧನೆಯ ಪ್ರಯತ್ನದಲ್ಲಿ ಗುರಿ ಮುಟ್ಟದೆ ಸೋತು ನಲುಗಿದ ಸ್ವ ಸಮಾಜದ ಇತರೆ ಬಾಂಧವರನ್ನು ಕೈ ಹಿಡಿದು ಮೇಲಿತ್ತಿ ಉಳ್ಳವರು ಔದಾರ್ಯವಂತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾಲದಲ್ಲೂ ಎಲ್ಲಾ ಬಗೆಯ ಅಧಿಕಾರದ ತುತ್ತ ತುದಿಯಲ್ಲಿರುವವರಿಗೂ ಅವರ ಸಮೀಪವರ್ತಿಗಳಿಗೂ ಹಸಿವು ಬಡತನ ಔದ್ಯೋಗಿಕ ಸಮಸ್ಯೆ ಸಾಮಾಜಿಕ ಸಮಸ್ಯೆ ಇತ್ಯಾದಿ ಕಷ್ಟ ಕಾರ್ಪಣ್ಯಗಳಿರೋಲ್ಲ. ಅವರು ಹೊಟ್ಟೆ ತುಂಬಿದವರು..ಅವನಿಗೆ ಧ್ವನಿ ಇಚ್ಛಾಶಕ್ತಿ ಎಲ್ಲವೂ ಇರುತ್ತದೆ.ಆದರೆ ಹಸಿವಿನಿಂದ ಕಂಗೆಟ್ಟ, ಆರ್ಥಿಕ ಸಾಮಾಜಿಕವಾಗಿ ಕುಸಿದು ನೆಲಹಿಡಿದ ಬಡವನಿಗೆ ಎತ್ತರದ ಧ್ವನಿ ಇರದು. ಅವನು ಸಹಾಯಕ್ಕೆ ಎತ್ತರದಲ್ಲಿರುವವನಿಗೆ ತನ್ನ ಧ್ವನಿ ಮುಟ್ಟಿಸಬೇಕು ಎಂದರೇ ಕೇಳುವವರಿಲ್ಲ....ಎತ್ತರದಲ್ಲಿರುವವ ಸಮಾಜದ ಸಾಮಾನ್ಯ ಬ್ರಾಹ್ಮಣಜನರ ಕಷ್ಟ ಕಾರ್ಪಣ್ಯಗಳ ಅರಿವಿರದವ. ಹಸಿವೆಂದರೆ ಏನೆಂಬುದೇ ಗೊತ್ತಿಲ್ಲದವ... ಅವನಿಗಿಲ್ಲದ ಬಡತನ ಕಷ್ಟಾದಿಗಳು ಬೇರೆಯವರಿಗೆ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದವ... !! ಬಡವರ ಸಂತ್ರಸ್ತರ ನೋವು ಅವರಿಗೆ ಮುಟ್ಟಿಸುವುದು ಹೇಗೆ...? ಅವರಿಂದ ಪರಿಹಾರ ಪಡೆವುದು ಹೇಗೆ...?ಸಮಾಜ ಕೂಡಿ ಬಾಳಿ ಸತ್ ಸಮುದಾಯ ಆಗೋದು ಹೇಗೆ...?
ಬ್ರಾಹ್ಮಣ ಸಮಾಜ ಕೂಡಿ ಕೂತು ಚಿಂತನ ಮಂಥನ ಮಾಡಿ ಈ ಎಲ್ಲ ಸಮಸ್ಯೆಗಳಿಗೂ ಉತ್ತರ ಕಂಡುಕೊಂಡು ಅಂತರ್ಯದಲ್ಲಿ ಗಟ್ಟಿ ಯಾಗಿ ಎಂದಿನಂತೆ ಸಮಸ್ತ ಸಮಾಜಕ್ಕೂ ಮಾರ್ಗದರ್ಶಿ ಸ್ಥಾನದಲ್ಲಿ ನಿಲ್ಲಬೇಕು. ಇದು ಸಮಸ್ತ ಬ್ರಹ್ಮ ಸಮಾಜದ ಆಶಯ.
ಧೀಯೋ ಯೋನಃ ಪ್ರಚೋದಯಾತ್
ಬ್ರಾಹ್ಮಣ ವಿಷಯವಾಗಿ ಈ ಕೆಳಗಿನ ಬ್ಲಾಗ್ ಪೋಸ್ಟಗಳನ್ನೂ ನೋಡಬಹುದು
https://ashwathavruksha.blogspot.com/2020/10/victory-of-brahmanas.html
https://ashwathavruksha.blogspot.com/2018/08/brahmanaa-vishayi.html
https://ashwathavruksha.blogspot.com/2018/08/brahmana-karma.html
No comments:
Post a Comment