Thursday, November 06, 2025

Crest / Cluster. शिखा क्यों रखनी चाहिए ಶಿಖೆ / ಚಂಡಿಕೆ / ಜುಟ್ಟು

 ಶಿಖೆ / ಚಂಡಿಕೆ / ಜುಟ್ಟು 



मस्तकाभ्यन्तरो परिष्टात् शिरा संधि सन्निपातो ।
रोमावर्तो धिपतिस्तात्रापि सद्यो मरणम् ॥

अर्थ : सिर के भीतरी भाग, जहाँ बाल स्थित होते हैं, को 'अधिपतिमर्म' कहते हैं, जिसका संबंध नसों और जोड़ों से है। यदि वहाँ चोट लगे, तो तुरन्त मृत्यु हो जाती है। (सुश्रुत संहिता, शरीर स्थान: 6.28)
कितनी बड़ी होनी चाहिए शिखा
धार्मिक ग्रंथों के अनुसार, सहस्रार चक्र का आकार गाय के खुर के समान माना गया है। इसलिए चोटी भी गाय के खुर के बराबर ही रखी जाती है। ज्योतिष शास्त्र के अनुसार, किसी व्यक्ति की कुंडली में राहु बुरा असर दे रहा हो, तो उसे सिर पर चोटी रखनी चाहिए। इससे राहु की दशा मेंं लाभ मिलता है।
चोटी रखने के वैज्ञानिक कारण
चोटी रखने के पीछे वैज्ञानिक कारण भी मौजूद हैं। जिस स्थान पर चोटी रखी जाती है उस स्थान पर मस्तिष्क का केंद्र होता है। इसी स्थान से शरीर के अंग, बुद्धि और मन नियंत्रित होते हैं। चोटी रखने से सहस्त्रार चक्र जागृत रहता है। चोटी रखने से सहस्रार चक्र को जागृत करने और बुद्धि, मन और शरीर पर नियंत्रण रखने में सहायता मिलती है।
शिखा में गांठ लगाने के कई कारण हैं, जिनमें आध्यात्मिक ऊर्जा को बनाए रखना, पूजा और अनुष्ठान के दौरान मस्तिष्क की ऊर्जा को शरीर में सीमित करना, और सिर के बीच में मौजूद नाजुक और संवेदनशील हिस्से की सुरक्षा करना शामिल है। गांठ लगाने से मंत्र उच्चारण से उत्पन्न होने वाली ऊर्जा शरीर से बाहर नहीं निकल पाती है और मानसिक व शारीरिक शक्ति को बढ़ावा मिलता है। 
आध्यात्मिक और वैज्ञानिक कारण
ऊर्जा का संरक्षण: जब कोई व्यक्ति पूजा, जप या हवन जैसी क्रियाएँ करता है, तो मंत्रों के कंपन से ऊर्जा उत्पन्न होती है। गांठ लगाने से यह ऊर्जा शरीर के अंदर ही केंद्रित हो जाती है, जिससे व्यक्ति को आध्यात्मिक और मानसिक लाभ मिलते हैं। 
सुरक्षा: शिखा वाले स्थान पर मस्तिष्क का सबसे संवेदनशील हिस्सा होता है, जिसे "अधिपति मर्म" भी कहा जाता है। गांठ लगाने से यह हिस्सा बाहरी प्रभावों और चोटों से सुरक्षित रहता है। 
सहस्रार चक्र को जागृत करना: शिखा को सिर के बीचों-बीच रखा जाता है, जो सहस्रार चक्र से संबंधित है। गांठ लगाने से इस चक्र को जागृत करने में मदद मिलती है और बुद्धि व मन को नियंत्रित करने में सहायता मिलती है। 

ಹಿಂದೂ ಧರ್ಮದಲ್ಲಿ (Hindu Religion) ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ಅನೇಕ ನಿಯಮಗಳಿವೆ. ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ನಿಯಮಗಳ ಬಗ್ಗೆ ಮಾತನಾಡುವುದಾದರೆ, ಅವು ವಿಜ್ಞಾನಕ್ಕೂ ಸಂಬಂಧಿಸಿವೆ. ಸನಾತನ ಧರ್ಮದಲ್ಲಿನ ಅಂತಹ ಒಂದು ನಿಯಮವೆಂದರೆ ಪುರುಷರು ತಲೆಯಲ್ಲಿ ಜುಟ್ಟು ಇಟ್ಟುಕೊಳ್ಳುವುದು. ಇದರ ಹಿಂದಿನ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳೋಣ.

ಮಸ್ತಕಾಭ್ಯಂತರೋ ಪರಿಷ್ಟಾತ್ ಶಿರ ಸಂಧಿ ಸನ್ನಿಪತೋ.
ರೋಮಾವರ್ತೋ ಧಿಪತಿಸ್ತತ್ರಪಿ ಸದ್ಯೋ ಮರಣಂ.

ಅರ್ಥ: ದೇಹದ ತಲೆಯು ಭೋವ್ರನಂತಿರುವಲ್ಲಿ, ಖಾಲಿ ಒಳಭಾಗವು ನಾಸ ಮತ್ತು ಸಂಧ್ಯಾಂಶಿಗೆ ಸಂಬಂಧಿಸಿದೆ, ಅದನ್ನು 'ಅಧಿಪತಿಮರ್ಮ್' ಎಂದು ಕರೆಯಲಾಗುತ್ತದೆ. ಅಲ್ಲಿ ಹೊಡೆದರೆ, ಸಾವು ತಕ್ಷಣವೇ ಸಂಭವಿಸುತ್ತದೆ. (ಸುಶ್ರುತ ಸಂಹಿತ, ಶರೀರ ಸ್ಥಾನಮ್: 6.28)

ತಲೆಯ ರಕ್ತನಾಳಗಳು ಕೂದಲಿನ ಕಿರುಚೀಲಗಳಿಗೆ ಸಂಪರ್ಕ ಹೊಂದಿವೆ.
ಕೂದಲಿನ ಕಿರುಚೀಲಗಳು ಇರುವ ತಲೆಯ ಒಳಭಾಗವನ್ನು 'ಅಧಿಪತಿಮರ್ಮ' ಎಂದು ಕರೆಯಲಾಗುತ್ತದೆ. ಅಲ್ಲಿ ಹೊಡೆತ ಬಿದ್ದರೆ, ತಕ್ಷಣವೇ ಸಾವು ಸಂಭವಿಸುತ್ತದೆ. (ಸುಶ್ರುತ ಸಂಹಿತ, ಶರೀರ ಸ್ಥಾನಂ: 6.28)
ಶಿಖೆ ಎಷ್ಟು ದೊಡ್ಡದಾಗಿರಬೇಕು?
ಧಾರ್ಮಿಕ ಗ್ರಂಥಗಳ ಪ್ರಕಾರ, ಸಹಸ್ರಾರ ಚಕ್ರದ ಆಕಾರವು ಹಸುವಿನ ಗೊರಸಿನಂತೆಯೇ ಇರುತ್ತದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶಿಖರವನ್ನು ಹಸುವಿನ ಗೊರಸಿನಂತೆಯೇ ಇಡಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ರಾಹುವು ವ್ಯಕ್ತಿಯ ಜಾತಕದಲ್ಲಿ ಕೆಟ್ಟ ಪರಿಣಾಮವನ್ನು ಬೀರುತ್ತಿದ್ದರೆ, ಅವನು ತನ್ನ ತಲೆಯ ಮೇಲೆ ಜಡೆಯನ್ನು ಇಟ್ಟುಕೊಳ್ಳಬೇಕು. ರಾಹುವಿನ ಸ್ಥಿತಿಯಲ್ಲಿ ಇದು ಪ್ರಯೋಜನಕಾರಿಯಾಗಿದೆ.
ಜಡೆಗಳನ್ನು ಹೊಂದಲು ವೈಜ್ಞಾನಿಕ ಕಾರಣಗಳು
ಜಡೆಯನ್ನು ಇಟ್ಟುಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಕೂದಲಿನ ಗಡ್ಡೆಯನ್ನು ಕಟ್ಟಿರುವ ಸ್ಥಳವು ಮೆದುಳಿನ ಕೇಂದ್ರವಾಗಿದೆ. ದೇಹದ ಅಂಗಗಳು, ಬುದ್ಧಿಶಕ್ತಿ ಮತ್ತು ಮನಸ್ಸನ್ನು ನಿಯಂತ್ರಿಸುವುದು ಇಲ್ಲಿಯೇ. ಕೂದಲಿನ ಗಡ್ಡೆಯನ್ನು ಇಟ್ಟುಕೊಳ್ಳುವುದರಿಂದ ಸಹಸ್ರಾರ ಚಕ್ರವು ಜಾಗೃತಗೊಳ್ಳುತ್ತದೆ. ಕೂದಲಿನ ಗಡ್ಡೆಯನ್ನು ಇಟ್ಟುಕೊಳ್ಳುವುದರಿಂದ ಸಹಸ್ರಾರ ಚಕ್ರವು ಜಾಗೃತಗೊಳ್ಳುತ್ತದೆ ಮತ್ತು ಬುದ್ಧಿಶಕ್ತಿ, ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳುತ್ತದೆ.
ಕೂದಲಿನ ಗಡ್ಡದಲ್ಲಿ ಗಂಟು ಹಾಕಲು ಹಲವಾರು ಕಾರಣಗಳಿವೆ, ಅವುಗಳಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಕಾಪಾಡಿಕೊಳ್ಳುವುದು, ಪೂಜೆ ಮತ್ತು ಆಚರಣೆಗಳ ಸಮಯದಲ್ಲಿ ಮೆದುಳಿನ ಶಕ್ತಿಯನ್ನು ದೇಹಕ್ಕೆ ಸೀಮಿತಗೊಳಿಸುವುದು ಮತ್ತು ತಲೆಯ ಮಧ್ಯದಲ್ಲಿರುವ ಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶವನ್ನು ರಕ್ಷಿಸುವುದು ಸೇರಿವೆ. ಗಂಟು ಕಟ್ಟುವುದರಿಂದ ಮಂತ್ರಗಳನ್ನು ಪಠಿಸುವುದರಿಂದ ಉತ್ಪತ್ತಿಯಾಗುವ ಶಕ್ತಿಯು ದೇಹದಿಂದ ತಪ್ಪಿಸಿಕೊಳ್ಳುವುದನ್ನು ತಡೆಯುತ್ತದೆ, ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಉತ್ತೇಜಿಸುತ್ತದೆ.
ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳು
ಶಕ್ತಿ ಸಂರಕ್ಷಣೆ: ಒಬ್ಬ ವ್ಯಕ್ತಿಯು ಪೂಜೆ, ಜಪ ಅಥವಾ ಹವನದಂತಹ ಆಚರಣೆಗಳನ್ನು ಮಾಡಿದಾಗ, ಮಂತ್ರಗಳ ಕಂಪನಗಳಿಂದ ಶಕ್ತಿಯು ಉತ್ಪತ್ತಿಯಾಗುತ್ತದೆ. ಗಂಟು ಕಟ್ಟುವುದರಿಂದ ಈ ಶಕ್ತಿಯನ್ನು ದೇಹದೊಳಗೆ ಕೇಂದ್ರೀಕರಿಸುತ್ತದೆ, ಆಧ್ಯಾತ್ಮಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ.
ರಕ್ಷಣೆ: ಕೂದಲಿನ ಗಂಟು ಮೆದುಳಿನ ಅತ್ಯಂತ ಸೂಕ್ಷ್ಮ ಭಾಗವಾಗಿದೆ, ಇದನ್ನು "ಅಧಿಪತಿ ಮರ್ಮ" ಎಂದೂ ಕರೆಯಲಾಗುತ್ತದೆ. ಗಂಟು ಕಟ್ಟುವುದು ಈ ಪ್ರದೇಶವನ್ನು ಬಾಹ್ಯ ಪ್ರಭಾವಗಳು ಮತ್ತು ಗಾಯಗಳಿಂದ ರಕ್ಷಿಸುತ್ತದೆ.

ಸಹಸ್ರಾರ ಚಕ್ರವನ್ನು ಜಾಗೃತಗೊಳಿಸುವುದು: ಶಿಖೆಯನ್ನು ತಲೆಯ ಮಧ್ಯಭಾಗದಲ್ಲಿ ಇರಿಸಲಾಗುತ್ತದೆ, ಇದು ಸಹಸ್ರಾರ ಚಕ್ರಕ್ಕೆ ಸಂಬಂಧಿಸಿದೆ. ಗಂಟು ಕಟ್ಟುವುದರಿಂದ ಈ ಚಕ್ರವನ್ನು ಜಾಗೃತಗೊಳಿಸಲು ಮತ್ತು ಬುದ್ಧಿಶಕ್ತಿ ಮತ್ತು ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ध्यान और एकाग्रता: शिखा में गांठ लगाने से बाहरी विचारों को बाधित करने और ध्यान को केंद्रित करने में मदद मिलती है, जिससे व्यक्ति को एकाग्रता हासिल होती है। 
अन्य कारण
पहचान और अनुशासन: शिखा रखना कई पारंपरिक समुदायों में एक पहचान चिह्न है, जो उनकी धार्मिक पहचान और नियमों के प्रति अनुशासन को दर्शाता है। 
शारीरिक लाभ: शिखा रखने और उसे गांठ बांधने से बौद्धिक और स्मरण शक्ति बढ़ती है, साथ ही व्यक्ति स्वस्थ, बलिष्ठ और तेजस्वी भी होता है। 

ಜುಟ್ಟು ಅಥವಾ ಶಿಖೆ ಹೊಂದುವ ಮಹತ್ವವೇನು?
ಹಿಂದೂ ಧರ್ಮದಲ್ಲಿ, ಒಬ್ಬ ವ್ಯಕ್ತಿಯ ಜನನದಿಂದ ಸಾವಿನವರೆಗೆ 16 ರೀತಿಯ ಆಚರಣೆಗಳಿವೆ. ಅವು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಆಚರಣೆಗಳಲ್ಲಿ ಮುಂಡನ ಸಂಸ್ಕಾರವೂ ಒಂದು. ಮಗುವಿನ ಮೊದಲ, ಮೂರನೇ ಅಥವಾ ಐದನೇ ವರ್ಷದಲ್ಲಿ ಕೂದಲನ್ನು ಬೋಳಿಸಲಾಗುತ್ತದೆ. 
       ಮುಂಡನ ಸಮಾರಂಭದ (kesha mundana) ಸಮಯದಲ್ಲಿ, ಮಗುವಿನ ಸ್ವಲ್ಪ ಕೂದಲನ್ನು ಉಳಿಸಲಾಗುತ್ತೆ. ತಲೆಯ ಮೇಲೆ ಜುಟ್ಟು ಅಥವಾ ಶಿಖೆ ಇಡುವ ಆಚರಣೆಯನ್ನು ಯಜ್ಞೋಪವಿತ್ ಅಥವಾ ಉಪನಯನ ಸಂಸ್ಕಾರದಲ್ಲಿ ಸಹ ನಡೆಸಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಪೂಜೆಗಳು, ಆಚರಣೆಗಳು ಮತ್ತು ಯಜ್ಞ ಇತ್ಯಾದಿಗಳನ್ನು ಮಾಡಲು ಶಿಖೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಪೌರೋಹಿತ್ಯ ಮಾಡುವವರು ಮಾತ್ರ ಇದನ್ನ ಶಿಖೆ ಇಟ್ಟುಕೊಳ್ಳುತ್ತಾರೆ.

ಶಿಖೆ ಎಷ್ಟು ದೊಡ್ಡದಾಗಿರಬೇಕು?
ಧಾರ್ಮಿಕ ಗ್ರಂಥಗಳ ಪ್ರಕಾರ, ಸಹಸ್ರಚಕ್ರದ ಆಕಾರವು ಹಸುವಿನ ಕೊಂಬುಗಳನ್ನು ಹೋಲುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಶಿಖೆಯನ್ನು ಹಸುವಿನ ಕೊಂಬುಗಳಿಗೆ ಸಮಾನವಾಗಿ ಇಡಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ರಾಹು ವ್ಯಕ್ತಿಯ ಜಾತಕದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದ್ದರೆ, ಅವನು ತಲೆಯ ಮೇಲೆ ಶಿಖೆ ಇಡಬೇಕು. ಇದು ರಾಹುವಿನ ಸ್ಥಿತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ.
ಶಿಖೆ ಹೊಂದಲು ವೈಜ್ಞಾನಿಕ ಕಾರಣಗಳು
ಶಿಖೆ ಉಳಿಸಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಮೆದುಳಿನ ಕೇಂದ್ರವು ಶಿಖೆ ಇರಿಸಿರುವ ಸ್ಥಳದಲ್ಲಿದೆ. ಈ ಸ್ಥಳದಿಂದ, ದೇಹದ ಭಾಗಗಳು, ಬುದ್ಧಿ ಮತ್ತು ಮನಸ್ಸನ್ನು ನಿಯಂತ್ರಿಸಲಾಗುತ್ತದೆ. ಶಿಖೆ ಕಾಪಾಡಿಕೊಳ್ಳುವ ಮೂಲಕ, ಸಹಸ್ರ ಚಕ್ರವು ಎಚ್ಚರವಾಗಿರುತ್ತದೆ. ಶಿಖೆ ಇಟ್ಟುಕೊಳ್ಳುವುದು ಸಹಸ್ರ ಚಕ್ರವನ್ನು ಜಾಗೃತಗೊಳಿಸಲು ಮತ್ತು ಬುದ್ಧಿ, ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು (control on body) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
 ಶಿಖೆ ಇಲ್ಲದ ಸಮಾಜ. ಮೇಲಾಗಿ ಬ್ರಾಹ್ಮಣ ಸಮಾಜದ ಮುಖಂಡರುಗಳಿಂದ ಆರಂಭ ಮಾಡಿಕೊಂಡು ಹೊಸದಾಗಿ ಉಪನಯನ ಆಗಿರುವ ವಟುವಿನವರೆಗೂ ಬಹುತೇಕ ಯಾರಲ್ಲಿಯೂ ಶಿಖೆ ಕಂಡು ಬರೋದಿಲ್ಲ ಇಂದು. ಅಲ್ಲಲ್ಲಿ ಶಿಖಾ ಇರೋರು ಕಂಡು ಬಂದರೂ  ಅವರು ಎಲ್ಲೆಲ್ಲೋ ಕೆಲವರು. ಇನ್ನು ಆಯುರ್ವೇದದ ಪ್ರಥಮ ಶಸ್ತ್ರ ಚಕಿತ್ಸಕ ಸುಶ್ರುತನ ಪ್ರಕಾರ ದೇಹದಲ್ಲಿ ಅತ್ಯಂತ ಸೂಕ್ಷ್ಮ ಜಾಗ ತಲೆಯ ಮೇಲ್ಭಾಗದ ಮಧ್ಯ ಸ್ಥಳ. ಅಂದರೆ ಪುರುಷರು ಜುಟ್ಟು ಬಿಡುವ ಜಾಗ.
           ಶಿಖೆ ಇದ್ದರೆ ಮಾತ್ರ ತೇಜಸ್ಸು , ಅದೇ ಇಲ್ಲದ ಸಮಾಜದ ಮುಖಂಡರು ಹೇಗೆ ತಾನೇ ಸಮಾಜವನ್ನು ಮುನ್ನಡೆಸಿಯಾರು? ಅವರನ್ನು ನೋಡಿ ಕಲಿಯುವುದಾದರು ಏನನ್ನು ಸಮಾಜ? 

(ಸನ್ಯಾಸಿಗಳು ಈ ಗುಂಪಿನಲ್ಲಿ ಸೇರೋದಿಲ್ಲ, ಆತ್ಮ ಶ್ರಾದ್ಧದ ಮೂಲಕ ಅವರ ಅಂತಃಸತ್ವದಲ್ಲೇ ತೇಜಸ್ಸು ಆಶ್ರಯ ಪಡೆದಿರುವ ಕಾರಣ)

ದಾನ ತೆಗೆದುಕೊಳ್ಳೋರ ವಿಷಯದಲ್ಲಿ ಪಾತ್ರತ್ವ ನೋಡ್ತೀವಿ ಆದರೆ ದಾನ ಕೊಡುವವರಲ್ಲೂ ಕಿಂಚಿತ್ತಾದರೂ ಪಾತ್ರತ್ವ ಇರಬೇಕು ಅನ್ನುತ್ತೆ ಶಾಸ್ತ್ರಗ್ರಂಥಗಳು.  ಶಿಖಾ ಇಲ್ಲದಿದ್ರೆ ಆಚಮನವೇ ಹುಟ್ಟೋದಿಲ್ಲ ಇನ್ನಾ ಎಲ್ಲಿಯ ಸಂಕಲ್ಪ ಎಲ್ಲಿಯ ಕೃಷ್ಣಾರ್ಪಣ. ಎಲ್ಲವೂ ಅಸುರರ ಪಾಲಾಗುವುದಿಲ್ಲವೇ

ಆಚಮನವೇ ಕೂಡದ ಮೇಲೆ ಎಲ್ಲಿಯ ಸಂಧ್ಯಾ ಎಲ್ಲಿಯ ಗಾಯತ್ರೀ,  ಎಲ್ಲಿಯ ಬ್ರಾಹ್ಮಣೋಚಿತ ಕರ್ಮಗಳು/ಸಂಸ್ಕಾರಗಳು, ಎಲ್ಲಿಯ ಬ್ರಾಹ್ಮತೇಜಸ್ಸು?

ಶಿಖೆಯೇ ಇಲ್ಲದ ಪಿತೃಕಾರ್ಯವಾದರು ಎಷ್ಟರಮಟ್ಟಿಗೆ ಸಾರ್ಥಕವಾಗುವುದು? ಇಂಥಾ ಮಕ್ಕಳಿರುವಾಗ ಯಾವ ಸೌಖ್ಯ ತಾನೇ ಕಾಣುವರು ಹೋದ ಪಿತೃಗಳು?

ಶಿಖಾ ಇಲ್ಲದ ವರನಿಗೆ ಕೊಟ್ಟ ಕನ್ಯಾದಾನ ಎಷ್ಟರ ಮಟ್ಟಿಗೆ ಶಾಸ್ತ್ರೋಕ್ತವಾದ ಕನ್ಯಾದಾನ ಅಂತಾಗುವುದು?
ಅಂಥವರನ್ನು ಕನ್ಯೆಯರಾದರೂ ಹೇಗೆ ಒಪ್ಪಿಯಾರು? 

ಅಯ್ಯೋ ಸ್ವಾಮಿ, ಶಿಖಾ ತೆಗೆಯಲು ಕಾರಣವೇ ಈ ಕನ್ಯೆಯರು ಅಂಥ ಹಲವಾರು ಮಂದಿ ಹೇಳುತ್ತಿರುವಾಗ ಕನ್ಯೆಯರ ಪೋಷಕರು ಯೋಚಿಸಬೇಕು. 

ಇಂಥವರ ಸಂತತಿಯಾದರೂ ಸತ್ವಭರಿತವಾಗಿರಲು ಹೇಗೆ ಸಾಧ್ಯ? 

ಇಂಥವರೇ ಅಧಿಕ ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿರುವ ಸಮಾಜದಿಂದ ದೇಶವಾದರೂ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?

ಬ್ರಾಹ್ಮಣ ಅಂದ್ರೆ ಭೂಸುರ (ಭೂಲೋಕದ ದೇವತೆ) ಅನ್ನೋದು ಕೇವಲ ಪುಸ್ತಕದ ಮಟ್ಟಿಗೆ ಅಂತಾಗುವುದು.

 ಹುಲಿಯ ಸಂತತಿಯಂತಿರಬೇಕಾದ್ದು ಬೆಕ್ಕಿನ ಸಂತತಿಯಾಗಿ ಮಾರ್ಪಟ್ಟಿರುವುದರ ಕಾರಣ ಬಹುಷಃ ಈಗ ಸ್ಪಷ್ಟ

ತಲೆಯಲ್ಲಿ ಕೂದಲಿದ್ದೂ ಶಿಖಾ ಉಳಿಸಿಕೊಳ್ಳುವ ಬುದ್ಧಿ ಇಲ್ಲದಿರುವುದಕ್ಕಿಂತ  ಬೋಳು ತಲೆಯಾಗಿ ಹುಟ್ಟೋದು ವಾಸಿಯಲ್ಲವೇ.... ಕನಿಷ್ಠ ಪಕ್ಷ ಶಿಖಾ ತೆಗೆಯುವ ದುರ್ಬುದ್ಧಿ ಬರುವ ಸಾಧ್ಯತೆ ಅಂತೂ ಇರೋದಿಲ್ಲ.

ಶಿಖೆ ಯನ್ನು ಕಳೆದುಕೊಳ್ಳೋದೂ ಒಂದೇ ಸಾಮ್ರಾಜ್ಯವನ್ನು ಕಳೆದುಕೊಳ್ಳೋದೂ ಒಂದೇ. ಕಾರಣ, ಶಿಖಾ ಇದ್ದರೆ ಏನು ತಾನೇ ಪಡೆಯಲು ಅಸಾಧ್ಯ?

ಸತ್ಯ ಹೀಗಿರಲು ಒಬ್ಬ ಮೂರ್ಖ ಮಾತ್ರ ತನ್ನ ಶಿಖೆಯನ್ನು ತೆಗೆಯುವ ಮನಸ್ಸು ಮಾಡಿಯಾನು. ಇನ್ನು, ತನ್ನ ಮಗನ ಶಿಖೆಯನ್ನೇ ತೆಗೆಸುವವನಿಗಿಂತ ದೊಡ್ಡ ಮೂರ್ಖ ತಂದೆ ಸಿಗಲು ಸಾಧ್ಯವೇ?

 ಸಂಧ್ಯಾಧಿಕಾರಕ್ಕೆ ಶಿಖೆ ಇರೋದು ಕಡ್ಡಾಯವಾ?

ಸಂಧ್ಯಾವಂದನೆ ಮಾಡಲು ಚಂಡಿಕೆ/ಶಿಖೆ/ಜುಟ್ಟು ಬಿಟ್ಟರಲೆ ಬೇಕೇ ಅನ್ನೋ ಪ್ರಶ್ನೆಗೆ ಶಾಸ್ತ್ರ ಕೊಡುವ ಉತ್ತರ 
ಶಿಖಾಯಾ: ಅಭಾವೋ ಯದಿ ಪ್ರಕೃತಿಜ: ತರ್ಹಿ ದೋಷೋ ನ ವಿದ್ಯತೇ
ಅರ್ಥ - ಸ್ವಾಭಾವಿಕವಾಗಿ ಯಾರಿಗೆ ಶಿಖೆ ಬಿಡಲು ಸಾಧ್ಯವಿಲ್ಲವೋ, ಅಂದ್ರೆ ಕೂದಲು ಉದುರಿದ್ದು, ಬೋಳಾಗಿದ್ದರೇ ಅಥವಾ ಯಾವುದೇ ರೋಗದ ನಿಮಿತ್ತ ತಲೆ ಯಲ್ಲಿ ಕೂದಲು ಇಲ್ಲದಿದ್ದರೆ ಆಗ ಅದು ದೋಷಕ್ಕೆ ಕಾರಣವಾಗೋದಿಲ್ಲ.

ಶರೀರದೋಷೇಣ ಹೀನತ್ವಮ್ ನ ದೋಷಾಯ ಭವತಿ

ಅಲ್ಲಿಗೆ ಕೂದಲು ಪೂರಾ ಇಲ್ಲದೇ ಇರೋರು ಚಿಂತಿಸಬೇಕಾಗಿಲ್ಲ.

ಆದರೆ ಎಷ್ಟು ಇರುತ್ತೋ ಅದರಲ್ಲಿ ಶಿಖಾ ಬಿಡಬೇಕು 
ಯದಿ ಕೇಶಾ: ಸಂತಿ, ತರ್ಹಿ ಶಿಖಾ ಅನಿವಾರ್ಯಾ
ಯಾಕೆ ಬಿಡಬೇಕು ಶಿಖಾ ಅಂದರೆ  ಶಿಖಾ ಧರ್ಮಲಕ್ಷಣಮ್ ಧ್ರುವಮ್, ವಿನಾ ತಸ್ಯ ದ್ವಿಜತ್ವಮ್ ನ ಸಿದ್ಧ್ಯತಿ
ಜುಟ್ಟು ಕೂಡ (ಜನಿವಾರದಂತೆ) ಬ್ರಾಹ್ಮಣನ ಅವಿಭಾಜ್ಯ ಅಂಗ. ಅದು ಇದ್ದರೆ ಮಾತ್ರ ದ್ವಿಜತ್ವ ಅಂದ್ರೆ ವೇದೋಕ್ತ ಕರ್ಮಾಧಿಕಾರ.
ಶಿಖಾ ಲಕ್ಷಣ ಹೀಗಿರಬೇಕು:
ಅಗಲ - 6 cm ಅಗಲ (ಕೊಬ್ಬರಿ ಬಟ್ಟಲು ಆಕಾರ )
ಉದ್ದ.  ಭುಜದ ಮೇಲೆ ಬರುವಷ್ಟು 
ಉದ್ದ ಭುಜದ ಮೇಲೆ ಇಳೆ ಬೀಳುವಷ್ಟು ಇಲ್ಲದಿದ್ದರೂ ಪರ್ವಾಗಿಲ್ಲ (ಆದ್ರೆ ಪಿತೃಗಳ ಅತೃಪ್ತಿ ಗೆ ಕಾರಣವಾಗುವುದು) ಗಂಟು ಹಾಕಿದಾಗ ಕೂಡುವಷ್ಟಾದರೂ ಇರಬೇಕು.
ಪಿತೃ ತೃಪ್ತಿಗೂ ಕಾರಣವಾಗಬೇಕಾದರೆ ಭುಜದವರೆಗೂ ಶಿಖಾ ಇರಲೇ ಬೇಕು. ಕೂದಲು ಅಷ್ಟುದ್ದ ಬೆಳೆಯುವುದಾದರೆ
ಸಂಧ್ಯಾವಂದನೆ ಮಾಡ್ಲಿಕ್ಕೆ ಬ್ರಾಹ್ಮಣನಾಗಿ ಹುಟ್ಟಿದ್ದರೆ ಸಾಲದು, ಅವನು ಪತಿತನಾಗಿರಬಾರದು, ಪಾಖಂಡಿಯಾಗಿರಬಾರದು, ವ್ರಾತ್ಯನಾಗಿರಬಾರದು, ವಿಕರ್ಮಸ್ಥನಾಗಿರಬಾರದು.
ಇಷ್ಟು ಎಚ್ಚರವಿದ್ದರೆ ಮಾತ್ರ ಸಂಧ್ಯಾಧಿಕಾರ.
ಈ ನಿಟ್ಟಿನಲ್ಲಿ, ಶಿಖಾ ಧಾರಣೆ ಮಾಡಿದರೆ (ಜೊತೆಗೆ ಜನಿವಾರ ಇದ್ದರೆ) ಅವನು ವಿಕರ್ಮಸ್ಥನಾಗೋದಿಲ್ಲ.
ಕೆಲವರು ಹೇಳುವುದುಂಟು, ಈಗಿನ ಕಾಲದಲ್ಲಿ ಯಾರ್ರೀ ಇದೆಲ್ಲ ಬಿಡ್ತಾರೆ ಅಂತ.
ಮಾಡಬಾರದ್ದನ್ನು ಮಾಡ್ಲಿಕ್ಕೆ ಕಾಲ ಅಡ್ಡಿ ಬರೋದಿಲ್ಲ ನಮಗೆ, ಅದೇ ಮಾಡಬೇಕಾದ್ದನ್ನು ಮಾಡಬೇಕಾದರೆ ಮಾತ್ರ ಕಾಲ ಅಡ್ಡಿಬರುವುದಾ?
ಶಿಖಾ ಬಿಡುವುದರಲ್ಲಿ ನಮ್ಮ ಸ್ವಪ್ರಯೋಜನ ಅಡಗಿದೆ.  ಈಗಲೂ ನಮ್ಮ ಕಣ್ಣ ಮುಂದೆಯೇ ಸರಿಯಾದ ಕ್ರಮದಲ್ಲಿ ಶಿಖಾ ಬಿಟ್ಟಿರುವವರೂ ಇದ್ದಾರೆ.
ಯೋಚಿಸಿ ನೋಡಿ.... ಶಿಖೆ ಕುರಿತಾದ ಪ್ರಶ್ನೆಗಳು ಅನೇಕ ತೆರನಾಗಿ ತೆರೆದುಕೊಳ್ತಿವೆ.
1. ಶಿಖಾ ಬಿಟ್ಟರೆ ಮಾತ್ರ ಬ್ರಾಹ್ಮಣರಾ, ಇಲ್ಲದಿದ್ದರೆ ಇಲ್ವಾ?
2. ಶಿಖೆ ಇದ್ದರೆ ಮಾತ್ರ ಸಂಸ್ಕಾರವಂತರಾ?
3. ಶಿಖೆ ಬಿಟ್ಟರೆ ಮಾತ್ರ ಭಕ್ತನಾ, ಮನಸ್ ಶುದ್ಧಿ ಇರೋದು ಬೇಡ್ವಾ?
4. ಶಿಖೆ ಇದ್ದರೆ ಮಾತ್ರ ಕರ್ಮಕ್ಕೆ ಅಧಿಕಾರನಾ, ಹಾಗಿದ್ರೆ ಅದನ್ನು ಬಿಡದೆ ಇರೋರ ಸಂಖ್ಯೆಯೇ ಅಧಿಕ ಇದೆಯಲ್ಲ ನಮ್ಮ ಸುತ್ತಮುತ್ತಲು?
5. ಶಿಖೆ ಬಿಟ್ಟು ಕೆಲಸಕ್ಕೆ ಹೋಗಲು ಸಾಧ್ಯವೇ
6. ಶಿಖೆ ಬಿಟ್ಟರೆ ಹೆಣ್ಣು ಕೊಡುವರೇ,  ಮದುವೆ ಆಗುವುದೇ?
7. ಕೂಪಮಂಡೂಕ ವಾದ ಇದು
ಹೀಗೆ ಅನೇಕ ರೀತಿಯಲ್ಲಿ ಪ್ರತಿಕ್ರಿಯೆಗಳು ಬಂದಿವೆ, ಕೆಲವು ವ್ಯಂಗ್ಯದಿಂದ ಕೂಡಿದ್ದು, ಕೆಲವು ಆತಂಕ ವ್ಯಕ್ತ ಪಡಿಸುವಂಥದ್ದು, ಕೆಲವು ಅಪ್ರಸ್ತುತ, ಕೆಲವು  ಖಿನ್ನತೆಗೆ ಒಳಗಾದ್ದು, ಕೆಲವು ಜಿಜ್ಞಾಸೆ ಯಿಂದ ಕೂಡಿದ್ದಾಗಿವೆ.
ವಿಷಯ ಇಷ್ಟೇ:
1. ತಲೆಯಲ್ಲಿ ಕೂದಲೇ ಇಲ್ಲ ಅಂದ್ರೆ, ಅವರಿಗೆ ಇದು ಅನ್ವಯಿಸೋದಿಲ್ಲ (ಈ ಹಿಂದೆಯೇ ಪ್ರಮಾಣ ಕೊಟ್ಟಾಗಿದೆ)
2. ಬಾಕಿಯಂತೆ bald head ಆಗಿದ್ದರೂ ಕೂಡ ಶಿಖೆ ಕಡ್ಡಾಯ, ಇದಕ್ಕೂ ಪ್ರಮಾಣ ಕೊಟ್ಟಿದೆ
3. ಶಿಖೆ ತೆಗೆದರೇನು/ಧಾರಣೆ ಮಾಡಿದರೇನು? ಧಾರಣೆ ಮಾಡಿದರೆ ಮಾತ್ರ ಸತ್ಕರ್ಮಕ್ಕೆ, ವಿಶೇಷವಾಗಿ ಸಂಧ್ಯಾ ಹಾಗು ಶ್ರಾದ್ಧಕ್ಕೆ ಅಧಿಕಾರ 
4. ಸಂಧ್ಯಾ ಕರ್ಮದಲ್ಲಿ ಆಚಮನ ಹೇಗೆ ಮಾಡಬೇಕು ಅಂಥ ಹೇಳುವಾಗ..... ಕುಳಿತಿರಬೇಕು, ಬಲಗೈ ಮೊಣಕಾಲು ದಾಟಿರಬಾರದು, ಪೂರ್ವ/ಉತ್ತರ ಕ್ಕೆ ಮುಖ ಮಾಡಿ ಕುಳಿತಿರಬೇಕು ಅಂತೆಲ್ಲ ನಿಯಮಗಳನ್ನು ಹೇಳ್ತಾ ಶಿಖೆಯ ಬಗ್ಗೆಯೂ ಹೇಳಿದ್ದಾರೆ
5. ಶಿಖೆ ಬಿಟ್ಟಿದ್ದರೆ ಸಾಲದು, ಗಂಟು ಹಾಕುವಷ್ಟಾದರೂ ಉದ್ದ ಇರಬೇಕು 
6. ವಾಸ್ತವದಲ್ಲಿ ಭುಜದವರೆಗೂ ಶಿಖೆ ಇರಬೇಕು, ಕಾರಣ ಶಿಖೋದಕ ತರ್ಪಣದಿಂದ ಪಿತೃಗಳಿಗೆ ಬಹಳ ತೃಪ್ತಿ ಉಂಟಾಗುತ್ತದೆ 
7. ಗಾಯತ್ರೀ ಮಂತ್ರದಲ್ಲೂ ಹಾಗು ಯಾವುದೇ ಮಂತ್ರದ ಜಪ ಮಾಡುವ ಮುಂಚೆ ನ್ಯಾಸ ಮಾಡಿಕೊಳ್ಳಬೇಕು, ಶಿಖೆಯೇ ಇಲ್ಲದ ಮೇಲೆ ಅಂಗ ನ್ಯೂನತೆ ಉಂಟಾಗುವುದು. ಜಪ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ
8. ಜಪ ಮಾಡುವ ಕರ್ಮವೇ ಒಂದು ತಪಸ್ಸು, ಅದರಿಂದ ಹುಟ್ಟೋದು ತೇಜಸ್ಸು, ಅದನ್ನು ಹಿಡಿದಿಟ್ಟುಕೊಳ್ಳುವ ಸಾಧನ ಅಂದ್ರೆ ಶಿಖಾ.
9. ಶಿಖಾ ಇಲ್ಲದ ಕರ್ಮ ತಪಸ್ಸಾಗೋದಿಲ್ಲ, ತೇಜಸ್ಸು ಬರೋದಿಲ್ಲ. ಬ್ರಹ್ಮರಂಧ್ರದ ಸಂರಕ್ಷಣೆ ಯೂ ಆಗಲಿಲ್ಲ. ಇನ್ನೆಲ್ಲಿಯ ಕುಂಡಲಿನಿ ಶಕ್ತಿಯ ಜಾಗೃತಗೊಳಿಸುವಿಕೆ. ಶಿಖೆ ಇಲ್ಲದವ ಕಳಾ ಹೀನನಾಗುವ
10. ತೇಜೋ ಹೀನನಾದ ಬ್ರಾಹ್ಮಣ ಅಂತ್ಯಜರಿಗಿಂತ ಕಡಿಮೆಯಾಗಿರುವ
11. ಶಿಖೆ ಬಿಡದವನ ದಾನ ಕಾರ್ಯವೂ ಸಫಲವಾಗೋದಿಲ್ಲ, ಕಾರಣ ಆಚಮನ ಮಾಡಿ ದಾನ ಕೊಡುವುದು, ಆಚಮನವೇ ಸಿದ್ಧಾವಾಗದ ಮೇಲೆ, ಕರ್ಮವೂ ನಿಷ್ಫಲ (ದೇವರು ಕಾರುಣ್ಯದಿಂದ ನೂರಕ್ಕೆ ಐದು ಅಂಕ ಕೊಡುವಂತೆ grace marks ಅಂತೂ ಕೊಡುವ, ಆದರೆ ಅಷ್ಟಕ್ಕೇ ಇಷ್ಟು ಹೋರಾಟವಾ)
12. ದಾನ ಕೊಡುವ ಅರ್ಹತೆಯೇ ಹೊರೆಟು ಹೋಗಿರುವಾಗ ದಾನ ತೆಗೆದುಕೊಳ್ಳೋದಂತೂ ಮಹಾ ದೋಷಕಾರಕ 
13. ಹಿಂದೆ ಅಪರಾಧ ಮಾಡಿದಾಗ ಅವರಿಗೆ ಶಿಕ್ಷೆಯ ರೂಪದಲ್ಲಿ ಕೇಶ ಮುಂಡನ ಮಾಡ್ತಿದ್ರು, either complete head shave or ವಿಕಾರವಾಗಿ ಕಾಣುವಂತ ಕೇಶ ವಿನ್ಯಾಸ. ಕಾರಣ, ಬ್ರಾಹ್ಮಣನಿಗೆ ದೇಹ ದಂಡನೆ ಹೇಳಿಲ್ಲ ಹಾಗಾಗಿ.
14. ಪುನರ್ ಸಂಸ್ಕಾರದ ಮೂಲಕವೇ ಅಧಿಕಾರ ಪಡೆಯುತ್ತಿದ್ದರು ಅಂಥವರೆಲ್ಲ
15. ಇಂದೂ ಕೂಡ ಪುನರ್ ಉಪನಯನ ಮಾಡಿಸಿಕೊಳ್ಳುವ ಮೂಲಕ ಅಧಿಕಾರವನ್ನು ಮರಳಿ ಪಡೆಯುವ ಅವಕಾಶ ಇರುತ್ತದೆ 
16. ಎಂಥವರಿಗೆ ಅಧಿಕಾರ ಹೋಗಿರುತ್ತದೆ ಅಂದರೆ...ಶಿಖಾ ತೆಗೆದವರಿಗೆ, ತಿನ್ನಬಾರದ್ದನ್ನು/ಕುಡಿಯಬಾರದ್ದನ್ನು ಸೇವಿಸಿದವರಿಗೆ...
ವಿಷಯ ಎಷ್ಟು ಗಂಭೀರವಾಗಿದೆ ಅಂದರೆ ಒಂದು ಕಡೆ ಬ್ರಾಹ್ಮಣ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕಾದ ಅವಶ್ಯಕತೆ ಮತ್ತೊಂದು ಕಡೆ ಅದಕ್ಕೆ ಪೂರಕವಾಗಿ ಬೇಕಾದ ಅಧಿಕಾರವನ್ನೂ ಉಳಿಸಿಕೊಳ್ಳುವ ಅನಿವಾರ್ಯತೆ. 
ಇಂದು ಬ್ರಾಹ್ಮಣನಾದವ ತಾನು ಮಾತ್ರ ಶಿಖೆ ತ್ಯಾಗ ಮಾಡಿಲ್ಲ ತನ್ನ ಮಕ್ಕಳಿಂದಲೂ ತ್ಯಾಗ ಮಾಡಿಸಿರುವ. ಅಥವಾ, ಅಂಥ ಶಿಖಾತ್ಯಾಗಿಯನ್ನೇ ತನ್ನ ಅಳಿಯನನ್ನಾಗಿ ಹೊಂದಿರುವ.
ಉನ್ನತ ಗುರಿಯೇ ಇಲ್ಲದವರಿಗೆ ಬ್ರಾಹ್ಮಣ ಜನ್ಮ ಯಾಕಾದರೂ ಬರುತ್ತೋ ಅಂಥ ದೇವತೆಗಳು ಬೇಸರ ಪಟ್ಟುಕೊಳ್ತಾರಂತೆ. 
ಪಿತೃಗಳಂತೂ.....ಬಿಡಿ ಇಂದು ಬಹುತೇಕರಿಗೆ ಪಿತೃಶಾಪ ಅನ್ನೋದು ಸಾಮಾನ್ಯ ಆಗಿರುವಂಥದ್ದು, ಇದಕ್ಕೆ ಕಾರಣ ಹಲವು, ಪ್ರಸ್ತುತದಲ್ಲಿ ಶಿಖೆ ಇಲ್ಲದಿರುವುದೂ ಒಂದು. 
ನಮ್ಮ ಔದಾಸೀನ್ಯ ತಾರಕಕ್ಕೇರಿದೆ, ಯಾರನ್ಯಾರೂ ಕೇಳೋರಿಲ್ಲ ಅನ್ಕೊಂಡಿದ್ದೇವೆ ಆದರೆ ಶಾಸ್ತ್ರ ಎಚ್ಚರಿಸುತ್ತೆ ಯಮಸ್ಯ ಕರುಣಾ ನಾಸ್ತಿ, ಧರ್ಮಸ್ಯ ತ್ವರಿತಾ ಗತಿ.... ಯಮ ಹಾಗು ಅವನ ದೂತರಿಗೆ ಕಿಂಚಿತ್ತೂ ದಯವಿಲ್ಲ. 
ಶಿಖೆಯೇ ಎಲ್ಲಾ ಅಂತಲ್ಲ, ಆದರೆ ಅದು ಕರ್ಮಕ್ಕೆ ಅಧಿಕಾರ ತಂದುಕೊಡುವಂಥದ್ದು.... 
1. ಶಿಖೆ ಇಲ್ಲದೇ ಸಂಧ್ಯಾ ಹುಟ್ಟಲ್ಲ, ದೇವತೆಗಳು ಸ್ವೀಕರಿಸೋದಿಲ್ಲ
2. ಶಿಖೆ ಇಲ್ಲದೆ ಪಿತೃಕಾರ್ಯ ಅಪೂರ್ಣವಾಗುತ್ತೆ, ಪಿತೃಗಳು ಸ್ವೀಕರಿಸೋದಿಲ್ಲ
3. ಶಿಖೆ ಇಲ್ಲದೆ ಕೊಡುವ ದಾನವೂ ವ್ಯರ್ಥ, ತನಗೂ ಲಾಭವಿಲ್ಲ.
ಸ್ವಪ್ರಯೋಜನವೂ ಇಲ್ಲದೇ, ಪರರ ಪ್ರಯೋಜನಕ್ಕೂ ಬಾರದೇ, ನೀ ಯಾರಿಗಾದೆಯೋ ಎಲೆ ಬ್ರಾಹ್ಮಣ ಅನ್ನೋದನ್ನು ಕಂಡು ಪುರಂದರ ದಾಸರು ಹಾಡಿದ್ದು ಮೂರ್ಖರಾದರು ಜನರು ಲೋಕದೊಳಗೆ  ಎಂದು.
ಗುರು/ಶುಕ್ರವಾರಗಳು ಒಳ್ಳೆ ದಿನ ಇದೆ, ಶಿಖೆ ಬಿಡಲು, 
 ಇವುಗಳನ್ನು ಓದಿ, ಒಂದು ಸವಾಲಾಗಿ ಸ್ವೀಕರಿಸಿಯೋ, ಅಥವಾ ಬದಲಾಗೋಣ ಅನ್ನೋ ಸಾತ್ವಿಕ ಭಾವನೆಯೊಂದಲೋ ಅಥವಾ ನಾವು ಶಿಖಾ ಬಿಟ್ಟರೆ ಪಿತೃಗಳಿಗೆ ಖುಷಿಯಾಗುತ್ತದೆ ಅಂತಲೋ ಯಾವುದೋ ಒಂದು ಕಾರಣವನ್ನು ಹುಡುಕಿಟ್ಟುಕೊಳ್ಳಿ.

ಇಷ್ಟು ದಿನ ಶಿಖಾ ಬಿಡದೆ ಇರಲು ನೂರಾರು ಕಾರಣಗಳನ್ನು ಹುಡುಕಿ, ತನ್ನ ಅವನತಿಗೆ ತನ್ನನ್ನು ತಾನೇ ಗುರಿಯಾಗಿಸಿಕೊಂಡು ಸಾಕಾದವರು ಇನ್ಮುಂದೆ ಶಿಖಾ ಬಿಡಲು ಒಂದು ಕಾರಣ ಹುಡುಕಿಕೊಳ್ಳಿ ಸಾಕು..‌.ಜೀವನದ ದಿಕ್ಕೇ ಬದಲಾಗುವುದು

No comments:

Post a Comment