Thursday, November 29, 2018

FOOD EFFECT OF POSITIVE WAVES ( ಆಹಾರದ ಮೇಲೆ ಸಾತ್ತ್ವಿಕ ಲಹರಿಗಳ ಸಂಕ್ರಮಣ )

                                                                                                                                          ಸಂಗ್ರಹಿತ 
                       ಆಹಾರದ ಮೇಲೆ ಸಾತ್ತ್ವಿಕ ಲಹರಿಗಳ ಸಂಕ್ರಮಣ

ಉಣ್ಣದ ತಿನ್ನದ  ಕುಡಿಯದ ದೇವರಿಗೆ ನೈವೇದ್ಯ ಅರ್ಪಿಸುವುದೆಂದರೆ  ಏನು  ?
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ಉಪಚಾರಗಳಲ್ಲಿ ಗಂಧವನ್ನು ಹಚ್ಚುವುದು, ಹೂವುಗಳನ್ನು ಅರ್ಪಿಸುವುದು, ಧೂಪವನ್ನು ತೋರಿಸುವುದು, ದೀಪವನ್ನು ಬೆಳಗುವುದು, ನೈವೇದ್ಯವನ್ನು ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತಿದೆ.
ದೇವರಿಗೆ ನೈವೇದ್ಯವನ್ನು ಅರ್ಪಿಸುವುದು
ದೇವರಿಗೆ ನೈವೇದ್ಯವನ್ನು ಅರ್ಪಿಸುವಾಗ ತುಳಸಿ ಎಲೆ(ದಳ)ಯನ್ನು ಏಕೆ ಉಪಯೋಗಿಸಬೇಕು?
ತುಳಸಿಯ ವೈಶಿಷ್ಟ್ಯಗಳು: ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ.
ಲಾಭಗಳು
ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಆಹಾರದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿ ಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಆಹಾರವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.
ತುಳಸಿಯ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ ಆಹಾರದ ಮೇಲೆ ಬಂದಿರುವ ರಜ-ತಮ ಕಣಗಳ ಆವರಣವು ಕಡಿಮೆಯಾಗುತ್ತದೆ. ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯಕ್ಕೆ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
ಭಾವಪೂರ್ಣವಾಗಿ ನೈವೇದ್ಯದ ಮೇಲೆ ತುಳಸಿ ಎಲೆಯನ್ನಿಡುವುದರಿಂದ ಅದು ತನ್ನ ಗುಣಧರ್ಮಕ್ಕನುಸಾರ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ. ಇಂತಹ ನೈವೇದ್ಯವನ್ನು ಸೇವಿಸುವುದರಿಂದ ಜೀವಕ್ಕೆ ಚೈತನ್ಯದ ಲಹರಿಗಳು ಸಿಗಲು ಸಹಾಯವಾಗುತ್ತದೆ.
ಪೂಜೆಯ ಸಮಯದಲ್ಲಿ ಅಥವಾ ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರನ್ನು ಎಷ್ಟು ಬಾರಿ, ಯಾವ ರೀತಿ ಮತ್ತು ಏಕೆ ಸಿಂಪಡಿಸುತ್ತಾರೆ? (ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ಮಂಡಲವನ್ನು ಹಾಕುತ್ತಾರೆ, ಮಂಡಲದಿಂದ ಆಹಾರದ ಮಾಧ್ಯಮದಿಂದಾಗುವ ಕೆಟ್ಟ ಶಕ್ತಿಗಳ ತೊಂದರೆಗಳು ಕಡಿಮೆಯಾಗುತ್ತವೆ)
ಕೃತಿ: ನೈವೇದ್ಯವನ್ನು ಅರ್ಪಿಸುವಾಗ ನೀರಿನಿಂದ ತಟ್ಟೆಯ ಸುತ್ತಲೂ ಒಂದು ಬಾರಿ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ನೀರನ್ನು ಸಿಂಪಡಿಸಬೇಕು (ನೀರಿನಿಂದ ಮಂಡಲವನ್ನು ಹಾಕಬೇಕು). ವಿರುದ್ಧ ದಿಕ್ಕಿನಲ್ಲಿ ಮತ್ತೆ ಮಂಡಲವನ್ನು ಹಾಕಬಾರದು; ಏಕೆಂದರೆ ಅದರಿಂದ ಬ್ರಹ್ಮಾಂಡದಲ್ಲಿನ ಸುಪ್ತ ತಿರ್ಯಕ ಲಹರಿಗಳು ಕಾರ್ಯನಿರತವಾಗಿ ತಟ್ಟೆಯ ಸುತ್ತಲೂ ತೊಂದರೆದಾಯಕ ಲಹರಿಗಳ ಕವಚವು ನಿರ್ಮಾಣವಾಗುತ್ತದೆ ಮತ್ತು ಈ ಕವಚ ದಿಂದ ಪ್ರಕ್ಷೇಪಿತವಾಗುವ ಲಹರಿಗಳಿಂದ ಜೀವದ ಪ್ರಾಣಮಯಕೋಶದಲ್ಲಿನ ತಮೋಗುಣದ ಪ್ರಮಾಣವು ಹೆಚ್ಚಾಗುವುದರಿಂದ ಜೀವವು ಅಸ್ವಸ್ಥವಾಗುತ್ತದೆ. 
ಲಾಭಗಳು
ಅತೃಪ್ತ ಲಿಂಗದೇಹಗಳಿಗೆ ಮತ್ತು ಕನಿಷ್ಠ ಕೆಟ್ಟ ಶಕ್ತಿಗಳಿಗೆ ನೈವೇದ್ಯವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ: ದೇವರಿಗೆ ನೈವೇದ್ಯವನ್ನು ತೋರಿಸುವಾಗ ಜೀವದ ಮನಃಶಕ್ತಿಯು ಅವಶ್ಯಕ ಪ್ರಮಾಣದಲ್ಲಿ ಜಾಗೃತವಾಗದಿದ್ದರೆ, ಆಹಾರದಿಂದ ಪ್ರಕ್ಷೇಪಿತವಾಗುವ ಆಕರ್ಷಣ ಲಹರಿಗಳು ಜೀವದ ಮನಃಶಕ್ತಿಯ ಪ್ರಕ್ಷೇಪಣೆಯ ಅಭಾವದಿಂದ ಅಂಕುಡೊಂಕಾಗಿ ಸಂಚರಿಸತೊಡಗುತ್ತವೆ. ಆಹಾರದ ವಾಸನೆಯಿರುವ ಅತೃಪ್ತ ಲಿಂಗದೇಹಗಳು ಆಹಾರದಿಂದ ಪ್ರಕ್ಷೇಪಿತವಾಗುವ ಆಕರ್ಷಣಲಹರಿಗಳ ಮೂಲಕ ಆಕರ್ಷಿತವಾಗಿ ನೈವೇದ್ಯವನ್ನು ಗ್ರಹಿಸಿಕೊಂಡು ಆಹಾರವನ್ನು ತಮೋಕಣಗಳಿಂದ ತುಂಬುವ ಸಾಧ್ಯತೆಯಿರುತ್ತದೆ. ಇದನ್ನು ತಡೆಗಟ್ಟಲು ದೇವರಿಗೆ ನೈವೇದ್ಯವನ್ನು ತೋರಿಸುವಾಗ ಮೊದಲು ನೀರಿನಿಂದ ಮಂಡಲವನ್ನು ಹಾಕಬೇಕು. ನೀರಿನ ಮಂಡಲವನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಹಾಕುವುದರಿಂದ ಆಹಾರದಿಂದ ಪ್ರಕ್ಷೇಪಿತವಾಗುವ ಆಕರ್ಷಣ ಲಹರಿಗಳು ಈ ಮಂಡಲದಲ್ಲಿ ಸಂಚರಿಸಿ ಆಪತತ್ತ್ವದ ಪ್ರಕ್ಷೇಪಣೆಯಿಂದ ಮೇಲಿನ ದಿಕ್ಕಿನಲ್ಲಿ ಸಂಚರಿಸಲು ಪ್ರಾರಂಭವಾಗುತ್ತವೆ. ಇದರಿಂದ ಕನಿಷ್ಠ ಕೆಟ್ಟ ಶಕ್ತಿಗಳಿಗೆ ಸುಲಭವಾಗಿ ಆಹಾರವನ್ನು ಸೆಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಆಹಾರದ ಮಾಧ್ಯಮದಿಂದ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳು ಕಡಿಮೆ ಯಾಗುತ್ತವೆ: ತಟ್ಟೆಯ ಸುತ್ತಲೂ ಹಾಕಿದ ಮಂಡಲದಿಂದ ಪ್ರಕ್ಷೇಪಿತವಾಗುವ ಲಹರಿ ಗಳು ತಟ್ಟೆಯ ಕೆಳಗಿನ ಕೇಂದ್ರಬಿಂದುವಿನ ಕಡೆಗೆ ಸಂಕ್ರಮಿತವಾಗುವುದರಿಂದ, ಕೇಂದ್ರ ಬಿಂದುವಿನಲ್ಲಿರುವ ಆಯಾ ದೇವತೆಯ ಅಪ್ರಕಟ ಶಕ್ತಿಯು ಜಾಗೃತವಾಗುತ್ತದೆ ಮತ್ತು ಕೇಂದ್ರಬಿಂದುವಿನಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ. ಇದರಿಂದ ತಟ್ಟೆಯ ಮೇಲೆ ಸೂಕ್ಷ್ಮ ಸಾತ್ತ್ವಿಕ ಲಹರಿಗಳ ಹೊದಿಕೆಯು ತಯಾರಾಗುತ್ತದೆ. ಆದುದರಿಂದ ಆಹಾರವನ್ನು ಸೇವಿಸುವಾಗ ವಾತಾವರಣದಲ್ಲಿನ ಕೆಟ್ಟಶಕ್ತಿಗಳಿಂದ ಪ್ರಕ್ಷೇಪಿತವಾಗುವ ಕಪ್ಪು ಲಹರಿಗಳು ಶರೀರ ದಲ್ಲಿ ಸಂಕ್ರಮಿತವಾಗುವುದಿಲ್ಲ. ಅದರಂತೆಯೇ ನೀರಿನಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ಆಹಾರದ ಮೇಲೆ ಬಂದಿರುವ ರಜ- ತಮಾತ್ಮಕ ಲಹರಿಗಳ ಕಪ್ಪು ಆವರಣವೂ ಸ್ವಲ್ಪ ಪ್ರಮಾಣದಲ್ಲಿ ದೂರವಾಗಲು ಸಹಾಯವಾಗುತ್ತದೆ.

No comments:

Post a Comment