Tuesday, August 20, 2024

*KARPURA Aarati ಕರ್ಪೂರ ಆರತಿ

                             ಕರ್ಪೂರ ಆರುತಿ


ಕರ್ಪೂರ ಆರುತಿ ಬೆಳಗಿರಿ 

ಕಾರುಣ್ಯ ಮೃಡಹರ ದೇವಗೆ 


ನೀಲಕಂಧರ ನಿಗಮ ಗೋಚರ 

ಭಾಲಚಂದ್ರ ಆಭರಣಗೆ ಬಾಲೆ ಗೊಲಿದನು 

ಹಾಲ ಸವಿದನು 

ಲೋಲ ಶ್ರೀ ಗುರುರಾಯಗೆ 


ವಾರಿಜೋದ್ಭವ ಶಿರವ ಹರಿದನು 

ಮಾರಹರ ಮಹಾದೇವಗೆ 

ಘೋರ ದುರಿತವ 

ದೂರ ಮಾಡುವ 

ಶೂರ ಷಣ್ಮುಖನಯ್ಯಗೆ


ಶರಣು ಜನಕೆ ವರವನಿತ್ತನು 

ಪರಮ ಪಾರ್ವತಿ ಅರಸಗೆ 

ಧರೆಯೊಳಧಿಕಿಹ ಮೆರೆವ ಸೊನ್ನಲ 

ಪುರದ ಸಿದ್ಧಾರಾಮಗೆ


                             ಸೊನ್ನಲಗಿ ಸಿದ್ದರಾಮೇಶ

No comments:

Post a Comment