Showing posts with label ASHW. Show all posts
Showing posts with label ASHW. Show all posts

Wednesday, November 20, 2019

ASHWATHA STOTRA 3 PURASHCHARANA || श्री अश्वत्थ स्तोत्र (एकवार) पुरश्चरण ||

 || श्री अश्वत्थ स्तोत्र (एकवार) पुरश्चरण ||
श्री गणेशाय नमः ।
हरिः ॐ
श्री नारदौवाच ।
अनायासेन लोकोयं सर्वान् कामानवाप्नुयात्  । सर्व देवात्मकं  चैव  तन्मै ब्रूहि  महत्पितः । १ ।
श्री ब्रह्मौवाच ।
शृणु देव मुनोश्वत्थं  शुद्धं सर्वात्मकं तरुं ।  यत्प्रदषिणतॊ लोकः सर्व कामान् समश्नुते । २ ।

अश्वत्था  दक्षिणो रुद्रः पश्चिमे  विष्णुरास्थितः।  ब्रह्माचोत्तर  देशस्थः पूर्वेत्  इंद्रादिदेवता। 3 |

स्कंधोप स्कंध पत्रेषु गोविप्र मुनयस्थथः । 
मूलं वेदा पयो यज्ञ्या संस्थिता मुनि पुंगवः  । ४ ।

पूर्वादि दिक्षु संयाता नदिनद्  सरोब्दयः  । 
तस्मात्  सर्व  प्रयत्नेन अश्वत्थः संश्रयेद् बुधः। ५ ।

त्वं  क्षीर्य  फलकश्चैव  शीतलश्च  वनस्पते । त्वमाराध्य नरो  विद्या दैहिकं  मुष्मिकं  फलं । ६ ।

अश्वत्थ यस्मात्वयि वृक्षराज नारायण तिष्ठति सर्वकालं ।अतः शृतस्त्वं सततंतरूणाम्  धन्योचारिष्ट विनाशकोशि । ७ । 
क्षीरदस्त्वं च  एनेह  एनः  श्री स्त्वाम्  निषेवते ।  सत्येन  तेन  वृक्षॆंद्र  मामपि  श्रीर्निषेवतां । ८ ।

एकादशात्मा  रुद्रोसि   वसुनाथ  शिरोमणिः  ।  शनैश्चरोसि  देवानां  वृक्षराजोसि  पिप्पलः । ९ ।
अग्निगर्भः  शमी गर्भो  देव गर्भः  प्रजापति:  ।  हिरण्य गर्भो  भूगर्भो  यज्ञगर्भो नमोस्तुते । १० ।
आयुर्बलं  यशोवर्चः   प्रजाः  पशु वसूनिच  ।  ब्रह्म  प्रज्ञान्च  मेधांच त्वनो देहि नमोस्तुते  । ११ ।
सततं वरुणो  रक्षो  त्वमारादृष्टिराश्रयेत्  । परितस्त्वां  निषेवंतां  निंबकः सुखमश्नु ते । १२ |
अक्षिस्पंदं  भुजस्पंदं दुस्वप्नं दुर्वि चिंतनं  ।  शत्रूणां च समुत्थानं  अश्वत्थः शमय प्रभो  । १३ । 
य दृष्ट्वा मुच्यतॆ रोगैः  स्पृष्ट्वा पापै : प्रमुच्यतॆ  ।  यदाश्रया चिरंजीवि  त्वमश्वत्थं  नमाम्यहं  । १४ ।
अश्व त्थः समुहाभागः सुभगः  प्रियदर्शनः । इष्टकामाश्चमे देहि  शस्त्रुर्भ्यस्तु  पराभवं। १५ । 
आयुः प्रजां धनं धान्यं सौभाग्यं सर्व संपदः  । देहि  देव  महावृक्ष  त्वामहं  शरणं गतः । १६ ।
ऋग्युजुः साम मंत्रात्मा सर्व रूपि परात्परः  ।  अश्वत्थो वेद मूलोसा वृषिभिः प्रोच्यतॆ सद । १७ ।
ब्रह्मा गोविदाश्चैव धृतिर् देवादि  क्रीडितः। आवृत्य लक्ष संख्यं च स्तोत्र  मेतत्  सुखी  भवेत् । १८ ।
एकहस्तं द्विहस्तं वा  कूर्याद् गोमय लेपनं  ।  अर्चयेत्  पुरुष सूक्तेन  प्रणवेन  विशेषतः । १९ ।
मौनि प्रदक्षिणं  कूर्यात् प्राग्युक्त  फलभाग् भवेत् । विष्णोर्नाम  सहस्रेण  अच्युतस्यापि  कीर्तनात्। २० ।
पदे पादांतरंगत्वा  करचेष्टा  विवर्जितः  ।  वाचि  स्तोत्रं  मनोध्यानॆ चतुरंग प्रदक्षिणं  । २१ ।
अश्वत्थः स्थापितोयेन  तत् कुलं स्थापितं ततः  ।  धनायुषां समृध्धिस्तु  नरकात् तारयेत् पितन् | २२ । 
अश्वत्थ मूलमाश्रित्य  जप होम सुरर्चनात्  ।  अक्षयं फल माप्नो ती अगस्त्यो वचनं यथः । २३ ।
एवं आश्वाशितोSश्वत्थ:  सदा श्वासाय कल्पते ।  यज्ञार्थ  छेदितोश्वत्थे अक्षयं स्वर्ग माप्नुयात् । २४ ।
छिन्नोयेन  वृथाश्वत्थ   छेदिता  पितृदेवता  ।  अश्वत्थः पूजितो यत्र  पूजिता सर्व  देवता  । २५ ।
यो अश्वत्थ रूपेण नदी तटाके | विराजते सर्व जगन्निवासः | 
ब्रह्मादि देवाच्युत पाद पल्लवो | गोविन्दराजो वतुमां परेशः | २६ |  
शङ्खं चक्र गदाम्बुज चाप बाणै | राराजितै श्चन्द्रल लक्ष्मी समेतः | 
शर्वादि देवार्चित पाद पल्लवो | गोविन्दराजो वतुमां परेशः | २७ |
अभयं गदिनञ्च शङ्ख चक्रं | चापं तुणिरं द्रष्टमयं तदैव |
ते नैव रूपेण चतुर्भुजेन | प्रलयान्तको भव विश्वमूर्ते  | २८ |
इती श्री ब्रह्मांड पुराणॆ  ब्रह्म नारद संवादॆ श्रीमद् अश्वत्थ स्तोत्रं संपूर्ण  
             । श्री कृष्णार्पणमस्तु ।

Saturday, October 21, 2017

ASHWATHA VRUKSHA SANDESHA ( वृक्ष संदॆश )GOVINDA

ಶ್ರೀ ಅಶ್ವತ್ಥ ವೃಕ್ಷ ಸಂದೇಶ


ಶ್ರೀ ಗುರುಭ್ಯೋ ನಮಃ ಹರಿ ಓಂ 

ಓಂ ಶ್ರೀ ಓಂ ಏಹಿ ಮಮ ಹೃತ್ಪದ್ಮಸ್ಥಿತ ಶ್ರೀ ಗೋವಿಂದಪುರವರಾಧೀಶಃ  ॥  
ಯೋ ಅಶ್ವತ್ಥ ರೂಪೇಣ ನದೀ ತಟಾಕೆ ವಿರಾಜತೆ ಸರ್ವ ಜಗನ್ನಿವಾಸ: | ಬ್ರಹ್ಮಾಧಿದೇವಾಚ್ಯುತ ಪಾದಪಲ್ಲವೋ ಗೋವಿಂದರಾಜೋ ವತು ಮಾಂ ಪರೇಶ:
ಅಶ್ವತ್ಥರೂಪ ತ್ರಯಾತ್ಮಕಬಿಂಬ ರೂಪಿಣಂಚ ಶ್ರೀ ಲಕ್ಷ್ಮೀಗೋವಿಂದರಾಜ ಪೀಠಸ್ಥಿತೈಃ ॥  ಉದ್ಧೃತ್ಮಯಾದಿ ಪ್ರತಿಮಾಂತ ಸ್ಥಿತ ಓಜಃ ಸ್ಸಾರಮಯ ಪ್ರತಿಮಾಂತ ಸ್ಥಿತ ಚತುರ್ಭುಜ ॥  
ಶಂಖ ಚಕ್ರ ಗದಾ ಪದ್ಮ ವನಮಾಲಾ ವಿಭೂಷಿತ ಚಾಪ ಬಾಣ ಶಾರ್ಂಗ ತಾರ್ಕ್ಷ ನಂದಕಿ ॥  ಅಭಯ ಹಸ್ತಕಿ ದಕ್ಷಿಣಾವಾಹ್ಯ ಭೀಮರಥಿ ತೀರೇ ಸ್ವಪ್ರತಿಮಾಯಾಮ್ ಆವಾಹಯಾಮಿ ॥

         ನಿರಾಕಾರ ಅಭಿವ್ಯಕ್ತಿಯ ಆರಾಧನೆಯು ಮಾನವನ ಲಕ್ಷವಿದ್ದರೂ, ಸಾಕಾರ ರೂಪದ ಸೋಪಾನಗಳನ್ನು ಸಮರ್ಥ ರೀತಿಯಿಂದ ನಿಸ್ವಾರ್ಥದಿಂದ ಪೂರ್ತಿಗೊಳಿಸುವುದಕ್ಕೆ ಒಂದು ವೇಳೆ ಅಡೆತಡೆಗಳಿದ್ದರೆ ನಿಸರ್ಗನಿರ್ಮಿತ ಪಂಚಮಹಾಭೂತಗಳ ಪೂಜೆ ಸರ್ವಥಾ ಉತ್ತಮ. ನಿಸರ್ಗ ಸಾನಿಧ್ಯದಲ್ಲಿ ನಮ್ಮನ್ನು ನಾವು ಮರೆತು ಬೆರೆಯುವುದೇ ಅಂತಿಮಲಕ್ಷ...........ಅಶ್ವತ್ಥ ವೃಕ್ಷ

        ಪಾಷಾಣದಂತೆ ಪ್ರತಿಕೂಲ ವಸ್ತುವಿನ ಮೇಲೆ ಕಾಲು ಮೆಟ್ಟಿ "ನಾನು" ಎಂದು ತಲೆಯೆತ್ತಿ ಸ್ವಾಭಿಮಾನದಿಂದ ಜೀವನಸಾಗಿಸುವುದೇ ನನ್ನ ಉದ್ದೇಶ. ಪ್ರತಿಯೊಂದಕ್ಕೂ ಅನ್ಯರನ್ನು ಅವಲಂಬಿಸಿ ಇರುವುದು ಬೇಡ.  
ನಾನು ಆಹಾರಕ್ಕೇಂದು, ನೀರಿಗೆಂದು ಭೂಮಿಯ ಆಳಕ್ಕೆ ಇಳಿಯುವುದಿಲ್ಲ. ನನ್ನ ಬೇರುಗಳು ಕೇವಲ ಮೇಲ್ಮೇಲೆಯೇ ಹರಡಿರುತ್ತವೆ. ವಾತಾವರಣದಲ್ಲಿಯ ಆರ್ದ್ರತೆಯನ್ನೇ ಹೀರಿಕೊಂಡು ಕೋಂಬೆ ಕೋಂಬೆಯಾಗಿ ಆಕಾಶದೆತ್ತರಕ್ಕೆ ಹರಡುತ್ತ ಬೆಳೆಯುತ್ತೇನೆ.  ಯಾವಾಗಲೂ ಪರಿಸ್ಥಿತಿಯ ದುಃಖಾರ್ತಗಳನ್ನು ನೆನಪಿಸಿಕೊಂಡು ಕೂಡುವುದರಲ್ಲಿ ಏನು ಅರ್ಥವಿಲ್ಲ. ಗರುಡನಂತೆ ಧೃವಮಂಡಲದ ಕಡೆಗೆ ದೃಷ್ಟಿಯಿರಲಿ. .....ಅಶ್ವತ್ಥ ವೃಕ್ಷ

ಜೀವನವೆಂಬ ಸಮರಾಂಗಣದಲ್ಲಿ ಪ್ರಾಪ್ತ ಪರಿಸ್ಥಿತಿಗಳನ್ನು, ಆಹ್ವಾನಗಳನ್ನು ಎದುರಿಸಿ ಅನಾನುಕೂಲತೆಗಳಲ್ಲಿ ಅನುಕೂಲತೆಗಳನ್ನು ಕಂಡುಕೊಂಡು ಸಾಧನೆ ಮಾಡುವುದರಲ್ಲಿಯೇ ಪುರುಷಾರ್ಥವಿದೆ ವಿನಃ ಪಲಾಯನವಾದದಲ್ಲಿ ಇಲ್ಲ. ಹೆಜ್ಜೆ ಹೆಜ್ಜೆಗೂ ಇನ್ನೊಬ್ಬರ ಸಹಾಯ ಸಹಕಾರಗಳ ಅಪೇಕ್ಷೆ ಮಾಡದೆ ಸ್ವಯಂಭು ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸ್ವಾವಲಂಬಿಯಾಗಿರಬೇಕು. ಬೇಡುವುದಕ್ಕಿಂತ ಪಡೆದುಕೊಳ್ಳುವುದರ ಕಡೆಗೆ ಹೆಚ್ಚಿನ ಗಮನವಿರಲಿ ............ಅಶ್ವತ್ಥ ವೃಕ್ಷ

ಜೀವನದಲ್ಲಿ ಒಂದೇ ಒಂದು ಏಳೆ ಸುಖದಾಯಕವಿದ್ದು, ಉಳಿದ ಎರಡು ಏಳೆಗಳು ದುಃಖಪ್ರದಾಯಕ ಇರುತ್ತವೆ. ಈ ಮೂರು ಏಳೆಗಳ ಸಿಹಿ-ಕಹಿ ಪರ್ಯಾಯದ ಸಂಮಿಶ್ರ ಹೊಡೆತದ ದುಃಖಪೂರ್ಣ ಮತ್ತು ಆವೇಷದ ಕ್ಷಣಗಳಲ್ಲೂ ಮಾನಸಿಕ, ಶಾರೀರಿಕ ಸ್ಥಿರತೆಯಿಂದ ದೃಢತೆಯನ್ನು ನೀಡುವುದಲ್ಲದೆ, ಜೀವನದಲ್ಲಿ ಬರುವ ಕಹಿಗಳಿಂದಲೇ ಸಿಹಿಗಳ  ಅಂತಿಮ  ಪೂರ್ಣಾನುಭೂತಿಯನ್ನು ಹೊಂದುವ, ಭವಿಷ್ಯದಲ್ಲಿ ಪೂರ್ಣವಿರಾಮವನ್ನು ಆರೋಗ್ಯಪೂರ್ಣವಾಗಿ ಕಂಡುಕೊಳ್ಳುವುದೇ ಮಾನವನ ಅಂತಿಮ ಲಕ್ಷವಾಗಿರಬೇಕು............ನಿಂಬಕ ವೃಕ್ಷ

ಸ್ವಸಂರಕ್ಷಣೆಗಾಗಿ ಪ್ರತಿಭಟನೆ ಅನಿವಾರ್ಯ. ಅಹಿಂಸೆಯೆಂದು ತಟಸ್ಥವಾಗಿರುವುದು ಸಲ್ಲ. ಸ್ವಯಂ ಶೋಷಣೆ, ವಂಚನೆ ಇವೆಲ್ಲ ಇನ್ನೊಬ್ಬರಿಗೆ ಹೇಗೆ ಹಿಂಸೆಯೋ ಹಾಗೆ ಸ್ವಂತಕ್ಕೂ ಹಿಂಸೆಯೇ. ಅದಕ್ಕೆ ಎದುರಿಸಿ ಹೋರಾಡುವುದು ನನ್ನ ಮೂಲ ಗುರಿ .............ಅಶ್ವತ್ಥ ವೃಕ್ಷ

ಓಂ ಶ್ರೀ ಅಶ್ವತ್ಥ ನಿಂಬಕಾವಿರ್ಭವ ಶ್ರೀ ರಾಮಕೃಷ್ಣ ವೇದವ್ಯಾಸಾತ್ಮಕ ಹನುಮದ್ ಭೀಮ ಮಧ್ವಾಂತರ್ಗತ ಭಾರತಿರಮಣ  ಮುಖ್ಯ ಪ್ರಾಣಾಂತರ್ಗತ ಶ್ರೀ ಚಂದ್ರಲಾಂಬಾ ಸಹಿತ ಲಕ್ಷ್ಮೀ ಗೋವಿಂದರಾಜ ದೇವತಾಭ್ಯೋ ನಮಃ ॥ ಶ್ರೀ ಕೃಷ್ಣಾರ್ಪಣಮಸ್ತು ॥  
॥ ಓಂ ಶ್ರೀ ಅಶ್ವತ್ಥವೃಕ್ಷಾಯ ನಮಃ ॥
              ಸಿಂಧೂ-ಸರಸ್ವತಿ ಸಂಸ್ಕೃತಿಯ ಜನರಿಗೆ ಕೃಷ್ಣನಿಗೆ ಸಂಬಂಧಿಸಿದ ಕಥೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ ಸಂಬಂಧಿತ ಹುಡುಕಾಟದಲ್ಲಿ ಮತ್ತೊಂದು ಪರೋಕ್ಷ ಸಾಕ್ಷ್ಯವನ್ನು ಕಂಡುಕೊಂಡಾಗ ಅದನ್ನು ನಿರ್ಲಕ್ಷಿಸಲಾಗುವುದೇ ಇಲ್ಲ. ಸಿಂಧೂ-ಕಣಿವೆಯ ಮುದ್ರೆಗಳು ದೇವತಾ ಸ್ವರೂಪವಾದ ವೃಷಭನಿಂದ ಕುದುರೆಗಳು ಮೀನುಗಳವರೆಗೆ ಹೇರಳವಾಗಿ ಪ್ರಾಣಿ ರೂಪಗಳನ್ನು ನಮಗೆ ತೋರಿಸುತ್ತವೆ; ಆದಾಗ್ಯೂ, ಕುತೂಹಲಕಾರಿಯಾಗಿ, ಒಂದು ನಿರ್ದಿಷ್ಟ ರೀತಿಯ ಮರದ ಕೆತ್ತನೆ ಮತ್ತು ಅದರ ಎಲೆಗಳು ಎಲ್ಲಾ ಸಿಂಧೂ ತಾಣಗಳಲ್ಲಿ ಏಕರೂಪವಾಗಿ ಕಂಡುಬರುತ್ತವೆ ಅದುವೆ ಪೀಪಲ್ ಲೀವ್ಸ್ (ಅಶ್ವತ್ಥ ಎಲೆ)
          ಶ್ರೀಮದ್ ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ, ಮರಗಳ ನಡುವೆ ತಾನು ಅಶ್ವತ್ಥ ಅಥವಾ ಪಿಪ್ಪಲ ವನ್ನು ಪ್ರತಿನಿಧಿಸುತ್ತೇನೆ ಎಂದು ಶ್ರೀ ಕೃಷ್ಣ ಹೇಳುತ್ತಾನೆ  ಅದೇ ಸಿಂಧೂ ಮುದ್ರೆಯ ಮೇಲೆ ಪ್ರತಿನಿಧಿಸಿರುವ  ಏಕೈಕ ಎಲೆ- ಅಶ್ವತ್ಥ ಎಲೆ. ಇದು ಕೃಷ್ಣನನ್ನು ಮಾನವ ಸ್ವರೂಪದಿಂದಲ್ಲದ ವಿಶೇಷ  ನೈಸರ್ಗಿಕ ರೂಪದಲ್ಲಿ ಚಿತ್ರಿಸಲಾಗಿದೆ, 

ಋಷಿ ಮಾರ್ಕಂಡೇಯನ ಕಥೆಯಲ್ಲಿ, ಪ್ರಪಂಚದ ಅಂತ್ಯದ ಸಮಯ ನೀರಿನಲ್ಲಿ ತೇಲುತ್ತಿರುವ ಅಶ್ವತ್ಥ ಎಲೆಯ ಮೇಲೆ ಮಲಗಿರುವ ಮಗುವಿನಂತೆ ಕೃಷ್ಣನು ಋಷಿಗೆ ಗೋಚರಿಸಿದ್ದ. 
ಶ್ರೀ ಕೃಷ್ಣಾರ್ಪಣಮಸ್ತು