By courtesy
ಗುರುರ್ಬ್ರಹ್ಮಃ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ ಗುರುರ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ
ಸನಾತನ ಸಂಸ್ಕೃತಿಯಲ್ಲಿ ಗುರುವನ್ನು ದೇವರ ಸಮಾನವೆಂದು ಪರಿಗಣಿಸಲಾಗುತ್ತಿತ್ತು. ಗುರುವನ್ನು ಯಾವಾಗಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದು ಪರಿಗಣಿಸಲಾಗಿದೆ. ವೇದಗಳನ್ನು, ಉಪನಿಷತ್‌ನ್ನು ಮತ್ತು ಪುರಾಣಗಳನ್ನು ಪ್ರದರ್ಶಿಸಿದ ವೇದ ವ್ಯಾಸನು, ಎಲ್ಲಾ ಮಾನವಕುಲದ ಗುರು ಎಂದು ಪರಿಗಣಿಸಲಾಗಿದೆ.ಅದಕ್ಕಾಗಿಯೇ ಗುರು ಪೂರ್ಣಿಮಾ ಎಂದ್ದದ್ಧು. ಮಹರ್ಷಿ ವೇದ ವ್ಯಾಸನು ಸುಮಾರು ಕ್ರಿ. ಪೂ. 3000 ರಲ್ಲಿ ಜನಿಸಿದನು. ಅವನ ಗೌರವಾರ್ಥವಾಗಿ, ಆಷಾಢ ಶುಕ್ಲ ಪೂರ್ಣಿಮಾವನ್ನು ಗುರು ಪೂರ್ಣಿಮಾವೆಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ದಿನದಲ್ಲಿ, ವ್ಯಾಸರು ಮೊದಲಿಗೆ ಶ್ರೀ ಭಗವತ್ ಪುರಾಣವನ್ನು ಶಿಷ್ಯರು ಮತ್ತು ಸನ್ಯಾಸಿಗಳಿಗೆ ನೀಡಿದರು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಮಂಗಳಕರ ದಿನವನ್ನು ವ್ಯಾಸ ಪೂರ್ಣಿಮಾ ಎಂದು ಕರೆಯಲಾಗುತ್ತದೆ.
ಶಾಸ್ತ್ರದಲ್ಲಿ ಗುರುವಿನ ಅರ್ಥವನ್ನು ಹೀಗೆ ಹೇಳಲಾಗಿದೆ - ಕತ್ತಲೆಯನ್ನು ತೆಗೆದು ಹಾಕಿ ಬೆಳಕನ್ನು ನೀಡುವವನೇ ಗುರು ಎಂದು ಹೇಳಲಾಗುತ್ತದೆ. ಅಂದರೆ ಓರ್ವ ವ್ಯಕ್ತಿಯ ಅಜ್ಞಾನವನ್ನು ತೆಗೆದುಹಾಕಿ ಜ್ಞಾನವೆನ್ನುವ ಬೆಳಕನ್ನು ನೀಡುತ್ತಾನೆ. ಪ್ರಾಚೀನ ಕಾಲದಲ್ಲಿ, ಶಿಷ್ಯರು ಗುರುವಿನ ಆಸ್ರಮದಲ್ಲಿ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದರು. ಆಶ್ರಮದಲ್ಲಿ ಶಿಷ್ಯರು ಗುರುವನ್ನು ಪ್ರತಿನಿತ್ಯ ಪೂಜಿಸಿ ತಮ್ಮ ಅಭ್ಯಾಸವನ್ನು ಆರಂಭಿಸುತ್ತಾರೆ.
ಯಾವುದೇ ಓರ್ವ ವ್ಯಕ್ತಿ ಯಶಸ್ಸನ್ನು ಸಾದಿಸಬೇಕೆಂದರೆ ಅವನ ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು ಎನ್ನುವ ನಂಬಿಕೆಯಿದೆ. ಗುರುವಿಲ್ಲದೆ ಜೀವನಕ್ಕೆ ಅಥವಾ ಜ್ಞಾನಕ್ಕೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ನಮ್ಮ ಮೊದಲ ಗುರು ತಾಯಿ ನಮಗೆ ಜೀವನದ ಅರ್ಥವನ್ನು ನೀಡುತ್ತಾಳೆ. ಅದೇ ರೀತಿ ಜೀವನಕ್ಕೆ ಅಗತ್ಯವಾದ ಜ್ಞಾನವನ್ನು ಗುರು ನೀಡುತ್ತಾನೆ. ಅಂದರೆ, ಗುರುವಿಲ್ಲದೆ ಏನೂ ಸಾಧ್ಯವಿಲ್ಲ.
ಕಾರ ಹುಣ್ಣಿಮೆಯೆಂದು ಕಿಚ್ಚು ಹಾಯಿಸಿ, ಮಣ್ಣೆತ್ತಿನ ಅಮಾವಾಸ್ಯೆ ಮಣ್ಣಿನ ಮಕ್ಕಳ ಬೆನ್ನೆಲುಬು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಇದೀಗ ಕಡ್ಲಿಗಡಬ ಹುಣ್ಣಿಮೆಯ ಮಾಸ. ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬ್ಬಕ್ಕೆ ವಿಶೇಷ ಆಚರಣೆಯ ಹಿನ್ನೆಲೆಯಿದೆ. ಕಡ್ಲಿಗಾರ ಹುಣ್ಣಿಮೆ ಎಂದು ಕರೆಯುವುದುಂಟು
ಜೂನ ಜುಲೈ ತಿಂಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು. ಬಿತ್ತುವ ರಂಟೆಯ ಪೂಜೆ, ರೈತಾಪಿ ವರ್ಗಕ್ಕೆ ಹೊಲದಲ್ಲಿ ಬಿತ್ತುವ, ಬಿತ್ತಿದ ಫಸಲಿನ ಚಿಂತೆ ಒಂದೆಡೆಯಾದರೆ, ದನುಕರುಗಳಿಗೆ ಒಟ್ಟಿದ ಬಣವೆ ಬರಿದಾಗುವ ಮತ್ತು ಕಾಳು ಕಡಿ ಸಂಗ್ರಹಿಸಿದ ಹಗೆಯೂ ಖಾಲಿಯಾಗುವ ಕಾಲವಿದೆ. ಈ ತಿಂಗಳಲ್ಲಿ ಬರುವ ಹುಣ್ಣಿಮೆಯೇ ಕಡ್ಲಿಗಡಬ. ಈ ಕಡಲೆಗಡಬಿನ ಹೆಸರು ಹೇಗೆ ಬಂತೆಂಬುದಕ್ಕೆ ನಿಖರ ಕಾರಣಗಳಿಲ್ಲ. ಆದರೆ, ಕೆಲವು ಸಂಪ್ರದಾಯ ಮತ್ತು ಆಚರಣೆಗಳನ್ನು ಕಣ್ಣಾಡಿಸಿದರೆ, ಈ ಪದಕ್ಕೆ ಒಂದಷ್ಟು ಅರ್ಥಗಳು ದಕ್ಕುತ್ತವೆ.
ಅಳಿದುಳಿದ ಕಾಳು ಕಡಿಗಳನ್ನು ಸಂಗ್ರಹಿಸಿ ಹಿಟ್ಟಾಗಿಸಿ ದೋಸೆ ಮಾಡಿ ತಿನ್ನುವ ಪದ್ಧತಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತದೆ. ಆಷಾಢ ಮಾಸವೂ ಇರುವುದರಿಂದ ಮನೆಗೆ ಬಂದು ಹೆಣ್ಣುಮಗಳು ಈ ಕಾರ್ಯ ಮಾಡುತ್ತಾಳಂತೆ.
ಮಕ್ಕಳಿಗೆ ದೋಸೆ ನಿವಾಳಿಸಿ ಎಸೆಯುವ ಆಚರಣೆ..
ಈ ಹುಣ್ಣಿಮೆ ದಿನದಂದು ಕೆಲವು ಕಡೆಗಳಲ್ಲಿ ಮಾಡಿದ ಮೊದಲ ದೋಸೆಯನ್ನು ಮನೆಯಲ್ಲಿನ ಮಕ್ಕಳನ್ನು ಮುಂದೆ ಕೂರಿಸಿಕೊಂಡು, ದೋಸೆಯಿಂದ ನೆದರು ತೆಗೆದು, ಬೆನ್ನ ಮೇಲೆ ಬಡಿದು ನಿವಾಳಿಸಿದ ದೋಸೆಯನ್ನು ಮನೆಯ ಮೇಲೆ ಎಸೆಯಲಾಗುತ್ತದೆ. ಪರೋಕ್ಷವಾಗಿ ಪಕ್ಷಿ ಸಂಕುಲಕ್ಕೆ ಆಹಾರ ಒದಗಿಸುವ ಕಾರ್ಯವೂ ಇದಾಗಿರಬಹುದು. ಅದಾದ ಬಳಿಕವಷ್ಟೇ ಮನೆ ಮಂದಿಗೆ ದೋಸೆಯನ್ನು ಬಡಿಸಲಾಗುತ್ತದೆ. ಇದಕ್ಕೆ ಆಷಾಢ ದೋಸೆ ಎಂದೂ ಕರೆಯುವುದುಂಟು
ಕರಾವಳಿ ಭಾಗಕ್ಕೂ ಈ ಹುಣ್ಣಿಮೆಯ ನಂಟಿದೆ..

ಆಚರಣೆಗಳಿಗೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ. ಉತ್ತರ ಕರ್ನಾಟಕ ಭಾಗದಲ್ಲಿ ಈ ಕಡ್ಲಿಗಡಬಿನ ಹುಣ್ಣಿಮೆಗೆ ಅಲ್ಲಲ್ಲಿನ ಆಚರಣೆಗಳೇ ಬೇರೆಯದಿದ್ದರೆ, ಇದೇ ಆಚರಣೆ ದಕ್ಷಿಣ ಕರ್ನಾಟಕ, ಮತ್ತು ಕರಾವಳಿ ಭಾಗದಲ್ಲಿಯೂ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅನ್ನಪೂರ್ಣೆದೇವಿ ಆರಾಧನೆಯ ಹುಣ್ಣಿಮೆ ಎಂದೂ ಇದನ್ನು ಕರೆಯುವುದುಂಟು. ದಕ್ಷಿಣ ಕನ್ನಡ ಭಾಗದಲ್ಲಿ ತುಳು ಭಾಷಿಕರ ಸಂಖ್ಯೆ ಹೆಚ್ಚು. ಆ ಭಾಷೆಯಿಂದ ಕಡ್ಲಿಕಡಬ ಎಂಬ ಪದ ಬಂದಿರಬಹುದು ಎಂದೂ ಹೇಳಲಾಗುತ್ತಿದೆ. ಈ ಸಮಯದಲ್ಲಿ ಹೆಚ್ಚಿನ ಮಳೆಯಿಂದಲೇ ಆ ಭಾಗದ ಹಳ್ಳ, ಕೊಳ್ಳ, ನದಿಗಳು ತುಂಬಿ ಕೋಡಿಯಾಗಿ ಒಡೆಯುತ್ತವೆ. ಹಾಗೆ ಕೋಡಿಯಾಗಿ ಒಡೆದ ನೀರು ಈ ಆಷಾಢದಲ್ಲಿ ಕಡಲನ್ನು ಸೇರುತ್ತದೆ. ಇದಕ್ಕೆ "ಕೋಡಿ ಹುಣ್ಣಿಮೆ" ಮತ್ತು "ಕಡಲ ಕೋಡಿ ಹುಣ್ಣಿಮೆ" ಎಂದು ಜನರ ಬಾಯಲ್ಲಿ ನುಲಿದಿರಲೂ ಬಹುದು. ಕಾಲ ಕ್ರಮೇಣ ಅದು ಕಡ್ಲಿಗಡಬ ಎಂದಾಗಿದೆ ಎಂಬುದು ಜನಪದರ ವ್ಯಾಖ್ಯಾನ. ಏನೇ ಆಗಲಿ ಈ ಹಬ್ಬವು ಸಹಿತ ನಿಸರ್ಗಕ್ಕೆ, ಭೂಮಿತಾಯಿ ಗೆ ಸಮೀಪದ್ದು ಎನ್ನಬಹುದು
No comments:
Post a Comment