ಗಾಯಂತಿ ದೇವಃ ಕಿಲ ಗೀತಕಾನಿ ಧನ್ಯಾಸ್ತುತೇ ಭಾರತ ಭೂಮಿ ಭಾಗೇ |
ಸ್ವರ್ಗಾಪವರ್ಗಾ ಸ್ಪದ ಮಾರ್ಗ ಭೂತೇ
ಭವಂತಿ ಭೂಯಃ ಪುರುಷಾ ಸುರತ್ವಾತ್ || 1 ||
1) ಸ್ವರ್ಗ ಹಾಗೂ ಮೋಕ್ಷ ಸಾಧನೆಗೆ ಮಾರ್ಗವಾದ
ಈ ಭಾರತ ವರ್ಷದಲ್ಲಿ ಜನ್ಮ ಹೊಂದಿರುವವರು,
ತಮಗಿಂತಲೂ ಹೆಚ್ಚು ಭಾಗ್ಯಶಾಲಿಗಳೆಂದು ದೇವತೆಗಳು
ಯಾವಾಗಲೂ ಹೇಳುತ್ತಿರುತ್ತಾರೆ. ಏಕೆಂದರೆ ದೇವತೆಗಳಿಗೆ
ಕರ್ಮಾಧಿಕಾರ ವಿರದೇ ಆ ಕರ್ಮಾಧಿಕಾರವು
ಭಾರತದೇಶದಲ್ಲಿ ಮಾತ್ರ ಇರುತ್ತದೆ.
ಕಾರ್ಮಣ್ಯ ಸಂಕಲ್ಪಿತ ತತ್ ಫಲಾನಿ ಸನ್ಯಸ್ಯ ವಿಷ್ಣೌ ಪರಮಾತ್ಮ ಭೂತೇ |
ಅವಾಪ್ಯ ತಾಂ ಕರ್ಮ ಮಹೀಮನಂತೇತಸ್ಮಿನ್ ಲಯಂ ಯೇ ತ್ವಮಲಃ ಪ್ರಯಾಂತಿ || 2 ||
2) ಯಾವ ಜನರು ಈ ಕರ್ಮಭೂಮಿಯಲ್ಲಿ ಜನ್ಮ ತಾಳಿ ಫಲಾಕಾಂಕ್ಷೆಯನ್ನು ಬಿಟ್ಟು ನಿಷ್ಕಾಮ ಕರ್ಮಗಳನ್ನು ಮಾಡುತ್ತ ಅವುಗಳನ್ನು ಪರಮಾತ್ಮನಲ್ಲಿ ಸಮರ್ಪಿಸಿ ವಿಮಲಾ ಚಿತ್ತರಾಗಿ ಅದ್ವಿತೀಯ ಬ್ರಹ್ಮನಲ್ಲಿ ಲೀನವಾಗುವರೋ ಅವರೇ ಧನ್ಯರು.
ಜಾನೀಮ ನೈತತ್ ಕ್ವ ವಯಂ ವಿಲೀನೇ ಸ್ವರ್ಗಪ್ರದೇ ಕರ್ಮಣಿ ದೇಹ ಬಂಧಂ | ಪ್ರಾಪ್ಸ್ಯಾಂ ಧನ್ಯಾಃ ಖಲು ತೇ ಮನುಷ್ಯಾಯೇ ಭಾರತೇ ನೆಂದ್ರಿಯ ವಿಪ್ರಹೀನಾಃ || 3 ||
ಸ್ವರ್ಗವನ್ನು ಕೊಡುವ ಕರ್ಮಗಳು ಕ್ಷೀಣವಾದ ಮೇಲೆ ನಾವು ಎಲ್ಲಿ ಜನ್ಮ ತಾಳುವೆವು ಎಂಬುದು ನಮಗೇ ಗೊತ್ತಾಗುವುದಿಲ್ಲ ಆದರೇ ಯಾರು ಭಾರತದಲ್ಲಿ ಜನ್ಮತಾಳಿ ಮಾನಸಿಕ ಶಕ್ತಿಯನ್ನು ಕಳೆದುಕೊಳ್ಳದೇ ಆತ್ಮ ಸ್ಥೈರ್ಯ ದಿಂದ ಇರುವರೋ ಅವರೇ ಅತ್ಯಂತ ಧನ್ಯರು. ... ಶ್ರೀ ವಿಷ್ಣು ಪುರಾಣ
ಭಾರತ ಮಾತೆಯ ಕೈಗಳಲ್ಲಿ ವಸ್ತ್ರ ಶಸ್ತ್ರ ಧಾನ್ಯ ಜಪಮಾಲೇ ಪುಸ್ತಕಗಳಿವೆ. ಅಂದರೆ ಭಾರತ ದಲ್ಲಿ ವಸ್ತ್ರ, ಸಂರಕ್ಷಣ ಶಕ್ತಿ, ಧಾನ್ಯ, ವಿದ್ಯೇ, ತಪಸ್ಸುಗಳು ಅಕ್ಷಯವಾಗಿರುವವೆಂದು ತಾತ್ಪರ್ಯ.
No comments:
Post a Comment