Friday, May 20, 2022

*Story of Satya Narayana vrata ಸತ್ಯ ನಾರಾಯಣ ವೃತ ಕಥಾ


ಶ್ರೀ ಸತ್ಯ ನಾರಾಯಣ ದೇವರ ವ್ರತ ಕಥಾ 
(ಶ್ರೀ ವೇದವ್ಯಾಸಾಚಾರ್ಯ ಕಟ್ಟಿ ವಿರಚಿತ) 
( ಮೂಲ ಶ್ರೀ ಸತ್ಯ ನಾರಾಯಣ ದೇವರ ಕಥೆಯನ್ನು ಹೇಳಲು ಕೇಳಲು ಸ್ವಲ್ಪ  ಸರಳವಾಗುವಂತೆ ಸಮಯ ವ್ಯಾಪ್ತಿ ಮೀರದ ತೆರನಾಗಿ ನಡುಗನ್ನಡ ಭಾಮಿನಿ ತ್ರಿಪದಿಯಲ್ಲಿ ರಚಿಸಲಾಗಿದೆ, ಗೇಯವು ಇದೆ, ಬಲ್ಲವರು ಹಾಡಲೂ ಬಹುದು)  ಇನ್ನೊಂದು ಮುಖ್ಯವಾದ ವಿಷಯವೆಂದರೆ ವಾಚಕರು, ಕೇಳುಗರು ಮೂಲ ಕಥೆಗೆ ಹೊರತಾಗಿ ಬರುವ ಆರಾಧನೆಗಳಲ್ಲಿ ತಮ್ಮ ತಮ್ಮ ರೂಢಿ ಪರಂಪರೆಗಳನ್ನು ಅಳವಡಿಸಿ ಕೊಳ್ಳುವುದು ಉತ್ತಮ.
ಶ್ರೀ ಗುರುಭ್ಯೋ ನಮಃ  ಹರಿ:ॐ
ॐ ಯೋ ಅಶ್ವತ್ಥ ರೂಪೇಣ ನದಿ ತಟಾಕೇ | 
ವಿರಾಜತೇ ಸರ್ವ ಜಗನ್ನಿವಾಸ: | 
ಬ್ರಹ್ಮಾsಧಿದೇವಾಚ್ಯುತ ಪಾದ ಪಲ್ಲವೋ | 
ಗೋವಿಂದ ರಾಜೋ ವತುಮಾಂ ಪರೇಶ: ||  
ಅಭಯಂ ಗದೀನಂಚ ಶಂಖ ಚಕ್ರಂ | 
ಚಾಪಂ ತುಣೀರಂ ದ್ರಷ್ಟ ಮಯಂ ತದೈವ | 
ತೇ ನೈವ ರೂಪೇಣ ಚತುರ್ಭುಜೇನ| 
ಪ್ರಳಯಾಂತಕೋ ಭವ ವಿಶ್ವಮೂರ್ತೆ || 
ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಃ ಸ್ತುನ್ವಂತಿ ದಿವ್ಯೈ ಸ್ತವೈಃ | 
ವೇದೈಃ ಸಾಂಗಪದಕ್ರಮೋಪನಿಷದೈ ರ್ಗಾಯಂತಿ$ ಯಂ ಸಾಮಗಾಃ |
ಧ್ಯಾನಾವಸ್ಥಿತ ತದ್ಗತೇನಮನಸಾ ಪಶ್ಯಂತಿಯಂ ಯೋಗಿನೋ | 
ಯಸ್ಯಾಂತಂ ನ ವಿದುಃ ಸುರಾಸುರಗಣಾ ದೇವಾಯ ತಸ್ಮೈ ನಮಃ |
ಶ್ರೋತಾರಃ ಸಾವಧಾನಾ ಭವಂತು

ಅಥ ಪ್ರಥಮಮೋಧ್ಯಾಯಃ                  
ಶ್ರೀ ಗಣಪ ವಾಣಿಯರಲ್ಲಿ ಬೇಡುತ | 
ಈ ಗೆತ್ತಿಕೊಂಡಿಹ ಕಾವ್ಯ ದೇವರ | 
ನೀಗಿಸುವ ಬುದ್ಧಿಯನು ನೀಡೆಂದು ಕೇಳುವೆನು || 
ಸತ್ಯ ಪ್ರಭುವಿನ ಪೂಜೆ ಸಿದ್ಧತೆ | 
ನಿತ್ಯ ಆಕರಗಳನು ತಿಳಿಯಲು | 
ಕೃತ್ಯ ವಿಧಿ ವಿಧಾನ ರೀತಿಯ ಕಥೆಯ ಕೇಳುವುದು  ||
ಭೃತ್ಯನಾಗಿಹ ಭಕ್ತನವ ತಾ | 
ಸ್ವಸ್ಥ  ಮಾನಸನಿರುವ ದಿನದೊಳು | 
ಅತ್ಯಗತ್ಯದಿ ಸತ್ಯದೇವರ ಪೂಜೆ ಮಾಡುವುದು  ||
ಮೊದಲದಿನದಲಿ ಎಲ್ಲ ಸಿದ್ಧತೆ | 
ಮುದದಿ ಉನ್ನತ ಮಣೆಯನಿಟ್ಟಿರೆ | 
ಸದನದಲಿ ಇರ್ಪ ಖಣವು ದೇವ ಮೂರ್ತಿಯನು   ||
ತುಂಬು ತಂಬಿಗೆ ಪಾತ್ರ ಸಹಿತವ | 
ಇಂಬು ಇಹ ಆಭರಣ ತೊಡಿಸಿ | 
ಕಾಂಬು ತೆರದಲಿ ಸಿಂಧೂರ  ಬೆರಳಲ್ಲಿ  ಚಿತ್ರಿಸುತ  ||
ಮಣೆಯ ನಾಲ್ಕುಕಡೆಗಳಲಿಯು ರ- | 
ಮಣ ಲಕುಮಿ ಪೂಜೆಗೈಯುತ ಕಾ - | 
ರಣಕೆ ಮುಂಗಡೆ ಹಣ್ಣು ಕಾಯಿಗಳನಿಡುತಿರಲು ||  
ಕಲಶ ಕೆಳಗಡೆ ಅಕ್ಕಿ ಪದ್ಮವ | 
ಒಲವು ಗೋಧೂಮವದು ಪಾತ್ರೆಗೆ | 
ವಿಳ್ಯ ಎಲೆಗಳು ಗ್ರಹಗಳಿಗೆ ಒಂಭತ್ತು ಬೇಕೆಂದು || 
ಪ್ರಥಮ ಪೂಜಾಧಿಪನು ಗಣಪನು | 
ಪ್ರಥೆಯು ವಿಳ್ಯ ಅಡಿಕೆಯೊಂದಿಗೆ | 
ಪ್ರಥಮಿಕತೆಯ ಅಡಿಕೆ ಅರಿಶಿಣ ಬೇರು ಕೊಬ್ಬರಿಯ ||
ಖರ್ಜುರಿ ಬಾದಾಮಿ ನಾಣ್ಯವ | 
ವರ್ಜ್ಯವೆನಿಸದೆ ಗ್ರಹಗಳೆಲ್ಲಕೆ | 
ಮಾರ್ಜನಿಸಿ ಸಮ ಒಪ್ಪವಾಗಿಸಿ ಕಾರ್ಯ ಗೈಯುವುದು ||
ಸಮಯಿ ನೀರಾಂಜನಗಳಿಡುತಲಿ | 
ಸಮದಿ ಸಿಂಧುರ ಬೇರು ಅರಿಶಿಣ | 
ಕ್ರಮದಿ ಧೂಪ ವಿಳ್ಯ ದಕ್ಷಿಣೆ ಇಡುವ ರೂಢಿಯದು ||
ಸತ್ಯ ದೇವರ ಭಾವ ಚಿತ್ರವು | 
ಮತ್ತೆ ಕಲಶದ ಹಿಂದೆ ಸ್ಥಾಪಿಸಿ | 
ಉತ್ತಮದಿ ಹೂ ಮಾಲೆಗಳ ಅರಿತು ಪೇರಿಸುತ  ||
ಮಣೆಯ ಕೆಳಗಡೆ ಶ್ರೀಕರವ ಬರೆ | 
ಅನವರತ ರಂಗೋಲಿ ಚಿತ್ರಿಸಿ | 
ಮನದ ತೆರ ಶೃಂಗಾರಗೊಂಡಿರೆ ದೇವನೊಲುಮೆಯದು ||
ಪಾತ್ರೆ ತಂಬಿಗೆ ತೀರ್ಥ ಸೌಟವೆ |  
ಪಾತ್ರ ತುಂಬಿರೆ ಪಂಚ ಅಮೃತ | 
ಪತ್ರ ತುಳಸಿ ದೇವ ಬಿಂಬವು ಘಂಟೆ ಶಂಖ ಜೊತೆ ||
ಶ್ರೀಗಂಧ ಅಂಗಾರ ಅಕ್ಷತೆ | 
ಸೌಗಂಧ ಸುವಾಸನಕೆ ಪರಿಕರ | 
ಸಾಗ್ರ ಪೂಜೆಗೆ ವೇದ್ಯ ಕರ್ಮಕೆ ಬಾಳೆ ಪತ್ರಗಳು ||
ಗೋಧಿ ಸಜ್ಜಿಗೆ ಬೆಲ್ಲ ತುಪ್ಪದಿ | 
ವೇದ್ಯ ಸದನದಿ ಇರ್ಪ ಸಾಧನ | 
ವೇದಿಕೆಗೆ ಪ್ರಾಸಾದವಾಗಿಹೆ ಅಣಿಯೇ ಮಾಳ್ಪುವುದು ||
ತವ ದಿನದಲಿ ಶುಚಿಯರಾಗಿಹೆ | 
ಲವಲೇಶ ಮಾನಸ ತಾಪವಿಲ್ಲದೆ | 
ನವ ಸದನವ ತಳಿರು ತೋರಣದಿಂದ ಸಿಂಗರಿಸಿ ||
ನಿತ್ಯ ಅಹ್ನಿಕ ಪೂಜೆ ಮುಗಿಸಿ | 
ಒತ್ತು ನೈವೇದ್ಯೆಡೆಗೆ ನಿಲ್ಲಿಸಿ | 
ಸತ್ಯ ನಾರಾಯಣನ ಪೂಜೆಯು ಮಾಡಿ ಪ್ರಾರಂಭ ||
ಕಳಶದೊಳು ಹೂ ಅಡಿಕೆ ದಕ್ಷಿಣೆ | 
ಮಿಳಿಸಿ ಮಡಿ ಜಲವನ್ನೆ ಪೂರಿಸಿ | 
ಒಲವು ಉಪವೀತ ದೇವರ ಪಾತ್ರೆಗಿರಿಸುವದು ||
ಸತ್ಯ ದೇವರ ವ್ರತದ ಪೂಜೆಯು | 
ಸ್ತುತ್ಯ ಷೋಡಶ ಪೂಜೆಗೊಳ್ಳುತ | 
ನಿತ್ಯ ವಿಧಿವತ್ತಾಗಿ ನೈವೆದ್ಯವರ್ಪಣೆಯ   ||
ವೇದ್ಯ ನಂತರ ದೇವ ಮಹಿಮೆಯ | 
ಮಧ್ಯ ವಾರ್ತಾಲಾಪ ಮಾಡದೆ | 
ಸಾಧಕರು ಕಥೆಯ ಶ್ರವಣ ಮಾಡುವುದು ||
ಪೂರ್ವ ಕಾಲದೊಳಲ್ಲಿ ಸೂತರು | 
ಸಾರ್ವಕಾಲಿಕ ಸತ್ಯ ದೇವರ | 
ಪರ್ವ ವ್ರತವನು ಹೇಳ್ವ್ ಶೌನಕರಲ್ಲಿ ಕೇಳುತಲಿ ||
ನೈಮಿಶಾರಣ್ಯದೊಳು ಒಂದೆಡೆ  | 
ನಾಮ ಶೌನಕ ಋಷಿಗಳೆಲ್ಲರು | 
ಸೋಮ ಗುರು ಸೂತರಲಿ ಪ್ರಶ್ನೆ ಮಾಡಿದರು  ||
ಯಾವ ವ್ರತ ಯಾವ ತಪದಿಂ | 
ಭಾವ ಮನುಜರ ಇಚ್ಛೆ ಪೂರ್ಣವು | 
ಈವ ದೇವರ ಪೂಜೆಯಿಂ ಸಮೃದ್ಧಿ ಪಡೆಯುವುದು ||
 ಹಿಂದೊಮ್ಮೆ ನಾರದರು ವಿಷ್ಣುಗೆ | 
ಮುಂದೆ ನಾರದರಲ್ಲಿ ಅರುಹಿದ | 
ಸಂಧಿ ಕಥೆಯನು ನಾವು ನಿಮಗಿಲ್ಲಿ ಪೇಳುವೆವು  ||
ಮರ್ತ್ಯ ಲೋಕದ ದುಃಖ ಪೀಡಿತ | 
ವರ್ತಿ ರೋಗ ರುಜಿನದಿಂದಲಿ | 
ಕರ್ತೃ ಕರ್ಮದ ರೀತಿಕಷ್ಟವು ವಿಮುಖ ಸುಖ ಶಾಂತಿ ||
ನಾರದರ ಪರಹಿತದ ಚಿಂತನೆ | 
ದೂರ ಮಾಡುವ ಮನುಜ ದುಃಖವ | 
ವಾರಿಜಾಪತಿ ಸದನದೆಡೆ ಬಂದು ಕೈ ಮುಗಿದ  ||
ವೈಭವದೋಳ್ ವೈಕುಂಠ ವಾಸಿ ದೇವಂ ಶ್ವೇತಾಂಬರಾವೃತವರಂ | 
ಸೌಭದ್ರಾ ವನಮಾಲೆ ಭೂಷಿತ ಹರಿಂ ಶ್ರೀ ಶಂಖ ಚಕ್ರಾ ಧರಾ || 
ಸೌಭಾಗ್ಯಾSಭಯ ಪದ್ಮ ಗದಾ ಧರವರಾ ಆದ್ಯಂತ ಮಧ್ಯಾ ವೃತಾ  | 
ಸ್ವಾಭಾವೈ ವೈಗುಣ್ಯ ನಿರ್ಗುಣ ನಮೋ ದುರಿತಂಗಳಾ ಪಾಹಿಮಾಂ || 
ನಾರದರೇ ನಿಮ ಆಗಮಕೆ  ಕಾರಣ | 
ಸಾರ ಇಚ್ಚೆಯ ಅರುಹಿರೆಂತಲೂ | 
ಮೀರಿ ದುಃಖವ ಪಡೆಯೆ ಜನ ಮೃತ್ಯು ಲೋಕದಲಿ || 
ನೋಡಲಾಗದ ಪೀಡೆಯದು ಇರೆ | 
ಕಾಡುತಿಹ ದುಮ್ಮಾನ ಒಂದೆಡೆ | 
ಮಾಡುವಂತಹ ಸುಲಭೋ ಪಾಯ  ಕೃಪೆಮಾಡಿ ||
ಒಳ್ಳೆ ಚಿಂತನೆ ಪರಹಿತಕ್ಕಿರೆ | 
ಇಲ್ಲ ಸಂಶಯ ನಿನ್ನ ಪ್ರಶ್ನೆಗೆ | 
ಒಳ್ಳೆ ದುರ್ಲಭ ವ್ರತವ ಒಂದಿರೆ ಕೇಳು ಶಾಂತದಲಿ ||
ಸತ್ಯ ನಾರಾಯಣನ  ವ್ರತವದು | 
ಮಿಥ್ಯ ವಲ್ಲದೆ ಯಥಾ ವಿಧಿಯಿಂ | 
ಸತ್ಯದಲಿ ಇಹ ಭೋಗ್ಯ ಭಾಗ್ಯವ ಕೊನೆಗೆ ಮುಕ್ತಿಯದು ||
ತಾವು ಹೇಳಿದ ವ್ರತದ ಕ್ರಿಯೆಯನು | 
ಯಾವಾಗ ಯಾರ್ಯಾರು ಮಾಡಿರೆ | 
ನೀವೆಲ್ಲವು ಹೇಳಿ ಪೂಜೆಯು ಹೇಗೆ ಮಾಡುವುದು ||
ಮಾಡೆ ಪೂಜೆಯು ಶೋಕ ನಾಶಕೆ | 
ನೋಡುತಲೇ ಧನ ಧಾನ್ಯ ವೃದ್ಧಿಸಿ | 
ಒಡನೆ ಸ್ತ್ರೀಯರು ಭಾಗ್ಯದಾಪತ್ಯ ಪಡೆಯುವರು ||
ಪುರುಷ ವಿಜಯಗಳೆಲ್ಲ ಕಾರ್ಯಕೆ | 
ನಿರುತ ಶ್ರದ್ಧಾ ಭಕ್ತಿಯಿಂದಲಿ | 
ಇರುವ ಯಾವುದೇ ದಿನದಲಿ ವ್ರತವನ್ನು ಮಾಡುವುದು ||
ಮುಂಜಾವು ಮಧ್ಯಾಹ್ನ ಸಮಯದಿ | 
ಸಂಜೆ ಬಾಂಧವ ಬಂಧುಗಳ ಜೊತೆ | 
ಕಂಜನಾಂಜನ  ವ್ರತವು ಭಕ್ತಿಯಲಿಂದ ಆಚರಿಸು || 
ಪೂಜೆ ಮುಗಿದು ನೈವೇದ್ಯ ಅರ್ಪಿಸಿ  | 
ಸಾಜು ತುಪ್ಪ ಹಾಲು ಬೆಲ್ಲವ | 
ಸಜ್ಜುಗೆಯು ಬಾಳೆ ಎಲ್ಲವೂ ಒಕ್ಕಾಲು ಲೆಖ್ಖದಲಿ ||
ದ್ವಿಜರಿಂಗೆ ದಕ್ಷಿಣೆಯನಿತ್ತು | 
ನೈಜ ಭಕ್ತಿಯ ಕಥೆಯ ಶ್ರವಣವ | 
ನಿಜ ಪ್ರಸಾದ ಎಲ್ಲರೂ ಸ್ವೀಕರಿಸಿ ಪದಕೆರಗಿ ||
ಆರತಕ್ಷತೆ ನೃತ್ಯ ಗೀತೆಯ | 
ಸಿರವ ಬಾಗಿಸಿ ಆತ್ಮರೊಡನೆಯೇ | 
ಭೂರಿ ಬ್ರಾಹ್ಮಣ ಭೋಜದಿಂ ತೃಪ್ತ ಗೊಂಡಿರಲು ||
ಎಲ್ಲರಿಷ್ಟಾರ್ಥವನೇ ಪೂರ್ಣವು | 
ಇಲ್ಲ ಕಲಿಯುಗದನ್ಯ ವ್ರತವದು | 
ನಿಲ್ಲು ವ್ರತ ಸ್ಕಂದ ರೇವಾ ಖಂಡ ಪ್ರಥಮ ಕಥೆ ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ಪ್ರಥಮೊಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )

ಅಥ ದ್ವಿತೀಯೋಧ್ಯಾಯಃ  
ಪುರ್ವದಲಿ ಶ್ರೀ ಸತ್ಯದೇವರ  | 
ಪಾರ್ವ ಶೌನಕರಾದಿ ಋಷಿಗಳೇ |  
ಊರ್ವರಿತವೀಮನೋಹರ ಕಥೆಯ ಪೇಳುವೆನು ||
ವಾರಣಾಸಿಯ ಬಡವ  ಬ್ರಾಹ್ಮಣ | 
ಸಾರಸರಿಯಲಿ ಅನ್ನ ಸಿಗದಲೇ | 
ಈರ್ವ ದ್ವಿಜ ದುಃಖಿತರು ಪ್ರಭು ದೃಷ್ಟಿ ಗೋಚರದಿ || 
ನಿನ್ನ ದುರಿತಗಳೆಲ್ಲ ಕಂಡಿರೆ | 
ನಿನ್ನ ಬಯಕೆಗಳೆನೇನು ಪೇಳು |  
ನನ್ನ ಬಡತನ ನಿವಾರಣೋಪಾಯ ಪೇಳೆಂದ ||
ದ್ವಿಜರೆ ನೀವು ಸತ್ಯ ಪ್ರಭುವಿನ | 
ನಿಜ ವ್ರತವನು ಮಾಡೆ ಭಕ್ತಿಯ | 
ನಿಜದಿ ಭಜಿಪರ ದುಃಖ ದುರಿತವ ದೂರ ಮಾಡುವುದು ||
ಪ್ರಥಮ ಅಧ್ಯಾಯದಲಿ ಹೇಳಿದ | 
ಪ್ರಥಮ ಪೂಜಾ ಪ್ರಸಾದ ವಿಧಿಯನೆ | 
ಕಥನ ಮಾಡಿದ ದೇವ ಅಂತರ್ಧಾನರಾಗಿಹರು ||
ವೃದ್ಧ ಬ್ರಾಹ್ಮಣ ವ್ರತದ ವಿಧಿಯಲಿ | 
ನಿದ್ರೆಯಿಲ್ಲದೆ ರಾತ್ರಿ ಕಳೆದನು | 
ಬದ್ಧ ಕಂಕಣನಾಗಿ ಪ್ರಾತಃ ಸಮಯದೊಳು ಎದ್ದು  ||
ಸ್ನಾನ ಸಂಧ್ಯಾಗಳನೆ ತೀರಿಸಿ | 
ತಾನೆ ನಿತ್ಯದ ಹೊರಟು ಭಿಕ್ಷೆಗೆ | 
ಮಾನ ಭಿಕ್ಷೆಯು ಅಧಿಕ ದೊರೆತಿರೆ  ಸತ್ಯ ಸಂಕಲ್ಪ ||
ದೇವರೊಲಿಯಲು ಏಕ ನಿಷ್ಥೆಯು | 
ಭಾವ ಭಕುತಿಯ ನೋಡಿ ಪ್ರಭುವು | 
ಕಾವ ದೇವರ ಕೃಪೆಗೆ ಆದಿನ ಹಣವು ಭಿಕ್ಷೆಯಲಿ ||
ಹರ್ಷದಿಂದಲಿ ದ್ವಿಜನು ತನ್ನಯ | 
ಕರ್ಷಣದಿ ಬಾಂಧವರೆಲ್ಲ ಕೂಡಿಯೇ | 
ಹರ್ಷದೊಳು ವಿಧಿಯುಕ್ತ ವ್ರತವನು ಮಾಡುತಿರಲಾಗಿ ||
ಸಂತುಷ್ಟ ನಾರಾಯಣನು ದ್ವಿಜನ | 
ಸಾಂತ್ವನದಿ  ದಾರಿದ್ರ್ಯವನೆ ದೂರಿಸಿ | 
ಅಂತ್ಯದಲಿ ಸಂಪತ್ತಿ ಚಿರ ಭೋಗ ಹೊಂದಿಹನು ||
ಧೃಡ ಭಕ್ತಿಯಿಂ ವೃದ್ಧ ವಿಪ್ರನು | 
ತಡೆಯು ಇಲ್ಲದೆ ಪ್ರತಿ ಮಾಸದಲಿಯೇ | 
ಮಾಡೆ ವ್ರತ ಪಾಪ ಮುಕ್ತದಿ  ಮೋಕ್ಷವನು ಪಡೆದ ||
ಭಗವಂತ ಪೇಳಿದುದನ್ನೇ ಹೇಳಿದ | 
ಮಿಗಿಲು ಸೂತರು ಶೌನಕರಲ್ಲಿ ತಿಳಿಸಿ | 
ಆಗಲೇ ಮತ್ತೊಂದು ಕಥೆ ಸೂತ ಪೇಳುತಲಿ ||
ಕಾಶಿ ಬ್ರಾಹ್ಮಣನಿಂದ ವ್ರತವನು | 
ಈಶ ಸತ್ಯ ದೇವ ಚರಿತೆಯ | 
ಕಾಶಿ ದ್ವಿಜ ವೈಭವದಿ ದೇವರ ಪೂಜೆ ಮಾಡುತಿರೆ ||
ಆಪ್ತ ವರ್ಗದ ಜೊತೆಯೇ ವಿಪ್ರನು | 
ಪ್ರಾಪ್ತಿಯಿಂ ಪ್ರಭುದೇವ ಪೂಜೆಯ | 
ಪ್ರಾಪ್ತ ಸಮಯದಿ ಕಾಷ್ಠಕ್ರೆತ ನೋಡುತಿರ್ದನು ||    
ಕಟ್ಟಿಗೆಯ ಹೊರೆ ಹೊರಗಿರಿಸಿ ತಾನೇ | 
ನಿಟ್ಟಿನೋಳು ನೀರಡಿಕೆಯಿಂದಲಿ | 
ಕಷ್ಟದಿಂ ನೋಡಿ  ದ್ವಿಜರಲಿ ಪೂಜೆ ನಡೆಯುತಿರೆ ||
ಕಾಷ್ಠ ಕ್ರೆತನು ವಿಪ್ರಕೇಳುತ | 
ಇಟ್ಟ  ವ್ರತವದೇನು ಪ್ರಯೋಜನ | 
ನಷ್ಟವಿಲ್ಲದೆ ಎಲ್ಲವನು ಪೇಳುವೆನು ಕೇಳೆಂದ ||
ಮೊದಲು ನಾನವನೊಬ್ಬ ಬಡವನು | 
ವಿಧದಿ ಭಿಕ್ಷೆಯ ಬೇಡುತಿರಲು | 
ಮುದದಿ ಪ್ರಭುವಿನ ಪುಜೆಯಿಂ ನೆಮ್ಮದಿಯ ಪಡೆದಿಹೆನು ||
ವ್ರತ ವಿಧಾನವನೆಲ್ಲ ಕೇಳುತ | 
ಕ್ರೆತ ಹರ್ಷಿತ ಕೇಳಿ ಮಹತಿಯ | 
ಪ್ರೀತನಾಗಿಯೆ ಕಟ್ಟಿಗೆಯ ಮಾರಲು ಹೊರಡುತಿರಲಾಗಿ ||
ಸಂಕಲ್ಪ ಸಿದ್ಧಿಯು ಆಗುತಿರಲು | 
ಸಂಕಲದಿ ಶ್ರೀಮಂತರೋಣಿಗೆ | 
ಸಂಕಲ್ಪದಿಂದಲೇ ಎರಡು ಪಟ್ಟು ಹಣವು ದೊರೆತಿರಲು ||
ಸಂತುಷ್ಟನಾಗಿಹ ಕಾಷ್ಠ ಕ್ರೆತನು | 
ಸಂತೋಷದಿಂದಲಿ ಸತ್ಯ ದೇವರ | 
ಹಂತ ಹಂತದಿ ಸತ್ಯ ಪ್ರಭುವಿನ ವ್ರತವ ಮಾಡುತಲಿ ||
ಬಂಧು ಬಾಂಧವರೊಡನೆ ಕೂಡಿ | 
ಹೊಂದಿ ವಿಧಿ ವಿಧಿಯುಕ್ತ ಪೂಜಿಸಿ | 
ಸಂದಿರಲು ಸಂಪತ್ತು ಸಂತತಿ ಪಡೆದನಂತ್ಯದಲಿ ||
ಎಲ್ಲರಿಷ್ಟಾರ್ಥವನೆ ಪೂರ್ಣವು | 
ಇಲ್ಲ ಕಲಿಯುಗದನ್ಯ ಪೂಜೆಯ | 
ನಿಲ್ಲು ವ್ರತ ಸ್ಕಂದ ರೇವಾಖಂಡ ದ್ವಿತೀಯ ಕಥೆ ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ದ್ವಿತಿಯೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )

ಅಥ ತೃತೀಯೋಧ್ಯಾಯಃ 
ಶೌನಕರೆ ಕೇಳಿ ಮತ್ತೊಂದು ಕಥೆಯನು | 
ತಾನೇ ಉಲ್ಕಾಮುಖನು ರಾಜನು | 
ದಾನಿ ಬುದ್ಧಿ ಸತ್ಯ ಶಾಲಿ ಪ್ರಜಾ ತತ್ಪರನು  || 
ಅವನ ಸತಿ ಸರೋಜ ವದನೆಯು | 
ಇವರು ಸಂಕಲ್ಪಿತರು ಪೂಜೆಗೆ | 
ಅವರು ವ್ರತವನು ಭದ್ರಶಿಲಾ ನದಿಯ ತಟದಲ್ಲಿ ||
ಇಷ್ಟ ಮಿತ್ರರು ಬಂಧು ಜೊತೆಯಲಿ | 
ನಿಷ್ಠೆಯಿಂದಲಿ ಸತ್ಯ ದೇವರ | 
ಸ್ಪಷ್ಟವಿರೆ ದಂಪತಿಗಳಿವರು ಪೂಜೆ ಗೈದಿಹರು ||
ನದಿಯ ದೆಸೆಯಿಂ ವಣಿಜನೊಬ್ಬನು | 
ಮುದದಿ ರಾಜನ ಪೂಜೆ ನೋಡಿರೆ | 
ಪದಕೆರಗಿ ನೃಪನ ಕೇಳಿದ ಯಾವ ವ್ರತವಿಹುದು ||
ವಣಿಜ ವ್ಯಾಪಾರವನು ಮಾಡುತ | 
ಧನವತುಂಬಿದ ಹಡಗದೊಡೆಯನು | 
ಜನರ ಸಂದಣಿ ನೋಡಿ ನಾವೆಗಳನೆ ನಿಲ್ಲಿಸಿದ ||
ಸಾಧು ವಣಿಜನೆ ಸತ್ಯದೇವರ | 
ಮೇದಿನಿಯ ಸಮನಿಲ್ಲ ವಿಷ್ಣುವ  | 
ಕಾದು  ಬಳಗವ ಕೂಡಿ ವ್ರತವನ್ನು ಗೈದಿಹೆನು  ||
ಸತ್ಯ ಪ್ರಭುವಿನ ವ್ರತದಿ ಸಕಲವ | 
ಭೃತ್ಯನಾಗಿಹ ನಾನು ಈ  ವ್ರತ  | 
ನಿತ್ಯ ಸತ್ಯವು  ಪುತ್ರ ಧನ ಕನಕಾದಿ ಲಭಿಸುವವು ||
ರಾಜನಿಂ ಪ್ರೇರಿತನು ವೈಶ್ಯನು | 
ತೇಜದಿಂ ಅಣಿಯಾಗಿ ಪೂಜೆಗೆ | 
ನೈಜವಾಗಿಯೇ ನನಗೆ ಸಂತತಿಯೋಗ ಬೇಕೆಂದ ||
ಮುಂದುವರಿಯದೆ  ವಣಿಜ ತಿರುಗಿ  | 
ಸಂಧಿಸಿಯೇ ತಾ ಮಡದಿ ಬಾಂಧವ |  
ನಿಂದು ಸತಿಯಲಿ ವ್ರತದ ರೀತಿಯನು ಪೇಳಿದನು ||
ನಾವು ಸಂತತಿಗಾಗಿ ವ್ರತವನು | 
ಆವ ಪೂಜೆಯು ಸತ್ಯ ದೇವರ | 
ನಾವು ಸಂತತಿ ಯಾದ ಕೂಡಲೇ ವ್ರತವ ಮಾಡೋಣ   ||
ಸತಿಯು ಲೀಲಾವತಿಗೆ ಸಂಭ್ರಮ |  
ಅತಿಯ ಆನಂದದಲಿ ಇರುತಿರೆ |  
ವ್ರತೆಯಲಂಕುರ ಬೆಳೆಯುತಿರ್ಪುದು ದೇವನುಗ್ರಹದಿ ||
ಬಳಿಕ ದಶಮಾಸದಲಿ ಹೆಂಡತಿ  | 
ಬೆಳೆದ ಗರ್ಭದಿ ಕನ್ಯೆ ಪ್ರಸವಿಸಿ |  
ಬೆಳೆವ ಶಿಸುವು ಶುಕ್ಲ ಪಕ್ಷದ ಚಂದ್ರನಂತಿಹುದು  ||
ಕನ್ಯೆ ಹೆಸರದು ಕಲಾವತಿಯೇಂ | 
ಮುನ್ನ ಇಟ್ಟಿರೆ ನೆನಪು ಸತಿಯಲಿ |  
ತನ್ನ ಗಂಡಗೆ ಸತ್ಯ ದೇವರ ಬಗ್ಗೆ ನೆನಹಿದಳು  ||
ಸಂತತಿಯ ನಂತರದಿ ಪೂಜೆಯು | 
ಸಂತಸದಿ ಮಾಡುವುದಾಗಿ ಕಲ್ಪಿಸಿ | 
ಅಂಥಹ ವೃತ ನಾವು ಮಾಡುವುದೆಂದು ಕೇಳಿದಳು ||
ಹೆಣ್ಣು ಮಗುವಿದು ಲಗ್ನ ಸಮಯದಿ | 
ಇನ್ನು ವೃತ ಮಾಡುವುದು ಎನ್ನಲು | 
ತನ್ನ ವ್ಯಾಪಾರದಲಿ ವ್ಯಾಪ್ತಿ ಬಗೆಯ ಚಿಂತಿಸುತ ||
ದಿನಗಳೊಂದಿಗೆ ಕಲಾವತಿಯಲಿ | 
ಸುನಯ ಮುದದಿಂ ಬೆಳೆಯುತಿರಲು | 
ಮನಸು ದೇಹಗಳೆರಡುಪಕ್ವದಿ  ಪ್ರಾಪ್ತಳಾಗಿಹಳು ||
ಉಪವರನ ಶೋಧನೆಗೆ ವಣಿಜನು | 
ಉಪಾಯದಿ ದೂತರನು ಕಳುಹಿಸಿ | 
ನೆಪವ ತೋರದೆ ದೂತ ಕಾಂಚನಪುರಕೆ ಕಳುಹಿದನು ||
ವರ ಕುವರ ಜೊತೆ ತಿರುಗಿ ದೂತನು | 
ವರನು ಸದ್ಗುಣಿ ಎಂದು ತಿಳಿದು | 
ವರನ ಬಗೆಯೆ ತೋಷದಿಂ ಮಡದಿಯನು ಕರೆದರುಹಿ  ||
ಇಷ್ಠ ಬಾಂಧವರೆಲ್ಲ ಕರೆದು ತಾ - | 
ನಿಷ್ಠೆ ಆನಂದದಲಿ ಮಗಳನು | 
ಇಷ್ಟ ವರನಿಗೆ ಕೊಟ್ಟು ವಿವಾಹ ಮಾಡಿದನು  ||
ಲಗ್ನಸಮಯವು ತೀರಿ ಹೋಯಿತು | 
ಮಗ್ನದಲಿ ವ್ರತ ಮರೆತು ಹೋಗಿ ಉ- | 
ದ್ವಿಗ್ನದಲಿ ಸತ್ಯದೇವರ ಪೂಜೆ ಮರೆತಿರಲು ||
ಮನೆಯ ಅಳಿಯನ ಮಾಡಿಕೊಂಡಿರೆ | 
ಮನದಿ ಹರ್ಷಿತ ಅಳಿಯ ನಡೆಯಿಂ  | 
ವಿನಯಿ ಕುಶಲಳಿಯ ಜೊತೆ ವ್ಯವಹರಿಸಲನುವಾಗಿ||
ಸಿಂಧು ಸನಿಹದ ತಟದಿ  ಈರ್ವರು | 
ಬಂದು ರತ್ನಸ್ಸಾರ ಪುರದೊಳು | 
ನಿಂದು ಸಾಧು ಅಳಿಯ ಜೊತೆ ವ್ಯಾಪಾರ ಬೆಳೆಸುತಲಿ ||
ಚಂದ್ರಕೇತು ಎಂಬ ಅರಸನು | 
ಇಂದ್ರ ರತ್ನಸಾರ ಪುರವನು | 
ಮಂದ್ರದಿಂ ವ್ಯವಹರಿಸಲೀರ್ವರು ಶುಧ್ಧ ಮನದಿಂದ ||
ವಚನ ತಪ್ಪಿದ ಸಾಧು ವಣಿಜಗ | 
ರಚಿತ ಕಷ್ಟವು ಪ್ರಾಪ್ತವಾಗಿರೆ | 
ರಚನೆ ದೇವರ ಲೀಲೆಯದು ಶಾಪವಾಗಿರಲು ||
ಒಂದುದಿನ ಅರಮನೆಗೆ ಕಳ್ಳರು | 
ಸಂದು ದೋಚಿದ ವಸ್ತುಗಳ ಜೊತೆ | 
ಬಂದು ಕಳ್ಳರು ಸಾಧು ವಣಿಜನ ಸದನದಲಿ ಬಿಸುಟು ||
ಭಟರು ತಸ್ಕರರೊಡನೆ ಅಟ್ಟಿರೆ | 
ತಟದಿ ವಾಸಿಸುತಿದ್ದ ವಣಿಜನ | 
ದಿಟದಿ ತನ್ನಯ ಸದನದಲಿ ಕಳವಾಗಿರ್ಪ ವಸ್ತುಗಳ ||
ಸಾಧು ಅಳಿಯರೇ ಕಳ್ಳರೆಂತಲೂ | 
ಸಾಧ್ಯ ಕಳವಿನ ವಸ್ತು ಜೊತೆಯಲಿ | 
ಸಾಧಿಸಿಬ್ಬರ ಎಳೆದು ತಂದರು ರಾಜಭಟರವರು||
ರಾಜಧನ ಜೊತೆ ಭಟರು ಕಳ್ಳರ | 
ರಾಜಮುಂದಲೇ ತಂದು ನಿಲ್ಲಿಸಿ | 
ರಾಜಮಂದಿರಕಳವು ಮಾಡಿದ ರೀರ್ವತಸ್ಕರರ ||
ದೂತ ಮಾತನು ಕೇಳಿರಾಜನು | 
ಆತ ಯಾವ ವಿಚಾರ ಮಾಡದೇ | 
ಮಾತು ಕಾರಾಗೃಹದ ಶಿಕ್ಷೆಯ ವಿಧಿಸಿ ಬಿಟ್ಟರಲಿ ||
ಸಾಧು ಮಾತನ್ನೊಂದು ಕೇಳದೆ | 
ವಿಧಿಸಿರಲು ಕಾರಾಗೃಹದ ಶಿಕ್ಷೆಯು | 
ಸಾಧು ದ್ರವ್ಯವು ನೃಪನ ಸ್ವಾಧೀನ ವಾಯಿತದು ||
ಕಳವು ಆಗಿರೆ ವಣಿಜ ಮನೆಯಲಿ | 
ಸ್ಥಳದಿ ಧನವದು ಎಲ್ಲ ಹೋಯಿತು | 
ನಿಲುವು ದುಃಖವು ತಾಯಿಮಗಳಲಿ ತಾಪಉಂಟಾಗಿ ||
ವಿಧಿಯ ಕೋಪಕೆ ಹೊಟ್ಟೆಗಿಲ್ಲದೆ | 
ಆದಿ ವ್ಯಾಧಿಗಳಿಂದ ದುಃಖಿತ | 
ಏದುಸಿರು ಬಿಡುತಲೇ ಇಬ್ಬರೊಟ್ಟಿಗೆ ಭಿಕ್ಷೆ ಬೇಡುತಲಿ ||
ತಾಯಿತೆರ ಮಗಳು  ದುಃಖಿತ | 
ನಾಯಿ ಪಾಡೆಂದೆನುತ ಭಿಕ್ಷೆಗೆ | 
ಆಯತಪ್ಪಿದ ಹಸಿವೆ ಬಳಲಿಕೆಯಿಂದ ಬೆಂಡಾಗಿ ||
ಅಲ್ಲಿ ನಡೆದಿಹ ಪೂಜೆ ನೋಡುತ | 
ಇಲ್ಲ ಅನ್ಯವು ಕಥೆಯ ಕೇಳುತ | 
ಸಲ್ಲು ಸತ್ಯದೇವ ಪ್ರಾಸಾದವನೆ ಸ್ವೀಕರಿಸಿ ||ಕಥೆಯು ವ್ರತವನ ಕೇಳಿನೋಡಿರೆ | 
ಅತಿಯಾದ ರಾತ್ರಿಯಲಿ ಮನೆಯೆಡೆ | 
ಮಾತೆ ಕೋಪಲಿ ಮಗಳ ಕೇಳಿದಳು ದುಃಖದಲಿ ||
ಹರೆಯದ ಮಗಳು ಹೊರಗಡೆ | 
ಹೊರಗೆ ಸರಿ ರಾತ್ರಿಯೊಳು ಉಳಿಯಲು | 
ಕರದಿ ಭಿಕ್ಷಾ ಪಾತ್ರೆ ಕೊಟ್ಟಿದೆ ತನ್ನ ತಪ್ಪೆಂದು ||
ಸಂಶಯವು ಇರೆ ತಾಯಿ ಮಗಳಲಿ | 
ಸಂಶಯದ ಕಳವಳದಿ ವ್ರತವ ನಿ:_ | 
ಸಂಶಯದಿ ದ್ವಿಜರಲ್ಲಿ ಸತ್ಯದೇವ ವ್ರತಒಂದ ||
ಸಾದ್ಯಂತ ಪೂಜೆಯನು ನೋಡುತ | 
ಆದ್ಯಂತ ಕಥೆಯನ್ನೆ ಕೇಳುತ |  
ವಿದ್ಯಮಾನ ಪ್ರಸಾದ ಕೊಂಬರುವುದಕೆ ಹೊತ್ತಾಗಿ ||
ಸತಿಯು ಲೀಲಾವತಿಗೆ ನೆನಪಲಿ | 
ವ್ರತದ ಸಂಕಲ್ಪವದು ಮಾಡಿದ | 
ಕಥೆಯು ಪೂಜೆ ಸತ್ಯ ದೇವರ ಮಾಡುತೆಂದರುಹಿ ||
ಬಂಧು ಬಾಂಧವರೊಡನೆ ಸತಿಯಳು | 
ಬಂದ ಕಷ್ಟವ ದೂರಗೊಳಿಸಲು | 
ಮಿಂದು ಸತ್ಯ ದೇವ ವ್ರತವನೆ ಮಾಡಲುದ್ಯುಕ್ತ ||
ಪತಿಯು ಅಳಿಯನು ಮನೆಗೆ ಬರಲಿ | 
ಸತಿಯು ಪ್ರಾರ್ಥಿಸೆ  ಸತ್ಯ ದೇವರ | 
ಪತಿ ಅಳಿಯರಪರಾಧವ ಕ್ಷಮಿಸೆಂದು ಬೇಡಿದಳು ||
ಇತ್ತ ದೇವರ ಪೂಜೆಯಾಗಲು | 
ಸತ್ಯ ಪ್ರಭುವಿನ ಕೃಪೆಯು ಹೊಂದಿರೆ | 
ಅತ್ತ ರಾಜಗೆ ಕನಸು ಬಿದ್ದಿಹುದು ಸೂಕ್ಷ್ಮಮದಲಿ ||
ನೃಪನೆ ನೀ ಬಂಧನದಲ್ಲಿ ಇಟ್ಟಿಹ | 
ಕಪಟ ಕಳ್ಳರು ಅವರು ಅಲ್ಲವೇ | 
ನೆಪವ ಹೇಳದೆ ಅವರನ್ನು ಆದರದಿ ಬಿಡುಎಂದು ||
ತೆಗೆದು ಕೊಂಡಿಹ ಅವರ ದ್ರವ್ಯವ | 
ಮಿಗಿಲು ಇನ್ನೊಂದಿಷ್ಟು ಕೂಡಿಸಿ | 
ಹೀಗೆಮಾಡೆ ನಿನ್ನ ಸಂಪತಿ ಅಳಿಯದು ಜೋಕೆ ? ||
ಸ್ಮರಣದೊಳು ಇರುವ ಕನಸವ | 
ಸರಣಿ ಬಿಡದಲೆ  ಜಾವರಾಜನು | 
ಭರದಿ ಓಲಗದಲ್ಲಿ ಮಂತ್ರಿಗಳನೆ ಪೇಳಿದನು ||
ಎಲ್ಲರಾಲೋಚನೆಯ ನಿರ್ಣಯ | 
ಸಲ್ಲದಲಿ ಬಂಧನದಿ ಇರಿಸಲು | 
ನಿಲ್ಲಿಸಲು ನೃಪನ ಎದುರಲ್ಲಿ ಈರ್ವರನು  ||
ಭಯಭೀತರಾ ಸಾಧು ಅಳಿಯರ | 
ದಯವ ತೋರುತ ಕ್ಷೌರ ಕರ್ಮವ | 
ಭಯವಬಿಡಿ ನಿಮಮೇಲೆ ದೇವರ ಕೃಪೆಯು ಉಂಟಾಗಿ ||
ಅವರ ವಸ್ತ್ರಾಭರಣಗಳನೆ ಇತ್ತು | 
ದ್ರವ್ಯ ಅವರದು ಮತ್ತೆ ತನ್ನದು | 
ದ್ರವ್ಯಭರಿಸಿದೆ ನಿಮ್ಮ ತಾಣಕೆ ಪೋಗೇಂದು ಬಿಳ್ಕೊಟ್ಟ ||
ಎಲ್ಲರಿಷ್ಠಾರ್ಥವನೆ ಪೂರ್ಣವು | 
ಆಳರಸಲಿ ವಂದಿಸಿಯೇ ವಣಿಜನು | 
ನಿಲ್ಲು ಸ್ಕಂದ ರೇವ ಖಂಡ ತೃತೀಯ ಕಥೆಯಿರಲು  ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ತ್ರಿತಿಯೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )

ಅಥ ಚತುರ್ಥೋಧ್ಯಾಯಃ      
ತೃತೀಯ ಸಂಧಿಯೇ ಮುಂದು ವರಿಯುತ | 
ತತ್ಪ್ರಭಾವದಿ ಮುಕ್ತ ರಾಗಿಹ | 
ಸತ್ಯ ದೇವರು ಈರ್ವರನು ವೀಕ್ಷಿಸುವುದೆಂದು ||
ಸನ್ಯಾಸಿ ರೂಪದ ಸತ್ಯಪ್ರಭುಗಳು | 
ಇನ್ನೇನು ಇರುವುದು ನಿನ್ನಹಡುಗದಿ | 
ಸನ್ಯಾಸಿ ಇರ್ಪನೀನು ದ್ರವ್ಯಹರಣ ಮಾಡುವಿಯಾ ||  
ನಮ್ಮ ಹಡುಗಲಿ ಬೇರೇನು | 
ಇಲ್ಲದೆ ಸುಮ್ಮನಿರು ಎಲೆ ಬಳ್ಳಿ ಇರ್ಪವು | 
ನಿಮ್ಮ ಗರ್ವದ ನುಡಿಯಂತೆ ಆಗಲಿ ಎಂದನಾದೇವ ||
ಭೋಜನವು ನಿಜ ನಿತ್ಯ ಕರ್ಮವ | 
ಯೋಜನೆಯ ತೆರ ತೆರಳಲನುವಾ - |
ನಿಜವಾಗಿಯೇ ಹಡಗಿನಲಿ ಎಲೆ ಬಳ್ಳಿ ಗಳಿದ್ದವವು ||
ದ್ರವ್ಯ ಹೋಗಿ ಎಲೆ ಬಳ್ಳಿಯಾಯಿತು |
ಆವ ದೃಶ್ಯವ ಕಂಡು ಮೂರ್ಛಿತ |
ದ್ರವ್ಯ ಹೋಗಿಯ ಚಿಂತೆಯಲಿ ಬಳಲಿ ಹೊಗಿಹನು ||
ಶೋಕ ಮಾಡಲು ಏನು ಕಾರಣ ?| 
ಯಾಕೆ ಸನ್ಯಾಸಿಯಲಿ ಸುಳ್ಳನು | 
ಬೇಕು ಬೇಕಂತಲೆಯೇ  ಹೇಳಿದುದಕ್ಕೆ ಶಾಪವಿದು ||
ಅವನ ಆಶೀರ್ವಾದ ದಿಂದಲೆ |
ಅವೆಲ್ಲವನೆ ಹಿಂದಿರುಗಿ ಪಡೆಯಲು ನಾವು | 
ಅವನಲಿ ಶರಣು ಹೋದರೆ ಪಡೆಯ ಬಹುದೆಂದ ||
ಅಳಿಯ ಮಾತನು ಕೇಳಿ ಸಾಧುವು | 
ಬಳಲಿ ಸನ್ಯಾಸಿಯನು ಕಂಡಿರೆ | 
ಬಳಿಕ ಪಾದಕೆ ಎರಗಿ ಕ್ಷಮೆಯನು ತಾನೇ ಬೇಡಿದರು||
ಅಸತ್ಯನಡಿದ ಮನುಜ ನೀನು | 
ಆ ಸತ್ಯ ಪೂಜೆಯ ಆಡಿ ತಪ್ಪಿದೆ | 
ಅಸತ್ಯ ಹೇಳಿಕೆಯಿಂದಲೇ ದುಃಖ ಭೋಗಿಸುವಿ ||
ಬ್ರಹ್ಮಾದಿ ದೇವತೆಗಳಿಗೆ ತಿಳಿಯದ | 
ಕಮ್ಮಟದ ಕರ್ತನೆ ನಿನ್ನ ಲೀಲೆಯ | 
ಅಹಂಭಾವದ ಪಾಮರ ನಾನೆಂತು ತಿಳಿಯುವುದು ||
ಮೂಢ ನಾ ನಿನ್ನಯ ತಿಳಿಯಲಾರೆ | 
ಆಢ್ಯದಿಂದಲೆ ತಪ್ಪು ಹೇಳಿದೆ | 
ಮೂಢನಾಗಿಹ ನಮ್ಮಗಳ ಕ್ಷಮಿಸೆಂದು ಬೇಡಿದನು ||
ಪೂರ್ಣ ಶರಣಾಗತಿಯ ಹೊಂದಿರೆ | 
ಪೂರ್ಣ ದ್ರವ್ಯವನೆಲ್ಲ ಖರ್ಚಿಸಿ | 
ಪೂರ್ಣತ್ವ ವ್ರತವನು ವಿಜ್ರುಭಿಸಿ ಮಾಡಿ ಮುಗಿಸಿದನು ||
ಸತ್ಯದೇವರ ಕೃಪೆಯ ಫಲದಿಂ |  
ಸತ್ಯವಾಗಿಯೇ ನೌಕೆ ದ್ರವ್ಯದಿ | 
ಸತ್ಯಸಂಭ್ರಮದಿಂದ ತನ್ನಯ ಪುರಕೆ ಪಯಣಿಸಿದ ||
ಮಾರ್ಗ ಕ್ರಮಿಸುತ ರತ್ನಪುರಿಯೆಡೆ ವಿ - | 
ಸರ್ಗ ದೂತರ ಕಳಿಸಿ ಮನೆಯಲಿ | 
ನಿರ್ಗತಿಸೆ ಬಂದಿಹ ವಾರ್ತೆ ಹರ್ಷಮಾನಸದಿ ||
ಸತಿಯು ಸತ್ಯ ದೇವಪೂಜೆಯ | 
ಪತಿಯು ಅಳಿಯರು ಬಂದುಬಿಟ್ಟರು | 
ಕತೆಯು ಈ ದಿನದಂದೆ ಮಾಡಿದುದ ದಿಟವಹುದು ||
ಪೂಜೆತಿರ್ಥ ಪ್ರಸಾದ ಸೇವಿಸಿ | 
ಭಜಿಪ ವ್ರತವನು ಮಗಳಿಗರುಹಿ | 
ನೈಜ ಪೂಜೆ ಪ್ರಸಾದಗೊಂಡು ಬೇಗ ಬಾ ಎಂದು ||
ಮಗಳು ಪೂಜೆಯ ಮಾಡಿ ಗಡಿಬಿಡಿ | 
ಅಗಲಿದಾ ಪತಿಯನ್ನು ಸಂಧಿಸೆ |   
ಆಗ ಪ್ರಸಾದವನೆ ಸ್ವೀಕರಿಸದೆ  ಪೋಗಿಹಳು||
ಇತ್ತ ನದಿ ದಂಡೆಯಲಿ  ಅಘಟಿತ | 
ಎತ್ತ  ನೋಡಲು ಅಳಿಯ ನೌಕೆಯ | 
ಎತ್ತ ಕಾಣದೆ ಸಾಧು ದಂಪತಿ ಮೂರ್ಛೆ ಹೋಗಿಹರು ||
ದ್ರವ್ಯ ಸಹಿತದಿ ನೌಕೆ ಅಳಿಯರು | 
ಆವುದದು  ತಾ ಕಾಣದಿರಲು | 
ಆವ  ದುಃಖದಿ ಧರೆಗೆ ಬಿದ್ದಿಹ ಮಗಳ ನೋಡಿರಲು||
ಭಯಗ್ರಸ್ತನು ವಣಿಕ ಚಿಂತೆಯ ಅ -| 
ಳಿಯ ನೌಕೆಯ  ಸಹಿತ ಮುಳುಗಲು |
ನಿಯತಿ ತಪ್ಪಿದ ದೇವ ಕೋಪಕೆ ಹೀಗೆ ಆಗಿಹುದು ||
ಮಗಳು ತಾಯಿಯು ದುಃಖದಿಂದಲೆ | 
ತೆಗಳಿ ದೇವರ ಮಾಯೇ ಕಂಡೆವು | 
ಮಿಗಿಲು ಇನ್ನೇನಿಹುದು ಎಂ ಭಯದಿ ಕಂಪಿತರು ||
ಮಗಳು ಪತಿ ಪಾದುಕೆಗಳೊಂದಿಗೆ ಸ- | 
ಹಗಮನ ಮಾಡುವುದಕ್ಕೆ ಸಿದ್ಧಳು | 
ಹಗೆ ಯಾರದು ನನ್ನ ಮೇಲೆ ತಿಳಿಯದದು ಎಂದ ||
ಸಂತಪ್ತದೊಳ್ ಸಾಧು ಬಣಜಿಗ | 
ಸಂತಪ್ತ ಸತ್ಯ ಪ್ರಭುವ ಮಾಯೆಯ | 
ಸಂತಸದಿ ಸೇವೆ ಮಾಡುವೆನು ಅಳಿಯ ನೋಡಿರಲು ||
ನಮ್ರತೆಯ ಬೇಡಿಕೆಯು ದೀವಗೆ |
ನಮನದಿಂ ಭಗವಂತ ತುಷ್ಟನು |
ಗಮನ ಗಗನ ಧ್ವನಿಯು ಕೇಳಿತು ಯೆಲ್ಲರಚ್ಚರಿಯ ||
ಮಗಳು ಸದನದಿ ಪೂಜೆಗೈದಿರೆ |
ಬೇಗ ಪತಿಯನು  ಕನುವುದಕೆ | 
ವೇಗದಿಂ ಬರುವುದಕೆ ಪ್ರಸಾದ ತ್ಯಜಿಸಿದಳು ||
ಪತಿಯ ಜೊತೆ ನೌಕೆಯದು ಕಣ್ಮರೆ | 
ಸತಿಯು ತೀವ್ರದಿ ಮನೆಗೆ ಹೋಗಿರೆ |
ಅತಿ ಬೇಗ ಪ್ರಸಾದಗೊಂಡಿರೆ ಪತಿಯ ಕಾಣುವಳು ||
ಮನೆಗೆ ತೆರಳಿದ ಕಲಾವತಿಯಳು |  
ವಿನಯದಿಂ  ಪೂಜೆ ಗೈದಿರೆ | 
ಮನದಿ ನೈವೇದ್ಯವನೆ ಸ್ವೀಕರಿಸಿ ಬಂದಿಹಳು ||
ನೌಕೆ ಅಳಿಯರು ಪೂರ್ಣ ಕಂಡಿರೆ | 
ಆಕೆ ಎಲ್ಲರಲಿಯು ನಮಿಸುತ |
ಸಾಕು ಮನೆಗೆ ಹೋಗಿ ಪ್ರಭುವಿನ ಪೂಜೆ ಮಾಡೋಣ ||
ತೋಷದಿಂ ಬಣಜಿಗನು ಪೂಜೆಯ | 
ಮೇಷವೆನಿಸದೆ ವೆಚ್ಚ ಮಾಡುತ | 
ವಾಸಮಾಡಿಹರೆಲ್ಲ ಬಾಂಧವರೊಡನೆ ಒಡಗೂಡಿ  ||
ವಾಣಿ ಬಣಜಿಗ ವ್ರತವ ಮಾಡುತ |
ಕಾಣೆ ಆಮರಣಾಂತ ಪೂಜೆಯ | 
ಮಾಣಿ ಇಹ ಸುಖ ಭೋಗಿ ಅಂತ್ಯದಿ ಮೋಕ್ಷವ ಪಡೆದ ||
ಎಲ್ಲರಿಷ್ಟಾರ್ಥವನೆ ಪುಣ್ಯದಿ | 
ಇಲ್ಲ ಕಲಿಯುಗದನ್ಯ ವ್ರತವದು | 
ನಿಲ್ಲುವುದು ಸ್ಕಂದ ರೇವಾಖಂದ ಚತುರ ಕಥೆ ||
ಇತಿ ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ಚತುರ್ಥೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )

ಅಥ ಪಂಚಮೋಧ್ಯಾಯಃ 
ಶೌನಕರೆ ಕೇಳಿ ಒಂದು ಕಥೆಯನು | 
ತಾನೆ ಅಂಗಧ್ವಜನೆ ರಾಜನು | 
ಮಾನ್ಯ ಮಾಡದೆ ಇರುವ ರಾಜನ ಬವಣೆ ಹೇಳುವೆನು ||
ಪ್ರಜರ ಪಾಲನೆಯಲ್ಲಿ ತತ್ಪರ | 
ವಿಜಯ ಗೈಯುತ ರಾಜ್ಯವಾಳುತ |
ನಿಜದಿ ಒಂದಿನ ಬೇಟೆಯಂದಡವಿಯೆಡೆ  ಹೊರಟ ||
ಬೇಟೆಯಾಡಿಯೆ ದಣಿದ ನೃಪನು | 
ಅಟವಿಯಲಿ  ವ್ಯಾಘ್ರಾದಿ ಮೃಗಗಳ | 
ಮಟ್ಟ ಮಧ್ಯಾಹ್ನದಲಿ ಒಂದೆಡೆಯಲ್ಲಿ ವಿಶ್ರಮಿಸಿ ||
ಆಟವಿ ದನಗಾಹಿಗಳು ಪೂಜೆಯ | 
ವಟ ವೃಕ್ಷ ದಡಿಯಲ್ಲಿ  ಮಾಡಿರೆ | 
ದಿಟದಿ ಬಾಲರು ಜಲ ಹಸಾದವ ರಾಜ ಮುಂದಿಟ್ಟು ||
ಅಡವಿ ಬಾಲರ ಪೂಜೆಯಲ್ಲವೆ ? | 
ಪೂಡವಿಪಗೆ ಆಢ್ಯತೆ ಯೊಂದುಬಂದು |
ಪೊಡಮಡದೆ ಹಸಾದಗೊಳ್ಳದೆ ತಿರುಗಿ ಊರೆಡೆಗೆ||
ದನಗಾಹಿಗಳು ಪ್ರಸಾದ ಸೇವಿಸಿ | 
ವಿನಯ ವ್ರತ ಸಾಂಗತವ ಮಾಡಿರೆ |
ಮಾನ ಅಪಮಾನವದು ಸತ್ಯ ಪ್ರಭುವಿಗಾಯಿತದು ||
ನೂರು ಜನ ಪುತ್ರ ರಾಜ್ಯವ | 
ಸೇರು ಸಂಪತ್ತೊಂದು ಉಳಿಯದೆ  | 
ಮಾರು ಧನ ಧಾನ್ಯವನು ಕಳೆದಿರೆ ದುಃಖ ಗೊಳ್ಳುತಲಿ ||
ದೇವ ಕೋಪವ ತಿಳಿದು ರಾಜನು | 
ಅವ ದೇವ ಪ್ರಸಾದ ತ್ಯಜಿಸಿರೆ | 
ಈವ ದೇವನೆ ತೆಗೆದುದಂದರಿತು ಹೋಗಿಹನು ||
ಬಾಲ ಅಟವಿಕರಲ್ಲಿ ನೃಪ ಆ -| 
ಗಲೇ ಮಾಡಿದ ಪೂಜೆ ಹಸದವ | 
ಮೇಲೆ ಶ್ರಿಜಲ ಕೊಡಿರೆಂದು ಕೇಳಿದನು ||
ಆಟಪೂಜೆಯು ನಮ್ಮದು ದೊರೆ | 
ದಿಟದಿ ಪ್ರಸಾದವ ಎಲ್ಲಮುಗಿದಿರೆ |
ಆಟವಿಕರು ನಿಮಗೇನು ಕೊಡುವುದು ಎಂದುನಮ್ರದಲಿ ||
ರಾಜ ತಾನೆ ಮುಂದೆ ನಿಂತಿರೆ | 
ದ್ವಿಜರ ಕರೆದು ಬಾಲರಿಂದಲೆ |
ವ್ಯಾಜ್ಯ ವಿಲ್ಲದೆ ಸತ್ಯ ಪ್ರಭುವಿನ ವ್ರತವ ಮಾಡಿರಲು ||
ಪೂಜೆ ಮುಗಿಸಿ ಪ್ರಸಾದ ಸೇವಿಸಿ  | 
ನೈಜದೊಳು ಭೃತ ಭೃತ್ಯ ನಾಗಿರೆ | 
ರಾಜ್ಯ ಭೋಗವ ಮರಳಿ ಪಡೆ ಪುತ್ರರಾದಿ ಯಲಿ ||
ಸತ್ಯ ದೇವರ ಕೃಪೆಯು ಹೊಂದಿರೆ | 
ಸತ್ಯದಿಂ ಧನ ಧಾನ್ಯ ವೃಧ್ಯಿಯು | 
ನಿತ್ಯ ಇಹ ಲೋಕವನೆ ಭೋಗಿಸಿ  ಅಂತ್ಯ ಮುಕ್ತಿಯನು ||
ಯಾರು ವ್ರತ ಆಚರಣೆಗೈವರೋ | 
ಯಾರು ಶ್ರವಣ ಸಂಕೀರ್ತನೆ ಮಾಳ್ಪರೋ | 
ಸಾರ ಧನಧಾನ್ಯ ಪಡೆಧನವಂತನಾಗುವನು ||
ಬಧ್ಧ ನಿದ್ದವ ಮುಕ್ತ ನಾಗುವ | 
ಇದ್ದ ಭೂತದ  ಬಾಧೆ ನೀಗುವ | 
ಇದ್ದ ಇಷ್ಟಾರ್ಥವನೆ ಹೊಂದಿ  ಸುಖ ದುಃಖ ಕಡೆಗಾಗಿ ||
ಶೌನಕರೆ  ಎಲ್ಲ ಕಥೆಯ ಕೇಳ್ದಿರಿ  | 
ವಿನಯದಿಂ ಪೂಜೆಯನೆ ಮಾಳ್ಪುದು | 
ಮಾನ್ಯ ವ್ರತದಿಂ ಸತ್ಯ ಲೋಕವು ಪ್ರಾಪ್ತವಾಗುವುದು ||
ಕಲಿ ಯುಗದ ಈ ವ್ರತದ ಫಲವದು | 
ಹಲವು ನಾಮಗಳೆಲ್ಲ ಪ್ರಭುವಿಗೆ | 
ನಿಲುವಿನಲಿ ಸತ್ಯನಾರಾಯಣನ ಹೊಂದಿಹರು ||
ಸತ್ಯ ದೇವನೆ ಸತ್ಯ ಪ್ರಭುವೆ |
ಸತ್ಯ ಕಾಲನೆ ಸತ್ಯ ಈಶನೆ | 
ಸತ್ಯ ಶಂಕರ ವರದ ಶಂಕರನೆಂದು ಕರೆಯುತಿರೆ ||
ಭಕ್ತರಿಷ್ಟಾರ್ಥವನು ಪೂರ್ತಿಸಿ | 
ಭಕ್ತರಾರಿಷ್ಟಗಳ ದೂರಿಸಿ | 
ಭಕ್ತ ಪಾಪವ ನಷ್ಟಮಾಡುವ ವ್ರತವ ಪೇಳಿದೆನು ||
ವಿಷ್ಣು ನಾರದರಲ್ಲಿ ಪೇಳಿದ | 
ಜಿಷ್ಣು ಶೌನಕರಲ್ಲಿ ಕೇಳಿದ | 
ವಿಷ್ಣು ಕಥೆಯನು ಹೇಳು ಕೇಳುಗರೆಲ್ಲ ಮುಕ್ತಿಯನು ||
ಎಲ್ಲವನು ಒಳಗಿರುವ ರೂಪವೇ | 
ಲ್ಲರನು ಹೊಂದಿರುವ ಪ್ರಭುವೆ | 
ಎಲ್ಲ ಭಕುತರು ಕೇಳಿ ಕಥೆಯ ವೇದವ್ರತ ನಿಂದ ||
ಎಲ್ಲ ರಿಷ್ಟಾರ್ಥವನೆ ಪುಣ್ಯದಿ | 
ಇಲ್ಲ ಕಲಿಯುಗದನ್ಯ ವ್ರತವದು | 
ನಿಲ್ಲುವುದು ಸ್ಕಂದ ರೇವಾಖಂಡ  ಪಂಚ ಕಥೆ ||
ಇತಿ  ಶ್ರೀ ಸ್ಕಂದ ಪುರಾಣೆ ರೇವಾಖಂಡೆ ಶ್ರೀ ಸತ್ಯನಾರಾಯಣ ಕಥಾಯಾಂ ಪಂಚಮೋಧ್ಯಾಯಃ ಪುಂಡರೀಕ ವರದ ಹರಿ ವಿಠ್ಠಲ ಸೀತಾಕಾಂತಃ ಸ್ಮರಣ ಜಯ ಜಯ ರಾಮ || ಮಂಗಲಂ ಭಗವಾನ ವಿಷ್ಣು ಮಂಗಲಂ ಗರುಡ ಧ್ವಜ ಮಂಗಲಂ ಪುಂಡರೀಕಾಕ್ಷ ಮಂಗಲಾಯ ತನಂ ಹರಿಃ ಅನಂತ ಕೋಟಿ ಬ್ರಹ್ಮಾಂಡ ನಾಯಕ ದೇವ ದೇವೋತ್ತಮ ಕಪಟ ನಾಟಕ ಸೂತ್ರಾಧಾರ ಶ್ರೀ ಲಕ್ಷ್ಮೀ ರಮಣ ಗೋವಿಂದಾ ಗೋವಿಂದ ( ಘಂಟೆ ಜಾಗಟೆ ಸಹಿತ ಮಂಗಳಾರತಿ ಮಾಡಬೇಕು )

ವೇದವ್ರತ ( ಶ್ರೀ ವೇದವ್ಯಾಸಾಚಾರ್ಯ ಸೀತಾರಾಮಾಚಾರ್ಯ ಕಟ್ಟಿ ನಿವರಗಿ ಕೃತ)

ಶ್ರೀ ಕೃಷ್ಣಾರ್ಪಣಮಸ್ತು   
  
Readers can also search the following posts on the same topic





No comments:

Post a Comment