ಶ್ರೀ ಜ್ಯೇಷ್ಟಾದೇವಿ ವ್ರತ ಕಥಾ ಪ್ರಾರಂಭಃ
ಸ್ವಸ್ತಿ ಶ್ರೀ ಅಖಿಲ ಸನ್ಮಂಗಳಾನಿ ಭವಂತು ಶ್ಲೋಕೈಕ ಶ್ರವಣ ಪಠಣ ಮಾತ್ರೇಣ ವಕ್ತುಶ್ಚ ಶ್ರೋತೃಣಾ ನಿಖಿಲ ಕಲಿ ಕೃತ ಕಲ್ಮಷಾಪ ನೋದನ ಪಟುತರೆ ಧರ್ಮಾದ್ಯಖಿಲ ಪುರುಷಾರ್ಥಸಾಧನೀಭೂತೆ ಶ್ರೀ ಭವಿಷ್ಯೋತ್ತರ ಪುರಾಣೆ ಜ್ಯೇಷ್ಟಾದೇವಿ ವ್ರತ ಕಥಾಯಾಂ ಶ್ರೋತಾರಃ ಸಾವಧಾನಾ ಭವಂತು ....v
ಮೇಲ್ಕಾಣಿಸಿದ ಕವಿಯಿತ್ರಿಗಳವರು ತಮ್ಮ ನಾಮಧೇಯಗಳಿಂದ ಶ್ರೀ ಜ್ಯೇಷ್ಥಾ ಗೌರಿ ವ್ರತ ಕಥಾ ಪಾರಂಪಾರಿಕ ಕಾವ್ಯ ರೂಪದಲ್ಲಿ ವಿರಚಿಸಿದ ಶ್ರೀ ಜ್ಯೇಷ್ಥಾದೇವಿ ವಿಸರ್ಜನೆಯ ದಿನ, ದಾರಿ ಕಟ್ಟಿಕೊಳ್ಳುವಸಮಯದಲ್ಲಿ, ಹೇಳುವವರು ಮತ್ತು ಕೇಳುವವರು ಪಠಿಸುವಂತಹ ಹಾಡು ಗೌರಿ ಭಕ್ತರಿಗಾಗಿ .......
ಪ್ರಥಮ ಕಥಾ ( ಚೌಪದಿ )
ಹರಿಃ ಓಂ ಶ್ರೀ ಗುರುಭ್ಯೋನಮಃ
ಪ್ರಥಮ ಕಥಾ ( ಹರನ ಕುಮಾರನ ಧಾಟಿಯಲ್ಲಿ )
ಸಿದ್ಧಿವಿನಾಯಕನ ಪಾದಕ್ಕೆ ಎರಗುತ್ತ | ಬುದ್ಧಿ ಮಾತೆಯಲಿ ಬೇಡುತ್ತ | ಶುದ್ಧ ಮನಸಿನಿಂದ ಬದ್ಧ ಕಟಿಯಾಗಿ | ಸಾಧ್ಯ ವಾಗಿಸುಯೆಂದು ಕೇಳುವೆ || 1||
ಸೂತನು ಶೌನಕ ಋಷಿಗಳಲಿ ಪೇಳುತ | ಸತಿಯು ಕೇಳುತ ರುದ್ರನಲಿ | ಹಿತಕರ ಸ್ತ್ರೀಯರಿಗೆ ಕ್ಷಣದಲ್ಲಿ ಸುಖನೀಡೋ | ವ್ರತವನ್ನು ತಿಳಿಸಲನುವಾಗು || 2 ||
ಸೌಭಾಗ್ಯ ಸಂತತಿ ಸಂಪತ್ತಿ ಸಿಗುವ ಸು- | ಲಭವಾದ ವ್ರತವನ್ನೇ ಪೇಳೆಂದು- ರ್ಲಭವಾದ ಪೂಜೆಯಿಂ ಮನಸಿನ | ಲುಬ್ಧವ ಕ್ಷಣದಲ್ಲಿ ಎಲ್ಲವ ತಿಳಿಸು || 3 ||
ನಗುತ ರುದ್ರನು ಸತಿಯ ಮಾತನು ಕೇಳಿ | ಮೊಗದಲ್ಲಿ ಸ್ಮಿತ ಹಾಸ್ಯ ತೋರಿ | ಮಿಗಿಲಾದ ಶ್ರೀ ಜ್ಯೇಷ್ಠ ದೇವಿ ನಾಮಕ ವ್ರತವ | ನಿರ್ಗತ ಪರದಲ್ಲಿ ಮುಕ್ತಿ || 4 ||
ದೇವಾಧಿದೇವನೆ ದೇವಿ ಜ್ಯೇಷ್ಟಾ ವ್ರತವ | ಯಾವ ಮಾಸ ದಿನದಲಿ ಗೈವರು | ಎಲ್ಲಿ ಋಷಿಗಳ ವಾಸ ಈರ್ವ ಸ್ಥಳದಲಿ ನೀನು ವ್ರತವ ಮಾಡು || 5 ||
ಈಶನ ಹೇಳಿಕೆ ಕೇಳಿ ಗಿರಿಜೆಯು ತಾನು | ನಶ್ವರ ಭೂತಳಕೆ ಇಳಿದು | ಈಶ ಪತ್ನಿಯಾದ ಗಂಗೆಯ ತೀರದಿ | ಋಷಿ ಗಣವನ್ನೆ ನೋಡಿದಳು || 6 ||
ಇಹದಲ್ಲಿ ಸೌಖ್ಯವ ಪರದಲ್ಲಿ ಮುಕ್ತಿಯ | ಇಹವ ವ್ರತವ ಕೇಳಿದೆ ನೀ | ಮಹತಿ ಲೋಕೋದ್ಧಾರ | ವಹಿಪ ವ್ರತ ಆಚರಣೆ ತಿಳಿಸುವೆ || 7 ||
ಭಾದ್ರಪದ ಮಾಸ ಶುಕ್ಲ ಅಷ್ಟಮಿಯಲ್ಲಿ | ಭದ್ರದಿ ಜ್ಯೇಷ್ಟಾ ತಾರೆಯದು | ಉದಯದಿ ಮಧ್ಯಾಹ್ನ ವ್ಯಾಪಿನಿ ತಾರೆಯ | ಇದ್ದ ಅಸ್ತಿತ್ವವೇ ಶುಭಕರ || 8 ||
ಅನುರಾಧಾ ತಾರೆಯ ಮೇಲೆ ಆವಾಹನೆ | ಅನುವಿರುವ ಜ್ಯೆಷ್ಟಾತಾರೆ |ಮನವಿಟ್ಟು ಪೂಜಿಸಿ ಮೂಲಾ ತಾರೆಯಲ್ಲಿ | ಸನ್ನಿಧಿಯ ಬಿಡಿಗಡೆ ಮಾಡು || 9 ||
ಚಿನ್ನದ ಬೆಳ್ಳಿಯ ಇಲ್ಲವೇ ತಾಮ್ರದ | ಮಣ್ಣಿನ ತಂಬಿಗೆ ವಿಹಿತವು |ಮುನ್ನ ಮುಚ್ಚಳಿಕೆಯ ಎಲ್ಲವ ಶುದ್ಧಿಸಿ | ಚಿತ್ರವ ಬಿಡಿಸಲನುವಾಗಿ || 10 ||
ಕೊಡದಲಿ ಶಂಖ ಚಕ್ರವ ಬರೆದು | ಬಿಡದೆ ಸ್ವಸ್ತಿಕ ಪ್ರಣವಗಳ |ಒಡನೆ ಶುಭಕರ ದೇವಿಯ ಮುಖವ | ಬಿಡಿಸು ಮುಚ್ಚಳಿಕೆಯ ಮೇಲೆ || 11 ||
ಮನೆಯ ಈಶನ ಮೂಲೆ | ಮನ್ನಿಸಿ ಅಕ್ಕಿಯ ರಾಶಿ |ಮುನ್ನ ಮಾಡಿದ ಕಲಶವನು |ಮುನ್ನ ಮಾಡಿದ ಕಲಶವನು | ಮಾನದ ರಾಶಿಯಮೇಲೆ ಸ್ಥಾಪಿಸು || 12 ||
ಹದಿನಾರು ಎಳೆಯ ದೋರವ ತಕ್ಕೊಂಡು | ಐದೆಯರೆಲ್ಲರು ಅರಿಶಿನದಿ |ಅದ್ದಿ ಕಲಶದಿ ಇಟ್ಟುಪುಷ್ಪ ದಕ್ಷಿಣೆ ಸಹಿತ | ವಿದ್ಯುಕ್ತ ಪೂಜೆಯ ಮಾಡುವುದು || 13 ||
ದೇವಾಧಿ ದೇವತೆಗಳಿಗೆ ಹಿರಿಯಳಾದ | ದೇವಿ ಸಂತತಿ ಸುಖವ ಕೊಡುವ | ಈವ ದೇವಿಯನಗೆ ಅನ್ನ ಆಯುಷ್ಯಗಳ ಭಾವ ಭಕ್ತಿಯ ನೀಡು ನನ್ನಲ್ಲಿ || 14 ||
ಹೇ ಆದಿ ಶಕ್ತಿಯೇ ವಂದಿಪೆ ನಾ ನಿನಗೆ | ಹೇ ವಿಷ್ಣು ಪ್ರಿಯಳೇ ಪ್ರಣಿಪಗಳ |ಹೇ ಬ್ರಹ್ಮಪ್ರಿಯಳೆ ಸೇರೆಗೊಡ್ಡಿ ಬೇಡುವೆ | ಹೇ ಜ್ಯೇಷ್ಠ ದೇವಿಯೇ ನಿನ ಚರಣ || 15 ||
ಗೌರಿ ಕುಂಭದ ಮೇಲೆ ಏರಿಪ ದೊರವ | ನೀರೆಯರೆಲ್ಲರು ಪೂಜಿಪರು |ಕರಮುಗಿದು ದೇವಿಗೆ ತಮಗಿರ್ಪ | ವರವಾಂಛಿತವನ್ನೇ ಬೇಡಿ ಕೊಳ್ಳುವರು || 16 ||
ಮರುದಿನ ಅಭ್ಯಂಗ ಸ್ನಾನವ ಮಾಡಿ | ಸಿರಿ ಪೀತಾಂಬರವನ್ನೇ ಉಟ್ಟು | ಹರಿದ್ರಾ ಕುಂಕುಮ ವಿಳ್ಯೇಯಗೂಡಿಸಿ | ಗೌರಿ ನೈವೇದ್ಯಾರತಿ ಮಾಡುವರು || 17 ||
ಮುತ್ತೈದೆ ಬ್ರಾಹ್ಮಣ ಭೂರಿ ಭೋಜನ ಗೈದು | ಮತ್ತೆ ರವಿಕೆ ದಕ್ಷಿಣೆಯ ಕೊಡುವರು | ದತ್ತ ಆಶೀರ್ವಾದದೊಡನೆ ಸಾಂಗತ ಮಾಡೆ| ನಿತ್ಯಗೌರಿ ವಾಸ ಮಾಡುವಳು || 18 ||
ಮರುದಿನ ಮತ್ತೆ ಗೌರಿ ಆರಾಧನೆ ಉ- | ತ್ತರ ಪೂಜೆಯ ಮುಗಿಸಿ |ದೋರಕ್ಕೆ ಹದಿನಾರು ಗಂಟು ಗಳನೆ ಕಟ್ಟಿ | ಧಾರಣೆಯ ಮಾಡಿ ಕೊಂಬುವರು || 19 ||
ಆದಿಯಲ್ಲಾದರು ದೇವಿ ವ್ರತ ಪೂಜೆಯ | ಮಧ್ಯದಲ್ಲಿ ಯಾ ಅಂತ್ಯಕ್ಕೆ | ವಿಧಿಯುಕ್ತ ವ್ರತದಿಂದ ಇಚ್ಛೆಯ ಪಡೆದು | ಉದ್ಯಾಪನೆಯ ಮಾಡಿ ಕೊಳ್ಳುವುದು | || 20 ||
|| ಇತಿ ಶ್ರೀ ಭವಿಷ್ಯೋತ್ತರ ಪುರಾಣೆ ಜ್ಯೇಷ್ಟಾದೇವಿ ವ್ರತ ಕಥಾಯಾಂ ಪ್ರಥಮೊಧ್ಯಾಯಃ ಸಮಾಪ್ತಃ ||
...ನಿವರಗಿ ತುಳಸಕ್ಕ
ದ್ವಿತಿಯ ಕಥಾ ( ಭೋಗ ತ್ರಿಪದಿ )
ಸತಿಯು ಕಥೆಯನು ರುದ್ರನಿಂದಲಿ |ಸೂತರಿಂ ಶೌನಕರು ಆದಿ ||ಕಥೆಯ ಮುನ್ನಡೆ ಶುದ್ಧ ಚಿತ್ತದಿ ಕೇಳಿ ಕೊಳ್ಳುತಲಿ || 1 ||
ಪೂರ್ವಕಾಲದೊಳೀವ ವ್ರತವನು | ಯಾರು ಎಲ್ಲೆ ಎಲ್ಲಿ ಮಾಡಿರೆ | ಸಾರ ಪೂಜೆಯ ಫಲವು ಪ್ರಾಪ್ತದ ಬಗೆಯ ಪೇಳೆನುತ || 2 ||
ವೇದ ಶಾಸ್ತ್ರ ಗಳನು ಬಲ್ಲ | ಸದ್ಧರ್ಮದಲಿ ಆಸಕ್ತನಿರುವ | ಶುದ್ಧಮನ ಸುಭದ್ರ ಬ್ರಾಹ್ಮಣನೊಬ್ಬನಿರ್ದನು || 3 ||
ಪತ್ನಿ ಸುವ್ರತಿಯ ಜೊತೆಯಲಿ | ಯತ್ನ ಪೂರ್ವಕ ಗೃಹಿಣಿ ಕರ್ಮವ | ಮತ್ತೆ ಜಯವರ್ಧನ ಪುರಿಯಲಿ ಇರುತಿಹರು || 4 ||
ಕಾಲ ಅಂತರದಲ್ಲಿ ದಂಪತಿ | ಮೇಲೆ ಬಡತನದಿಂದ ಬೆಂದರು | ಜಾಲ ಜಂಜಡ ದುಃಖ ಪೀಡೆಯ ಪಡುತಲಿರ್ದರು || 5 ||
ಒಂದು ದಿನ ಸತಿ ಪತಿಯ ಹತ್ತಿರ | ಅಂದು ಅನ್ನ ವಸ್ತ್ರ ರಹಿತರು | ದಿಂದ ಗ್ರಾಮವ ಬಿಟ್ಟು ಹೋಗೋ ಬಗೆಯ ಕೇಳಿದಳು || 6 ||
ಮಾತು ಕೇಳಿದ ಪತಿಯುಸತಿಯೊಡೆ | ಕಾತರದಿ ಕಾನನವ ಸೇರಿದ | ಅತಿಯನಿರ್ಜನ ಪಾಪನಾಶನ ಸರಿತೆಯನು ಕಂಡ || 7 ||
ಸ್ನಾನ ಐಹ್ನಿಕ ಮುಗಿಸಿ ದ್ವಿಜನು |ತನ್ನ ನೀರೆಯ ನೋಡುತಿರಲು | ಅನತಿ ದೂರದಿ ಸ್ತ್ರೀ ಸಮೂಹವ ಕಂಡು ಹರ್ಷಿತಳು || 8 ||
ಸ್ತ್ರೀ ವೃಂದವ ವಂದಿಸಿಯೇ ಸತಿ | ಆವ ದೇವಿಯ ವ್ರತವ ಮಾಡಿರೆ | ಈವ ಜ್ಯೇಷ್ಟಾ ಗೌರಿ ವ್ರತವನು ಮಾಡಲಿರ್ದೆವು || 9 ||
ವೈಕಲ್ಯದಿ ಭಾಗ್ಯ ಸಂಪದ | ಎಕ ಕಾಲಕೆ ಕ್ಷಣದಿ ಪ್ರಾಪ್ತಿಯ | ನೇಕ ವ್ರತದಲಿ ಶ್ರೇಷ್ಠವಾಗಿಹ ಗೈಯಲಿಚ್ಚಿಸುವೆ || 10 ||
ಬಡತನದ ಬವಣೆಯಲಿ ಪೀಡಿತ | ಕಾಡುತಲೇ ಐಶ್ವರ್ಯ ಸಂತತಿ | ಕೊಡುವದೇವಿ ಪೂಜೆ ವಿಸ್ತಾರದಲಿ ಪೇಳುವಿರಾ || 11 ||
ಪಾರ್ವರಿಹ ವಾಶಿಷ್ಟ್ಯ ಮುನಿಗಳು | ಪೂರ್ವದಿಂ ವಿದ್ಯುಕ್ತ ವಿಧಿಯಿಂ | ಸಾರ್ವಕಾಲಿಕದೇವಿ ವ್ರತವನೆ ತಿಳಿಯಹೇಳಿದರು || 12 ||
ಉಪದಿಷ್ಟ ದೇವಿ ವ್ರತವಮಾಡಿರೆ | ಕೃಪೆಯಿಂದ ಸರ್ವರ ಊಟತೀರಿಸಿ | ಪ್ರಾಪ್ತವಾಗಿರೆ ಸಕಲಸೌಖ್ಯಾನಂತ ಸಂತತಿಯ || 13 ||
ಪ್ರತಿವರ್ಷ ನಿಯಮಿತದಿ ಪೂಜೆಯ | ವ್ರತವ ಮಾಡುತಲಿರುವ ನೀರೆಯ | ವ್ರತೆಯು ಇಹದಲಿ ಸೌಖ್ಯ ಅಂತ್ಯದಿ ಮೋಕ್ಷ ಹೊಂದುವಳು || 14 ||
ಕಥೆಯ ಕೇಳುಗರನ್ನು ಭಕ್ತಿಯ | ಕಥೆಯ ಹೇಳುಗರನ್ನು ಎಲ್ಲರ |ಸತ್ಯ ವಾಗಿಯೇ ದೇವಿ ಕೃಪೆಗೆ ಪ್ರಾತ್ರರಾಗುವರು || 15 ||
ಇಹದ ಸೌಖ್ಯವ ಪರದಮೋಕ್ಷವ | ಮಹತಿವ್ರತವದು ಜ್ಯೇಷ್ಠ ದೇವಿಯ | ಇಹುದು ಭವಿಷ್ಯಉತ್ತರ ಪುರಾಣದಿರ್ಪುಶತಸಿದ್ಧ || 16 ||
ದೇವಿ ಪಾರ್ವತಿ ರುದ್ರರಿಂದಲೂ |ಈವ ಶೌನಕ ಸೂತರಿಂದಲೂ | ನೀವರಗಿ ಜಯಕ್ಕ ತಾ ಪಾಡಿದಳು ಭಕ್ತಿಯಲಿ || 17 ||
|| ಇತಿ ಶ್ರೀ ಭವಿಷ್ಯೋತ್ತರ ಪುರಾಣೆ ಜ್ಯೇಷ್ಟಾದೇವಿ ವ್ರತ ಕಥಾಯಾಂ ದ್ವಿತಿಯೋಧ್ಯಾಯಃ ಸಮಾಪ್ತಃ ||
.... ನಿವರಗಿ ಜಯಕ್ಕ ( ಅಜ್ಜಿ ತುಳಸಾಬಾಯಿಯವರ ಅನುಗ್ರಹ )
3) ತೃತೀಯ ಕಥಾ ಶಂಕರ ನಾಮಕ ವ್ರತ ( ಚೌಪದಿ - ಹರನ ಕುಮಾರನ ಧಾಟಿಯಲ್ಲಿ )
( ಶಂಕರ ಗಂಡ ನವಲಿಪಾಕ ಎಂದು ಕರೆಯಲ್ಪಡುವ ಕಥೆ )
ರಮಣೀಯ ಕೈಲಾಸ ಪರ್ವತ ಶಿಖರದಿ | ಉಮೆಯು ರುದ್ರರಲಿ ಕೇಳ್ವಳು | ಮಮ ಭಕ್ತರಿಗೆ ಸಂಪತ್ತು ದೊರೆಯಲು | ಕಾಮ್ಯಕ ವ್ರತದ ಬಗೆಯ ಕೇಳಿದಳು || 1 ||
ಲೋಕದೊಳಗೆ ಸಿದ್ಧ ಶಂಕರ ವ್ರತ ಒಂದು | ಶುಕ್ಲ ಅಷ್ಟಮಿ ಮಾಡು ಭಾದ್ರಪದದಿ| ಸಕಲ ಸಾಮಗ್ರಿ ಒಡಗೂಡಿ ವನಿತೆಯರು | ನಿಖರವಾಗಿಯೇ ಭಯ ಭಕ್ತಿಯಿಂ || 2 ||
ನಿತ್ಯ ಅಹ್ನಿಕ ಮುಗಿಸಿ ಧಾನ್ಯ ರೂಪಿಯಾದ | ನಿತ್ಯ ಕಲ್ಯಾಣಕಾರಿಯ ನೀ –| ನಿತ್ಯ ನಿಯಮಿತ ಅಭ್ಯಂಗ ಮಾಡಿ | ನಿತ್ಯ ಶಂಕರ ವ್ರತವ ಮಾಡುವರು || 3 ||
ಏಳು ಎಳೆಗಳ ದೋರ | ಏಳು ಗ್ರಂಥಿಯ ಕಟ್ಟಿ | ಏಳು ದಿನ ವ್ರತವನಾಚರಿಸಿ | ಮೇಲು ಬಲಗೈಯಲ್ಲಿ ದೋರವನು ಕಟ್ಟಿ ಕೊಳ್ಳುವುದು || 4 ||
ಈ ವ್ರತವ ಯಾರ್ಯಾರು ಎಲ್ಲೆಲ್ಲಿ ಮಾಡಿದರು | ಯಾವ ಲೋಕದಲಿ ಹೇಗೇಗೆ | ದೇವದೇವನೇ ನೀನು ಎಲ್ಲವೂ ಪೇಳು ನೀ | ಭಾವದಿಂ ಉಮೆಯು ಕೇಳಿದಳು || 5 ||
ಮರ್ತ್ಯಲೋಕದೊಳಗೆ ಕಾಮ ಶಂಕರರೆಂಬ | ಇರುತಿರಲು ಐಶ್ವರ್ಯದಿಂದ | ವರ್ತನೆಯಲಿ ಕಾಮ ಶಂಕರಗಿಂತ ಮೇಲೆ | ಕರ್ತಾರನೆ ನಾನೆಂದು ನಿಂದಿಸುತ || 6 ||
ಜಗವೇ ನಾನೆಲ್ಲ ನನ ಮಿಗಿಲು ಏನಿಲ್ಲ | ಜಗವೆಲ್ಲ ನನ್ನಿಂದ ಪೋಷಿತವು | ಜಗವು ನನ್ನಿಂದಲೇ ಬದುಕಿರೆ | ಜಗವು ದಾರಿದ್ರ್ಯ ಕಂಡೀತೆಂದು ಕಾಮನು ಪೇಳುತಿರೇ || 7 ||
ಶಂಕರನು ದೇಶವ ತೊರೆದು ಹೋಗುವಲ್ಲಿ | ಶಂಕರನ ಪೂಜೆಯ ಬಿಡಬೇಡ ಎನ್ನುತ್ತ | ಕಿಂಕರನೆ ನೀ ವ್ರತವ ಬಿಟ್ಟೆಯಾದರೆ ಕೆಟ್ಟೆ | ಕಂಕರದ ಕೆರದಲ್ಲಿ ಕುಡಿಯಬೇಕಾದೀತು ಅಂಬಲಿಯ ||8 ||
ಹೀಗೆಂದು ಹೇಳುತ್ತ ಉತ್ತರ ದಿಶೆಎಡೆಗೆ | ಹೋಗುತ್ತಲಿರಲು ಶಂಕರನು | ಮಿಗಿಲು ಅವನಲ್ಲಿರುವ ಸದ್ಬುದ್ಧಿಯೇ ತಾನೇ | ಹಗೆಯು ದ್ವೇಷವ ರಹಿತ ಜೀವನವ || 9 ||
ಕೆಲವು ವರುಷಗಳು ಹಾಗೆಯೆ ಕಳೆದಿರೆ | ಕಲಹ ಭೇದವ ಬೆಳೆಸಿಕೊಂಡಿಹನು | ಒಲವು ಶುದ್ಧತೆ ರಹಿತ ಕಾಮನು ಇರುತಿರಲು | ವಿಲವಿಲ ಒದ್ದಾಡೊ ದುರ್ಭಿಕ್ಷದಿ ಪೀಡಿತನು || 10 ||
ರಾಜ್ಯವ ಬಿಟ್ಟೋಡಿ ಹಸಿವೆ ನೀರಡಿಕೆಗಳ | ತ್ಯಾಜ್ಯವಾವುದು ಎಂದು ತಿಳಿಯದೆ | ರಾಜ್ಯ ಶಂಕರನಲ್ಲಿ ಆಶ್ರಯ ಪಡೆದನು | ವ್ಯಾಜ್ಯ ವಿಲ್ಲದ ಮನಸಿನಿಂದ || 11 ||
ವರದ ಶಂಕರ ಆಢ್ಯತೆಯಲಿ ತಾನೇ ಆಸನದಲ್ಲಿ ಕುಳಿತಿರೆ | ಯಾರು ನೀನಿರುವೆ ಇಲ್ಲೇಕೆ ಬಂದಿರುವೆ | ಇರುವ ದೇಶವು ಯಾವುದು | ಹೊರಟಿರುವುದು ಆವ ದೇಶಕೆ ಕೇಳಲು ಪಾದಕೆರಗಿದನು ||12 ||
ನನ್ನ ದೇಶದಲಿ ಬರಗಾಲ ಬಿದ್ದಿರೆ ಅ – | ದನ್ನ ನೋಡಲಾಗದೆ ನಾನು ಬಂದಿರುವೆ | ನಾನು ನನ್ನಯ ಪ್ರಜೆಗಳು ಎಲ್ಲರೂ | ದೀನರಾಗಿ ನಿನ್ನ ಕಾಲಡಿಗೇ || 13 ||
ಹಸಿವೆ ನೀರಡಿಕೆಯಿಂ ಬಳಲಿ ಬೆಂಡಾಗಿರುವೆ | ವಸೆ ತಿನ್ನಲೇನಾದರು ಕೊಡುತೀಯಾ | ಪಸೆ ತಿರೇ ಅಂಬಲಿ ಇದ್ದರೂ ಪಾತ್ರೆ ಮಾತ್ರ ಇಲ್ಲ | ಹಸನಾದ ಕೆರದಲೀ ಅಂಬಲಿ ಹಾಕುವೆ ಹಿಡಿಯೆಂದ || 14 ||
ಕಾಮನು ತನ್ನ ಚಪ್ಪಲಿಯ ಹಿಡಿದನು | ನೇಮದಿ ಅಂಬಲಿಯ ಹಾಕೆನುತ | ನಿಮ್ಮ ಹೇಳಿಕೆಯಂತೆ ಕುಡಿವೇನು ಎಂದಾಗ | ಕಾಮನ ಹಿಡಿದೆತ್ತಿ ಅಪ್ಪಿ ಶಂಕರನು || 15 ||
ನಿನ್ನ ಅವಸ್ಥೆಯು ಹೀಗಿರಲು ಕಾರಣ | ನಿನ್ನ ಅಹಂಕಾರ ಮೊದಲೂ | ನಿನ್ನ ರಾಜ್ಯವು ಸುಖವು ಮರಳಿ ಪಡೆಯಲು ನೀನು | ಮುನ್ನ ಶಂಕರ ವ್ರತವ ಮಾಡೆನುತ || 16 ||
ಇಹದಲಿ ಸೌಖ್ಯವ ಪರದಲಿ ಮೋಕ್ಷವ | ಮಹತಿ ಶಂಕರ ಗಂಡ ನವಲಿಪಾಕ | ಇಹುದು ಭವಿಷ್ಯೋತ್ತರ ಪುರಾಣದಲಿ | ಮಹಿಮೆ ರುದ್ರನ ಲೀಲೆ ವ್ರತದ ಹೆಸರಲ್ಲಿ ನೋಡಿದಿರಿ || 17 ||
ದೇವಿ ಪಾರ್ವತಿ ಪತಿ ರುದ್ರರಿಂದಲೇ | ಈವ ಸೂತರಿಂ ಶೌನಕರು | ನಿವರಗಿ ತುಳಸಕ್ಕ ಪಾಡಿದಳು ಭಕ್ತಿಯಲಿ | ದೇವ ಶಂಕರ ವ್ರತವ ಮಾಡುತಲೀ || 18 ||
|| ಇತಿ ಶ್ರೀ ಭವಿಷ್ಯೋತ್ತರ ಪುರಾಣೆ ಜ್ಯೇಷ್ಟಾದೇವಿ ವ್ರತ ಕಥಾಯಾಂ ತ್ರಿತಿಯೋಧ್ಯಾಯಃ ಸಮಾಪ್ತಃ ||
......... ನಿವರಗಿ ತುಳಸಕ್ಕ
1) ಜ್ಯೇಷ್ಟಾದೇವಿ ವ್ರತ ಪೂರ್ವ ತಯಾರಿ ज्येष्टादेवी व्रत पूर्व तयारी
2) ಜ್ಯೇಷ್ಟಾದೇವಿ ವ್ರತ ಪೂಜಾ ವಿಧಾನ ज्येष्टादेवी व्रत पूजा विधानः
3) ಜ್ಯೇಷ್ಟಾ ದೇವಿ ವ್ರತ ಕಥಾ ज्येष्टा देवी व्रत कथा :
श्री ज्येष्टादेवि व्रत कथा प्रारंभः
स्वस्ति श्री अखिल सन्मंगळानि भवंतु श्लोकैक श्रवण पठण मात्रेण वक्तुश्च श्रोतृणा निखिल कलि कृत कल्मषाप नोदन पटुतरॆ धर्माद्यखिल पुरुषार्थसाधनी भूतॆ श्री भविष्योत्तर पुराणॆ ज्येष्टादेवि व्रत कथायां श्रोतारः सावधाना भवंतु ....
Late .TULASAABAAYI SEETAARAAMAACHAARYA KATTI ( निवरगि तुळसक्क ) मत्तु Late . JAYASHREE SUDHEERAACHAARYA KATTI ( निवरगि जयक्क) कवियित्रीगळवरु ई नामधेयगळिंद श्री ज्येष्था गौरि व्रतद कथा पारंपारिक काव्य रूपदल्लि विरचिसलाद श्री ज्येष्थादेवि विसर्जनॆय दिन हेळुववरु मत्तु केळुववरु पठिवंतह हाडु गौरि भक्तरिगागि .......
प्रथम कथा ( पारंपारिक चौपदि )
हरिः ओं श्री गुरुभ्योनमः
प्रथम कथा ( हरन कुमारन धाटियल्लि )
सिद्धिविनायकन पादक्कॆ ऎरगुत्त । बुद्धि मातॆयलि बेडुत्त । शुद्ध मनसिनिंद बद्ध कटियागि । साध्य वागिसुयॆंदु केळुवॆ ॥ 1||
सूतनु शौनक ऋषिगळलि पेळुत । सतियु केळुत रुद्रनलि । हितकर स्त्रीयरिगॆ क्षणदल्लि सुखनीडो । व्रतवन्नु तिळिसलनुवागु ॥ 2 ||
सौभाग्य संतति संपत्ति सिगुव सु- । लभवाद व्रतवन्ने पेळॆंदु- । र्लभवाद पूजॆयिं मनसिन । लुब्धव क्षणदल्लि ऎल्लव तिळिसु ॥ 3 ||
नगुत रुद्रनु सतिय मातनु केळि । मॊगदल्लि स्मित हास्य तो रि । मिगिलाद श्री ज्येष्ठ देवि नामक व्रतव । निर्गत परदल्लि मुक्ति ॥ 4 ||
देवाधिदेवनॆ देवि ज्येष्टा व्रतव । याव मास दिनगळलि गैवरु । ऎल्लि ऋषिगळ वास ईर्व स्थळदलि नीनु व्रतव माडु ॥ 5 ||
ईशन हेळिकॆ केळि गिरिजॆयु तानु । नश्वर भूतळकॆ इळिदु । ईश पत्नियाद गंगॆय तीरदि । ऋषि गणवन्नॆ नोडिदळु ॥ 6 ||
इहदल्लि सौख्यव परदल्लि मुक्तिय । इहव व्रतव केळिदॆ नी । महति लोकोद्धार । वहिप व्रत आचरणॆय तिळिसुवॆवु ॥ 7 ||
भाद्रपद मास शुक्ल अष्टमियल्लि । भद्रदि ज्येष्टा तारॆयॆंदु । उदयदि मध्याह्न व्यापिनि तारॆय । इद्द अस्तित्ववे शुभकर ॥ 8 ||
अनुराधा तारॆय मेलॆ आवाहनॆ । अनुविरुव ज्यॆष्टातारॆ ।मनविट्टु पूजिसि मूला तारॆयमेलॆ । सन्निधिय बिडिगडॆ माडु ॥ 9 ||
चिन्नद बॆळ्ळिय इल्लवे ताम्रद । मण्णिन तंबिगॆ विहितवु ।मुन्न मुच्चळिकॆय ऎल्लव शुद्धिसि । चित्रव बिडिसलनुवागि ॥ 10 ||
कॊडदल्लि शंख चक्रव बरॆदु । बिडदॆ स्वस्तिक प्रणवगळ ।ऒडनॆ शुभकर देविय मुखव । बिडिसु मुच्चळिकॆय मेलॆ ॥ 11 ||
मनॆय ईशन मूलॆ । मन्निसि अक्किय राशि ।मुन्न माडिद कलशवनु । मानद राशियमेलॆ स्थापिसु ॥ 12 ||
हदिनारु ऎळॆय दोरव तक्कॊंडु । ऐदॆयरॆल्लरु अरिशिनदि ।अद्दि कलशदि इट्टुपुष्प दक्षिणॆ सहित । विद्युक्त पूजॆय माडुवुदु ॥ 13 ||
देवाधि देवतॆगळिगॆ हिरियळाद । देवि संतति सुखव कॊडुव । ईव देवियनगॆ अन्न आयुष्यगळ भाव भक्तिय नीडु नन्नल्लि ॥ 14 ||
हे आदि शक्तिये वंदिपॆ ना निनगॆ । हे विष्णु प्रियळे प्रणिपगळ ।हे ब्रह्मप्रियळॆ सेरॆगॊड्डि बेडुवॆ । हे ज्येष्ठ देविये निन चरण ॥ 15 ||
गौरि कुंभद मेलॆ एरिप दॊरव । नीरॆयरॆल्लरु पूजिपरु ।करमुगिदु देविगॆ तनगिर्प । वरवांछितवन्ने बेडि कॊळ्ळुवरु ॥ 16 ||
मरुदिन अभ्यंग स्नानव माडि । सिरि पीतांबरवन्ने उट्टु । हरिद्रा कुंकुम विळ्येयगूडिसि । गौरि नैवेद्यारति माडुवरु ॥ 17 ||
मुत्तैदॆ ब्राह्मण भूरि भोजन गैदु । मत्तॆ रविकॆ दक्षिणॆय कॊडुवरु । दत्त आशीर्वाददॊडनॆ सांगत माडि । नित्यगौरि वास माडुवळु ॥ 18 ||
मरुदिन मत्तॆ गौरि आराधनॆ उ- । त्तर पूजॆय मुगिसि ।दोरक्कॆ हदिनारु गंटु गळनॆ कट्टि । धारणॆय माडि कॊंबुवरु ॥ 19 ||
आदियल्लादरु देवि व्रत पूजॆय । मध्यदल्लियु इल्ल अंत्यक्कॆ । विधियुक्त व्रतदिंद इच्छॆय पडॆदु । उद्यापनॆय माडि कॊळ्ळुवुदु । ॥ 20 ||
|| इति श्री भविष्योत्तर पुराणॆ ज्येष्टादेवि व्रत कथायां प्रथमॊध्यायः समाप्तः ॥
....निवरगि तुळसक्क
द्वितिय कथा ( भोग त्रिपदि )
सतियु कथॆयनु रुद्रनिंदलि ।सूतरिं शौनक आदिगळरु ॥कथॆय मुन्नडॆ शुद्ध चित्तदि केळि कॊळ्ळुतलि ॥ 1 ||
पूर्वकालदॊळीव व्रतवनु । यारु ऎल्लॆ ऎल्लि माडिरॆ । सार पूजॆय फलवु प्राप्तद बगॆय पेळॆनुत ॥ 2 ||
वेद शास्त्र गळनु बल्ल । सद्धर्मदलि आसक्तनिरुव । शुद्धमन सुभद्र ब्राह्मणनॊब्बनिर्दनु ॥ 3 ||
पत्नि सुव्रतिय जॊतॆयलि । यत्न पूर्वक गृहिणि कर्मव । मत्तॆ जयवर्धन पुरियलि वासवागिहरु ॥ 4 ||
काल अंतरदल्लि दंपति । मेलॆ बडतनदिंद बॆंदरु । जाल जंजड दुःख पीडॆय पडुतलिर्दरु ॥ 5 ||
ऒंदु दिन सति पतिय हत्तिर । अंदु अन्न वस्त्र रहितवु । दिंद ग्रामव बिट्टु होगो बगॆय केळिदळु ॥ 6 ||
मातु केळिद पतियुसतियॊडॆ । कातरदि काननव सेरिद । अतियनिर्जन पापनाशन सरितॆयनु कंड ॥ 7 ||
स्नान ऐह्निक मुगिसि द्विजनु ।तन्न नीरॆय नोडुतिरलु । अनति दूरदि स्त्री समूहव कंडु हर्षितळु ॥ 8 ||
स्त्री वृंदव वंदिसिये सति । आव देविय व्रतव माडिरॆ । ईव ज्येष्टा गौरि व्रतवनु माडलिर्दॆवु ॥ 9 ||
वैकल्यदि भाग्य संपद । ऎक कालदि क्षणदि प्राप्तिय । नेक व्रतदलि श्रेष्ठवागिह गैयलिच्चिसुवॆ ॥ 10 ||
बडतनद बवणॆयलि पीडित । काडुतले ऐश्वर्य संतति । कॊडुवदेवि पूजॆ विस्तारदलि पेळुविरा ॥ 11 ||
पार्वरिह वाशिष्ट्य मुनिगळु । पूर्वदिं विद्युक्त विधियिं । सार्वकालिकदेवि व्रतवनॆ तिळियहेळिदरु ॥ 12 ||
उपदिष्ट देवि व्रतवमाडिरॆ । कृपॆयिंद सर्वर ऊटतीरिसि । प्राप्तवागिरॆ सकलसौख्यानंत संततिय ॥ 13 ||
प्रतिवर्ष नियमितदि पूजॆय । व्रतव माडुतलिरुव नीरॆय । व्रतॆयु इहदलि सौख्य अंत्यदि मोक्ष हॊंदिहळु ॥ 14 ||
कथॆय केळुगरन्नु भक्तिय । कथॆय हेळुगरन्नु ऎल्लर ।सत्य वागिये देवि कृपॆगॆ प्रात्ररागुवरु ॥ 15 ||
इहद सौख्यव परदमोक्षव । महतिव्रतवदु ज्येष्ठ देविय । इहुदु भविष्यउत्तर पुराणदिर्पुशतसिद्ध ॥ 16 ||
देवि पार्वति रुद्ररिंदलू । ईव शौनक सूतरिंदलू । नीवरगि जयक्क ता पाडिदळु भक्तियलि ॥ 17 ||
|| इति श्री भविष्योत्तर पुराणॆ ज्येष्टादेवि व्रत कथायां द्वितियोध्यायः समाप्तः ॥
...... निवरगि जयक्क ( नन्न अज्जि तुळसाबायियवर आशिर्वाददिंद )
3) तृतीय कथा शंकर नामक व्रत ( चौपदि - हरन कुमारन धाटियल्लि )
( शंकर गंड नवलिपाक ऎंदु करॆयल्पडुव कथॆ )
रमणीय कैलास पर्वत शिखरदि । उमॆयु रुद्ररलि केळ्वळु । मम भक्तरिगॆ संपत्तु दॊरॆयलु । काम्यक व्रत प्राप्तिय बगॆय केळिदळु ॥ 1 ||
लोकदॊळगॆ सिद्ध शंकर व्रत ऒंदु । शुक्ल पक्ष अष्टमिगॆ माडॆ भाद्रपददलि । सकल सामग्रि ऒडगूडि वनितॆयरु । निखरवागिये भय भक्तियिं ॥ 2 ||
नित्य अह्निक मुगिसि धान्य रूपियाद । नित्य कल्याणकारिय नी –| नित्य नियमित अभ्यंग माडि । नित्य शंकर व्रतव माडुवरु ॥ 3 ||
एळु ऎळॆगळ दोर । एळु ग्रंथिय कट्टि । एळु दिन व्रतवनाचरिसि । मेलु बलगैयल्लि दोरवनु कट्टि कॊळ्ळुवुदु ॥ 4 ||
ई व्रतव यार्यारु ऎल्लॆल्लि माडिदरु । याव लोकदलि हेगेगॆ । देवदेवने नीनु ऎल्लवू पेळु नी । भावदिं उमॆयु केळिदळु ॥ 5 ||
मर्त्यलोकदॊळगॆ काम शंकररॆंब । इरुतिरलु ऐश्वर्यदिंद । वर्तनॆयलि काम शंकरगिंत मेलॆ । कर्तारनॆ नानॆंदु निंदिसुत ॥ 6 ||
जगवे नानॆल्ल नन मिगिलु एनिल्ल । जगवॆल्ल नन्निंद पोषितवु । जगवु नन्निंदले बदुकिरॆ । जगवु दारिद्र्य कंडीतु ऎंदु कामनु पेळुतिरे ॥ 7 ||
शंकरनु देशव तॊरॆदु होगुवल्लि । शंकरन पूजॆय बिडबेड ऎन्नुत्त । किंकरनॆ नी व्रतव बिट्टॆयादरॆ कॆट्टॆ । कंकरद चप्पलियल्लि अंबलि कुडियबेकादीतु ॥ 8 ||
हीगॆंदु हेळुत्त उत्तर दिशॆऎडॆगॆ । होगुत्तलिरलु शंकरनु । मिगिलु अवनल्लिरुव सद्बुद्धिये ताने । हगॆयु द्वेषव रहित जीवनव ॥ 9 ||
कॆल वरुषगळु हागॆ कळॆदिरॆ । कलह भेदव बॆळॆसिकॊंडिहनु । ऒलवु शुद्धतॆ रहित कामनु । विलविलनॆ ऒद्दाडॊ दुर्भिक्षदि पीडितनु ॥ 10 ||
राज्यव बिट्टोडि हसिवॆ नीरडिकॆगळ । त्याज्यवावुदु ऎंदु तिळियदॆ । राज्य शंकरनल्लि आश्रय पडॆदनु । व्याज्य विल्लद मनसिनिंद ॥ 11 ||
वरद शंकर आढ्यतॆयलि ताने आसनदल्लि कुळितिरॆ । यारु नीनिरुवॆ इल्लेकॆ बंदिरुवॆ । इरुवदेशवु यावुदु । हॊरटिरुवुदु आवदेशकॆ ऎंदु केळलु पादकॆरगिदनु ॥12 ||
नन्न देशदलि बरगाल बिद्दिरॆ अ – | दन्न नोडलागदॆ नानु बंदिरुवॆ । नानु नन्नय प्रजॆगळु ऎल्लरू । दीनरागि निन्न कालडिय बंदेवु ॥ 13 ||
हसिवॆ नीरडिकॆयिं बळलि बॆंडागिरुवॆ । वसॆ तिन्नलेनादरु कॊडु ऎंद । पसॆ तिरे अंबलि इद्दरू पात्रॆ इल्ल । हसनाद काल्मरिलि अंबलि हाकुवॆ हिडियॆंद ॥ 14 ||
कामनु तन्न चप्पलिय हिडिदनु । नेमदि अंबलिय हाकॆनुत । निम्म हेळिकॆयंतॆ कुडिवेनु ऎंदाग । कामन हिडिदॆत्ति अप्पि कॊंबनु शंकरनु ॥ 15 ||
निन्न अवस्थॆयु हीगिरलु कारण । निन्न अहंकार अदुवे मूल । निन्न राज्यवु सुखवु मरळि पडॆयलु नीनु । मुन्न शंकर व्रतव माडॆनुत ॥ 16 ||
इहदलि सौख्यव परदलि मोक्षव । महति शंकर गंड नवलिपाक कथॆ । इहुदु भविष्योत्तर पुराणदलि । महिमॆ रुद्रन लीलॆ व्रतद हॆसरल्लि नोडिदिरि ॥ 17 ||
देवि पार्वति पति रुद्ररिंदले । ईव सूतरिं शौनकरु । निवरगि तुळसक्क पाडिदळु भक्तियलि । देव शंकर व्रतव प्रचुरदि ॥ 18 ||
|| इति श्री भविष्योत्तर पुराणॆ ज्येष्टादेवि व्रत कथायां त्रितियोध्यायः समाप्तः ॥
......... निवरगि तुळसक्क
|| श्री ज्येष्ठा देव्यार्पणमस्तु ||
No comments:
Post a Comment