Monday, May 27, 2024

*GURU Raghavendraru ಬ್ರಹ್ಮ ಪುಷ್ಪ

               ಬ್ರಹ್ಮ ಪುಷ್ಪ



ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ
ಹೇ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ
ಓಂ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ  
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ

ಶಂಕುಕರ್ಣನೆ ಕರ್ಮದೈವತ ಬ್ರಹ್ಮ ಮಾನಸ ಪೂಜೆಯೊಳು ಪರ | ಪಂಕಜಾಕ್ಷನ  ನುತಿಪ ಧ್ಯೇಯಕ್ಕೆ ಚ್ಯುತಿಯ ಕಂಡೊಡೆ ದೈತ್ಯ ಸಂಭವಿ  |  ಬ್ರಹ್ಮ ಪರಿಚಾರಕನೇ ಬಾರಯ್ಯ    ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ  ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ 1

ಸ್ಥಂಭ ಲಕ್ಷನೆ ಜನ್ಮ ವೈಷ್ಣವ ವೀರ ನೃಪ ಪ್ರಹ್ಲಾದ ಅವನಿಯ  ಸ್ಥಂಭ ಗೋಚರ  ಸಿಂಹನರನಲಿ ಪ್ರಣಿಪದಿಂ ಅಪರೋಕ್ಷ ಜ್ಞಾನಿಯೇ  |  ಬ್ರಹ್ಮ ಪರಿಚಾರಕನೇ ಬಾರಯ್ಯ   ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ. ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ 2

ಶಶಿಯ ವಂಶದ ಶ್ರೇಷ್ಟ ಯೋಧನೆ ಭಾಸ ವೈರೋಧ ದೊಳು ಬಾಹ್ಲಿಕ  | ಅಸುರ ಜರಸಂಧನಲಿ  ಆಶ್ರಯ ದೋಷದಿಮ್ ವೃಕಉದರ ಗದೆ ಹತ  | ಬ್ರಹ್ಮ ಪರಿಚಾರಕನೇ ಬಾರಯ್ಯ  ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ. ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ. 3


ವ್ಯಾಸವರ ಬ್ರಹ್ಮಣ್ಯ ತೀರ್ಥರೇ ನೃತ್ಯ ಪುತ್ಥಳಿನಾದ ದೈವತ  ಶ್ರೀಶ ಶಾಲಿಗ್ರಾಮ ಅರ್ಪಣ ಶೇಷಚಲ ಮತ ಮಧ್ವವಾದಿಯೇ | ಬ್ರಹ್ಮ ಪರಿಚಾರಕನೇ ಬಾರಯ್ಯ        ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ
ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ 4

ತೀರ್ಥ ಮಾಂಚಾಲದಲಿ ಪರಿಮಳ ಆರ್ಯ ರಾಘವ ಇಂದ್ರ ಪ್ರಜ್ಞರ | ತೀರ್ಥ ವೃಂದವನವು ವ್ಯಾಪ್ತದ ದೀರ್ಘ ತುಂಗೆಯ ಇಂದುಸುತ ಪ್ರಿಯ | ಬ್ರಹ್ಮ ಪರಿಚಾರಕನೇ ಬಾರಯ್ಯ  ಓಂ ಬ್ರಹ್ಮ ಬುಧನೇ ಬ್ರಹ್ಮ ಪರಿಚಾರಕನೇ ಬಾರಯ್ಯ.  ಹೇ ಬ್ರಹ್ಮ ಪುಷ್ಪವೆ ಬ್ರಹ್ಮನುಗ್ರಹಿ ಗುರುವೇ ಬಾರಯ್ಯ. 5

   || ಶ್ರೀ ಮದ್ ರಾಘವೇಂದ್ರಾರ್ಪಣಮಸ್ತು ||




No comments:

Post a Comment