ಶ್ರೀ ಶನೈಶ್ಚರ ಚರಿತಂ ಗ್ರಂಥ ನಿರ್ಮಾಣಕ್ಕೆ ಕಾರಣ ಮತ್ತು ವಿವರ
ನನಗೂ ತಂದೆಯವರಿಗೂ ಇಬ್ಬರಿಗೂ ಏಳೂವರೆ ವರ್ಷಗಳ ಶ್ರೀ ಶನೈಶ್ಚರ ಪೀಡೆ, (ಮಿಥುನ ರಾಶಿ ಕರ್ಕ ರಾಶಿ) ಅನುಷ್ಠಾನ, ಜಪ, ತಪ, ಪೂಜೆ ಇವೆಲ್ಲವುಗಳಿಗಿಂತ ಹೊರತಾಗಿ ಏನಾದರೊಂದು ಹೊಸತು ಮಾಡೋಣ ಎಂದು ವಿಚಾರಮಾಡಿ ಮೂಲ ಗುಜರಾಥಿ ಭಾಷೆಯಿಂದ ಮರಾಠಿಯಲ್ಲಿ ಭಾಷಾಂತರಗೊಂಡ ಶನಿ ಮಹಾತ್ಮೆಯನ್ನು ಕನ್ನಡದ ಕಾವ್ಯ ರೂಪದಲ್ಲಿ, ಅದೂ ಭಾಮಿನಿ ಷಟ್ಪದಿಯಲ್ಲಿ ಬರೆಯುವ ಬಗ್ಗೆ ವಿಚಾರ ವಿನಿಮಯ ಮಾಡಿದೆವು. ಬರುವ ವಿಶುವತ್ಪರ್ವ ಪ್ರದೋಷ ಪುಣ್ಯ ಕಾಲದಲ್ಲಿ ಮಂಗಲಾಚರಣ ದೊಂದಿಗೆ ಬರವಣಿಗೆ ಪ್ರಾರಂಭಿಸಿದಾಗ ನಾನೂ ಅವರ ಜೊತೆಯಲ್ಲಿದ್ದೆ ನನಗೆ ಕಾವ್ಯಗಳೆಂದರೆ ಶಾಲೆಯ ಪುಸ್ತಕಗಳಲ್ಲಿ ಓದಿದ್ದಷ್ಟೇ ಗೊತ್ತು ಕಾವ್ಯ ಬರವಣಿಗೆಯ ಗಂಧವನ್ನೇ ಗೊತ್ತಿರದೇ ಇದ್ದರೂ ಸಹವಾಸದಿಂದ ಕಾವ್ಯ ನಿರ್ಮಾಣ,ಬಂಧನ, ಗಣ ಮಾತ್ರಾ, ಯತಿ, ಲಯ ಇತ್ಯಾದಿಗಳ ಪರಿಚಯ ವಾಗುತ್ತ ಹೋಯಿತು ಕಾಶಿಖಂಡದಲ್ಲಿರುವ ಶನಿದೇವರ ಹುಟ್ಟು ಬಾಲ್ಯ ತಪಸ್ಸು, ಸಾಧನೆ ತಂದೆ ಸೂರ್ಯನೊಡನೆ ಭಿನ್ನಾಭಿಪ್ರಾಯ ಎಲ್ಲವನ್ನೂ ಅಳವಡಿಸಿಕೊಂಡೆವು. ಮುಂದೆ ಮೂಲ ಮರಾಠಿ ಭಾಷೆಯಲ್ಲಿಯ ಶನಿಮಹಾತ್ಮೆಗೆ ಕೈ ಹಾಕಿದೆವು
ಮನುಷ್ಯ ತನ್ನ ಜೀವಿತದಲ್ಲಿ ತನ್ನ ದೃಷ್ಟಿಯಿಂದ ತಾನು ಕೆಳಗಿಳಿಯದಂತೆ ವರ್ತನೆಯಿದ್ದರೆ ಶನೈಶ್ಚರನು
ಸಂತೃಪ್ತನಾಗಿ ಶುಭಫಲಗಳನ್ನು ಕೊಡುತ್ತಾನೆ ಎಂಬ ಬಲವಾದ ನಂಬಿಕೆ . ಶನಿಯು ಗ್ರಹ ಆಂತರಿಕ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಾನೆ ,ತಾತ್ವಿಕ ಜ್ಞಾನ ,ನಾಯಕತ್ವ ,ಮನನಶೀಲತೆ , ಧೈರ್ಯ , ಧೃಡತೆ ,ಗಂಭೀರತೆ ,ಸತರ್ಕತೆ ,ಕಾರ್ಯ ಕ್ಷಮತೆ ಇತ್ಯಾದಿಗಳ ಪ್ರತೀಕವಾಗಿದ್ದಾನೆ. ಏಳನೇ ಸ್ಥಾನದಲ್ಲಿದ್ದ ಶನಿ ಗ್ರಹವು ಅಸಿತ , ಆರ್ಕಿ , ಛಾಯಾತ್ಮಜ , ಮಂದ , ಶನೈಶ್ಚರ , ಸೂರ್ಯಪುತ್ರ,ರವಿಜ,ಪಂಗು ,ಸೌರಿ, ಮತ್ತು ಭಾಸ್ಕರಿ ಎಂದು ಕರೆಯಲ್ಪಡುತ್ತಾನೆ .ವೈಶಾಖ ಕೃಷ್ಣ ಅಮಾವಾಸ್ಯೆಯೇ ಶನೈಶ್ಚರ ಜಯಂತಿ , ಸ್ವಜನ್ಮ ರಾಶಿಯಿಂದ ೧,೨ ,೪,೫,೭,೮,೯,೧೨ ಈ ಸ್ಥಾನಗಳಲ್ಲಿದ್ದ ಶನಿಯು ಪೀಡಾಕಾರಕನು ಲೋಹದ ಪ್ರತಿಮೆಯನ್ನು ೨೩೦೦೦ ಜಪಗಳಿಂದ ನುತಿಸುವುದು . ಶನೈಶ್ಚರನ ಶುಭಾಶುಭ ಫಲವು ಜನ್ಮ ಕುಂಡಲಿಯಲ್ಲಿರುವ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಜನ್ಮ ಕುಂಡಲಿಯಲ್ಲಿ ಶನಿಯು ಶುಭ ಗ್ರಹಗಳಿಗೆ ಸ್ಪಂದಿಸುತ್ತಿರಲು ಅಥವಾ ೧ ,೫ , ಮತ್ತು ೯ ನೇ ಸ್ಥಾನದ ಸ್ವಾಮಿಯಾಗಿದ್ದು ೩ ,೬ ,೧೧ ನೇ ಸ್ಥಳದಲ್ಲಿದ್ದರೇ ಏಳುವರೆ ವರ್ಷದ ಅವಧಿಯಲ್ಲಿಯೂ ಶುಭ ಫಲಗಳನ್ನು ಕೊಡುತ್ತಾನೆ. ಆದರೇ ಜನ್ಮ ಕುಂಡಲಿಯಲ್ಲಿ ಚಂದ್ರ ಮತ್ತು ಶನಿ ಅಶುಭ ಗ್ರಹಗಳ ಜೊತೆಯಿದ್ದು , ೨ ಮತ್ತು ೮ ನೇ ಸ್ಥಾನದ ಅಧಿಪತಿಯಾಗಿದ್ದರೆ ಅಶುಭ ಫಲ ಖಂಡಿತ. ಒಟ್ಟು ಏಳೂವರೆ ವರ್ಷಗಳಲ್ಲಿ ಮೊದಲ ಎರಡೂವರೆ ವರ್ಷಗಳು ವೃಷಭ ,ಧನು ,ಮಕರ ರಾಶಿಗಳಿಗೆ ಹೆಚ್ಚು ಪೀಡಾದಾಯಕ, ಮೇಷ ,ಕರ್ಕ ,ಸಿಂಹ ,ಕನ್ಯಾ ,ವೃಶ್ಚಿಕ ರಾಶಿಗಳಿಗೆ ನಡುವಿನ ಎರಡೂವರೆ ವರ್ಷಗಳು ,ಮಿಥುನ ,ತುಲಾ, ಕುಂಭ , ಮೀನ ರಾಶಿಗಳಿಗೆ ಕೊನೆಯ ಎರಡೂವರೆ ವರ್ಷಗಳಲ್ಲಿ ತ್ರಾಸದಾಯಕನಿರುತ್ತಾನೆ . ಪಿಡಾಪರಿಹಾರಕ್ಕಾಗಿ ದಾನ ವಸ್ತುಗಳು : ಸುವರ್ಣ, ಲೋಹ, ನೀಲಮಣಿ, ಪೂರ್ಣ ಉದ್ದು , ಎಮ್ಮೆ , ಎಣ್ಣೆ , ಕಪ್ಪು ಬಣ್ಣದ ಹೊದ್ದಿಕೆ ,ಕಪ್ಪು ಅಥವಾ ನೀಲಿ ಹೂವುಗಳು.
ಇನ್ನೂ ವೈಜ್ಞಾನಿಕ ವಿಂಗಡಣೆಯಂತೆ ಶನಿ ಗ್ರಹದ ಬಗ್ಗೆ ವಿವರ.
ಸೌರ ಮಂಡಲ : ಸೂರ್ಯನಿಂದ ಅಂತರ :
೧೪೨ ಕೋಟಿ ೬೬ ಲಕ್ಷ ೬೬ ಸಾವಿರ ೪೨೨ ಕಿಲೋಮಿಟರ ( 9 .58 AU )
ಶನೈಶ್ಚರನ ಒಂದು ವರ್ಷ : ಪೃಥ್ವಿಯ 29 .45 ವರ್ಷಗಳು ಅಥವಾ 10755 .70 ದಿವಸಗಳಿಗೆ ಸಮ
,, ,, ದಿವಸ : 10 ಗಂಟೆ 34 ಮಿನಿಟ
ದ್ರವ್ಯರಾಶಿ : 568319 ಖರ್ವ ಕಿ.ಗ್ರ್ಯಾಂ
ಭೂಮಧ್ಯರೇಷಿಯ ವ್ಯಾಸ : 12 05 36 ಕಿ.ಮೀ
ಧೃವೀಯ ವ್ಯಾಸ : 10 27 28 ಕೀ.ಮೀ
ಭೂಮಧ್ಯರೇಷಿಯ ಪರಿಘ : 36 28 82 ಕೀ.ಮೀ
ಸ್ಥಿತ ಉಷ್ಣತೆ : 13 9 ಡಿಗ್ರಿ ಸೆಂಟಿಗ್ರೇಡ
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ । ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಸ್ತು ತೇ ॥ ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ । ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಸ್ತು ತೇ ॥
ಸರ್ವೇ ಜನಾ ಸುಖಿನೋ ಭವಂತು
No comments:
Post a Comment