ಮನ್ನಿಸೊ ಶ್ರೀ ವೆಂಕಟೇಶ
ಮನ್ನಿಸೊ ಶ್ರೀ ವೆಂಕಟೇಶ ಮಂಜುಗುಣಿ ಪುರವಾಸ ||ಪಲ್ಲ ||
ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ || ಅನು ಪಲ್ಲ ||
ದೇಶದೇಶದಿಂದ ಬಂದ ಜನರಿಗೆ ಮುದದಿಂದ
ಲೇಸಿನ ವರವನೀವೆ ನಿರುತ ನಿ ಕಾವೆ
ಭಾಸುರ ಮೋಹನ ವೇಷ ಭಾನುಕೋಟಿ ಸುಪ್ರಕಾಶ
ಶ್ರೀ ಸತಿಯ ಪ್ರಾಣೇಶ ಶ್ರೀ ಶ್ರೀನಿವಾಸ || 1 ||
ವಾರಿಧಿಯೊಳಗಾಡಿದೆ ಗಿರಿಯ ಬೆನ್ನಲೆತ್ತಿದೆ
ಭಾರವಹ ಧರೆಯ ತಂದೆ ದೈತ್ಯನ ನಿ ಕೊಂದೆ
ದುರುಳ ಬಲಿಯನು ಮೆಟ್ಟಿ ದೈತ್ಯ ನೃಪರನೆ ಕುಟ್ಟಿ
ತರುಣಿಗಭಯವನಿತ್ತ ತರುವ ಕಿತ್ತೆ || 2 ||
ಪುರದ ನಾರಿಯರನು ಪಂಥದಿ ಗೆಲಿದೆ ನೀನು
ವರ ಕಲ್ಕಿಯಾಗಿ ತುರುಗವನೇರಿ ಮೆರೆದೆ
ವರದ ಪ್ರಸನ್ನ ಹಯವದನ ವೆಂಕಟರಾಯ
ಪೊರೆಯೊ ಎಂದೆಂದೂ ಎನ್ನ ಪುರುಷರನ್ನ || 3 ||
No comments:
Post a Comment