ನೆರೆ ನಂಬಿ ನಡೆಯಿರೋ ಹಿತವ 2
ನಮ್ಮ ಗುರು ಮಧ್ವ ಮುನಿಯ ಸಮ್ಮತವ 2 || ಪ ||
ತ್ರೇತೆಯೋಳಂಜನೆ ತನಯನಾಗಿ 2
ಸೀತಾರಮಣ ರಘುಪತಿ ಗತಿಪ್ರಿಯ 2
ದೂತತನದಿ ಖಳತತಿಯ ಕೊಂದು 2
ಖ್ಯಾತಿ ಪಡೆದ ಹನುಮನಾದ ಯತಿಯ 2 || 1 ||
ದ್ವಾಪರದಲ್ಲಿ ಭೀಮ ನೆನೆಸಿ ಪಾಂಡು 2
ಭೂಪನರಸಿ ಕುಂತಿi ಉದರದಿ ಜನಿಸಿ 2
ಶ್ರೀಪತಿ ಗರ್ಥಿಯ ಸಲಿಸಿ ದೈತ್ಯ - 2
ರೂಪ ನೃಪನ ಕೊಂದ ಮುನಿಪನ ಭಜಿಸಿ 2 || 2 ||
ಕಲಿಯುಗದಲಿ ಯತಿಯಾಗಿ ಈ 2
ಇಳೆಯ ದುಶ್ಯಾಸ್ತ್ರವ ಜರಿದವರಾಗಿ 2
ಕುಲಗುರು ಮಧ್ವಪತಿ ಮುನಿಯೋಗಿ ನಮ್ಮ 2
ಬಲು ಹಯವದನನ ಬಂಟನೆಂದು ಬಾಗಿ 2 || 3 ||
ಶ್ರೀ ವಾದಿರಾಜ ತೀರ್ಥರು
No comments:
Post a Comment