Monday, May 27, 2024

*Ba Ba Barai ಬಾ ಬಾ ಬಾರೈ ಬಾ ಬಾ ಬಾರೈ

           ಬಾ ಬಾ ಬಾರೈ ಬಾ ಬಾ ಬಾ ಬಾರೈ


ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ
ಬೇಗ ಬಾರೆಂದು ಭಕುತರು ಕರೆಯಲು ಹರಿ  |ಪ.|

ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ
ಶೇಷಶಯನ ಎನ್ನಪ್ಪನೆ ಬಾ 1

ಮತ್ಸ್ಯನಾಗಿ ಜಲದೊಳಾಡಿದವನೆ ಬಾ
ಕಚ್ಛಪವತಾರವ ಮಾಳ್ದನೆ ಬಾ 2

ಧರೆಗಾಗಿ ಜಲದೊಳಗಿಳಿದನೆ ಬಾ
ಹಿರಣ್ಯಕನುದರವ ಸೀಳ್ದನೆ ಬಾ 3

ಶಕ್ರನ ಪೊರೆದ ಶ್ರೀ ವಾಮನನೆ ಬಾ
ವಕ್ರನೃಪಾಲಕುಲಶಮನನೆ ಬಾ 4

ರಾವಣಾಂತಕ ರಘುರಾಮನೆ ಬಾ
ದೇವಕಿ ನಿಜಸುತ ಪ್ರೇಮನೆ ಬಾ 5

ಸತಿಯರ ವ್ರತವ ಕೆಡಿಸಿದನೆ ಬಾ
ಚತುರ ಕಲಿಯನೋಡಿಸಿದನೆ ಬಾ 6

ಹಯವದನಾಶ್ರಿತ ಶರಣನೆ ಬಾ
ಪ್ರಿಯಸುರ ಸೇವಿತ ಚರಣನೆ ಬಾ 7

No comments:

Post a Comment