ಶ್ರೀ ಶನೈಶ್ಚರ ಚರಿತಂ ೩
|| श्री शनैश्चर देवताभ्यो नमः ||
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಹತ್ತು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರ ಅಷ್ಟಕಂ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ ಶ್ರೀ ಶನೈಶ್ಚರ ಚಕ್ರ ಸಹಿತ )
ತೃತೀಯ ಸವಿಗಥಾ ಸಂಧಿ ೩
( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )
ಓಂ ನಮಃ ಗಣ ವಿನಾಯಕನಿಗೆ | ಗಮಿಸೆ ರಿದ್ಧಿ ಸಿದ್ಧಿಯರು ಸಹ | ನಮನ ಆರಂಭಿಸಲು ಕಥೆಯನು ವಿಘ್ನ ಹೊರತಾಗಿ ||೦೧ ||
ಶುಭ್ರ ವಸನೆಯೇ ಶಾರದಾಂಬೆಯೇ | ಶುಭ್ರ ಕಮಲಾಸನೆಯೇ ದೇವಿಯೇ | ಶುಭ್ರ ಮತಿಗೆ ನೀಡುನೀ ಬೇಡುವೆನು ಪ್ರೇರಣೆಯ ||೦೨||
ಹಿನ್ನೆಲೆಯ ಸವಿಗತೆಯು ಶ್ರೀ ಶನಿ | ಜನನವಾದುದು ಶಾಪ ಮುಕ್ತತೆ | ಜನನಿ ಪಾವನೆ ಗ್ರಹಗಳಲಿ ಶ್ರೇಷ್ಟತ್ವ ತಾ ಪಡೆದ ||೦೩ ||
ಕೇಡ ದೃಷ್ಟಿಯು ಇರಲು ಸೌರಿಯು | ನಾಡ ಯತ್ನವ ಮಾಡೇ ದುಃಖವು | ನೋಡೇ ಸರಳತೆ ಆದೊಡನೇ ತಾ ಸೌಖ್ಯ ಉಂಟಾಗಿ ||೦೪ ||
ಗ್ರಂಥಿ ಕಥೆ ನಿಧಿಯುಕ್ತ ಕುಂಬಳ | ಪಂಥ ಕಟ್ಟಿಯೇ ಸುಖವ ನೀಡಲು | ಅಂತ್ಯದಲಿ ಬ್ರಾಹ್ಮಣನು ಶನಿ ಮಹಿಮೆಯನೆ ಪೇಳಿದನು ||೦೫ ||
ಭರತ ಖಂಡದ ಮದ್ಧ್ಯ ಭಾಗದಿ | ಪುರವು ಉಜ್ಜಯಿನಿಯದು ಇರಲು | ಮೆರೆವ ಕ್ಷಿಪ್ರಾ ನದಿಯ ತೀರದಿ ಇರುವ ದುರ್ಗವದು ||೦೬ ||
ಸುಂದರತೆಯಾಗರವು ದೇಶವು | ಅಂದವದು ರಮಣೀಯ ಮಾಳವ | ಸಂಧಿ ಗಿರಿ ಸಾಲುಗಳು ಪುರವು ಪಡೆದು ಎಡೆಯಲ್ಲಿ ||೦೭ ||
ಕಲ್ಲಿನಲ್ಲಿಯೇ ಕಟೆದ ಕೋಟೆಯು | ಬಲ್ಲ ಅತ್ತ್ಯುನ್ನತೆಯು ಭದ್ರವು | ಸಲ್ಲುವದು ದುರ್ಗದ ಸುತ್ತಲೂ ಕಂದಕವು ಕೂಪಗಳು ||೦೮ ||
ನಗರದಲಿ ಎಲ್ಲೆಡೆಯೂ ಸ್ವಚ್ಚದಿ | ಸುಗುಣ ವಿದ್ಯಾಲಯಗಳು ಸೊ - | ರಗದ ತೆರದಿ ಗ್ರಾಮ ದೇವತೆ ಐತಿಹಾಸಿಕವೂ ||೦೯ ||
ಬೇತಾಳದಾ ಗುಡಿ ಪ್ರಮುಖವಿರುವ | ಚಾತುರ್ಯಯುತ ವಿಶಾಲ ಮರಗಳು | ಕೃತಿಯು ಗೃಹ ಪ್ರಾಂಗಣವು ದೊಡ್ಡವು ಸಬಲದಿ ಶೋಭೆ ||೧೦||
ದೀಪ ಸ್ಥಂಬದ ತಾಣಗಳು ಇರೆ | ಸುಪಥ ವೈಶಿಷ್ಥ್ಯವದು ಕಾರ್ಯದಿ | ಆಪ ರಕ್ಷಿಪ ಚರಂಡಿಗಳವು ದಾರಿಯ ಬದಿಗೆ || ೧೧ ||
ಭಾವದಿಂ ನಿರ್ಮಲದಿ ಜನರು | ಸ್ವಾವಲಂಬಿಗಳೆನಿಸಿ ನಿಜದಿಂ | ತಾವು ಅತಿ ಕರ್ತವ್ಯ ತತ್ಪರು ಸಾಧು ಜೀವಿಗಳು || ೧೨ ||
ಏಕ ಚಕ್ರಾಧಿಪನು ಸೇನನು | ನಾಕವಂ ಧರೆಗಿಳಿಸಿದಂತೆಯೇ | ಪ್ರೇಕ್ಷಣಿಯದಿ ಕಾಣುವಾ ವಾಸ್ತ್ವ್ಯವದು ಪುರದ || ೧೩ ||
ನೃಪ ಪರಾಕ್ರಮಿ ವಿಕ್ರಮಾರ್ಕನು | ಪಾಪಭಿರು ಉದಾರ ಚರಿತನು | ಆಪತ್ಸಮಯದಿ ಪ್ರತಾಪಿಯನತಿ ಧೈರ್ಯಶಾಲಿಯೆಂದು || ೧೪ ||
ಅರವತ್ತ ನಾಲ್ಕೂ ಕಲೆಗಳರಿತವ | ಹರಿತ ದೃಷ್ಟಿಯ ತೀಕ್ಷ್ಣ ಮತಿಯ | ತರವು ಮೂವತ್ತೆರಡು ಲಕ್ಷಣ ಗಳನುಉಳ್ಳವನು || ೧೫ ||
ಅವನೀಶ ಆಸಕ್ತ ತ್ಯಾಗಿಯು | ತವ ಸಮರ್ಥ ಗಂಧರ್ವ ಸಂಭವಿ | ಅವ ಮಹತ್ ಆಕಾಂಕ್ಷಿಯಾಗಿರೆ ಅರಿ ಭಯಂಕರನು || ೧೬ ||
ರಾಜ ಸಮೃದ್ಧಿಯನು ನೋಡಿರೆ | ರಾಜಿಪರು ರಾಣಿ ವಾಸದಲ್ಲಿಯೇ | ಸೌಜಿಗದಿ ದಾಸಿಯರು ಸೇವಕ ವೃಂದವು ಬಹಳ || ೧೭ ||
ಪ್ರಖ್ಯಾತ ವಿಹರಂಗ ರಕ್ಷಕ | ಆಖ್ಯೆಯ ಭಟರು ಗೂಢ ಚರರು | ಆಖ್ಯಾತ ಚತುರಂಗದಲಿ ಭದ್ರ ಸೈನ್ಯವು ಮೇರೆಯೇ || ೧೮ ||
ದುಷ್ಪ್ರಯೋಜಕ ನರರುಗಳಿಗೂ | ದುಷ್ಪ್ರೇರಣೆ ಮಾಡುವವರಿಗೂ | ನಿಷ್ಪ್ರಹತೆಯಿಂ ಉಗ್ರಶಿಕ್ಷೆಯ ಕೊಡುವ ತಾ ನಿಜದಿ || ೧೯ ||
ಇಂಥ ಜನಕತಿ ಕ್ರೂರ ರಾಜನು | ಪಂಥ ಭ್ರಷ್ಟರ ನೀತಿ ಭ್ರಷ್ಟರ | ಅಂಥ ಹೀನ ಸ್ಥಿತಿಯ ನೀಚಗೆ ಮೃತ್ಯು ದೇವತೆಯು || ೨೦ ||
ಕೈಯ ಮೇಲದು ಯೋಗ್ಯ ತೀರ್ಪಿಗೆ | ನ್ಯಾಯಕೆ ನಿಷ್ಪಕ್ಷ ಪಾತಿಯೂ | ದೀಯನು ಭವದೀಯನು ಇಹ ನಿಜವ ಅರಿತವಗೆ || ೨೧ ||
ಪಾರಮಾರ್ಥಿಕ ಐಹಿಕವು ತಾ | ಧಾರ್ಮಿಕನು ವೈವಾಹಿಕನು ಐಚ್ಚಿಕ | ಆರ್ಥಿಕನು ಸಾಂಘಿಕ ನೈತಿಕದಿ ಉತ್ತಮನು ರಾಜ || ೨೩ ||
ರಾಜನಂತೆಯೇ ಪ್ರಜೆಗಳೆಲ್ಲರು | ರಾಜ ಠೀವಿಯ ಸುಖವ ಭವಿಸುತ | ಪ್ರಜೆಗಳೆಲ್ಲರು ರಾಜ ನಿಷ್ಠರು ಸ್ವಾಭಿಮಾನಿಗಳು ||೨೪ || ಜನರ ಬಳಗವು ತನ್ನ ಬಗೆಯಿಂ | ತನ್ನ ಆಳಿಕೆ ಒಳಿತು ಕೆಡುಕೆಂ| ಬನ್ನ ಬಳಕೆಯ ಮಾತು ಕತೆಗಳ ಕೇಳಲುದ್ದೇಶ ||೨೫ ||
ಹೀಗಿರಲೊಂದು ಇರುಳಲ್ಲಿ ನೃಪನು | ಆಗಿ ವಾಡಿಕೆ ವೇಷ ಛದ್ಮ ದಿ | ನಗರದಿ ಹಯ ವೇರಿ ತಿರುಗುವನು ಗೌಪ್ಯದಲಿ ||೨೬ ||
ಪುರವನೆಲ್ಲವು ಸುತ್ತಿ ರಾಜನು | ದ್ವಾರ ಉತ್ತರ ವಿರುವ ಭಾಗಕೆ | ಹಾರುವರ ಸತ್ರದ ಬಳಿ ಸಾರಿದನು ರಾತ್ರಿಯಲಿ ||೨೭ ||
ಮೀರಿದರ್ಧವ ರಾತ್ರಿ ಸಮಯದಿ | ಮಾರು ಕಾಯದ ಕಪ್ಪು ಛಾಯೆಯ | ನರವನಾವನೋ ಕಾಳರಕ್ಕಸನೊಲ್ವನಚ್ಚರಿಯ ||೨೮ ||
ಮನೆಯು ಒಂದನು ಛತ್ರದೊಳಗೆಡೆ | ಮಾನವಾಕೃತಿ ಸೇರಿತದರಲಿ | ಎನು ಎಂದುನೋಡಲು ಕುತುಹಲ ಮಾತುಕೇಳಿದೊಡೆ ||೨೯ ||
ಆರಮನೆಯದು ನೋಡಲರಸನು | ನಾರಿನರ ವಾಗ್ವಾದ ಕೇಳಿತು | ನಾರಿಯಿಂದಲೆ ನರಗೆ ಮಾತದು ಕೇಳಿತೀರೀತಿ ||೩೦ ||
ನೃಪನುದಾರನು ದಯಾಶೀಲನು | ಕೃಪೆಯ ಮಾಲ್ಪುವನರುಹಿದರೆ ನೀವ್ | ನೆಪವ ಹೇಳದೆ ಹೋಗ ಬೇಕೆಂದಾಗ್ರಹವು ಪತಿಗೆ ||೩೧ ||
ಧನ ಸಹಾಯವ ಪಡೆಯೇ ದೊರೆಯಿಂ | ಹಣವ ವಿನಿಯೋಗಿಸಿಯೇ ದೊರೆಯಿಂ | ತಾನೇ ಜೀವಿಸಲೆಮ್ಮಬಡತನ ದೂರವಾಗುವುದು ||೩೨||
ಸತಿಯ ಪ್ರಶ್ನೆಗೆ ಪತಿಯ ಉತ್ತರ | ಸತಿಯೇ ನೀನ್ ಹೇಳುವುದು ನಿಜವು | ಆತನೆಲ್ಲವು ಕೊಟ್ಟರೂ ನಮ ದಕ್ಕುದದು ತಿಳಿಯೆ ||೩೩||
ಸೌರಿ ದೇವನ ಕ್ರೂರ ದೃಷ್ಟಿಯು | ಸೌರ ವರ್ಷದ ಸಪ್ತವಾರ್ಧವು | ಆರಿಂದಲೇನದು ದೊರೆತರೂ ಉಪಯೋಗವಿಲ್ಲೆಂದ ||೩೪ ||
ಅಂತಿಮದ ದಿನ ಬರುವ ಸಪ್ತಮಿ | ಅಂದು ಎರಡು ಪ್ರಹರದಂತ್ಯದಿ | ಪಿನ್ಗಳನು ತಾ ರಾಶಿ ಸಿಂಹಕೆ ವಾಲಿ ಹೋಗುವುನು ||೩೫ ||
ಎನಗೆ ಗ್ರಹಬಲ ಬರುವುದಾಗಲೇ |ತನಕ ನಾಂ ಸಂಯಮದಿ ವರ್ತಿಸೆ | ತಾನೇ ಬರುವುದು ಬೇಡದೆಯೇ ಅದೃಷ್ಟವದು ಎಂದ ||೩೬ ||
ಪ್ರಭೆಯು ಬೀಳಲು ಪಿಪ್ಪಲಾದನ | ನಭವೇ ಕಾಣ್ವುದು ಬಾಳು ಸಹಜವೂ | ಈ ಭವದಿ ನಡೆಯುವುದೆಂದು ನಿದಿದುಸಿರು ಮೇಲೆಳೆದ ||೩೭||
ಆತು ನಿಂತಲೆ ಕೇಳಿದಾ ನೃಪ |ಆತ ನರನಾರೆಂದು ಮನದಲಿ |ಏತ ಹೊಡೆದಾ ತೆರೆದಿ ನಡೆ ವಿಚಾರ ಮಂಥನವ ||೩೮ ||
ಮತಿಯ ಮಂಥಿಸೆ ರಾಜನುಂ ತಾ | ಅತಿಯ ವೇಗದಿ ಮನೆಗೆ ತೆರಳಿದ | ರೀತಿ ಎಂತುಂಟೆಂದು ಎನಿಸಿತು ಧನವನೀಯುದಕೆ ||೩೯ ||
ದೊಡ್ಡ ಮೊತ್ತ ದ ದ್ರವ್ಯ ಕೊಡಲು |ಅಡ್ಡ ದಾರಿಯ ಸಣ್ಣ ಛತ್ರದಿ |ಮಡ್ಡ ಕಳ್ಳರ ಕಾಟವು ಈ ನರಗೆ ಖಂಡಿತವು ||೪೦ ||
ಧನವು ತಾನದು ಮುಚ್ಚಿ ಕೊಟ್ಟರೆ |ಜನಕೆ ತಿಳಿಯದು ಈವ ವಿಷಯವು |ಮನುಜಗೀ ರೀತಿಯಲೆ ಕೊಡುವದು ಲೇಸುತನಗೆನಿಸಿ ||೪೧ ||
ಮರುದಿನವೆ ನೃಪ ತಾನೆ ಸ್ವತ:| ತರಿಸಿ ಕುಂಬಳಕಾಯಿ ದೊಡ್ಡದು | ಕೊರೆದು ತೂತನು ಬೀಜಗಳನು ತೆಗೆದು ಹಾಕಿದನು ||೪೨||
ಆರಿಗೂ ತಿಳಿಯದೆಯೆ ಅರಸನು | ಭರದಿ ತೆಗೆ ಭಂಡಾರದಿಂ ಧನ |ಏರು ಪೇರಾಗಿಸಿಯೆ ತುಂಬಿದ ಮುತ್ತು ರತ್ನಗಳ ||೪೩||
ಪಚ್ಚ ಮಣಿ ವೈಡೂರ್ಯವಜ್ರವ |ಅಚ್ಚ ನಾಣ್ಯಂಗಳನೆ ಹಾಕಿದ | ಹಚ್ಚಿ ರಂಧ್ರಕೆ ಮೆಣದಿಂ ಕುಂಬಳವ ರಕ್ಷಿಸಿದ ||೪೪||
ಯಜ್ಜು ಕಾಣದ ಅಂತ್ಯದಲಿ ತಾ | ಸಜ್ಜಿನಿಂ ಕುಂಬಳವ ನಿಟ್ಟನು | ರಾಜನಾಗಲೆ ನೋಡುತಿಹ ತಿಥಿ ಸಪ್ತಮಿಯ ದಾರಿ ||೪೫ ||
ತಿಥಿಯು ಸಪ್ತಕ ಬರಲು ನೃಪ ಪಂ - | ಡಿತರು ಕೂಡ್ರಲು ಬಂದು ಸಭೆಯಲಿ |ಆತನರುಹಿದ ಹಿಂದೆ ನಡೆದ ಘಟನೆ ಪರಿ ಪರಿಯಿಂ ||೪೬ ||
ಅರಸ ಹೇಳಿದ ಘಟನೆ ತಿಳಿಯಲು | ಭರಿತ ಕುತುಹಲರಾಗಿ ವಿಂದ್ವಾ- | ಸರಲಿ ಸರಣಿ ವಿಚಾರ ತೆರ ತೆರದಿಂದ ಬರಲಾಗಿ ||೪೭||
ಮನೆಯು ಯಾರದು ಛತ್ರ ದಲಿ ದೊರೆ | ಮನದಿ ಭಯದಲಿ ಕೇಳಲೋರ್ವ ಬು- | ಧನಮಾತಿಗೆ ಉತ್ತರದಿ ಪೇಳಿದನು ಇನ್ನೋರ್ವ್ ||೪೮||
ಗೃಹದ ಬಗೆಯನಗಲ್ಪ ಪರಿಚಯ | ಇಹುದು ದಂಪತಿಗಳಿರ್ವರು | ಅಹುದು ದಕ್ಷಿಣ ದೇಶ ಭೀಮಾ ತಟದ ಬ್ರಾಹ್ಮಣರು ||೪೯ ||
ಭೂಸುರನ ಹೆಸರು ವಿಷ್ಣು ಸ್ವಾಮಿಯು | ಆಸತಿಯು ರುಕ್ಮಿಣಿಯಮ್ಮ ಎಂದಿರೆ | ವಾಸಿಸುತ್ತಿರಲವರು ಛತ್ರದಿ ಸಂದಿ ದಿನವಧಿಕ || ೫೦ ||
ವಿಪ್ರನಾ ವೇದಾಂತಿ ತರ್ಕದಿ | ಸುಪ್ರಬುದ್ಧನು ವೇದ ಶಾಸ್ತ್ರದಿ | ಶ್ರಿ ಪ್ರವೃತ್ತಿಯು ನಿತ್ಯ ನೈಮಿತ್ಯಕದ ಕ್ರಿಯೆಗಳಲಿ || ೫೧ ||
ಆದರೂ ಕಡು ಬಡವರವರಾ - | ಆವದಿನದಲಿ ಗಳಿಕೆ ಅಲ್ಪವು | ಇದರ ದೆಸೆ ಉಪವಾಸ ಕೆಲ ಕಳೆದಿಹರು ಜೇವನದಿ || ೫೨ ||
ಆತನಷ್ಟೇ ಸತಿಯು ಮಿತವ್ಯಯಿ | ಅತಿಯ ಆಡಂಬರವು ಕಾಣದೆ | ಇತಿ ಮಿತಿಯ ಜೀವರಿಗೆ ಮಕ್ಕಳು ಇಲ್ಲದದು ಚಿಂತೆ || ೫೩ ||
ಅವನೆ ಪೇಳಿದ ಮಾತಿನಂತೆಯೇ | ಅವಗೆ ಶನಿಗ್ರಹ ಕ್ರೂರ ಸ್ಥಳದಿಂ - | ದಿರಲು ನಿಜವಾ ಕಪ್ಪುಛಾಯೆಯು ಶನಿಯು ಖಂಡಿತವು || ೫೪ ||
ಪರಿಚಯವ ಪಂಡಿತನು ಪೇಳ್ವೆಡೆ | ಧರಣಿಪತಿ ಬೇಸಸಿರುವ ಮಾತಿಗೆ | ಇರುವ ಸಪ್ತಮಿ ಇಂದಿಹುದು ನಾಂ ಭೂಸುರನ ಕರೆವೆ || ೫೫ ||
ಯಾರಲ್ಲಿ ? ಎಂದು ಕರೆಯೇ ಭಟರು | ಬರಲು ಎನಪ್ಪಣೆಯು ಪ್ರಭುವೇ | ಭರದಿ ತತ್ಪರರಾಗಿ ನಿಂದರು ಆಜ್ಞೆಯುದ್ದೇಶ || ೫೬ ||
ಭಟರೆ ! ನೀವ್ ಇಗಲೆಯೆ ಪೋಗಿ | ತಟದ ಉತ್ತರ ದ್ವಾರ ಛತ್ರದಿ | ದಿಟದಿ ವಿಷ್ಣು ಸ್ವಾಮಿ ಎಂಬಯ ವಿಪ್ರನನು ತನ್ನಿ || ೫೭ ||
ರಾಜಾಜ್ಞೆ ಮನ್ನಿಸಿಯೇ ಭಟರು | ದ್ವಿಜನೆಡೆಗೆ ಪೇಳಿದರು ಬಂದು | ಬಿಜಯ ಗೈವುದು ದ್ವಿಜರೆ ಓಲಗದೆಡೆಗೆ ರಾಜಾಜ್ಞೆ || ೫೮ ||
ಆಜ್ಞೆಯಂ ಕೇಳಿದನು ಭೂಸುರ | ಸೂಜ್ಞೆಯಿಂ ಯೋಚನೆಗೆ ತೊಡಗಿ ರಾ -| ಜಾಜ್ನೆಯದು ಯನಗೇಕೆ ತಾ ಮನದಲ್ಲೇ ಚಿಂತಿಸಿದ || ೫೯ ||
ಏನು ಕೆಲಸಯೋ ಯಾವ ವಿಷಯವೋ | ಎನಗೆ ಗ್ರಹಚರಕ್ರೂರ ಮೊದಲೇ ಅ -| ವನಿಪತಿಯ ಆಣೆಯದು ಎನ್ನುತ ಭಟರೊಡನೆ ಪೋರಟ || ೬೦ ||
ಹೊರಟ ವಿಪ್ರನು ಆಜ್ಞೆ ಯಂತೆಯೇ | ಭರದಿ ರಾಜ್ಯಾಸ್ಥಾನಕೆ ಬಂ - | ದರುಹಿ ಭಯ ಭಕ್ತಿಯಲಿ ವಿಪ್ರನು ನೃಪಗೆ ವಂದಿಸಿದ || ೬೧ ||
ವಂದನೆಗೆ ವಂದನೆ ಸಲಿಸಿ ನೃಪನು | ಅಂದದಲಿ ಕುಳ್ಳಿರಿಸಿ ಪಾರ್ವಗೆ | ಸಂಧಿ ಸಾಧಿಸಿ ಮಾತಿಗೆಳೆದನು ನಿಶಿತ ಮತಿ ರಾಜ || ೬೨ ||
ಎಲ್ಲವೂ ಅದು ಕುಶಲವೋ ತಾಂ - | ಎಲ್ಲಿಯವರು ಆವ ಪುರವದು | ಬಲ್ಲ ವಿದ್ಯೆಗಳೆಲ್ಲಿ ಕಲಿತಿರಿ ಎಂದು ಕೇಳಿದನು || ೬೩ ||
ದೇಶ ದಕ್ಷಿಣ ಭೀಮ ತಟದಿಂ - | ದಾಸೆಯಿಂದಲಿ ಕಲಿತ ವಿದ್ಯೆ ಗ - | ಳೇಸು ಎಲ್ಲವು ವಾರಣಾಸಿಯ ವಿದ್ಯೆ ಪೀಠ ದಲಿ || ೬೪ ||
ದ್ವಿಜನು ನಾನಗಸ್ತಿ ಗೊತ್ರಜ | ರಾಜಿಸುವ ರುಕ್ಮಿಣಿಯು ನಿಜಸತಿ | ರಾಜಧಾನಿಯ ಛತ್ರದಲಿ ಣಾ ವಾಶಿಸುವುದೆಂದ || ೬೫ ||
ಕರೆದ ಉದ್ದೇಶಾವುದು ಎಂ - | ದರುಹಲನು ನೃಪ ಸಾವಧಾನದಿ | ಸಾರ ಸುಖವನು ಕಂಡು ಅರಿದವರಲ್ಲ ತಾವೆಂದ || ೬೬ ||
ಕನಿಕರದಿ ನಿಮ ಪರಿಚಯವನರಿತು | ಕನವಳಿಸಿ ಕರೆ ತಂದು ದದಕೆ | ಮಾನವತೆಯದು ಬಡವರಲಿ ಕಾಣುವುದು ಉಂಟೆಂದ || ೬೭||
ಪರರ ಮನ ನೋಯಿಸದ ಜೀವರು | ಸುರರ ಪರಿ ಭೂಸುರರು ತಾವು | ಸುರತವಾಗಿಯೇ ಮಾತಿಗೊಂದು ಮಾತು ಬೆಳೆಯಿತದು || ೬೮ ||
ದೇವ ಸರಿಸಮ ನರರು ಆಗಲು | ಆವುದೇ ತಪ ದೇಹ ದಂಡನೆ | ಆವ ನಿರ್ಮಲ ಚಿತ್ತ ಬೇಕದು ಎಂದನಾ ವಿಪ್ರ || ೬೯ ||
ಶುದ್ಧ ಭಾವದ ನರನು ದೇವನು | ಸಿದ್ಧ ಕೊಡಲನು ವಸ್ತುಗಳ ಸುಖ | ಬದ್ಧ ಉಪಕಾರಿಯನು ಪರರಿಗೆ ತಾನೇ ದೇವನರ || ೭0 ||
ಸತ್ಯ ಆಚಾರದಲಿ ನಡೆಯಲು | ಮಿಥ್ಯವಂ ತೊರೆದುದಲೇ ಸುಖವನು | ನಿತ್ಯ ನೀತಿಯ ನಡೆಯು ತಾ ದೇವನಿಂ ಮಿಗಿಲು || ೭೧ ||
ಈ ಹೊಗಳಿಕೆಗೆ ನಾ ನನರ್ಹ ರಾಜನೇ | ಇಹುದು ಬಡತನಕಾರು ಹೊಣೆಯದು | ಬಹುದು ಅದರಲೇ ತೃಪ್ತಿಯನು ತಾ ಪದೆವುದೇ ಲೇಸು || ೭೨ ||
ಬಲವು ಗ್ರಹದಿಂ ಇಲ್ಲವದು ಪಿಂ - | ಗಳನ ಕೋಪವು ಯೆನಗೆ ಇಹುದಿಂ - | ದಲೆಯೇ ಸೌರಿಯು ಸಿಂಹ ರಾಶಿಗೆ ಗತಿಸೆ ಗತಿಯಿಂದ || ೭೩ ||
ಶನಿಯು ಕಾಡದೆ ಬಿಡನು ಯಾರಿಗೂ |ಮನದ ಗತಿ ವಿಧ ಕೊಡುವ ದುಃಖವ |ಎನಗಿಂದು ಸಂಜೆಯೇ ಗ್ರಹ ಬಲವು ಬರುವುದು ಕೇಳು ೭೪

ವಿಪ್ರ ಕಥಿಸಿದ ರೀತಿ ತಿಳಿದನು |ನೃಪನು ವಿನಯದಿ ಬವಣೆ ಕುರಿತಾ |ಆಪತ್ಕಾಲದ ಕೋರಿಕೆ ಅದೇನು ಕೇಳೆಂದ ೭೫
ಪ್ರಭುವೇ ಚಿತ್ತಕೆ ಧನ್ಯವಾದವು |ಪ್ರಭೆಯು ಕರುಣೆಯು ಒಂದು ತಮ್ಮಯ | ಶುಭವೇ ಇದಕಾನೇನು ಬೇಡೆನು ಎಂದನಾ ವಿಪ್ರ ೭೬
ಭೂಸುರನ ಚಾತುರ್ಯ ನೋಡಿ ಅ.| ರಸನು ಹರುಷದಿ ಭದ್ರ ಮಾಡಿದ |ಹೊಸೆದ ಕುಂಬಳಕಾಯಿಯನ್ನೆ ಇತ್ತು ಬೀಳ್ಕೊಟ್ಟ ೭೭
ರಾಜನಪ್ಪಣೆ ಕೇಳಿ ವಿಪ್ರನು. |ತೇಜದಲಿ ತಾ ನಡೆದ ಮನೆಯೆಡೆ. |ಓಜ ರಾಜನು ಕುಂಬಳವ ಕೊಟ್ಟುದಕೆ ಚಿಂತಿಸುತ ೭೮
ಮನೆಗೆ ಹೋಗುವ ದಾರಿ ದೂರದು |ಮನದಿ ಶೋಧಿಸಿ ಈಗ ಎಲ್ಲವೂ | ಎನಗೆ ಕುಂಬಳ ಬೇಕುಅಶನಕೆ ಅದುವೆ ತಾ ಲೇಸು ೭೯
ದಾರಿಯಲ್ಲಿಯೇ ಓರ್ವ ಅಂಬಿಗ | ಭರದಿ ಹೊರಟಿಹ ವಿಪ್ರ ಕರದಲಿ. |ಇರುವ ಕೂಷ್ಮಾಂಡವದು ಕಂಡೊದರಿದನು ಸಂಶಯದಿ ೮೦
ಎಲ ಎಲವೋ ನೀನಾರು ಹೇಳೆಲೋ | ಮೇಲು ಬದಿ ಚಪ್ಪರದಲಿಟ್ಟಿಹ. | ಕಳವು ಮಾಡಿದೆ ನನ್ನ ಕುಂಬಳ ಎಂದ ನಂಬಿಗನು ೮೧
ಪೊಳ್ಳು ಕಳ್ಳನೆ ನನ್ನದದು ತಾ. |ಉಳಿವು ಇವೆ ಅದನು ಕೊಟ್ಟರೆ | ಫಲವು ಕುಂಬಳ ಹಿಡಿದು ಅಂಬಿಗ ಕಸಿದನು ಛಲದಿ ೮೨
ತಡೆಯದಾಗದೆ ವಿಷ್ಣು ಸ್ವಾಮಿಯು | ಗಡನೆ ತಪಿಸುತ ಬಂದ ಮನೆಯಡೆ |ಮಡದಿ ಎದುರಲಿ ಪೇಳಿ ಕಥೆ ನಿರಾಶೆ ಮಂಕದಲಿ ೮೩
ದಯದಿ ಎನ್ನಯ ಕರೆದು ರಾಜನು | ನಯದಿ ಕುಂಬಳ ಕೊಟ್ಟ ನೊಂದನು |ರಯವು ಇಲ್ಲದ ಪೊಳ್ಳು ಕಾಣಿಕೆ ರಾಜನಿತ್ತಿರುವ. ೮೪
ಕ್ಷುದ್ರ ಕುಂಬಳಕಾಯಿಯಾದರೂ | ಭದ್ರ ಮಾಗಿಸಿ ಮಾರಿ ಹಣದಿಂ.| ಆರ್ದ್ರತೆಯು ಕಂಡಿಪೆನೆಂದು ಮನದೊಳು ಇಂದಿ ಊಟಕ್ಕೆ. ೮೫

ಶ್ರೀ ಮಠಾಧಿಪತಿಗಳು ಸೀತಾ - |
ರಾಮ ಆಚಾರ್ಯರಲಿ ಗ್ರಂಥಿಯ |
ಸ್ತೋಮದಲಿ ನಿಧಿಯುಕ್ತ ಕೂಷ್ಮಾಂಡೆಂಬಕತೆ ಇಹುದು||೮೬||
ಪಿತರು ಓದಿದುದಂತೆ ಪೇಳಿದ |
ಕಥೆಯು ರಂಜಿಸುವಂತೆ ಕನ್ನಡ |
ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ || ೮೭||
ಇಂತಿ ಶ್ರೀ ಶನೈಶ್ಚರಚರಿ ತಾ - |
ದ್ಯಂತ ಸ್ಪೂರ್ತಿಯು ನೀಡುತಿರೆ ತಾ- |
ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ || ೮೮ ||
ಇತಿ ಪುರಾಣೈತಿಹದ ಕಥೆಗಳು |
ಮಥಿಸಿ ಸೀತಾರಾಮ ತುಳಸಾ- |ರ
ಸುತನ ಸವಿಗತೆ ತೃತೀಯದ ಶ್ರೀ ಕೃಷ್ಣ ಅರ್ಪಣೆಯ || ೮೯||
ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ತೃತೀಯ ಸಂಧಿ ಪರಿಪೂರ್ಣಂ ಶುಭಮಸ್ತು ಕೃಷ್ಣಾರ್ಪಣಮಸ್ತು
No comments:
Post a Comment