ಒಳನೋಟ
1.ನಿವಾರಣೋಪಾಯ ಮಂತ್ರಃ
2.ಜ್ವರ ಕಡಿಮೆ ಮಾಡುವ ಜ್ವರ ಮಂತ್ರ
3.ನೇತ್ರ ದೋಷ ಪರಿಹಾರಕ್ಕೆ ಉಪಾಯ
4.ನೇತ್ರ ರೋಗ ಪರಿಹಾರ ಮಂತ್ರ
5.ಸಾಂಸಾರಿಕ ತೊಂದರೆಯನ್ನು ನಿವಾರಿಸುವ ಸೂರ್ಯ ಮಂತ್ರ
6.ಸರ್ಪ ಬಾಧಾ ನಿವಾರಣ ಮಂತ್ರ
7.ಮಾನಸಿಕ ತೊಂದರೆಯನ್ನು ದೂರ ಮಾಡುವ ಮಂತ್ರ
8.ಶತ್ರು ಕಾಟವನ್ನು ತಡೆಯುವ ಮಂತ್ರ
9.ಚೌರ್ಯ ನಿವಾರಣ ಮಂತ್ರ ಚೌರ್ಯ ರಕ್ಷಣಾ ಮಂತ್ರ
10.ಭಯ ನಿವಾರಕ ಶಿವ ಮಂತ್ರ
11.ಆಪದ್ರಕ್ಷಣ ವಿಶ್ವೇಶ್ವರ ಮಂತ್ರ
12.ದುಃಸ್ವಪ್ನ, ಅಪಶಕುನ ನಿವಾರಣ ಮಂತ್ರ
13.ಕಾರಾಗಾರ ಬಿಡುಗಡೆ ಮಂತ್ರ
14.ಕ್ಷೌರ ದೋಷ ನಾಶಕ ಮಂತ್ರ
15.ಸಂಕಟ ನಾಶಕ ವಿಷ್ಣು ಮಂತ್ರ
16.ಘಂಟಾಕರ್ಣ ಸ್ತೋತ್ರ
17.ಸರ್ವ ರಕ್ಷಾಕರ ದತ್ತಾತ್ರೇಯ ಸ್ತೋತ್ರ
18.ಭಾವ ಬಿದಿಗೆಯ ದಿವಸ ಅಣ್ಣನಿಗೆ / ತಮ್ಮನಿಗೆ ಊಟ ಹಾಕುವಾಗ
19.ಗಣೇಶ ಚತುರ್ಥಿ ಅಪವಾದ ನಿವಾರಣ ಮಂತ್ರ
20.ದೋರಕ ಪೂಜಾ ಮಂತ್ರ
21.ದೋರ ಕಟ್ಟಿಕೊಳ್ಳುವ ಮಂತ್ರ
22.ಜೀರ್ಣ ದೋರ ತೆಗೆಯುವ ಮಂತ್ರ
23.ಜ್ಯೇಷ್ಟಾ ಗೌರಿ / ಸ್ವರ್ಣ ಗೌರಿ ವಿಸರ್ಜನ ಮಂತ್ರ
24.ಮರದ ಬಾಗಿಣ ಕೊಡುವ ಮಂತ್ರ
20. ಧಾತ್ರಿ ಮೂಲೆ ದಾಮೋದರ ವಿವಾಹ
21. ಉದ್ಧರೇದಾತ್ಮನಾತ್ಮಾನಂ
22.. ಕೋಕಿಲಾ ವ್ರತ ಪೂಜಾ ವಿಧಿ
23. ಶ್ರಾವಣ ಶುಕ್ಲ ಪಂಚಮಿ ನಾಗಪುಜಾ ವಿಧಿ
24. ಮಹಾ ಭಾರತ ಸಾರ
ಈ ಎಲ್ಲ ಮಂತ್ರಗಳು ಅನುಭವ ಸಿದ್ಧಿಯಿಂದ ಗ್ರಂಥಾದಿಗಳಿಂದ ಆಯ್ದುಕೊಂಡದ್ದು ಓದುಗರು ತಮ್ಮ ತಮ್ಮ ಪೀಡಾ ದೋಷ ನಿವಾರಣೆ ಗೋಸ್ಕರ ಪ್ರಯೋಗ ಮಾಡಿ ನೋಡಲು ಅಭ್ಯಂತವಿಲ್ಲ ಇದರಲ್ಲಿ ಯಾವುದೇ ರೀತಿಯ ಮೋಸಕ್ಕೆ ಅವಕಾಶವಿಲ್ಲ
ಜ್ವರ ಕಡಿಮೆ ಮಾಡುವ ಜ್ವರ ಮಂತ್ರ
ಮೊದಲು ಸಲ ಜ್ವರ ಬಂದವರನ್ನು ಮುಟ್ಟಿ ೧೦ ಸಲ ಈ ಮಂತ್ರವನ್ನು ಹೇಳಿ ನಂತರ 16 ಸಲ ಅಂಗಾರವನ್ನು ಈ ಮಂತ್ರದಿಂದ ಅಭಿಮಂತ್ರಿಸಿ ಹಚ್ಚಿದರೆ 3 ದಿನಗಳಲ್ಲಿ ಜ್ವರ ಕಡಿಮೆ ಯಾಗುತ್ತದೆಕುಬೇರಂ ತೇ ಮುಖಂ ಕೌದ್ರಂ | ನಂದಿಮಾ ನಂದಿಮಾವಹ ||ಜ್ವರಂ ಮೃತ್ಯು ಭಯಂ ಘೋರಂ | ಜ್ವರಂ ನಾಶಯ ಮೇ ಜ್ವರ ||ತಪ್ತೋಹಂತೆ ತೇಜಸಾ ದುಃಸಹೇನ | ಶಾಂತೋಗ್ರೆನಾ ತ್ಯುಲ್ಬನೇನ್ ಜ್ವರೇನ್ |
ಯಾವತ್ತಾವರುಪೋ ದೇಹಿನಾಂ ತೆಂಘ್ರಿಮೂಲಂ | ನೋಸೇವೆರನ್ ಯಾವದಾ ಶಾನುಬದ್ಧ ||
ಕೈಯಾಲ್ಲಿ ಅಂಗಾರ ಹಿಡಿದುಕೊಂಡು ಈ ಮಂತ್ರವನ್ನು 16 ಸಲ ಪಠಿಸಿ ಹಚ್ಚಿದರೆ ಜ್ವರ ಕಡಿಮೆಯಾಗುತ್ತದೆ
ವಸಂತೆ ಸಾನಂದೇ ಕುಸುಮಿತಲತಾಭಿಹ್ ಪರಿವೃತೆ ಸ್ಫ್ರುರನ್ನಾನಾ ಪದ್ಮೆ ಸರಸಿ ಕಲಹಂಸಾಲಿ ಸುಭಗೆ ||
ಸುಖೀಭಿಹ್ ಖೇಲಂತಿ ಮಲಯಪವನಾಂದೋ ಲಿತ ಜಲೇ ಸ್ಮರೆದ್ಯಸ್ತ್ವಾಂ ತಸ್ಯ ಜ್ವರಜನಿತ ಪೀ ಡಾ ಪಸರತಿ ||
ಊಟವಾದಮೇಲೆ ಕೈ ತೊಳೆದುಕೊಂಡು ಹಸಿ ಕೈಯಿಂದ ಕಂಗಳನ್ನು ಈ ಕೆಳಗಿನ ಮಂತ್ರವನ್ನು ಹೇಳುತ್ತ ಸವರಿಕೊಂಡರೆ ಕಣ್ಣು ಗಳ ದೋಷವು ದೂರವಾಗುತ್ತವೆ.
ಶರ್ಯಾತಿಮ್ಚ ಸುಕನ್ಯಾಂ ಚ ಚ್ಯವನಂ ಶುಕ್ರಮಶ್ವಿನೌ | ಬ್ಹೊಜನಾಂತ್ಯೆ ಸ್ಮರಾಮೇತ್ಯಾನ್ ಯತಶ್ಚಕ್ಷುರ್ನ ಹೀಯತೆ ||
ಮಹಾಭಾರತ ಆದಿಪರ್ವದಲ್ಲಿ ಬರುತ್ತದೆ
ಧೌಮ್ಯ ಋಷಿಯ ಶಿಷ್ಯನಾದ ಉಪಮನ್ಯು ಕಣ್ಣು ಕಳೆದುಕೊಂಡು ಬಾವಿಯಲ್ಲಿ ಬಿದ್ದಾಗ ಧೌಮ್ಯ ಋಷಿಯ ಆದೇಶದಂತೆ ಅಶ್ವಿನೀದೇವತೆಗಳ ಸ್ತೋತ್ರ ಮಾಡಲು ಹೇಳಿದನು . ಅದರಂತೆ ಅವನು ಸ್ತೋತ್ರ ಮಾಡಿ ನೇತ್ರಗಳನ್ನು ಪಡೆದುಕೊಂಡನು . ಈ ಮಂತ್ರವನ್ನು ಪ್ರತಿದಿನ ೧೯ /೩೨ ಸಾರೆ ಹೇಳಿ ನೀರು ಅಭಿಮಂತ್ರಿಸಿ ಕಣ್ಣಿಗೆ ಹಚ್ಚಿಕೊಂಡು ಉಳಿದ ನೀರು ಕುಡಿಯುದವರಿಂದ ನೆತ್ರರೋಗ ಕಡಿಮೆಯಾಗಿ ತೇಜಸ್ಸು ಹೆಚ್ಚುವುದು
ಕೆಳಗಿನ ಶ್ಲೋಕದ ಮತಿತಾರ್ಥ : ತರುಣ ದಂಪತಿಗಳು ಮೊದಲು ಸಂತಾನೋತ್ಪತ್ತಿ ಮಾಡಲು ಮುಖದಿಂದ ಅನ್ನ ರೂಪದ ಗರ್ಭವನ್ನು ಧರಿಸುತ್ತಾರೆ ಅನ್ನವು ನಂತರ ಪುರುಷರಲ್ಲಿ ವೀರ್ಯವು ಸ್ತ್ರೀಯರಲ್ಲಿ ರಜೋರುಪದಲ್ಲಿ ಬೀಜಾಂಡವು ಪರಿಣತವಾಗಿ ಜಡ ಶರೀರದ ನಿರ್ಮಾಣವಾಗುವುದು ಆ ಮೇಲೆ ಜನ್ಮವನ್ನು ತಳೆಯುವ ಜೀವ ಗರ್ಭದಲ್ಲಿ ಉತ್ಪನ್ನವಾಗಿ ತಾಯಿಯ ಹಾಲನ್ನು ಕುಡಿಯುವನು ಹೇ ಅಶ್ವಿನಿ ಕುಮಾರರೇ ಈ ರೀತಿಯಾದ ಸಂಸಾರ ಬಂಧನದಿಂದ ಬದ್ಧರಾದ ಜೀವರನ್ನು ನೀವು ಅವರಿಗೆ ತತ್ವಜ್ಞಾನವನ್ನು ಉಪದೇಶಿಸಿ ಉದ್ಧರಿಸುವಿರಿ. ನನ್ನ ಜೀವನ ವನ್ನು ನಿರ್ವಹಿಸುವುದಕ್ಕೆ ಉಪಯುಕ್ತವಾದ ನೇತ್ರೆಂದ್ರಿಯವನ್ನು ರೋಗಮುಕ್ತ ಮಾಡಿ ನೇತ್ರ ತೇಜಸ್ಸನ್ನು ವರ್ಧಿಸಿರಿ
ಮುಖೇನ ಗರ್ಭಾಂ ಲಭೇತಾಂ ಯುವಾನೌ ಗತಾ ಸುರೇತತ್ ಪ್ರಪದೇತ್ ಸುತೇಹಂ |
ಸದ್ಯೋ ಜಾತೋ ಮಾತರಮತ್ತಿ ಗರ್ಭಸ್ಥಾ ವಶ್ವಿನೌ ಮುಂಚಥೋ ಜೀವಸೇ ಗಾಃ ||
ಕೈಯಲ್ಲಿ ಬಿಳಿ ಎಕ್ಕಿ ಹೂವನ್ನು ಹಿಡಿದುಕೊಂಡು ಪ್ರತಿದಿನ 108 ,54 ,27 ಸಲ 12 ದಿವಸಗಳ ವರೆಗೆ ಈ ಮಂತ್ರವನ್ನು ಪಠಿಸಿದರೆ ಚರ್ಮ ರೋಗ ಮತ್ತು ಸಾಂಸಾರಿಕ ತಾಪತ್ರಯಗಳು ಕಡಿಮೆಯಾಗುತ್ತವೆ. ಜಪದ ನಂತರ ಕೈಯಲ್ಲಿರುವ ಹೂವನ್ನು ಎಕ್ಕಿಗಿಡದ ಬಡ್ದೆಗೆ ಹಾಕಿ ನಮಸ್ಕರಿಸಬೇಕು ಹೀಗೆಂದು ಭವಿಷ್ಯ ಪುರಾಣದಲ್ಲಿ ಉಲ್ಲೇಖವಿದೆ
ಹಂಸ ಹಂಸ ಕೃಪಾಲುಸ್ತ್ವಮಗತಿನಾಂ ಗತಿರ್ಭವ | ಸಂಸಾರಾರ್ಣವ ಮಗ್ನಾನಾಂ ತ್ರಾತಾ ಭಾವ ದಿವಾಕರ
ಈ ಮಂತ್ರವನ್ನು ಪಠಿಸುತ್ತ ಕೈಯಲ್ಲಿ ಅಕ್ಷತೆಗಳನ್ನು ಹಿಡಿದು 3 ಸಲ ಹೇಳಿ ಹಾವು ಕಡಿದ ಸ್ಥಾನಕ್ಕೆ ಹಾಕುತ್ತ ಹೋದರೆ ಸರ್ಪ ಬಾಧೆಯು ದೂರವಾಗಿ ವಿಷ ಭಯವು ಕಡಿಮೆಯಾಗುತ್ತದೆ ಹೀಗೆಮಾಡಲು ಚತುರ್ಧಾಮ ಮಹಾತ್ಮ್ಯಯಲ್ಲಿ ಹೇಳಲಾಗಿದೆ
ವಿಷ್ನುರ್ಜಿಷ್ನುರ್ವಷ್ಟ್ಕಾರೋ ದಿತಿಜೋ ದೈತ್ಯ ಸೂದನಃ | ಫಣಾ ಸಹಸ್ರ ವಿಲಸದ್ ಭೂ ಮಂಡಲ ಅಹಸ್ಕರಃ | ಸರ್ಪರಾಜೋ ವಿಷಿ ವೈದ್ಯೋ ಭಾನುರ್ಭಾನು ಸಹಸ್ರ ಧೃಕ್ | ರಜತಾದ್ರಿ ಸಮಾಕಾರೋ ನಂತೊನಂತ ಶಿರಃ ಪ್ರಭುಹ್ ||
ಈ ಪ್ರಸನ್ನ ಲಕ್ಷ್ಮಿ ನರಸಿಂಹ ಮಂತ್ರವನ್ನು ಪ್ರತಿದಿನ 16 ಸಲ ಪಠಿಸುವುದರಿಂದ ಮಾನಸಿಕ ಉದ್ವಿಘ್ನತೆ ನಾಶವಾಗುವುದು
ವಾಮಾಂಕ ಶ್ರಿಯಯಾ ಯುಕ್ತಂ ಚಕ್ರ ಶಂಖಾ ಬ್ಜಧೃಕ್ಕರಂ | ಪಿತಾಂಬರಂ ಸರ್ವ ಭೂಷಂ ಪ್ರಸನ್ನಂ ನರಹರಿಂ ಭಜೇ ||
ಈ ಮಂತ್ರವನ್ನು ನಿತ್ಯ 108 ಸಲ 45 ದಿನಗಳ ವರೆಗೆ ಜಪಿಸಿದರೆ ಹೊರಶತ್ರುಗಳ ಹಿತಶತ್ರುಗಳ ಕಾಟ ದೂರವಾಗುತ್ತದೆ
ಬಗಲಾಂ ಭಕ್ತ ವರದಾಂ ಸರ್ವದಾ ವಿಜಯ ಪ್ರದಾಂ | ನಮಾಮಿ ಪೀತವಸನಾಂ ಶತ್ರು ಸ್ಥಂಬನ ಕಾರಿಣಿಂ ||
ಆದಿ ಚೋರ ಕಫಲ್ಲಸ್ಯ ಬ್ರಹ್ಮಲಭ್ದ ವರಸ್ಯಚ | ತಸ್ಯ ಸ್ಮರಣ ಮಾತ್ರೇಣ ಚೋರಾ ಭವಂತು ನಿಷ್ಫಲಃ || ಧನುಹ್ ಪಂಚ ಶತಮ್ ಸವ್ಯೇ ದಕ್ಷಿಣೆ ತಾವತಃ ಶರಾನ್ | ಬಿಭ್ರತಸ್ ಕಾರ್ತ್ಯ ವೀರ್ಯೋಸೌ ಚೋರೆಭ್ಯೋ ರಕ್ಷತಾದಿಹ ||
ರಾತ್ರಿ ಮಲಗುವಾಗ ಈ ಮಂತ್ರವನ್ನು 3 ಸಲ ಪಥಿಸಿದರೆ ಭಯವು ದೂರವಾಗುವುದು ಸೋಮವಾರದಿನ ಈ ಮಂತ್ರದಿಂದ ಮಹಾದೇವನನ್ನು ಪೂಜಿಸಿದರೆ ಅಭಿಷ್ಟ ಪೂರ್ತಿಯಾಗುವುದು....ಗೌತಮಿ ಮಾಹಾತ್ಮ್ಯ
ನಮಃ ಸಂಸಾರ ಕಾಂತಾರ ಮಹಾಭಯ ನಿವಾರಿಣೆ | ಪಿನಾಕಿನೇ ಮಹೇಶಾಯ ಸರ್ವಾಭಿಷ್ಟ ಪ್ರದಾಯಿನೇ ||
ಪ್ರತಿದಿನದ ಆಪತ್ತುಗಳಿಂದ ರಕ್ಷಿಸಿ ಕೊಳ್ಳಲು ಪ್ರಾರ್ಥಿಸುವ ವಿಶ್ವೇಶ್ವರ ಮಂತ್ರ
ಶ್ರೀ ಮೃತ್ಯುಂಜಯ ಶಂಕರ ಸ್ಮರಹರ ತ್ರೈಲೋಕ್ಯ ಸರ್ಗಾಧಿಕೃತ್ || ತ್ವಂ ಗಂಗಾಧರ ಚಂದ್ರ ಶೇಖರ ಮಹಾದೇವಾವ್ಯಾಯ ತ್ರ್ಯೈಯಂಬಕ || ಭೂತೇಶ ತ್ರಿಪುರಾಂತಕೇಶ ಗಿರಿಜಾಜಾನೇ ವೃಷಾಂಕ ಪ್ರಭೋ ಶಂಭೋ || ಸಾಂಬ ಸದಾ ಶಿವ ಪ್ರತಿದಿನಂ ಮಂ ಪಾಹಿ ವಿಶ್ವೇಶ್ವರ ||
ಈ ಮಂತ್ರವನ್ನು 3 ಸಲ ಹೇಳಿದರೆ ಅಪಶಕುನ ದುಃಸ್ವಪ್ನ ನಿವಾರಣೆಯಾಗುತ್ತದೆ
ಅಕ್ಷಿಸ್ಪದಂ ಭುಜಸ್ಪಂದಂ ದುಃಸ್ವಪ್ನ ದುರ್ವಿ ಚಿಂತನಂ | ಶತ್ರುಣಾoಚ ಸಮುತ್ಥಾನಂ ಹ್ಯಶ್ವತ್ಥ ಶಮಯ ಪ್ರಭೋ ||
ಮಾರುತಿಯು ರಾಮಾಸ್ತ್ರದಿಂದ ಬದ್ಧನಾದಾಗ ಈ ಶ್ಲೋಕದಿಂದ ರಾಮನನ್ನು ಪ್ರಾರ್ಥಿಸಿದಾಗ ಅವನಿಗೆ ಬಿಡುಗಡೆಯಾಯಿತು
ಈ ಮಂತ್ರವನ್ನು ನಿತ್ಯ 32 ಸಲ 48 ದಿನಗಳ ವರೆಗೆ ಪಠಿಸಿದರೆ ಕಾರಾಗಾರದಿಂದ ಬಿಡುಗಡೆಯಾಗುವುದು
ಹಾ ನಾಥ ಹಾ ನರವರೋತ್ತಮ ದಯಾಲೋ | ಸೀತಾಪತೇ ರುಚಿರ ಕುಂಡಲ ಶೋಭಿವಕ್ತ್ರ ||
ಭಕ್ತಾರ್ಥಿ ದಾಹಕ ಮನೋಹರರೂಪ ಧಾರಿನ್ | ಮಾಂ ಬಂಧನಾತ್ ಸಪದಿ ಮೋಚಯ ಮಾ ವಿಲಂಬಂ ||
. ....ಪದ್ಮ ಪುರಾಣ
ಆನರ್ತೋ ಹಿಚ್ಛತ್ರ : ಪಾತಲಿಪುತ್ರೋ ದಿತಿರ್ದಿತಿಹ್ ಶ್ರೀಶಃ | ಕ್ಷೌರೆ ಸ್ಮರಣಾ ದೋಷಾಮ ದೋಷಾ ಭವಂತಿ ನಿಷೇಶಃ ||
ಸಂಕಟ ನಾಶಕ ವಿಷ್ಣು ಮಂತ್ರ
ಇದನ್ನು ರಾತ್ರಿ ಮಲಗುವಾಗ 3 ಸಲ ಹೇಳಿದರೇ ಸಂಕಟನಾಶಕವು ,ಸಾಂಸಾರಿಕ ತೊಂದರೆಗಳು ದೂರವಾಗುವುವೆಂತಲೂ ಹೇಳಲ್ಪಟ್ಟಿದೆ
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ | ಪ್ರಣತಃ ಕ್ಲೇಶನಾಶಾಯ ಗೋವಿಂದಾಯ ನಮೋನಮಃ
ಘಂಟಾ ಕರ್ಣ ದೇವಸ್ಥಾನ ಬದರಿನಾರಾಯಣ ಮಂದಿರದ ಆವರಣದಲ್ಲಿದೆ. ಈ ಸ್ತೋತ್ರ ಪಠಣದಿಂದ ಖಜ್ಜಿ, ಗಾದರಿ,ಕುರುವು ಮುಂತಾದ ರೋಗ ನಿವಾರಣೆಯಾಗಿ ದುಷ್ಟಗ್ರಹ ಸರಪಾಡಿ ಭಯಗಳು ದೂರ ವಾಗುವವು ( ೨೧ ಸಾರೆ ಹೇಳಬೇಕು )
ಘಂಟಾಕರ್ಣೊ ಮಹಾವೀರಃ ಸರ್ವ ವ್ಯಾಧಿ ವಿನಾಶಕಃ | ವಿಸ್ಫೋಟಕ ಭಯೇ ಪ್ರಾಪ್ತೇ ರಕ್ಷ ರಕ್ಷ ಮಹಾಬಲ ||ಯತ್ರ ತ್ವಂ ತಿಷ್ಸಸೇ ದೇವ ಲಿಖಿತೋ ಕ್ಷರಪಂಕ್ತಿಭಿ: | ರೋಗಾಸ್ತತ್ರ ಪ್ರಣಶ್ಶಂತಿ ವಾತಪಿತ್ತಕಫೋದ್ಭವಾಹ್ ||
ತತ್ರ ರಾಜಭಯಂ ನಾಸ್ತಿ ಯಾಂತಿ ಕರ್ಣೇ ಜಪಾತ್ ಕ್ಷಯಂ | ಶಾಕಿನೀ ಭೂತ ವೇತಾಲಾ ರಾಕ್ಷಸಾ:ಪ್ರಭವಂತಿ ನೋ || ನಾಕಾಲೇ ಮರಣಂ ತಸ್ಯ ನಚ ಸರ್ಪೇಣ ದಶ್ಯತೇ || ಅಗ್ನಿಚೋರಭಯಂ ನಾಸ್ತಿ ಘಂಟಾಕರ್ಣ ನಮೋಸ್ತುತೆ ||
ಮಂತ್ರ : ಘಂಟಾಕರ್ಣ ಮಹಾವೀರ ಲಕ್ಷ್ಮೀo ಪೂರಯ ಪೂರಯ ಸುಖಸೌಭಾಗ್ಯಂ ಕುರುಕುರು ಸ್ವಾಹಾ.ಭಾವ ಬಿದಿಗೆಯ ದಿವಸ ಅಣ್ಣನಿಗೆ / ತಮ್ಮನಿಗೆ ಊಟ ಹಾಕುವಾಗ
ಭ್ರಾತಸ್ತ ವಾನುಜಾತಾಹಂ ಭುಕ್ಷ್ವಂ ಭಕ್ತ ಮಿದಂ ಶುಭಂ ಪ್ರೀತಯೇ ಯಮರಾಜಸ್ಯ ಯಮುನಾ ಯಾ ವಿಶೇಷತಃ
ಅಕ್ಕ ಹೇಳುವ ಮಂತ್ರ
ಭ್ರಾತಸ್ತ ವಾಗ್ರಜಾತಾಹಂ ಭುಕ್ಷ್ವಂ ಭಕ್ತ ಮಿದಂ ಶುಭಂ ಪ್ರಿತಯೇ ಯಮರಾಜಸ್ಯ ಯಮುನಾ ಯಾ ವಿಶೇಷತಃ
ಶ್ರೀ ರಾಮ ಮಂತ್ರಃ
ರಾಮ ಮಂತ್ರವನ್ನು ತಂತ್ರ ಶಾಸ್ತ್ರದಲ್ಲಿ ಅನೇಕ ವಿಧವಾಗಿ ಹೇಳಿದ್ದಾರೆ. ಕೆಳಗೆ ಬರೆದ ರಾಮ ಮಂತ್ರವನ್ನು ಜಪಮಾಡಿ ಮಧು ಮಿಶ್ರಿತ ದೂರ್ವಾದಿಂದ ಹೋಮ ಮಾಡಿದರೆ ರೋಗ ನಾಶವಾಗಿ ಆಯುಷ್ಯ ವೃದ್ಧಿಯಾಗುವುದು. ಕಮಲ ಪುಷ್ಪದಿಂದಲೇ ಹೋಮ ಮಾಡಿದರೆ ವಾಂಛಿತ ಧನ ಪ್ರಾಪ್ತಿಯಾಗುವುದು.
ಅಸ್ಯ ಶ್ರೀ ರಾಮ ಮಂತ್ರಸ್ಯ ದಕ್ಷಿಣಾ ಮೂರ್ತಿ ಋಷಿಹ್ ಅನುಷ್ಟುಪ ಛಂದಃ ಶ್ರೀ ರಾಮ ಚಂದ್ರೋ ದೇವತಾ ಶ್ರೀ ರಾಮ ಪ್ರಸಾದ ಸಿಧ್ಯರ್ಥ ಜಪೇ ವಿನಿಯೋಗಃ –ಮಂತ್ರ ವಿಭಾಗೇನ ನ್ಯಾಸಃ ಧ್ಯಾನಂ: ಅಯೋಧ್ಯಾನಗರೇ ರಮ್ಯೇ ರತ್ನ ಸೌವರ್ಣ ಮಂಡಪೆ | ಮಂದಾರ ಪುಷ್ಪೈರಾಬದ್ಧವಿತಾನೇ ತೋರಣಾನ್ವಿತೆ || ಸಿಂಹಾಸನ ಸಮಾ ರೂಢಮ್ ಪುಷ್ಪಕೋ ಪರಿ ರಾಘವಂ | ರಕ್ಷೊ ಭಿರ್ಹರಿಭಿರ್ದೇವೈರ್ದಿವ್ಯಯಾನ ಗತಃ ಶುಭೈ: || ಸಂಸ್ತೂಯಮಾನಂ ಮುನಿಭಿಹ್ ಸರ್ವತಃ ಪರಿಶೋಭಿತಂ | ಸೀತಾಲಂಕೃತ - ವಾಮಾಂಗಂ ಲಕ್ಷ್ಮಣೇ ನೋಪ ಸೇವಿತಂ | ಶ್ಯಾಮಂ ಪ್ರಸನ್ನವದನಂ ಸರ್ವಾ ಭರಣ ಭೂಷಿತಾಂ || ಧ್ಯಾಯೇ ದೇವಂ ಜಪೇನ್ಮಂತ್ರಂ ವರ್ಣ ಲಕ್ಷ ಮನನ್ಯಧಿಹ್ |
ಮಂತ್ರಃ ಓಂ ಹ್ರೀಂ ರಾಮಾಯ ನಮಃ |
ಸುಖ ಪ್ರವಾಸ ಮಂತ್ರಃ ಗಚ್ಚ ಗೌತಮ ಶೀಘ್ರಂ ತ್ವಂ ಗ್ರಾಮೇಷು ನಗರೇಷು ಚ | ಆಸನಂ ಭೋಜನಂ ಶಯ್ಯಾಂ ಕಲ್ಪಯಸ್ವಮಮಾಗ್ರತಃ ||
ಊದ್ಧರೇದಾತ್ಮನಾತ್ಮಾನಂ: ಶರೀರ ಇಂದ್ರಿಯ ಮನಸ್ಸು ಬುದ್ಧಿ ಇವು ಪ್ರಕೃತಿಯ ಕಾರ್ಯವಾಗಿದ್ದು, ಜಡವಾಗಿವೆ. ಇವುಗಳಲ್ಲಿ ಮಮತ್ವ ಬುದ್ಧಿಯನ್ನು ಬಿಟ್ಟು ಸ್ವಸ್ವರೂಪಾನುಸಂಧಾನ ಮಾಡಿದಲ್ಲಿ ಆತ್ಮೊದ್ಧಾರವಾಗುವುದು. ಜಡಪದಾರ್ಥಗಳ ಜೊತೆಗೆ ಸಂಬಂಧವನ್ನಿಟ್ಟು ಆಧೀನವಾಗಿ ನಡೆದಲ್ಲಿ,ಅಧಃ ಪತನವಾಗುವುದು. ಧನ ಅಧಿಕಾರಾದಿಗಳು ನಶ್ವರವಾಗಿದ್ದು, ಅವುಗಳಲ್ಲಿ ಮುಖ್ಯತ್ವ ಬುದ್ಧಿಯನ್ನಿಟ್ಟುಕೊಂಡರೆ ಜೀವನ ವ್ಯರ್ಥವಾಗುವುದು. ತನಗೆ ತಾನೆ ಬಂಧು ವಾಗಿದ್ದು ಉದ್ಧಾರಕ್ಕೆ ಇತರ ವಸ್ತುಗಳಾಗಲಿ ವ್ಯಕ್ತಿಗಳಾಗಲೀ ಕಾರಣವಾಗುವುದಿಲ್ಲ. ನಮ್ಮನ್ನು ನಾವು ಉದ್ಧಾರ ಮಾಡಿಕೊಳ್ಳದಿದ್ದರೆ, ನಮಗೆ ನಾವೇ ಶತ್ರುಗಳಾಗುವೆವು. ಭಕ್ತ ಪ್ರಹ್ಲಾದನು ಸಂಸಾರಿಗಳ ದುಃಖವನ್ನು ನೋಡಿ ಎಲ್ಲರಿಗೂ ಮೋಕ್ಷವನ್ನು ಕೊಡು ಎಂದು ಭಗವಂತನನ್ನು ಪ್ರಾರ್ಥಿಸಿದಾಗ ಅದು ಸಾಧ್ಯ ವಿಲ್ಲವೆಂದು ಪರಮಾತ್ಮನು ಹೇಳಿದನು.ಏಕೆಂದರೆ ಧರ್ಮಾಧರ್ಮ ವಿವೇಕ ಬುದ್ಧಿಯುಳ್ಳ ಶ್ರೋತ್ರಿಯನು ಕೂಡ ಮೋಹ ದಿಂದ ಜುಗುಪ್ಸಿತ ಕರ್ಮಗಳನ್ನು,ಮಾಡಿ ಪತಿತನಾಗುವನು. ಎಲ್ಲರ ದುಃಖ ನಷ್ಟ ವಾಗುವದು ಕಠಿಣವಾಗಿದ್ದು ನಿನ್ನ ಉದ್ಧಾರ ವನ್ನು ಮಾತ್ರ ನೀನು ಮಾಡಿಕೊಳ್ಳಬೇಕು. ಎಂದು ಉಪದೇಶಿಸಿದನು. ಆಧ್ಯಾತ್ಮ ರಾಜ ವಿದ್ಯೆ ಎಂದರೇ ಸಗುಣ ಬ್ರಹ್ಮವು ಮುಖ್ಯ ವಾಗಿದ್ದು ಸಗುಣ ಬ್ರಹ್ಮೊಪಾಸನೆಯನ್ನು ಮಾಡುವುದು. ದೇಶ ಕಾಲ ವಸ್ತು ವ್ಯಕ್ತಿ ಘಟನೆ ಪರಿಸ್ಥಿತಿಗಳಲ್ಲಿ ಯಾವಾಗಲೂ ಸಗುಣ ಪರಮಾತ್ಮನ ಸಂಬಂಧವನ್ನು ಕಾಣುವುದು.
ಕೋಕಿಲಾ ವ್ರತ ಪೂಜಾ ವಿಧಿ
ಮಥುರಾನಗರಕ್ಕೆ ರಾಜನಾದ ಶತ್ರುಘ್ನನೆಂಬ ರಾಜನ ಹೆಂಡತಿಯಾದ ಕಿರ್ತಿಮಾಲೆಯ ಸೌಭಾಗ್ಯ ಪ್ರಾಪ್ತಿಗಾಗಿ ವ್ರತವನ್ನು ಹೇಳಬೇಕೆಂದು ಕೇಳಿದಾಗ ವಶಿಷ್ಟರು ಹೇಳಿದರು. ಹಿಂದೇ ದಕ್ಷ ಪ್ರಜಾಪತಿ ಯಜ್ಞ ಮಾಡುವಾಗ ಅಲ್ಲಿಗೆ ಬಂದ ನಾರದರು ಅಲ್ಲಿ ಶಿವನನ್ನು ನೋಡದೇ ಕೈಲಾಸಕ್ಕೆ ಹೋಗಿ, “ ಯಜ್ಞಕ್ಕೆ ನಿನ್ನನ್ನು ಆಮಂತ್ರಿಸಿಲ್ಲ “ ಎಂದು ಹೇಳಿದಾಗ ಈಶ್ವರನು ಅಸಮಾಧಾನ ಗೊಂಡನು. ಪಾರ್ವತಿಯು ಬೇಡವೆಂದರೂ ಗಣಪತಿಯೊಂದಿಗೆ ಯಜ್ಞಕ್ಕೆ ಹೋದಳು,ದಕ್ಷನು ಅವಮಾನಿಸಿದ್ದಕ್ಕೆ ಸತಿಯು ಕುಂಡದಲ್ಲಿ ಹಾರಿದಳು. ಅವಳನ್ನು ಎತ್ತಿಕೊಂಡು ಗಣಪತಿಯು ದೇವತೆಗಳೊಂದಿಗೆ ಯುದ್ಧ ಮಾಡುತ್ತಿರುವಾಗ ವೀರಭದ್ರನು ಬಂದು ಯಜ್ನ್ ಧ್ವಂಸ ಮಾಡಿದನು. ಎಲ್ಲರೂ ಕೈಲಾಸಕ್ಕೆ ಹೋಗಿ ಶಿವನನ್ನು ಸ್ತುತಿಸಿದ ಮೇಲೆ ಶಿವನು ಎಲ್ಲರನ್ನೂ ಕ್ಷಮಿಸಿ “ ನಿನ್ನಿಂದಲೇ ವಿಘ್ನ ಉಂಟಾಯಿತು. ನೀನು ಕೋಕಿಲೆಯಾಗು ಎಂದು ಪಾರ್ವತಿಯನ್ನು ಶಪಿಸಿದನು. ಅವಳು ಕೋಕಿಲೆಯಾಗಿ ಮತ್ತೆ ಹಿಮಾಚಲನ ಮಗಳಾಗಿ ಶಿವನನ್ನು ಹೊಂದುತ್ತಾಳೆ.
..........ಮುಂದುವರಿಯುವುದು
No comments:
Post a Comment