ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯಿಂದಲೇ ಹೊಸ ವರ್ಷದ ಮೊದಲ ದಿನ ಆರಂಭವಾಗುತ್ತದೆ. ಸಂವತ್ಸರ ಬದಲಾಗುವುದು ಕೂಡ ಅಂದಿನಿಂದಲೇ.
ಚೈತ್ರ ಮಾಸದ ಮೊದಲದಿನದಂದು ಆಚರಿಸುವ ಈ ಹಬ್ಬ ಯುಗ+ಆದಿ ಅಂದರೆ ಹೊಸ ವರ್ಷದ ಆರಂಭ

ಎಂಬುದನ್ನು ಸೂಚಿಸುತ್ತದೆ. ಯುಗಾದಿಯಂದು ಸೂರ್ಯ ನಮಸ್ಕಾರ, ಪಂಚಾಂಗ ಶ್ರವಣ, ಬೇವು-ಬೆಲ್ಲ ಸೇವನೆ ಪ್ರಮುಖವಾದದ್ದು. ಮನೆಯ ಕುಲದೇವರ ಪೂಜೆ ಯಥಾಸಾಂಗ ನೆರವೇರಿಸಿ ನೈವೇದ್ಯದ ಜೊತೆಗೆ ಬೇವು ಬೆಲ್ಲ ಜೀರಿಗೆ ಇತ್ಯಾದಿ ಔಷಧಿ ಪದಾರ್ಥಗಳನ್ನೂ ಕೂಡಿಸಿ ಕಲಸಿ ನೈವೇದ್ಯ ತೋರಿಸುವ ಪರಂಪರೆಯಿದೆ. ತೀರ್ಥ ತೆಗೆದುಕೊಂಡ ಮೇಲೆ ಮನೆಯ ಎಲ್ಲರೂ ಬೇವು ಬೆಲ್ಲವನ್ನು ಸ್ವೀಕರಿಸಬೇಕು. ಅದೇ ದಿನ ಮನೆಯ ಹೊರಾವರಣದಲ್ಲಿ ಒಂದು ಉತ್ತಮವಾಗಿ ಇರುವ ತೊಳೆದ ಕೋಲಿಗೆ ಸುಂದರವಾಗಿ ಅಲಂಕರಿಸಿ ಮನೆಯಲ್ಲಿಯ ಜರದ ಅಂಚು ಇರುವ ಸೀರೆ ಅಥವಾ ರವಿಕೆಜೊತೆಗೆ ಬೇವಿನ ಚಿಕ್ಕ ಟೊಂಗೆ ಸಕ್ಕರೆ ಸರಹಾರ ಕಟ್ಟಿ ಮೇಲೊಂದ ತಾಮ್ರದ ಅಥವಾ ಹಿತ್ತಾಳೆಯ ತಂಬಿಗೆಯನ್ನು ಬೋರಲು ಹಾಕುವರು, ತಂಬಿಗೆಯ ಮೇಲೆ ಅರಿಶಿಣ ಕುಂಕುಮ ಗಂಧ ಅಕ್ಷತೆ ಹಚ್ಚಿ ಹೂವಿನಹಾರೊಂದು ಕಟ್ಟಿ ಪೂಜಿಸಿ ನಮಸ್ಕರಿಸುವರು ಇದಕ್ಕೆ ಧರ್ಮಧ್ವಜವೆಂದು ಕರೆಯುತ್ತಾರೆ, ಗುಡಿಕಟ್ಟುವುದು ಎಂತಲೂ ಕರೆಯುತ್ತಾರೆ ಗುಡಿ ಎಂದರೆ ಧ್ವಜ ಇದು ಜಯಗಳಿಸಿದ ಸಂಕೇತವೂ ಹೌದು ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವು. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ.
ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಯುಗಾದಿ ಎಂದೂ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಯುಗಾದಿ ಎಂದೂ ಕರೆಯುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ರೂಢಿಯಲ್ಲಿದೆ.ವೇದಾಂಗ ಜ್ಯೋತಿಷದ ಪ್ರಕಾರ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯಯಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ ಸಾಮಾನ್ಯವಾಗಿ ಇದು ಏಪ್ರಿಲ್ 14 ಅಥವಾ 15 ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ಪುರಾಣಗಳ ಪ್ರಕಾರ, ಈ ದಿನವೇ ಬ್ರಹ್ಮ ದೇವರು ಬ್ರಹ್ಮಾಂಡವನ್ನು ಸೃಷ್ಟಿಸಿದನು. ನಂತರ ಅವರು ದಿನಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳನ್ನು ರಚಿಸಿದರು.
ಆದ್ದರಿಂದ, ಯುಗಾದಿಯನ್ನು ಬ್ರಹ್ಮಾಂಡದ ಸೃಷ್ಟಿಯ ಮೊದಲ ದಿನ ಎನ್ನುವ ನಂಬಿಕೆಯಿದೆ. 12 ನೇ ಶತಮಾನದಲ್ಲಿ ಪ್ರಸಿದ್ಧ ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರ ಖಗೋಳ ಲೆಕ್ಕಾಚಾರವು ಸೂರ್ಯೋದಯದಿಂದ ಯುಗಾದಿಯ ದಿನವನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನವೆಂದು ನಿರ್ಧರಿಸಿದರು. ಇನ್ನು ಜ್ಯೋತಿಷ್ಯದ ಪ್ರಕಾರ ಕ್ರಿ.ಪೂ 18.02.3102 ಕ್ಕೆ ಅನುಗುಣವಾದ ಚೈತ್ರದ ಪ್ರಕಾಶಮಾನವಾದ ಹದಿನೈದನೆಯ ಮುಂಜಾನೆ ಶ್ರೀ ಕೃಷ್ಣನ ನಿರ್ಯಾಣವನ್ನು ಪ್ರಾರಂಭಿಸದನು ಎಂದು ಹೇಳಲಾಗುತ್ತದೆ. ಈ ದಿನ ಕಲಿಯುಗದ ಆರಂಭವನ್ನು ಸೂಚಿಸುತ್ತದೆ. ಆದ್ದರಿಂದ ಯುಗಾದಿಯನ್ನು ಕಲಿಯುಗದ ಆರಂಭದ ದಿನವೆಂದು ನಂಬಿಕೆ
No comments:
Post a Comment