Tuesday, August 20, 2024

*Maha lakshmi Aarati ಮಹಾಲಕ್ಷ್ಮಿ ಆರತಿ

                         ಮಹಾಲಕ್ಷ್ಮಿ ಆರತಿ 


ಆರುತಿ ಬೆಳಗಿರಿ ನಾರಿಯರು ಬೇಗ 

ಆದಿ ಕೊಲ್ಲಾಪುರದ ಮಹಾಲಕ್ಷ್ಮಿಗೆ 

ಹಾಡುತ ಪಾಡುತ ಜಾಣೆಯರೆಲ್ಲರೂ 

ಆದಿ ನಾರಾಯಣ ಪ್ರಿಯಳಿಗೆ


ಪಿಲ್ಲೆ ಕಾಲುಂಗುರ ಲಲ್ಲು ಪೈಂಜಣರುಳಿ 

ಘಿಲ್ಲು ಘಿಲ್ಲೆಂದು ಹೆಜ್ಜೆಯ ನಿಡುತ 

ಉಲ್ಲಾಸದಿಂದಲಿ ನಡುವಿಗೇ ಡಾಬ

ಫುಲ್ಲ ನಾಭನ ಪ್ರಿಯಳಿಗೆ 


ಜರದ ಪೀತಾಂಬರ ನಿರಿಗೆಗಳಲೆಯುತ

ಝಗ ಝಗಿಯಿಂದ ಹೊಳೆಯುತ

ತೊಟ್ಟ ಕಂಚುಕ ಇಟ್ಟ ಒಂಕಿಯ ತೋಡೆ 

ಬೆಟ್ಟದ ವೆಂಕೋಬನ ಮಡದಿಗೆ


ಚೌರಿಗಾಗುಟಿ ಗೊಂಡೆ ಹೆರಳು ಬಂಗಾರ 

ಬುಗುಡಿ ವಾಲಿಗಳು ಹೊಳೆಯುತಲಿ 

ಸಡಗರದಿ ಕುಡಿಯ ಕುಂಕುಮ ಹಚ್ಚಿ 

ಒಡೆಯ ವೆಂಕೋಬನ ಮಡದಿಗೆ

                                                 ವೆಂಕೋಬ

No comments:

Post a Comment