Saturday, September 05, 2026

Bhima's Mace "Prabhanjana". ಭೀಮಸೇನನ ಗದೆ "ಪ್ರಭಂಜನ"

        ಭೀಮಸೇನನ ಗದೆ "ಪ್ರಭಂಜನ" 

      ಮಹಾಭಾರತದಲ್ಲಿ ಅಗಾಧವಾದ ಬಲಿಷ್ಠ ಸಹಸ್ರ ಆನೆಗಳ ಶಕ್ತಿ ಯನ್ನೂ ದೇಹವನ್ನು ಹೊಂದಿದವನು ಭೀಮಸೇನ. ದುರ್ಯೋಧನನ ಅಂಹಾಕರಕ್ಕೆ ತಕ್ಕ ಶಾಸ್ತಿ ಮಾಡಿದವನೂ ಇವನೇ. ಸಂಪೂರ್ಣ ಮಹಾಭಾರತದಲ್ಲಿ ಭೀಮಸೇನ ಮತ್ತು ವೀರ ದುರ್ಯೋಧನರ ನಡುವೆ ನಡೆದ ಯುದ್ಧ ರೋಚಕ, ಭೀಕರವೂ ಆಗಿತ್ತು. ಭೀಮನು ತನ್ನ ಗದೆಯ ಮೂಲಕ ದುರ್ಯೋಧನನ್ನು ಸಂಹಾರ ಮಾಡಿದನು ಎನ್ನುವ ಕಥೆಯಿದೆ. ಭೀಮನ ಆ ಗದೆಯ ಹೆಸರೇನು.? ಭೀಮನ ಗದೆಯು ಎಷ್ಟು ಶಕ್ತಿಯುತವಾಗಿತ್ತು.?

       ಮಹಾಭಾರತ ಕಥೆಯಲ್ಲಿ ಪ್ರತಿಯೊಬ್ಬ, ಕೌರವ ಪಾಂಡವ ಯೋಧರು ಯುದ್ಧದ ಸಮಯದಲ್ಲಿ ಪ್ರತ್ಯೇಕವಾದ ಆಯುಧಗಳನ್ನು ಹಿಡಿದು ಯುದ್ಧವನ್ನು ಮಾಡಿದ್ದರು. ಈ ಆಯುಧಗಳು ಅದರದ್ದೇ ಆದ ಅಗಣಿತ ಶಕ್ತಿಯನ್ನು ಹೊಂದಿದ್ದವು. ಆದರೆ, ವಿಶೇಷವಾಗಿ ಎಲ್ಲರ ಗಮನ ಸೆಳೆದ ಆಯುಧಗಳಲ್ಲಿ ಭೀಮನ ಗದೆಗೆ ವಿಶಿಷ್ಟ ಸ್ಥಾನವೆನ್ನಬಹುದು. ಭಿಮನ ಗದೆಯನ್ನು ಹಿಡಿದು ಹೋರಾಡುವುದಿರಲಿ ಅದನ್ನು ಅಲುಗಾಡಿಸುವುದು ಕೂಡ ಕಷ್ಟವಾಗಿತ್ತು ಎನ್ನಲಾಗುತ್ತದೆ. ಅಂತಹ ಶಕ್ತಿಯುತವಾದ ಗದೆಯನ್ನು ಎತ್ತಿ ಯುದ್ಧ ಮಾಡುವ ಸಾಮರ್ಥ್ಯವನ್ನು ಭೀಮನಿಗಲ್ಲದೆ ಬೇರಾರಿಗೂ ಇರಲು ಸಾಧ್ಯವಿರಲಿಲ್ಲ. ಕೌರವರಲ್ಲೇ ಅತ್ಯಂತ ವೀರನಾದ ದುರ್ಯೋಧನನಿಗೆ ಮರಣವನ್ನು ಕಾಣಿಸಿದ್ದು ಭೀಮನ ಇದೇ ಗದೆ.

               ಭೀಮನ ಗದೆ ಬೃಹಧಾಕಾರವಾಗಿದ್ದಿದ್ದು ಮಾತ್ರವಲ್ಲ, ಇದು ಅಪಾರ ಶಕ್ತಿಯನ್ನು ಕೂಡ ಹೊಂದಿತ್ತು. ಸಾವಿರಾರು ವರ್ಷಗಳ ಹಿಂದೆ ಭೀಮ ಹಿಡಿದ ಈ ಗದೆಯ ಬಗ್ಗೆ ಇಂದಿಗೂ ವಿಜ್ಞಾನಿಗಳ ಮನಸ್ಸಿನಲ್ಲಿ ನೂರಾರು ಗೊಂದಲಗಳು, ಪ್ರಶ್ನೆಗಳು ಓಡಾಡುತ್ತಿವೆ. ಭೀಮನ ಬಳಿಯಿದ್ದ ಈ ಗದೆಯು ದೈವಿಕ ಶಕ್ತಿಯನ್ನು ಹೊಂದಿದ್ದ ಗದೆಯಾಗಿತ್ತು ಎಂದು ತಿಳಿದುಬರುತ್ತದೆ. ಸಂಸ್ಕೃತ ಮಹಾಭಾರತದಲ್ಲಿ, ಇದನ್ನು 'ಮಹತಿಂ ಗದಂ' ಎಂದು ಕರೆಯಲಾಗಿದೆ. ಅಂದರೆ "ದೊಡ್ಡ ಗದೆ". ಇದಲ್ಲದೇ, ಕೆಲವು ವೇದೋತ್ತರ ಕಥೆಗಳಲ್ಲಿ, ಇದನ್ನು 'ಪ್ರಭಂಜನ' ಎಂದೂ ಕರೆದಿದ್ದಾರೆ. ಅಂದರೆ "ವಿನಾಶಕಾರಿ ಮಿಂಚು" ಎಂಬರ್ಥವನ್ನು ನೀಡುವುದು.

         ಧರ್ಮಗ್ರಂಥಗಳ ಪ್ರಕಾರ, ಭೀಮನ ಗದೆಯು ಆಧುನಿಕ ಅಳತೆಗಳಲ್ಲಿ ಸರಿಸುಮಾರು 4,00,000 ಕಿಲೋಗ್ರಾಂಗಳಷ್ಟು ಹೆಚ್ಚು ತೂಕವನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ. ಮಹಾಭಾರತದ ಗದಾ ಪರ್ವದ ಪ್ರಕಾರ, ಭೀಮನ ಗದೆಯು ದುರ್ಯೋಧನನ ಗದೆಗಿಂತ ಶೇಕಡ 50 ಕ್ಕಿಂತ ಹೆಚ್ಚು ಭಾರವನ್ನು ಪಡೆದುಕೊಂಡಿತ್ತು. ಅದಕ್ಕಾಗಿಯೇ ಭೀಮನ ಒಂದೇ ಒಂದು ಹೊಡೆತವೂ ದುರ್ಯೋಧನನಿಗೆ ಅಸಹನೀಯವೆಂದು ಸಾಬೀತಾಯಿತು. ಭೀಮನ ಒಂದೇ ಗದೆಯ ಏಟಿಗೆ ದುರ್ಯೋಧನ ನೆಲಕ್ಕುರುಳುತ್ತಾನೆ

           ಭೀಮನ ಗದೆಯು ವಿಶೇಷವಾದ ವಿನ್ಯಾಸವನ್ನು ಒಳಗೊಂಡಿದೆ. ಇದರ ವಿನ್ಯಾಸವನ್ನು ನಾವು ಬೇರಾವ ಗದೆಯಲ್ಲೂ ನೋಡಲು ಸಾಧ್ಯವಿಲ್ಲ. ಈ ಗದೆಯನ್ನು "ಅಶಾನಿ ತೇಜಸ್ಸಿ" ನಿಂದ ಅಂದರೆ ಮಿಂಚಿನ ತೇಜಸ್ಸಿನಿಂದ ವಿನ್ಯಾಸಗೊಳಿಸಲಾಗಿದೆ. ಈ ಗದೆಯು ಎಷ್ಟು ಗಟ್ಟಿಯಾಗಿತ್ತೆಂದರೆ ಅದರಿಂದ ಸಿಡಿಲನ್ನೇ ಹೊಡೆದಾಕಬಹುದು. ಅಷ್ಟೊಂದು ಗಟ್ಟಿಯಾಗಿತ್ತು. ಗದೆಯನ್ನು ಬಡಿದಾಗ ಬರುವ ಶಬ್ಧವು ಮತ್ತಷ್ಟು ಭಯಾನಕವಾಗಿತ್ತು. ಯುದ್ಧ ಭೂಮಿಯಲ್ಲಿ ಒಮ್ಮೆ ಆ ಗದೆಯನ್ನು ನೆಲಕ್ಕೆ ಕುಟ್ಟಿದರೆ ಅದರಿಂದ ಹೊರಹೊಮ್ಮುವ ಶಬ್ಧದಿಂದ ಯುದ್ಧ ಭೂಮಿಯಲ್ಲಿ ಸೀಳುಂಟಾಗಿ ನಿಂತಿರುವ ಆನೆಗಳ ಕಿವಿಗಳನ್ನೇ ಛಿದ್ರಗೊಳಿಸುವಷ್ಟು ಭಯಾನಕವಾಗಿತ್ತು.

      ಮಧ್ಯಮ ಪಾಂಡವನಾದ ಭೀಮನು ಸುಮಾರು 9 ಅಡಿಗಿಂತ ಹೆಚ್ಚು ಎತ್ತರದಷ್ಟು ಬೃಹದಾಕಾರದ ದೇಹವನ್ನು ಹೊಂದಿದವನು. ಅವನ ದೇಹಕ್ಕೆ ಅನುಗುಣವಾಗಿ ಈ ಗದೆಯನ್ನು ಸರಿಸುಮಾರು 7 ರಿಂದ 8 ಅಡಿಗಳಷ್ಟು ಎತ್ತರಕ್ಕೆ ಸಿದ್ಧಗೊಳಿಸಿದ ಗದೆಯಾಗಿತ್ತು ಎಂದು ತಿಳಿದುಬರುತ್ತದೆ. ಭೀಮನು ಅದನ್ನು ಗಾಳಿಯಲ್ಲಿ ಬೀಸಿದಾಗ ಅದು ಗುಡುಗಿನಂತಹ ಶಬ್ಧವನ್ನು ಸೃಷ್ಟಿಸುತ್ತಿತ್ತು. ಆ ಗದೆಯು ನೋಡುವುದಕ್ಕೆ ಅಂದಾಜು ಭೀಮನಷ್ಟೇ ಎತ್ತರವನ್ನೂ ಸುತ್ತಳತೆಯನ್ನು ಹೊಂದಿತ್ತು ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ.

          ಮಹಾಭಾರತ ಕಾಲದಲ್ಲಿ ಭೀಮನು ಬಳಸಿದ್ದ ಗದೆಯು ತ್ರೇತಾಯುಗದೊಂದಿಗೆ ಸಂಬಂಧವನ್ನು ಹೊಂದಿರುವ ಗದೆಯಾಗಿದೆ. ಭೀಮನ ಗದೆಯು ಮೂಲತಃ ತ್ರೇತಾಯುಗದ ರಾಜ ಯೌವನಾಶ್ವನಿಗೆ ಸೇರಿದ ಗದೆಯಾಗಿದೆ. ಬಿಂದು ಸರೋವರದಲ್ಲಿ ಮಾಯಾ ದಾನವನೊಬ್ಬನು ಇದನ್ನು ಎಸೆದಿದ್ದನು. ಶ್ರೀಕೃಷ್ಣನ ಆಜ್ಞೆಯ ಮೇರೆಗೆ, ಭೀಮನೇ ಅದರ ನಿಜವಾದ ಹಕ್ಕುದಾರನು, ವಾರಸುದಾರನಾಗಿದ್ದನೆಂದು ತಿಳಿದು ಅದನ್ನು ಭೀಮನಿಗೆ ಒಪ್ಪಿಸಲಾಯಿತು. ಮಹಾಭಾರತದ ಯುದ್ಧದ ನಂತರ, ಸ್ವತಃ ಭೀಮನು ತನ್ನ ಆ ಅಗಾಧ ಗದೆಯನ್ನು ರಾಜಸ್ಥಾನದ ಲೋಹಗಢದ ಸಮೀಪದ ಸರೋವರದಲ್ಲಿ ಮುಳುಗಿಸಿದನು ಎಂದು ಕಥೆಯಲ್ಲಿ ಉಲ್ಲೇಖಿಸಲಾಗಿದೆ.




No comments:

Post a Comment