ಗೌರಿ ಮಂಗಳಾರತಿ
ಮಂಗಳಾರತಿ ತಂದು ಬೆಳೆಗಿರೆ ಅಂಬುಜಾಕ್ಷನ ರಾಣಿಗೆ ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶಶಿ ಬಿಂಬೆಗೆ
ಶುದ್ಧ ಸ್ನಾನದ ಮಾಡಿ
ನದಿಯಲಿ ವಜ್ರ ಪೀಠದಿ ನೆಲೆಸಿದೆ
ತಿದ್ದಿ ತಿಲಕವ ತೀಡಿದಂಥ
ಮುದ್ದು ಮಂಗಳ ಗೌರಿಗೆ
ಎರೆದು ಪೀತಾಂಬರವ ನುಡಿಸಿ
ಸರ್ವಭರಣವ ಧರಿಸಿದೆ
ಹರಳಿನೋಲೆ ವಜ್ರಮುಗುತಿ
ವರಮಹಾಲಕ್ಷ್ಮಿ ದೇವಿಗೆ
ಹುಟ್ಟು ಬಡವೆಯ ಕಷ್ಟ ಕಳೆದು
ಕೊಟ್ಟಳರಸನ ಸಿರಿಯನು
ಹೆತ್ತ ಕುವರನ ತೋರಿದಂಥ ಶುಕ್ರವಾರದ ಲಕ್ಷ್ಮಿಗೆ
ನಿಗಮ ವೇದ್ಯಳೆ ನಿನ್ನ ಗುಣಗಳ
ಬಗೆ ಬಗೆಯಲಿ ವರ್ಣಿಪೆ
ತೆಗೆದು ಭಾಗ್ಯವ ನೀಡು ಎನ್ನುತ
ಜಗದೊಡೆಯಭೀಮೇಶ ಕೃಷ್ಣನ ರಾಣಿಗೆ
ಭೀಮೇಶ ಕೃಷ್ಣ
No comments:
Post a Comment