ಸರಸೇನಾಧಿಪತಿ ಶ್ರೀ ತಾತ್ಯಾ ಟೋಪೆ
ತಾತ್ಯಾ ಟೋಪೆ ಒಬ್ಬ ಪ್ರಮುಖ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಅವರು 1857 ರ ಪ್ರಥಮ ಸ್ವಾತಂತ್ರ್ಯ ಸಮರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಜವಾದ ಹೆಸರು ರಾಮಚಂದ್ರ ಪಾಂಡುರಂಗ ಟೋಪೆ (ಯೆವಲ್ಕರ್) ಮತ್ತು ಅವರನ್ನು 'ತಾತ್ಯಾ ಟೋಪೆ' ಎಂದೂ ಕರೆಯುತ್ತಾರೆ. ಅವರು ನಾನಾ ಸಾಹೇಬ್ ಪೇಶ್ವೆಯ ಸೇನಾಧಿಪತಿಯಾಗಿದ್ದರು ಮತ್ತು ಕಾನ್ಪುರ, ಲಕ್ನೋ ಮತ್ತು ಝಾನ್ಸಿಯಂತಹ ಪ್ರಮುಖ ಕೇಂದ್ರಗಳಲ್ಲಿ ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡಿದವರು. ತಾತ್ಯಾ ಟೋಪೆ ಅವರ ಶೌರ್ಯ ಮತ್ತು ಯುದ್ಧ ತಂತ್ರಕ್ಕೆ, ಪರಾಕ್ರಮಕ್ಕೆ ಹೆಸರು ವಾಸಿಯಾಗಿದ್ದವರು
ತಾತ್ಯಾ ಟೋಪೆ ಅವರ ತಂದೆ ಪಾಂಡುರಂಗರಾವ್ ಭಟ್, ಶ್ರೀಮಂತ ಪೇಶ್ವೆ ಬಾಜಿರಾವರ ಮನೆಯ ಸಿಬ್ಬಂದಿಯಾಗಿದ್ದವರು. ನಂತರ, ತಾತ್ಯಾ ಬಾಜಿರಾವ್ ಅವರೊಂದಿಗೆ ಬಿಥೂರ್‌ಗೆ ತೆರಳಿದರು. ತಾತ್ಯಾ ಟೋಪೆಯವರ ನಿಜವಾದ ಹೆಸರು ರಾಮಚಂದ್ರ ಪಾಂಡುರಂಗರಾವ್ ಭಟ್ ಅವರು ಪ್ರೀತಿಯಿಂದ ತಾತ್ಯಾ ಎಂದು ಕರೆಯುತ್ತಿದ್ದರು.
ಅವರನ್ನು ಏಪ್ರಿಲ್ 18, 1859 ರಂದು ಶಿವಪುರಿಯಲ್ಲಿ ಬ್ರಿಟಿಷರು ಗಲ್ಲಿಗೇರಿಸಿದರು. ತಾತ್ಯಾ ಟೋಪೆ ಅವರ ಸ್ವಂತ ಮಿತ್ರ ಮಾನ್ ಸಿಂಗ್‌ನ ದ್ರೋಹದಿಂದಾಗಿ ಏಪ್ರಿಲ್ 7, 1859 ರಂದು ನಿದ್ರಿಸುತ್ತಿರುವಾಗ ಬ್ರಿಟಿಷ್ ಸೈನ್ಯವು ಅವರನ್ನು ಸೆರೆಹಿಡಿದರು. ಇದರ ನಂತರ, ಅವರನ್ನು ಶಿವಪುರಿಯಲ್ಲಿ ತ್ವರಿತವಾಗಿ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಮರಣದಂಡನೆ ವಿಧಿಸಲಾಯಿತು. ಅವರನ್ನು ಗಲ್ಲಿಗೇರಿಸುವ ಮೊದಲು, ತಾತ್ಯಾ ಟೋಪೆ ಧೈರ್ಯದಿಂದ ಘೋಷಿಸಿದರು, "ನಾನು ಬ್ರಿಟಿಷರ ಗುಲಾಮನಲ್ಲ; ನಾನು ಮಾಡಿದ್ದೆಲ್ಲವೂ ನನ್ನ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ.
ತಾತ್ಯಾ ಟೋಪೆ (೧೮೧೪-೧೮೫೯) 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅತ್ಯಂತ ಧೈರ್ಯಶಾಲಿ ಮತ್ತು ಪ್ರಮುಖ ಸೇನಾನಿ. ನಾನಾ ಸಾಹೇಬರ ನಿಕಟವರ್ತಿಯಾಗಿದ್ದ ಇವರು, ಗಾಂಧೀಜಿಗಿಂತ ಮುಂಚಿತವಾಗಿ 'ಗೆರಿಲ್ಲಾ ಯುದ್ಧತಂತ್ರ' (Guerrilla warfare) ಬಳಸಿ ಬ್ರಿಟಿಷರಿಗೆ ಭಾರಿ ನಷ್ಟವುಂಟುಮಾಡಿದರು. ಜಾನ್ಸಿ ರಾಣಿ ಲಕ್ಷ್ಮೀಬಾಯಿ ಅವರೊಂದಿಗೆ ಕೈಜೋಡಿಸಿ ಗ್ವಾಲಿಯರ್ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಹಾರಾಷ್ಟ್ರದ ನಾಸಿಕ್ ಸಮೀಪದ ಯೋವೋಲಾ ಗ್ರಾಮದಲ್ಲಿ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಫೆಬ್ರವರಿ ೧೬ ೧೮೧೪ ರಲ್ಲಿ ಜನಿಸಿದವರು. ಅವರ ಮೂಲ ಹೆಸರು ರಾಮಚಂದ್ರ ಪಾಂಡುರಂಗ ಟೋಪೆ ತಂದೆ ಪಾಂಡುರಂಗ ರಾವ್ ಟೋಪೆ (ಯೇವಳೇಕರ) ಮತ್ತು ತಾಯಿ ರುಖ್ಮಾಬಾಯಿ.
1857ರ ಸಮರದ ಕಾನ್ಪುರದಲ್ಲಿ ಬ್ರಿಟಿಷ್ ಸೇನೆಯನ್ನು ಸೋಲಿಸಿದ ಕೀರ್ತಿ ಇವರದು. ನಾನಾ ಸಾಹೇಬರ ಆಪ್ತ ಸಹಾಯಕರಾಗಿದ್ದ ಇವರು, ನಂತರ ಸ್ವತಂತ್ರವಾಗಿ ಹೋರಾಟ ಮುನ್ನಡೆಸಿದರು. ಸುಮಾರು 150ಕ್ಕೂ ಹೆಚ್ಚು ಯುದ್ಧಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಮತ್ತು ಸುಮಾರು 10,000ಕ್ಕೂ ಹೆಚ್ಚು ಬ್ರಿಟಿಷ್ ಸೈನಿಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಹೇಳಲಾಗುತ್ತದೆ.
ಜಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಡಲು ಇವರಿಂದ ಪ್ರೇರಣೆ ಪಡೆದಿದ್ದರು ಮತ್ತು ಇವರಿಬ್ಬರು ಸೇರಿ ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೊಂಡಿದ್ದರು.
ತಮ್ಮದೇ ಒಬ್ಬ ಆಪ್ತ ಸ್ನೇಹಿತ ಮಾನಸಿಂಗ್‌ನ ವಿಶ್ವಾಸದ್ರೋಹದಿಂದಾಗಿ ಬ್ರಿಟಿಷರಿಗೆ ಸೆರೆ ಸಿಕ್ಕರು. 18 ಏಪ್ರಿಲ್ 1859 ರಂದು ಶಿವಪುರಿಯಲ್ಲಿ (ಮಧ್ಯಪ್ರದೇಶ) ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟರು.
ತಾತ್ಯಾ ಟೋಪೆ ಪ್ರಾರಂಭದಲ್ಲಿ ಬಿಥುರ್ ಪ್ರಾಂತ್ಯದ ನಾನಾ ಸಾಹೇಬನ ಸೇನಾನಿಯಾಗಿದ್ದರು. ಕಾಲಕ್ರಮೇಣದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅವರು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ನೆರವಿಗೆ ಬಂದು ಹೋರಾಡಿದರು.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾನ್ಪುರ, ಕಲ್ಪಿ, ಜಾನ್ಸಿಗಳಲ್ಲಿ ಯುದ್ಧ ಸಂಘಟನೆಗಳನ್ನು ನಡೆಸಿದ ತಾತ್ಯಾ ಟೋಪೆ ಬ್ರಿಟಿಷ್ ಸೇನೆಯನ್ನು ಮಣ್ಣು ಮುಕ್ಕುವಂತೆ ಮಾಡಿದ್ದರು.
ಈ ಪ್ರದೇಶಗಳನ್ನು ಬ್ರಿಟಿಷ್ ಸೇನೆ ಪುನಃ ವಶಪಡಿಸಿಕೊಂಡಿತಾದರೂ, ತಾತ್ಯಾ ಅವರು ದೇಶದ ಇತರೆಡೆಗಳಾದ ಬಂದೆಲ್ಖಂಡ್, ಮಧ್ಯಭಾರತ, ರಾಜಾಸ್ಥಾನದ ಭರತ್ಪುರ, ಬಿತುಹರ್ ಮುಂತಾದ ಬಹುತೇಕ ಕಡೆಗಳಲ್ಲಿ ಸೇನೆಯನ್ನು ನಿರಂತರವಾಗಿ ಸಂಘಟಿಸುತ್ತಲೇ ಇದ್ದರು. ನರ್ಮದಾ, ಬೆಟ್ವ ನದೀತೀರಗಳಿಂದ ಮೊದಲ್ಗೊಂಡು ದಕ್ಷಿಣದ ಖಾಪನ್ದೇಶ್ ವರೆಗೆ ಅವರು ಕ್ರಾಂತಿಯ ಕಿಡಿಯನ್ನು ಜ್ವಾಜ್ವಲ್ಯಮಾನವಾಗಿ ಉರಿಸಿದ್ದರು. ಅವರ ಸಂಘಟನಾ ಶಕ್ತಿ ಅತ್ಯದ್ಭುತವಾದುದೆಂದು ಚರಿತ್ರೆ ದಾಖಲಿಸಿದೆ. ಈ ಎಲ್ಲಾ ಪ್ರದೇಶದ ಜನರಲ್ಲಿ ಅವರು ಬಹಾದ್ದೂರ್ ತಾತ್ಯಾ ಟೋಪೆ ಎಂದು ಪ್ರಸಿದ್ಧರಾಗಿದ್ದರು.
ಎಲ್ಲ ರೀತಿಯಲ್ಲೂ ಬ್ರಿಟಿಷ್ ಸಿಂಹಾಸನಕ್ಕೆ ಸಿಂಹಸ್ವಪ್ನರಾಗಿದ್ದ ತಾತ್ಯಾಟೋಪೆ ಅದ್ಭುತವಾದದ್ದನ್ನು ಸಾಧಿಸುವುದರತ್ತ ಮುನ್ನುಗ್ಗಿದ್ದರು. ಆದರೆ ಮಾನಸಿಂಗನೆಂಬ ಒಬ್ಬ ನಂಬಿಕೆಯ ಗೆಳೆಯ ತಾತ್ಯಾ ಟೋಪೆಯವರಿಗೆ ಮಿತ್ರದ್ರೋಹಿಯಾಗಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅವರ ಸುಳಿವನ್ನು ಕೊಟ್ಟು ಅವರ ಬಂಧನಕ್ಕೆ ಕಾರಣನಾದ. ಮತ್ತೊಂದು ವಿಚಾರವೆಂದರೆ ಗ್ವಾಲಿಯರಿನ ದೊರೆಯಾಗಿ ಜಿವಾಜಿ ರಾವ್ ಸಿಂಧಿಯಾ ಕೂಡಾ ಬ್ರಿಟಿಷರಿಗೆ ತನ್ನ ಸೇನೆಯನ್ನು ನೆರವು ನೀಡಿದ. ಬಹುಶಃ ಅದಿಲ್ಲದಿದ್ದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ತಾತ್ಯಾ ಟೋಪೆಯಂತಹವರ ಸಾಹಸವನ್ನು ಬ್ರಿಟಿಷ್ ಸೇನೆ ತಡೆದುಕೊಳ್ಳಲು ಸಾಧ್ಯವಿರುತ್ತಿರಲಿಲ್ಲ.
ತಾತ್ಯಾ ಟೋಪಿ ತನ್ನ ಗೆರಿಲ್ಲಾ ಯುದ್ಧನೀತಿಯಿಂದ ಬ್ರಿಟಿಷರಿಗೆ ಭೀತಿ ಹುಟ್ಟಿಸಿದ್ದರು. ಹಾಗಾಗಿ ಬ್ರಿಟಿಷರು ನಮ್ಮ ಭಾರತೀಯ ಒಡಕುತನವನ್ನೇ ಬಂಡವಾಳವಾಗಿಸಿಕೊಂಡು ತಾತ್ಯಾಟೋಪೆಯವರನ್ನು ಮೋಸದ ಸುಳಿಗೆ ಸಿಲುಕಿಸಿ ತನ್ನ ಚಕ್ರಾಧಿಪತ್ಯವನ್ನು ಮುಂದುವರೆಸಿತು. ತಾತ್ಯಾ ಟೋಪೆಯಂತಹ ಮಹಾವೀರ ಬ್ರಿಟಿಷ್ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಅಲುಗಿಸಿದ್ದರು ಮತ್ತು ಅದಕ್ಕೆ ಈ ನೆಲ ಶಾಶ್ವತವಾಗಿ ದಕ್ಕುವಂತದಲ್ಲ ಎಂಬುದನ್ನು ಮನಮುಟ್ಟುವಂತೆ ಲಿಖಿಸಿದ್ದರು ಎಂಬುದು ಮಾತ್ರ ಅಲ್ಲಗೆಳೆಯಲಾರದ ಸತ್ಯ.
ಏಪ್ರಿಲ್ ೧೮, ಭಾರತ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಹೋರಾಟಗಾರರಾದ ತಾತ್ಯಾಟೋಪೆ ಅವರು ದೇಶಕ್ಕಾಗಿ ಪ್ರಾಣತೆತ್ತ ದಿನ. ಏಪ್ರಿಲ್ ೧೮, ೧೮೫೯ರ ವರ್ಷದಲ್ಲಿ ಬೃಹತ್ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅವಿಸ್ಮರಣೀಯವಾಗಿ ಹೋರಾಡಿದ ಈತ ಕೊನೆಗೆ ತಮ್ಮ ಮಿತ್ರದ್ರೋಹಿಯೋಬ್ಬನಿಂದ ಬ್ರಿಟಿಷ್ ಸೇನೆಗೆ ಸೆರೆಸಿಕ್ಕಿ ಮರಣದಂಡನೆಗೆ ಗುರಿಯಾಗಿ ಕೇವಲ ತಮ್ಮ ೪೫ನೆಯ ವಯಸ್ಸಿನಲ್ಲಿ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತರು
ತಾತ್ಯಾ ಟೋಪೆ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಪ್ರತಿಮ ಧೈರ್ಯ ಮತ್ತು ದೇಶಭಕ್ತಿಗೆ ಸಂಕೇತವಾಗಿ ಇಂದಿಗೂ ಸ್ಮರಿಸಲ್ಪಡುತ್ತಾರೆ.

ತಾತ್ಯಾ ಟೋಪೆಯವರ ಬಗ್ಗೆ ಇಂದು ಸಮಗ್ರ ಮಾಹಿತಿ ದೊರಕಿತು.... ತುಂಬ ಧನ್ಯವಾದಗಳು ಸರ 🙏🙏
ReplyDelete