Saturday, April 08, 2023

KING GLORY OF GOVINDA RAAJA ಗೋವಿಂದರಾಜ ದೇವರ ರಾಜವೈಭವ

KING GLORY OF GOVINDA RAAJA  ಗೋವಿಂದರಾಜ ದೇವರ ರಾಜವೈಭವ


ಅ ) ಚೈತ್ರ ಶುದ್ಧ ರಾಮ ನವಮಿ                      

1. ಗೋವಿಂದ ಉದಯ ರಾಗ, ಕಕ್ಕಡಾರತಿ, ಗೋವಿಂದರಾಜ ಕರಾವಲಂಬನ ಸ್ತೋತ್ರ, ಕಟ್ಟೆಯ ಮುಂದಿನ ಆವಾರದ ಸ್ವಚ್ಚತಾ ಕಾರ್ಯ ಭೀಮಾನದಿಯಲ್ಲಿ ಸ್ನಾನ ಸಂಧ್ಯಾದಿಗಳನ್ನು ಮುಗಿಸಿ ಬಂದು ಮಾಡುವ ಉರುಳು ಸೇವೆ, ಮಾಡಿ ಮಡಿ ನೀರು ತಂದು ಸಂಗ್ರಹಿಸುವ ರೂಢಿ.

2. ಕಟ್ಟಿ ಮನೆತನದವರಿಂದ, ಬ್ರಾಹ್ಮಣ ಬ್ರಾಹ್ಮಣೇತರ ಜನಾಂಗದವರಿಂದ  ಶ್ರೀ ರಾಮ ದೇವರ ಪೂಜೆ  ಜೊತೆಗೆ ಶ್ರೀ ಲಕ್ಷ್ಮೀ ಗೋವಿಂದರಾಜ ದೇವ  ಪೂಜಾ, ಹರಿವಾಣ ಸೇವಾ, ವಜ್ರ ಕವಚ ಸ್ತೋತ್ರ,  ನೈವೇದ್ಯ ಮತ್ತು ಆರತಿ, ಕ್ಷಮಾಪಣೆ ಬೇಡಿ, ವೈಶ್ವದೇವ ಬಲಿಹರಣಾದಿಗಳನ್ನು ಮುಗಿಸಬೇಕು.  ನೈವೇದ್ಯಕ್ಕೆ- ಕಡಲೆ ಬೆಳೆ ಕೋಸಂಬರಿ,ಮಾವಿನ ಕಾಯಿ ಪಾನಕ, ( ಶುಂಠಿ ಸಕ್ಕರೆ ಮೆಣಸು,ಕೊಬ್ಬರಿ ಮಿಶ್ರ ಕಲಿ ಮೋದಕಗಳು,)  

ಬ ) ಎರಡನೇ ದಿನ ಚೈತ್ರ ಶುದ್ಧ ದಶಮಿ  .

1. ಗೋವಿಂದ ಸುಪ್ರಭಾತ, ಜಾಗಿಯೇ ಗೋವಿಂದ ರಾಜ, ಹರಿ ಗೋವಿಂದ ಜಯ ಜಯ, ಗೋವಿಂದ ಕಕ್ಕಡಾರತಿ, ಉದಯರಾಗ ಇತ್ಯಾದಿ .... 

ದೊಡ್ಡ ಕಟ್ಟೆಯ ಮೇಲ, ಮೂಲ ಕಟ್ಟೆಯ ಕೆಳಗೆ ಪೂರ್ವಾಭಿಮುಖವಾಗಿ ಮಣೆಯ ಮೇಲೆ ಶ್ರೀ ಗೋವಿಂದ ರಾಜ ದೇವರ ಭಾವಚಿತ್ರ ಫೋಟೋ ಇಟ್ಟು ತಂಬಿಗೆಯ ಮೇಲೆ ಕಾಯಿ ಕಲಶ ಪೂಜೆ, ಹೂ,ಕಾಯಿ,ಹಣ್ಣು, ನವಗ್ರಹ ವಿದ್ಯಾ, ಅಡಿಕೆ,ಕೊಬ್ಬರಿ ಅರಿಷಿಣ ಬೇರು   ದೀಪ ಹಚ್ಚಿ ಇಟ್ಟು ಒಬ್ಪರು ಪೂಜೆ ಮಾಡಬೇಕು, ಭಕ್ತರು ಗಳು ಅರಿಷಿಣ ಕುಂಕುಮ ಬುಕ್ಕಿಟ್ಟು  ಅಕ್ಷತೆ ಏರಿಸಿ ನಮಸ್ಕಾರ ಮಾಡಿದಾಗ ಏನಾದರೂ ಪ್ರಸಾದ್ ಕೊಡಬೇಕು.ಆ ಮೇಲೆ..

2. ಕಟ್ಟಿ ಮನೆತನದವರಿಂದ ಬ್ರಾಹ್ಮಣ ಬ್ರಾಹ್ಮಣೇತರ ಜನಾಂಗದವರಿಂದ ಉರುಳು ಸೇವೆ, ದಕ್ಷಿಣ ವಾಹಿನಿ ಭೀಮಾ ನದಿಯಿಂದ ದಂಡ ನಮಸ್ಕಾರ ನಂದಾದೀಪ ಸಹಿತ ಶ್ರೀ ಲಕ್ಷ್ಮೀ ಗೋವಿಂದರಾಜ ದೇವರ ಪೂಜಾ, ದೇವರ ಅಭಿಮಂತ್ರಿಸಿದ ಕೇಸರಿ,ಹಳದಿ,ಕೆಂಪು, ಬಿಳಿ ದೋರಗಳು. ಅಷ್ಟೋತ್ತರ, ಅಭಿಷೇಕ, ನೈವೇದ್ಯ, ಆರತಿ ಮಂತ್ರ ಪುಷ್ಪ, ಕ್ಷಮಾಪಣೆ ಕಟ್ಟೆಯ ಕೆಳಗಿದ್ದವರು  ದೇವರ ಸ್ತುತಿ, ಪ್ರಾರ್ಥನಾ, ಶ್ಲೋಕಗಳು, ದಾಸರ ಪದಗಳು ಹಾಡುಳು ಹೇಳುತ್ತಲಿರಬಹುದು

3. ಗೋವಿಂದಪುರ ಗ್ರಾಮ ದೇವರ ಊದುತ್ತ ಬಾರಿಸುತ್ತ ಜಯಕಾರದೊಂದಿಗೆ ಭಕ್ತಗಣ ದೊಂದಿಗೆ ಶ್ರೀ ಗೋವಿಂದರಾಜ ದೇವರ ಪಲ್ಲಕ್ಕಿಯ ಆಗಮನ, ಭೆಟ್ಟಿ,  ಮೂಲ ದೇವರ ಕಟ್ಟೆಗೆ ಪರಿಕ್ರಮಣ

4. ಲಕ್ಕವ್ವ (ಶ್ರೀ ಲಕ್ಷ್ಮೀದೇವಿ), ಚಂದ್ರವ್ವ (ಭಗವತಿ ಚಂದ್ರಲಾಂಬಾ ದೇವಿ) ಪಲ್ಲಕ್ಕಿಗಳ ಆಗಮನ  ಭೆಟ್ಟಿ, ಗ್ರಾಮ ದೇವರು ಯಜಮಾನ ಗೋವಿಂದಪ್ಪನ ಪಲ್ಲಕ್ಕಿ ಮತ್ತು ಮೂಲ ದೇವರ ಕಟ್ಟೆಗೆ ಪರಿಕ್ರಮಣ.  

5. ಲಕ್ಕವ್ವ (ಶ್ರೀ ಲಕ್ಷ್ಮೀದೇವಿ), ಚಂದ್ರವ್ವ (ಭಗವತಿ ಚಂದ್ರಲಾಂಬಾ ದೇವಿ) ಒಂದೇ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ಮತ್ತೊಮ್ಮೆ ಗ್ರಾಮ ದೇವರ ಪಲ್ಲಕ್ಕಿ ಮತ್ತು ಮೂಲ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಪರಿಕ್ರಮಣ ಭೋಜನಾನಂತರ ಮತ್ತೆ ಹಾಡು ಕುಣಿತ, ಆಮೇಲೆ ರಾತ್ರಿ ಜಾಗರಣೆ “ ಮಲಗೈ ಗೋವಿಂದ “ ಹಾಡು  ಹೇಳಿ ವಿಶ್ರಾಮ 

ಕ ). ಮೂರನೇ ದಿನ ಚೈತ್ರ ಶುದ್ಧ ಏಕಾದಶಿ  

ಸುಪ್ರಭಾತ ಸಪ್ತಕ, ಉಠಿ ಉಠಿ ಗೋವಿಂದ, ಮಾಂ ಪಾಹಿ ಪಾಹಿ ಪ್ರಭೋ 

ಕಟ್ಟಿ ಮನೆತನದವರಿಂದ ಬ್ರಾಹ್ಮಣ ಬ್ರಾಹ್ಮಣೇತರ ಜನಾಂಗದವರಿಂದ ಉರುಳು ಸೇವೆ, ದಕ್ಷಿಣ ವಾಹಿನಿ ಭೀಮಾ ನದಿಯಿಂದ ದಂಡ ನಮಸ್ಕಾರ ಶ್ರೀ ಲಕ್ಷ್ಮೀ ಗೋವಿಂದರಾಜ ದೇವ ಪೂಜಾ,ಅಷ್ಟೋತ್ತರ, ಶ್ರೀ ಗೋವಿಂದರಾಜ ದೇವರ ಯಂತ್ರ ಅಥವಾ ಮಂಡಲ ಪೂಜೆ ಅಲ್ಲದೆ ಬಣ್ಣದ ದೋರಗಳ ಪೂಜೆ, ಅಭಿಷೇಕ. ಫಲಾಹಾರ ನೈವೇದ್ಯ, ಆರತಿ, ಮಂತ್ರ ಪುಷ್ಪ , ಕ್ಷಮಾಪಣೆ   ನಮಸ್ಕರಿಸಲು ಬಂದು ಪ್ರತಿಯೊಬ್ಬರಿಗೂ ದೋರ, ಪ್ರಸಾದ ಕೊಡಬೇಕು 

1. ಯಜಮಾನ ದೇವರಾದ ಶ್ರೀ ಗೋವಿಂದರಾಜ ದೇವರ ಕಟ್ಟೆಯ ಎದುರು, ಗೋವಿಂದಪುರ ಗ್ರಾಮ ದೇವರಪಲ್ಲಕ್ಕಿ , ಲಕ್ಕವ್ವ (ಶ್ರೀ ಲಕ್ಷ್ಮೀದೇವಿ), ಚಂದ್ರವ್ವ (ಭಗವತಿ ಚಂದ್ರಲಾಂಬಾ ದೇವಿ) ಪಲ್ಲಕ್ಕಿಗಳಿಗೆ ಕ್ಷೇತ್ರ ಪಾಲ, ಭೂತ ರಾಜ ರಗಡ ಮಲ್ಲನ ಭೂತಾಳ ಸಿದ್ಧ (ರಕ್ಷಾಟ ಮಲ್ಲ) ಪಲ್ಲಕ್ಕಿಯ ಭೆಟ್ಟಿ, ಪ್ರದಕ್ಷಿಣೆ  (ಗೋವಿಂದಪುರ) ಗೊಳಗಿ ಗ್ರಾಮದ ನೆರೆ ಊರು ಗಳಿಂದ ತಂದೆಯ ಯಜಮಾನನ ಭೆಟ್ಟಿಗಾಗಿ ಆಗಮಿಸಿರುವ ಪಲ್ಲಕ್ಕಿಗಳು , 

1.1 ಉಮರಜ ಗ್ರಾಮ ದೇವರು ರೇವಣಶಿದ್ಧನ ದೇವರ ಪಲ್ಲಕ್ಕಿಯ ಶ್ರೀ ಗೋವಿಂದ ರಾಜ ದೇವರ ಕಟ್ಟೆಗೆ ಪ್ರದಕ್ಷಿಣೆ ,  

1.2 ಮೊರಬಗಿಯ ಶ್ರೀ ಗೋವಿಂದ ರಾಜ ದೇವರ ಪಂಚಾಯತನ, ಶ್ರೀ ಗೋವಿಂದ ರಾಜ ದೇವರು, ಕೆಳಗಡೆಯಲ್ಲಿ ಮಹರ್ಷಿ ಅಗಸ್ತ್ಯರು , ಎಡ ಬಲಗಳಲ್ಲಿ  ಲಕ್ಷ್ಮೀದೇವಿ, ಭಗವತಿ ಚಂದ್ರಲಾಂಬಾ ದೇವಿ, ಮೂಲದೇವರ ಬಲಭಾಗದಲ್ಲಿ ಕ್ಷೇತ್ರ ಪಾಲಕ .ಭೂತರಾಜ  ಹೀಗಿರುವ ಅಭೂತಪೂರ್ವ ಮೂರ್ತಿ ಸ್ಥಾಪಿಸಿದ ಪಲ್ಲಕ್ಕಿಯು ಆಗಮಸಿ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಭೆಟ್ಟಿ ಮತ್ತು ಪರಿಕ್ರಮಣ    

1.3 ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಚಿತ್ತ ಈ ಷಟ್ ಸ್ಥಳ ಕ್ರಿಯೆಗಳಲ್ಲಿಯ ಮಲ ನಿವಾರಣ ಸಿದ್ಧಿಯನ್ನು ಪಡೆದ ಚತುರ್ದಶ ರುದ್ರಾಕ್ಷ ರೂಪಿಯಾದ ಭಂಡಾರಕವಠೆಯ ಮಳಸಿದ್ಧನ ಪಲ್ಲಕ್ಕಿ ಷಟ್ ಮಲಗಳಾತೀತನಾದ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಭೆಟ್ಟಿ ಮತ್ತು ಪರಿಕ್ರಮಣ, 

1.4  ಕೊಂತೆವ್ವನ ಬಬಲಾದಿಯ ಕುಂತಿ ದೇವಿಯ ( ಸೋದರತ್ತೆ, 
ವಸುದೇವನ ಸಹೋದರಿ ) ಪಲ್ಲಕ್ಕಿ ವೈಭವದೊಂದಿಗೆ ಆಗಮಿಸಿ ಜೊತೆಗೆ 
ತನ್ನ ಐವರೂ ಮಕ್ಕಳ ಧರ್ಮಜ್ಞ ವೃಕೊದರ, ಧನಂಜಯ ( ಕರ್ಣಸಹಿತ, ಕರ್ಣನ  ಪಲ್ಲಕ್ಕಿ ಬಂದರೆ ಅರ್ಜುನನ ಪಲ್ಲಕ್ಕಿ ಬರುವುದಿಲ್ಲ ) ನಕುಲ, ಸಹದೇವ ರ  ಪಲ್ಲಕ್ಕಿಗಳೂ ಆಗಮಿಸಿ ಸೋದರಳಿಯ ಮೂಲ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಭೆಟ್ಟಿ ಮತ್ತು ಪರಿಕ್ರಮಣ, 

1.5  ಅರಿಕೇರಿ ಅಮೋಘಸಿದ್ಧ ದೇವರ (ಯುಧಿಷ್ಟಿರನೆಂದು ಕರೆಯುವ ಪದ್ಧತಿ) ಪಲ್ಲಕ್ಕಿಯ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಪ್ರದಕ್ಷಿಣೆ , ( ಕುಂತಿದೇವಿಯ ಹಿರಿಯ ಪುತ್ರನ ಅವತಾರ )

1.6  ಸುಸಲಾದಿ ಮುತ್ತಪ್ಪ ದೇವರ ಪಲ್ಲಕ್ಕಿಯ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಪ್ರದಕ್ಷಿಣೆ

1.7  ಮುಧೋಳದ ಪರಮಾನಂದ ದೇವರ ಪಲ್ಲಕ್ಕಿಯ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಪ್ರದಕ್ಷಿಣೆ

1.8  ಬಾಲಗಾವದ ಪ್ರಭುರಾಜ ದೇವರ ( ಶ್ರೀ ಗೋವಿಂದರಾಜ ದೇವರ ಪುತ್ರನೆಂದು ಹೇಳುವ ವಾಡಿಕೆ ಇದೆ ) ಎರಡು ಚೌಕಿಗಳು ಆಗಮಿಸಿ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಪ್ರದಕ್ಷಿಣೆ

1.9  ಮಹಾರಾಷ್ಟ್ರದ ಕೊಥಳಿ ಗ್ರಾಮದಲ್ಲಿಯ ದೇವರು  ಕಿರೀಟದಲ್ಲಿ ತ್ರಿಶೂಲ ಮತ್ತು ಚಂದ್ರನನ್ನು ಹೊಂದಿದ


ಸುಂದರವಾದ ಮುರ್ತಿಯುಳ್ಳ  ಮಂಗರಾಯ ದೇವರ ( ಮಂಗೇಶ )ಪಲ್ಲಕ್ಕಿಯ ಶ್ರೀ ಗೋವಿಂದರಾಜ ದೇವರ ಕಟ್ಟೆಗೆ ಪ್ರದಕ್ಷಿಣೆ

2.   ಕ್ಷೇತ್ರ ಪಾಲ, ಭೂತ ರಾಜ ಭೂತಾಳ ಸಿದ್ಧ (ರಕ್ಷಾಟ ಮಲ್ಲ) ರಗಡ ಮಲ್ಲನ ಪಲ್ಲಕ್ಕಿಯು ತಾನು ಸ್ವತಃ ತನ್ನ


ಸುತ್ತು ತಿರುಗುತ್ತ ಗೋವಿಂದಪುರ ಗ್ರಾಮ ದೇವರಪಲ್ಲಕ್ಕಿ , ಲಕ್ಕವ್ವ (ಶ್ರೀ ಲಕ್ಷ್ಮೀದೇವಿ), ಚಂದ್ರವ್ವ (ಭಗವತಿ ಚಂದ್ರಲಾಂಬಾ ದೇವಿ) ಪಲ್ಲಕ್ಕಿಗಳಿಗೆ ಮತ್ತು ಮೇಲ್ಕಾಣಿಸಿದ ದೇವರುಗಳಿಗೆ ಪ್ರದಕ್ಷಿಣೆ ಹಾಕುವ ರೀತಿ ಅವಿಸ್ಮರಣೀಯ ( ಸಮಸ್ತ ಗ್ರಹಗಳು ತಮ್ಮ ಸುತ್ತಲೂ ತಿರುಗುತ್ತ ಸೂರ್ಯನಿಗೆ ಪ್ರದಕ್ಷಿಣೆ ಹಾಕುವ ತೆರ )

3.  ನೆರೆದ ಭಕ್ತ ಗಣರಿಂದ ಶ್ರೀ ಗೋವಿಂದರಾಜ ದೇವರ ಕಟ್ಟೆಯ ಎದುರು ಹುಣಸೇ ಗಿಡದ ಆಶ್ರಯದಲ್ಲಿ ಹಲಗೆ,


ದಿಮ್ಮು, ಸನಾದಿ,ತಾಶಾ  ಕೊಂಬು, ಶಿಂಗ, ಮೃದುಂಗ ತಾಳಗಳ ಸಂಭ್ರಮದ ವೈಭವ ದೊಂದಿಗೆ ಸಾಮೂಹಿಕವಾಗಿ ಭಕ್ತಿ ಪರವಶರಾಗಿ ಹಾಡುಗಳು ಹೇಳುವುದು

4.  ಉತ್ಸಾಹದ ಭರದಲ್ಲಿ ಭಕ್ತರಿಂದ ಶ್ರೀ ಗೋವಿಂದರಾಜ ದೇವರ ಕಟ್ಟೆಯ ಎದುರು ಹುಣಸೇ ಗಿಡದ ಆಶ್ರಯದಲ್ಲಿಯೇ 


ಗೋವಿಂದ ಗೀತ, ಅಕ್ಷರ ವಂದ್ಯ ಗೋವಿಂದ ಇತ್ಯಾದಿಗಳ ಗಾಯನ ಸೇವೆ ಮಾಡುತ್ತ ಹಾಡುತ್ತ ಕುಣಿಯುತ್ತ ಹಲಗೆ, ದಿಮ್ಮು, ಸನಾದಿ,

ತಾಶಾ  ಕೊಂಬು, ಶಿಂಗ, ಮೃದುಂಗ ತಾಳಗಳ ಸಂಭ್ರಮದ ವೈಭವದೊಂದಿಗೆ  ಜಯ ಘೋಷದೊಂದಿಗೆ ವಿಜ್ರುಂಭಣೆಯಿಂದ ಶ್ರೀ ಗೋವಿಂದರಾಜ ದೇವರ ಕಟ್ಟೆಯ ಮೇಲಿರುವ 
ಪೂಜಿಸಿದ ಮೊಸರು ಗಡಿಗೆ ಒಡೆಯುವ ಕಾರ್ಯ ಕ್ರಮವು 

ಆನಂದೊತ್ಸಾಹದಿಂದ ಒಕ್ಕಟ್ಟಿ ನಿಂದ ನೆರವೇರಿಸುತ್ತಾರೆ.  ಗೋಪಾಲ ಕಾಲಾ ಗೋಡೆ ಶಾಲಾ | ಗೋಪಾಲಾನೀ ಗೋಡೆ ಕೇಲಾ || ಎನ್ನುತ್ತ. ಮಂಗಳ ಆರತಿ, ಕ್ಷಮಾಪಣೆ, ನಿನದೆಲ್ಲವೂ ನಿನಗರ್ಪಣೆ ಈ ಹಾಡನ್ನು ಹೇಳಿ ಸಮಾಪ್ತಿಮಾಡಿ ತಮ್ಮ ತಮ್ಮ ಇಚ್ಛೆಯನ್ನು ದೇವರಲ್ಲಿ ಹರಕೆ ಹೊತ್ತು ಬೇಡಿಕೊಂಡು ತೆಂಗಿನಕಾಯಿಯನ್ನು ಬಟ್ಟೆಯಲ್ಲಿ ಕಟ್ಟಿ ಅಶ್ವತ್ಥ ಮರಕ್ಕೆ ಅರ್ಪಿಸುವ ರೂಢಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಂದ ನಡೆದು ಬಂದಿದೆ, ಇಚ್ಚಾಪೂರ್ತಿ ನಂತರ ಆ ಕಾಯಿಯನ್ನು ಇಳಿಸಿ ಅಶ್ವತ್ಥ ಕಟ್ಟೆಗೆ ಶಕ್ತ್ಯಾನುಸಾರ ಕೃತಜ್ಞತಾ ಭಾವದಿಂದ ಪ್ರದಕ್ಷಿಣೆ ಹಾಕುವುದು  ಆಮೇಲೆ ಉಪಹಾರಾನಂತರ ಮತ್ತೆ ಹಾಡು ಕುಣಿತ, ಇತ್ಯಾದಿ ರಾತ್ರಿ ಜಾಗರಣೆ “ ಮಲಗೈ ಗೋವಿಂದ “ ಹಾಡು  ಹೇಳಿ ವಿಶ್ರಾಮ 

5) ಗೋವಿಂದಪುರ ಸುತ್ತಮುತ್ತಲಿನ ಗ್ರಾಮದ ಪೈಲವಾನ, ಜಟ್ಟಿಗಳಿಂದ ಶ್ರೀ ದೇವರ ಎದುರಿಗಿನ ಪ್ರಾಂಗಣದಲ್ಲಿ ಕುಸ್ತಿ ಕಾರ್ಯಕ್ರಮ 

ಡ ) ನಾಲ್ಕನೇ ದಿನ ಚೈತ್ರ ಶುದ್ಧ ದ್ವಾದಶಿ              

1. ಬನದ ಲಕ್ಕವ್ವಗೆ ಚಂದ್ರವ್ವನೆಂದೂ ಕರೆಯುವ ವಾಡಿಕೆ ಇಲ್ಲಿಯ ದೇವಾಲಯ ಗರ್ಭ ಗುಡಿಯಲ್ಲಿ ದೇವಿಯ ನೈಸರ್ಗಿಕ ಸ್ವಯಂಭು ಮೂರ್ತಿ, ಆವಾರ, ವಿಶಾಲ ಪ್ರಾಂಗಣ, ಪರಿಸರ ಆಹ್ಲಾದಕರ ಎದುರಿಗೆ ಒಂದು ಮಾಲಗಂಬ (ದೀಪ ಸ್ಥಂಭ)           

2.ಲಕ್ಕವ್ವ (ಶ್ರೀ ಲಕ್ಷ್ಮೀದೇವಿ), ಚಂದ್ರವ್ವ (ಭಗವತಿ ಚಂದ್ರಲಾಂಬಾ ದೇವಿ) ಒಂದೇ ಪಲ್ಲಕ್ಕಿಯಲ್ಲಿ ಸ್ಥಾಪಿಸಿದ್ದು ಆ ಪಲ್ಲಕ್ಕಿಯಲ್ಲಿಯ ದೇವಿ  ಗರ್ಭ ಗುಡಿಯಲ್ಲಿ ದೇವಿಯ ನೈಸರ್ಗಿಕ ಸ್ವಯಂಭು ಮೂರ್ತಿ,ಪೂಜೆ ಭಕ್ತರಿಗೆ ದರ್ಶನ ಪಡೆಯುವ ಭಾಗ್ಯ  

3.ಈ ದಿನ ಗೋವಿಂದಪುರ ಗ್ರಾಮ ದೇವರು, ಶ್ರೀ ಲಕ್ಷ್ಮೀದೇವಿ,ಭಗವತಿ ಚಂದ್ರಲಾಂಬಾ ದೇವಿ,  ಕ್ಷೇತ್ರ ಪಾಲ, ಭೂತರಾಜ ರಗಡ ಮಲ್ಲ (ಭೂತಾಳ ಸಿದ್ಧ) ಎಲ್ಲರಿಗೂ ನೈವೇದ್ಯ ಮತ್ತು ಶೀದಾ ಕೊಡಬೇಕಾದ ವಾಡಿಕ ಇದೆ ( ಕಟ್ಟೆ ಗೋವಿಂದರಾಜ ದೇವರ ನೈವೇದ್ಯ ಹವೆಯಲ್ಲಿ ಬೇಯಿಸಿದ ಕಲಿ ಮೋದಕಗಳು, ಅಕ್ಕಿ, ಗೋಧಿ, ಕಡಲೇ ಬೇಳೆ, ಬೆಲ್ಲ, ಉಂಬುವ ಎಣ್ಣೆ, ಜೊತೆಗೆ ಅರಿಷಿನ, ಕುಂಕುಮ, ಕೊಬ್ಬರಿ ಎಣ್ಣೆ ) 

4.ಕಟ್ಟಿ ಮನೆತನದವರಿಂದ ಬ್ರಾಹ್ಮಣ ಬ್ರಾಹ್ಮಣೇತರ ಜನಾಂಗದವರಿಂದ ಸೇವೆ, ದಂಡ ನಮಸ್ಕಾರ ಗರ್ಭ ಗುಡಿಯಲ್ಲಿ ಶ್ರೀ ಲಕ್ಷ್ಮೀ ಗೋವಿಂದರಾಜ ದೇವ ಸಹಿತ ದೇವಿಯರ  ಪೂಜಾ,ಅಭಿಷೇಕ ಪುರುಷ ಸೂಕ್ತ ಶ್ರಿಸೂಕ್ತ ಘೋಷಣೆ, ನೈವೇದ್ಯ, ಆರತಿ, ಮಂತ್ರ ಪುಷ್ಪ, ಕ್ಷಮಾಪಣೆ, ಸಮೀಪದಲ್ಲಿರುವ ಸಪ್ತ ಮಾತೆಯರ ( ಜಕಣೆಯರು ) ದೇವಿಯರ ಉಡಿ ತುಂಬುವುದು. 

5.ಪೂಜೆ ಮಾಡಿದ ಶ್ರೀ ಗೋವಿಂದರಾಜ ದೇವರ ಯಂತ್ರ ಅಥವಾ ಮಂಡಲ  ವನ್ನು ಭಕ್ತರು ಅವರ ಮನೆ, ಅಂಗಡಿ, ವ್ಯವಸಾಯ ಸ್ಥಳಗಳಲ್ಲಿ ನಿರಂತರ ಪುಜಿಸುತ್ತ ಹೋಗುವ ಪರಂಪರೆಯು ಇದೆ ಇದರಿಂದ ಅಭಿವೃದ್ಧಿ ಪಡೆದ ಅನುಭವವಗಳು ಹೇಳುತ್ತಾರೆ. ಮತ್ತು  ಪೂಜೆ ಮಾಡಿದ 25 ಗ್ರಂಥಿಗಳುಳ್ಳ ( ಯಾವುದೇ ಬಣ್ಣದ ) ದೋರಗಳನ್ನು ಭಕ್ತರು ತಮ್ಮ ಮಣಿಕಟ್ಟಿನಲ್ಲೋ, ಕೊರಳಲ್ಲೋ ಧರಿಸುವ ಪರಿಪಾಠ ವಿದೆಯೆಂದು ಇದರಿಂದ ಮಾನಸಿಕ ಸ್ಥೈರ್ಯ, ಶಾರೀರಿಕ ಸ್ವಾಸ್ಥ್ಯ ಸಮಾಧಾನ ಕಂಡುಕೊಂಡ ಅನುಭವವಗಳು ಹೇಳುತ್ತಾರೆ. ಅನೇಕ ವರ್ಷಗಳಿಂದ ಜಾತಿ ಮತ ಧರ್ಮದ ಭೇದ ಭಾವವಿಲ್ಲದೆ ಹರಕೆ ತೀರಿಸುವುದು ಇಲ್ಲಿಯ ವಿಶೇಷ.

ಇ ) ಉಪಸಂಹಾರ 

                       ಗ್ರಾಮ ದೇವರ ಉತ್ಸವದಂದು ಮಕ್ಕಳನ್ನು ಮೂಲ ದೇವರ, ಭೂತರಾಜ, ಸಿನಿವಾಲಿ ದೇವರ  ಸನ್ನಿಧಿಯಲ್ಲಿ ತಮ್ಮ ಮಕ್ಕಳನ್ನು ತರುವ ಸಂಪ್ರದಾಯ ಇದೆ. ಬಂಜೆತನ ನಿವಾರಣೆಯಾಗಲೆಂದು ಬೇಡಿಕೊಂಡ ಮಹಿಳೆಯರು ಮಕ್ಕಳು ಹುಟ್ಟಿದ ನಂತರ ಹರಕೆ ತೀರಿಸುತ್ತಾರೆ. ಮಕ್ಕಳು ರಾತ್ರಿ ಹೊತ್ತು ಅಂಜದಿರಲು, ದೆವ್ವದ ಕಾಟ ತಪ್ಪಿಸಲು, ಮಾಟ ಮಂತ್ರಗಳಿಂದ ಮುಕ್ತಿ ಹೊಂದಲು ಮತ್ತು ಆರೋಗ್ಯವಾಗಿ ಬೆಳೆಯಲು ಸಹ ಹರಕೆ ಹೊರುವ ಸಂಪ್ರದಾಯವಿದೆ, ಮೇಲ್ಕಾಣಿಸಿದ  ನಾಲ್ಕು ದಿನಗಳಲ್ಲಿ ದಶಮಿ,ಏಕಾದಶಿ, ದ್ವಾದಶಿ, ಮತ್ತು ತ್ರಯೋದಶಿಗೂ ಸಹ ಸಮಸ್ತ ಭಕ್ತಗಣರಿಗೆ ಭೋಜನ ವ್ಯವಸ್ಥೆ ಶ್ರೀ ಕ್ಷೇತ್ರ ಗೋವಿಂದಪುರ ಗ್ರಾಮದ ಹಿರಿಯರಿಂದ ಮಾಡಲಾಗುತ್ತದೆ. ನಾಲ್ಕು ದಿನದ ಜಾತ್ರೆಯ ಉಸ್ತುವಾರಿ, ಭೋಜನ ವ್ಯವಸ್ಥೆ, ಇತ್ಯಾದಿ ಸಾಂಗವಾಗಿ ನೋಡಿಕೊಳ್ಳುವುದೆಂದರೆ ಸಾಮಾನ್ಯ ಮಾತಲ್ಲ.      

                          ಕೊನೆಯಲ್ಲಿ ಅಶ್ವತ್ಥ ನಿಂಬಕ ವೃಕ್ಷಗಳಲ್ಲಿ ಅವಿರ್ಭವಿಸಿದ ಶ್ರೀ ಗೋವಿಂದರಾಜ ದೇವರ ನೈಸರ್ಗಿಕ ಸ್ವಯಂಭು ಮೂರ್ತಿಮತ್ತು  ಲಕ್ಕವ್ವ (ಶ್ರೀ ಲಕ್ಷ್ಮೀದೇವಿ), ಗರ್ಭ ಗುಡಿಯಲ್ಲಿ ದೇವಿಯ ನೈಸರ್ಗಿಕ ಸ್ವಯಂಭು ಮೂರ್ತಿಯ, ಪೂಜೆ, ಹರಕೆ ಸಂಕಲ್ಪ ಮಾಡಿ, ದರ್ಶನ ಪಡೆಯುವ ಭಾಗ್ಯ, ಜನ್ಮ ಸಾರ್ಥಕ  ನಮಸ್ಕಾರ  ಧನ್ಯವಾದಗಳು. 

Govindapur is an ancient village in the South Indian state of Karnataka. District : Bijapur. It',s dotted with numerous Temples, likeGod Govindaraja Devaru, Shri Maha lakshmidevi, Bhagavati Chandraambadevi,Rudra devaru, Anjaneya Devaru,  Shri Ganesh  Shri Shesha Devaru Shanaischara Devaru, Ciniwali devi, Jala Kanyeyaru, BhutarajMall  etc....on south flowing bank of the Bhimaa river                 Lat....16.82.                          Lan ....75.71

ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿಯ ಹಡಪಸರ ವಿಭಾಗದಲ್ಲಿ ವಾಸಿಸುತ್ತಿರುವ ಉಮರ್ಜಿ ಮನೆತನದವರ ಆರಾಧ್ಯ  ಪುರಾತನ ಶ್ರೀ ಗೋವಿಂದರಾಜ ದೇವರು ಎಂದು ತಿಳಿದು ಬಂದಿದೆ.  

It is learnt that..In NARAGUNDA Dist GADAG of karnaataka came to know there one Govindaraja devaru worshiped as VILLAGE DEITY.

GOVINDARAJA PANCHAYATANA

         Shree Govindarajadeva is not reserved for only one race, he belongs to entire universe, Vasudhe is his family. Govindarajadeva, Lakkavva (Lakshmidevi ), Chandravva (Chandralamba), Rishi (Agastya), Ragadamalla (Rakshatamalla). Enjoy on seeing the glory of the entire family. This destiny is in a one of the family in  Morabagi village (Sangali district). It has recently come to be known that Govindaraja's entourage is installed in a Palanquin and carries the Govindaraja Parivar on a palanquin to the Govindapura fair on foot, with singing and dancing along with instruments such as Dollu, Oodaka, Mrudunga, Shahanai, Dimma, Ekataree, Tala etc in every year from Ramanavami  to Chaitra shukla dwaadashi .

   || ಹೃತ್ಕಮಲ ನಿವಾಸಿ ಶ್ರೀಮದ್ ಶ್ರೀ ಲಕ್ಷ್ಮೀ ಭಗವತಿ ಚಂದ್ರಲಾಂಬಾ ಸಮೇತ ಶ್ರೀ ಗೋವಿಂದರಾಜಾರ್ಪಣಮಸ್ತು  ||   

No comments:

Post a Comment