ಮೊದಲು ದೇವಗೃಹವನ್ನು ಪ್ರವೇಶಿಸುವುದು.
ದೀಪವನ್ನು ಹಚ್ಚಿ ಗಂಟಾನಾದ ಶಂಖನಾದದೊಡನೆ ಬಾಗಿಲನ್ನು ತೆರೆಯುವುದು.
ಸಂಧ್ಯಾವಂದನೆ ಮಾಡುವುದು ,
ಭೂತೋಚ್ಚಾಟನ
ಅಪಸರ್ಪಂತು ಯೇ ಭೂತಾಃ
ಯೇ ಭೂತಾಃ ಭುವಿ ಸಂಸ್ಥಿತಾಃ
ಯೇ ಭೂತಾಃ ವಿಘ್ನಕರ್ತಾರಃ
ತೇ ನಶ್ಯಂತು ಶಿವಾಜ್ಞಯಾ ||
ಅಪಕ್ರಾಮಾಂತು ಭೂತಾನಿ ಕ್ರೂರಾಚೈವತು ರಾಕ್ಷಸಾಃ | ತೇಷಾಮಪ್ಯ ವಿರೋಧೇನಾ ಪೂಜಾಕರ್ಮ ಸಮಾರಭೇತ್ || ಇತೀ ಭೂತೋಚ್ಚಾಟನಂ.
ಗಂಟಾನಾದ
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಮ್ ಕುರು ಗಂಟಾರವಂ ತತ್ರ ದೇವತಾಹ್ವಾನ ಸೂಚಕಮ್ ||
ಆಚಮನ- ಪ್ರಾಣಾನಾಯಮ್ಯ, ದೇಶ ಕಾಲೌ ಸಂಕೀರ್ತ್ಯ
ಸಂಕಲ್ಪ
ಶ್ರೀವಿಷ್ಣು ಪ್ರೇರಣೇಯಾ ಶ್ರೀವಿಷ್ಣು ಪ್ರೀತ್ಯರ್ಥಂ ಯಥಾ ಶಕ್ಯ್ತಾ ಯಥಾ ಜ್ಞಾನೇನ ಶ್ರೀ ಲಕ್ಷ್ಮಿಗೋವಿಂದರಾಜಸ್ಯ ಧ್ಯಾನವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ .
ಕಲಶಪೂಜೆ
ಒಂದು ಸಣ್ಣ ಕಲಶದಲ್ಲಿ ನೀರನ್ನು ತುಂಬಿಸಿ , ಗಂಧ (ಗಂಧೋದಕ) ತುಳಸಿ , ಹೂ ಹಾಕಿ ಕಲಶವನ್ನು ಮುಟ್ಟಿ ಈ ಕೆಳಗಿನ ಮಂತ್ರವನ್ನು ಹೇಳಬೇಕು .
ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು .....
ಕಲಶಃ ಕೀರ್ತಿಮಾಯುಶ್ಚ ಪ್ರಜ್ಞಾಂ ಮೇಧಾಂ ಶ್ರಿಯಂ ಬಲಮ್ | ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧಯೇತ್ || ಅನೇನ ಕಲಶಪೂಜನೇನ ಭಗವಾನ್ ತತ್ಸತ್ ಶ್ರೀಕೃಷ್ಣಾರ್ಪಣಮಸ್ತು ||
[ ಈ ಕಲಶದ ನೀರನ್ನು ದೇವರ ಅಭಿಷೇಕದ ( ಪ್ರೋಕ್ಷಣೆ ) ಸಂದರ್ಭದಲ್ಲಿ ಉಪಯೋಗಿಸಬೇಕು ]
ಶಂಖಪೂಜೆ
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ | ನಮಿತಃ ಸರ್ವ ದೇವೈಶ್ಚ ಪಾಂಚಜನ್ಯ ನಮೋಸ್ತುತೇ || ಈ ಕೆಳಗಿನ ಮಂತ್ರವನ್ನು ಹೇಳುತ್ತ ಶಂಖದಲ್ಲಿ ಕಲಶದ ನೀರನ್ನು ತುಂಬಿಸಿ ಹೂವನ್ನು ಇಡಬೇಕು . ಪಾಂಚಜನ್ಯಾಯ ವಿದ್ಮಹೇ ಪಾವಮಾನಾಯ ಧೀಮಹೀ ತನ್ನೋ ಶಂಖಃ ಪ್ರಚೋದಯಾತ್
ನಂತರ ಶಂಖದ ನೀರನ್ನು ಪೂಜಾದ್ರವ್ಯಗಳ ಮೇಲೆ ತುಳಸೀ ಅಥವಾ ಹೂವಿನಿಂದ ಈ ಕೆಳಗಿನ ಮಂತ್ರವನ್ನು ಹೇಳುತ್ತ ಪ್ರೋಕ್ಷಿಸಬೇಕು.
ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ
ಪೀಠಪೂಜೆ
ವಿಷ್ಣೋರಾಸನ ಭೂತಾಯ ದಿವ್ಯರತ್ನಮಯಾಯ ಚ ಪ್ರಧಾನ ಪುರುಷೇಶಾಯ ಮಹಾಪೀಠಾಯತೇ ನಮಃ |
ದೇವರ ಪೀಠಕ್ಕೆ ತುಳಸಿಯನ್ನು ಹಾಕಿ ನಮಸ್ಕಾರ ಮಾಡುವುದು. ಹೀಗೆ ಮಾಡುತ್ತಲೇ ಗಂಧ ಅಕ್ಷಂತಿ, ಅಂಗಾರ ತಯಾರಿಸಿಡಬೇಕು
ಷೋಡಶೋಪಚಾರ
ಧ್ಯಾನಮ್
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾ ಪತಯೇ ನಮಃ || (ನಿಮ್ಮ ಇಷ್ಟ ದೇವರ ಅಥವಾ ಪ್ರತಿಮೆಯ ಧ್ಯಾನವನ್ನು ಮಾಡುವುದು)
( ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . )
ಆವಾಹನಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ || ಎಂದು ತುಳಸಿ / ಹೂವನ್ನು ಪ್ರತಿಮೆಗೆ ಅರ್ಪಿಸಬೇಕು . (ಪುರುಷಸೂಕ್ತ ತಿಳಿದವರು ಪಠಿಸಬೇಕು)
ಆಸನಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಆಸನಮ್ ಸಮರ್ಪಯಾಮಿ
ಪಾದ್ಯಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ - : ಪಾದ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ]
ಅರ್ಘ್ಯಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಅರ್ಘ್ಯಂ ಸಮರ್ಪಯಾಮಿ || [ ಕಲಶದ ನೀರು ಬಿಡುವುದು ]
ಆಚಮನೀಯಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮ : ಆಚಮನೀಯಂ ಸಮರ್ಪಯಾಮಿ || ] ಕಲಶದ ನೀರು ಬಿಡುವುದು ]
ಸ್ನಾನಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಸ್ನಾನಂ ಸಮರ್ಪಯಾಮಿ || [ ಹೂವಿನಿಂದ ಪ್ರತಿಮೆಗೆ ಕಲಶದ ನೀರನ್ನು ಪ್ರೋಕ್ಷಿಸುವುದು. (ಅಭಿಷೇಕಕ್ಕಾಗಿ ಮೂರ್ತಿ ಅಥವಾ ಸಾಲಿಗ್ರಾಮ ಇದ್ದರೆ ಶಂಖದಿಂದ ಅಭಿಷೇಕ ಮಾಡುವುದು) ಅಭಿಷೇಕ ಮಾಡಿದ ಮೂರ್ತಿಗಳ ತೀರ್ಥ, ಸಾಲಿಗ್ರಾಮದ ತೀರ್ಥ ಬೇರೆ ಬೇರೆಯಾಗಿ ಇರಲಿ.
ವಸ್ತ್ರಮ್
: ಶ್ರೀ ಲಕ್ಷ್ಮಿಗೋವಿಂದರಾಜಾಯ ನಮ : ವಸ್ತ್ರಂ ಸಮರ್ಪಯಾಮಿ || (ವಸ್ತ್ರವನ್ನು ಅಥವ ತುಳಸಿ ಹಾಕುವುದು)
ಉಪವೀತಂ
- ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಯಜ್ಞೋಪವೀತಂ ಸಮರ್ಪಯಾಮಿ || [ ಯಜೋಪವೀತವನ್ನು ಅಥವ ತುಳಸಿ ಹಾಕುವುದು ] (ಆಭರಣಗಳಿದ್ದಲ್ಲಿ ಹಾಕಬಹುದು)
ಗಂಧಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಗಂಧಂ ಸಮರ್ಪಯಾಮಿ || [ ಗಂಧವನ್ನು ಹಚ್ಚುವುದು ]
ಪುಷ್ಪಾಣಿ
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಪುಷ್ಪಂ ಸಮರ್ಪಯಾಮಿ || ಪ್ರತಿಮೆಯನ್ನು ಹೂವುಗಳಿಂದ ಅಲಂಕರಿಸಬೇಕು |
ನಂತರ ಯಾವುದೇ ಸ್ತೋತ್ರ; ಅಷ್ಟೋತ್ತರ ಇದ್ದಲ್ಲಿ ಪಠಿಸಬೇಕು ಉದಾಹರಣೆಗೆ ವಿಷ್ಣು ಸಹಸ್ರನಾಮ ಇತ್ಯಾದಿ..
ಧೂಪಂ
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಧೂಪಂ ಆಘ್ರಾಪಯಾಮಿ [ ಧೂಪವನ್ನು ಹಚ್ಚಿ ದೇವರಿಗೆ ತೋರಿಸಬೇಕು ]
ದೀಪಃ
ಶ್ರೀಲಕ್ಷ್ಮಿಗೋವಿಂದರಾಜಾಯ ನಮ : ದೀಪಂ ದರ್ಶಯಾಮಿ || ಮೂರು ಬತ್ತಿಯ ದೀಪವನ್ನು ಹಚ್ಚಿ ದೇವರಿಗೆ ತೋರಿಸಬೇಕು
ನೈವೇದ್ಯಮ್
ಶುದ್ಧವಾದ ನೆಲದ ಮೇಲೆ ತಟ್ಟೆಯಲ್ಲಿ ಹಣ್ಣುಕಾಯಿ ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ನೈವೇದ್ಯವನ್ನು ಇಟ್ಟು ತುಳಸಿ ನೀರಿನಿಂದ ಆ ನೈವೇದ್ಯವನ್ನು ಪ್ರೋಕ್ಷಿಸಿ , ತುಳಸಿಯನ್ನು ಅದರ ಮೇಲೆ ಹಾಕಿ , ಕೈಯಲ್ಲಿ ತುಳಸಿಯನ್ನು ಹಿಡಿದುಕೊಂಡು : - ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ನೈವೇದ್ಯಂ ನಿವೇದಯಾಮಿ || ಎಂದು ದೇವರಿಗೆ ಅರ್ಪಿಸಬೇಕು. (ಪಂಚಮುದ್ರೆಯನ್ನು ತಿಳಿದವರು ಪ್ರದರ್ಶಿಸುವುದು)
ಅಭಿಷೇಕದ ತೀರ್ಥವನ್ನು ಆ ನೈವೇದ್ಯಗಳ ಮೇಲೆ ಹಾಕಬೇಕು
ತಾಂಬೂಲಂ
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ತಾಂಬೂಲಂ ಸಮರ್ಪಯಾಮಿ .
ಮಂಗಲನೀರಾಜನಮ್
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಮಂಗಲನೀರಾಜನಮ್ ಸಮರ್ಪಯಾಮಿ || ದೇವರಿಗೆ ಮಂಗಳಾರತಿ ಬೆಳಗಬೇಕು.
ಮಂತ್ರಪುಷ್ಪಾಂಜಲಿ
ಶ್ರೀ ಲಕ್ಷ್ಮಿಗೋವಿಂದರಾಜಾಯ ನಮಃ ಮಂತ್ರಪುಷ್ಪಾಂಜಲಿ ಸಮರ್ಪಯಾಮಿ ||
ನಮಸ್ಕಾರ
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇಪದೇ ||
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ | ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ । ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃ ||
ನಮಸ್ಕಾರಂ ಸಮರ್ಪಯಾಮಿ.
ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ
ಅನೇನ ಶ್ರೀ ಲಕ್ಷ್ಮಿಗೋವಿಂದರಾಜ ಪೂಜಾರಾಧನೇನ ಭಗವಾನ್ ತತ್ಸತ್ ಶ್ರೀ ಕೃಷ್ಣಾರ್ಪಣಮಸ್ತು ||
(ಇದನ್ನು ಸಂಕ್ಷೇಪವಾಗಿ ನೀಡಿದ್ದು, ವಿಸ್ತಾರವಾಗಿಯೂ ದೇವರ ಪೂಜೆ ಮಾಡಬಹುದು )

No comments:
Post a Comment