ರಾಗ : ಅಭೇರಿ ತಾಳ : ಆದಿ
ಇಷ್ಟು ದಿನ ಭೂವೈಕುಂಠ ಎಷ್ಟು ದೂರವೆನ್ನುತ್ತಿದ್ದೆ ದೃಷ್ಟಿಯಿಂದಲೇ ನಿಮ್ಮಕಂಡೆ ಸೃಷ್ಟಿಪತಿ ಶ್ರೀ ರಂಗೇಶ
ಚಿತ್ರ ಬೀದಿ ವಿರಾಜತ ಚಾರು ನೂಪುರ ಶೋಭಿತ
ಸಪ್ತ ಪ್ರಕಾರ ಸಂಪೃಷ್ಟ ಉತ್ತಮ ಶ್ರೀರಂಗಶಾಯಿ
ಹೇಮಕವಾಟಗಳಿಂದ ಹೇಮ ಸೋಪಾನಗಳಲ್ಲಿ
ಹೇಮಕಟಾಂಜನದಿಂ ಗುಣಶೋಭಿತ ಶ್ರೀರಂಗೇಶ
ಚತುರ ವೇದಗಳಲ್ಲಿ ಚತುರಮೂರ್ತಿ ವೀರ್ಯದಲ್ಲಿ
ಚಿತ್ರ ಬೀದಿ ವಿರಾಜತ ಚಾರು ನೂಪುರ ಶೋಭಿತ
ಸಪ್ತ ಪ್ರಕಾರ ಸಂಪೃಷ್ಟ ಉತ್ತಮ ಶ್ರೀರಂಗಶಾಯಿ
ಹೇಮಕವಾಟಗಳಿಂದ ಹೇಮ ಸೋಪಾನಗಳಲ್ಲಿ
ಹೇಮಕಟಾಂಜನದಿಂ ಗುಣಶೋಭಿತ ಶ್ರೀರಂಗೇಶ
ಚತುರ ವೇದಗಳಲ್ಲಿ ಚತುರಮೂರ್ತಿ ವೀರ್ಯದಲ್ಲಿ
ಚತುರದಿಕ್ಕುಗಳಲ್ಲಿ ಚದುರ ಶ್ರೀರಾಮ ರಂಗಶಾಯಿ
ಪಂಕಜ ನಾಭನೆ ಏಸು ಪಾವನವೋ ನಿಮ್ಮ ದಿವ್ಯ ಕುಂಕುಮಾಂಕಿತ ಚರಣ ಪಂಕಜಾಕ್ಷ ಶ್ರೀ ರಂಗೇಶ
ಪಂಕಜ ನಾಭನೆ ಏಸು ಪಾವನವೋ ನಿಮ್ಮ ದಿವ್ಯ ಕುಂಕುಮಾಂಕಿತ ಚರಣ ಪಂಕಜಾಕ್ಷ ಶ್ರೀ ರಂಗೇಶ
ಪುಣ್ಯವಿದ್ಯಾದಯಾನಿಧೇ ಪನ್ನಗಶಾಯಿಶೋಭಿತ ಧನ್ಯ ಚಂದ್ರ ಪುಷ್ಕರಣ ಉನ್ನತ ಶ್ರೀ ಹಯವದನ
No comments:
Post a Comment