2. Shri KATTI Dwaipayanacharyah GOV (प्रपितामह श्री द्वैपायनाचार्याः)
अस्मत् पितर: Shri Shridharacharyah
ತಂದೆ: ವೇದ ಶಾಸ್ತ್ರ ಸಂಪನ್ನ ಋಗ್ವೇದ ಸಂಹಿತಾ ಭಾಷ್ಯಾಚಾರ್ಯ. ಶ್ರೀ ಸೀತಾರಾಮಾಚಾರ್ಯ ದ್ವೈಪಾಯನಾಚಾರ್ಯ ಕಟ್ಟಿ ಉಮರಜಕರ
ತಾಯಿ: ಸೌ. ತುಳಸಾದೇವಿ ( ಸಾಕೀನ ನಿವರಗಿ ಗ್ರಾಮೋಪಾಧ್ಯಾಯರಾದ ಶ್ರೀ ಕೃಷ್ಣಾಚಾರ್ಯ ಭಂಡಾರಕವಠೆ ರವರ ಪುತ್ರಿ)
DOB. 04/04/1933
ಘಟನೆ- ೧. ವಿವಾಹ ಪರಿಣಯ
ತದ್ದೇವಾಡಿಯ ಅವ್ವ ( ತಾಯಿಯ ತಾಯಿ, ಗಂ.ಭಾ. ಗೋದುಬಾಯಿ ಬಾಪೂರಾಯ ಕುಲಕರ್ಣಿ ಅಜ್ಜಿ ತದ್ದೇವಾಡಿ ) ಹೇಳಿದ ಹಾಗೆ
ನಿವರಗಿಯ ಹೆಸರುವಾಸಿಯಾದ ವೇದ ಶಾಸ್ತ್ರ ಸಂಪನ್ನ ಶ್ರೀ ರಾಮಾಚಾರ್ಯ ತಿಕೋಟಿಕರ ರವರು ನಮ್ಮ ಅಜ್ಜ ಶ್ರೀ ಸೀತಾರಾಮಾಚಾರ್ಯರ ಗಳಸ್ಯ ಕಂಠಸ್ಯ ಮಿತ್ರರಾಗಿದ್ದು ಮನೆಗೆ ಬಂದಾಗ ತಂದೆಯವರನ್ನು ಕಂಡು " ಹುಡುಗನ್ನ ಚತುರ್ಭುಜ ಮಾಡಬೇಕಲಪಾ ಸೀತಾರಾಮ" ಎಂದು ಪ್ರಾರಂಭಿಸಿ.. ನಾ ಈಗ ಕೇರೂರ ಹಣಮಪ್ಪನ ಜಾತ್ರಿಗಿ ಹೊಂಟೀನಿ. ಜೊತೆಗೆ ಶ್ರೀ ಗುರುರಾಜ ಭಂಡಾರಕವಠೆ ಉಪಾಧ್ಯಾಯರೂ ಇದ್ದಾರ ಕೇರೂರ ಸಿದ್ದಪ್ಪನೇ ಎಲ್ಲಾ ವ್ಯವಸ್ಥಾ ಮಾಡ್ತಾನ. ಅಲ್ಲೆ ಸಮೀಪದ ತದ್ದೇವಾಡಿಯೊಳಗ ಅಣ್ಣಾರಾಯ ಕುಲಕರ್ಣಿ, ಬಾಪೂರಾಯ ಕುಲಕರ್ಣಿ ನಿನಗ ಗೊತ್ತಿದ್ದವರೇ ಗೋದಾವರಿ ಬಾಯಿ ಬಾಪೂರಾಯ ದಂಪತಿಗಳ ಮಗಳು "ಇಂದು" ಅಂತ ಹುಡುಗಿ ಇದ್ಧಾಳ ಉತ್ತಮ ಮನೆತನ, ಪರಿಚಯಿದ್ದು ಇಲ್ಲ ಅಂತಿಲ್ಲ, ಹರಿತಸ್ಯ ಗೋತ್ರ, ಪಂಚಾಂಗ ಅದು ಎಲ್ಲ ನೋಡೀದ ಕೂಡೆದ ನೀ, ತುಳಸಾಬಾಯಿ, ಹುಡುಗ ಅಷ್ಟು ನೋಡಿದ್ರೆ ಮುಗಿತಪಾ " ಊದಸೇ ಬಿಡೂಣು, ನಮ್ಮ ದಾದಾ (ಅಜ್ಜ) ಅಕ್ಕ (ಅಜ್ಜಿ) ಹೂಂ ಅಂದಕೂಡಲೇ ಶುಭಸ್ಯ ಶೀಘ್ರಂ ಅಂದು ತದ್ದೇವಾಡಿಗಿ ಹೋಗಿ ಕನ್ಯಾವಲೋಕನ ವ್ಯವಸ್ಥಾ ಮಾಡಕೊಂಡೆ ಬಂದ್ರಂತ.
अस्मत् मातृ: Sou. Indira devi
ಶ್ರೀ ಸೀತಾರಾಮಾಚಾರ್ಯರ ಮಗ, ಗೊತ್ತಿದ್ದ ಮನಿ- ಹುಡುಗನಿಗೆ ಮಾಸ್ತರ ನೌಕರಿ ಆಗೂದದ ಅಂತ, ಎಲ್ಲಾ ತಿಳ್ಕೊಂಡು ಒಪ್ಪಿಗೆ, ಪಸಂತಿ ಎಲ್ಲಾ ಒಂದೇ ದಿನದಾಗೇ ಮುಗಿತಂತ. ಮುಂದೆ ಐದಾರು ತಿಂಗಳಳೊಳಗ ಲಗ್ನದ ವ್ಯವಸ್ಥ ಆಯ್ತ. ಲಗ್ನದ ಹುಡುಗಿ ಆದರೆ ಇನ್ನೂ ಚಿಕ್ಕವಳು ಪ್ರಾಪ್ತವಯಸ್ಕಳಲ್ಲ.
ಧೂಳಖೇಡದ ಹಿರಿಯ ಅಳಿಯ ಶ್ರೀ ವಸಂತಾಚಾರ್ಯ ಜೋಷಿಯವರ ಪೌರೋಹಿತ್ಯದಲ್ಲಿ ಭಂಡಾರಕವಠೆಯ ಅಳಿಯ ಶ್ರೀ ಭೀಮರಾವ್ ಕುಲಕರ್ಣಿಯವರ ಉಸ್ತುವಾರಿಯಲ್ಲಿ ಕ್ಷೇತ್ರ ಧೂಳಖೇಡದ ಶ್ರೀ ಶಂಕರಲಿಂಗ ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ವಿವಾಹ ಸಂಪನ್ನ ವಾಯಿತು.
ಸೊಸೆ ದೊಡ್ಡವಳಾದ ಮೇಲೆ ತದ್ದೇವಾಡಿಯಿಂದ ಕೇರೂರು ಹತ್ತಳ್ಳಿ ಮಾರ್ಗವಾಗಿ ಎತ್ತಿನ ಗಾಡಿಯಲ್ಲಿಯಲ್ಲಿ ಊದಿಸುತ್ತ ಬಾರಿಸುತ್ತ ಸಂಭ್ರಮ ಸಡಗರದಿಂದ ನಿವರಗಿಗೆ ಕರೆತಂದರಂತೆ.
೧೯೫೦-೫೧ ಇರಬಹುದು ತಂದೆಯವರಿಗೆ ಅದೇ ಆಗ ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗವಾದ ವಾಗದರಿ ಗ್ರಾಮದಲ್ಲಿ ಕನ್ನಡ ಪ್ರಾಥಮಿಕ ಶಿಕ್ಷಕ ಎಂದು ನೌಕರಿ ಹತ್ತಿತ್ತಂತೆ.
|| ಕನ್ಯಾಂ ಕನಕ ಸಂಪನ್ನಾಂ ಕನಕಾಭರಣೈರ್ಯುತಾಂ |
ದಾಸ್ಯಾಮಿ ವಿಷ್ಣವೇತುಭ್ಯಂ ಬ್ರಹ್ಮ ಲೋಕ ಜಿಗೀಪಯಾ |
ವಿಶ್ವಂಭರ: ಪಂಚಭೂತಾ ಸಾಕ್ಷಿಣ್ಯಸ್ಸರ್ವ ದೇವತಾ |
ಘಟನೆ ೨
ತಂದೆಯವರ ನೌಕರೀ ಕತೆ ಅವರೇ ಹೇಳಿದಹಾಗೆ
ಬ್ರಿಟಿಷರ ರಾಜಕೀ ಮುಗಿದಕಾಲ ೧೯೫೦ ಇರಬೇಕು ಅಣ್ಣಗ ಸೊಲಾಪೂರ ಶಿಕ್ಷಣಾಧಿಕಾರಿ ಕಚೇರಿಯಿಂದ ಮುಲಾಖತಕ್ಕ ಬರಬೇಕಂತ ಹುಕುಂ ಬಂತಂತ ಹೋಗಲಿಕ್ಕೆ ಬರಲಿಕ್ಕಿ ಸಾಧನ ಇರಲಿಲ್ಲ ರಾತ್ರಿ ಹಿಡದೂ ತಯಾರಿ ಮಾಡಕೋ ಬೇಕು ನಸುಕಿನ ನಾಲ್ಕು ಗಂಟೆಗೆ ಅಣ್ಣಾಗೆ ಸ್ಮಶಾನ ಹತ್ತಿರದ ಹಳ್ಳಾದಾಟಿ ಅರಳೀ ಗಿಡದ ತನಕ ದಾದಾ ಕಳಸಲಿಕ್ಕಿ ಬಂದಿದ್ರಂತ
ನಿವರಗಿ ಬಿಟ್ಟು ನಡಕೋತ ಗೋವಿಂದಪುರ ಬಂದು ಭೀಮಾನದಿ ಈಸಗೋತನೇ ದಾಟದರಂತೆ. ಮಳೆಗಾಲ ತುಂಬಿದ ನದಿ, ಭಂಡಾರ ಕವಠೆಯಿಂದ ನಡಕೋತನೇ ಮಂದ್ರೂಪಕ್ಕ ಬಂದಾಗ ಒಂದು ಹಳೀ ಡಗ್ಗಡ ಗಾಡಿ ಸೋಲಾಪುರಕ್ಕ ಹೋಗಲಿಕ್ಕೆ ನಿಂತಿತ್ತಂತ ಕುರಿ ತುಂಬದಂಗ ತುಂಬಕೊಂಡು ಹೊಂಡಬೇಕ ಅನೂದರಾಗ ಎಣ್ಣಿ ಇಲ್ಲ ಘಾಸಲೇಟ ಹಾಕಿ ಗಾಡಿ ಮೂಗನಾಗ ಒಂದು ಸಳಾಕಿ ಹಾಕಿ ಜೋರಾಗಿ ತಿರಗಸದಾಗ ಪೂರಾ ಗಾಡಿ ಅಳಗ್ಯಾಡಿ ಕೆಟ್ಟ ಹೊಲಸ ಹೊಗಿ ಬಿಟಗೊತ ಚಾಲೂ ಆದರ,ಅದರ ಆನಂದ ಆಯ್ತಂತ. ತೇರಾ ಮೈಲಿಗಿ ಬರುದರಾಗ ಮತ್ತು ಹಿಂಗೇ ಮಾಡಬೇಕಾಯ್ತು. ಸ್ವಾರೇಗಾಂಯಿಗೀ ಬಂದಾಗ ಒಮ್ಮೆ ಬಂದು ಬಿದ್ದು ಮತ್ತೆ ಚಾಲೂ ಮಾಡಿ ಸೋಲಾಪೂರ ಸ್ಟೇಶನ್ ದಾಟಿ ಮೆಕ್ಯಾನಿಕ್ ಚೌಕನಾಗ ತಂದು ನಿಂದರಸಿ ಬಿಟ್ಟಂತ. ಅಲ್ಲಿಂದ ನಡಕೋತ ಶಿಕ್ಷಣಾಧಿಕಾರಿ ಕಚೇರಿಗಿ ಬರಬೇಕಾದರ ಮಧ್ಯಾಹ್ನದ ಎರಡು ಗಂಟೆ ಆಗಿತ್ತಂತೆ. ಅಷ್ಟೋತ್ತಿಗಿ ಮುಲಾಖತ ಮುಗಿಸಿ ಇನ್ನೇನು ಕಛೇರಿ ಬಾಗಿಲು ಮುಂದಮಾಡಿ ಎಲ್ಲರೂ ಊಟಕ್ಕೆ ಹೊಂಟಾಗ ಅಣ್ಣ ಕಛೇರಿ ಬಾಗಲದಾಗ ಹಜರ.
ಮುಲಾಖತ ಮುಗಿದದ ಅಂತ ಕೇಳಿ ಎಷ್ಟು ಲಗು ಹೊಂಟರೂ ಬರಲಿಕ್ಕೆ ತಡಾ ಆಯಿತಲಾ ಕೆಟ್ಟ ಅನಿಸಿ "ಸಾಹೇಬರ ನೋಡಬೇಕು ಬಂದದ್ದು ಹೇಳಬೇಕು. ಅವರ ಬಂಗ್ಲಾ ಎಲ್ಲೆದ " ಪಿವುನ ಮನಿ ತೋರಸದ ಅದೇ ಆಗಿ ಸಾಹೇಬರು ಊಟ ಮಾಡಿ ಹೊರಗೆ ನಿಂತಿದ್ದರಂತ ನಮಸ್ಕಾರ ಮಾಡಿ. ನಾ ನಿವರಗೀ ಅಂತ ಹಳ್ಳಿಯಿಂದ ಬಂದೀನರಿ ಸೋಲಾಪುರಕ ಬರಲಿಕ್ಕೆ ಸಾಧನ ಇಲ್ಲ ನಡಕೋತ ಬರಬೇಕಾದರೆ ಇಷ್ಟು ಹೊತ್ತು ಆಯ್ತರೀ, ಶಿಕ್ಷಕ ಮುಲಾಖತಕ್ಕ ಬಂದಿದ್ದರೀ, " ಒಂದಗಂಟೆಕ್ಕ ಮುಲಾಖತ ಮುಗಿದದ ಊಟಮಾಡಿ ನಾಲ್ಕು ಗಂಟೆಗೆ ಬಾ ನೋಡುಣು " ಎಲ್ಲಿ ಊಟರಿ ನಾ ಇನ್ನಾ ನೀರು ಕುಡದಿಲ್ಲ ಊಟ ಯಾರ ಹಾಕಬೇಕ ನಮಗ ಇಲ್ಲಿ ಸೋಲಾಪುದಾಗ, ನನ್ನ ತಲಿ ಹೊಡದಂಗಾಯ್ತ, ನನಗ ಕೊಂದರಿ ನೀವು. ನಮ್ಮ ಹಳ್ಳಿ ಮಂದಿ ಹಣೇಬರ ಇಷ್ಟೇನೆ " ಅಂತ ಅಂದಾಗ " ನೀ ಯಾತರಂವಾ ಊಟ ನೀರಾ ತಂದು ಕುಡತಾರ ಮಾಡು ಅಲ್ಲಿ ಕೂತು ಉಣ್ಣು". ಅಂದರು.
ನಾಲ್ಕು ಗಂಟೆಗೆ ಕಛೇರಿ ಬಾಗಲದಾಗ ಸಾಹೇಬರು ಭೆಟ್ಟಿಯಾಗಿ ನಿನ್ನ ಮಾಹಿತಿ ಎಲ್ಲಾ ತಿಳಿಸು ಮನಿಪತ್ತಾ ಕೊಟ್ಟು ಹೋಗು ಅಂದರಂತ. "ಮುಲಾಖತ ರೀ" ಅದು ಆಗೆದ ಹೋಗು ಅಂತ ಹೇಳಿ ಕಳಸದರಂತ
ಇದು ತಂದೆಯವರ ನೌಕರೀ ಕತೆ ಅವರೇ ಹೇಳಿದಹಾಗೆ
Appointed as Primary School Teacher Director of Public Instructions Department of Education Mumbai Rajya on Jun 12th 1950 resumed at Kannada Full Primary School Wagdari Tq Akkalkot Distt Solapur...
In 1977-78, he successfully completed the three-months training course for in-service Headmasters at the Barshi, Solapur, at Office of the Field Education Officer.
In JAN 1990 Shri Shridhar Sitaram Katti Head Master Kannada Full Primary School Wagdari Tq: Akkalkot Distt: Solapur attended seminar, workshop and try out finalization of KANNADA BAL BHARATI STD IV text book for Maharashtra state under the organizing of Shri K.S.Hegade at Balbharati Bhavan PUNE successfully
After successful completion of total service 41 years retired on May 31st 1991 under superannuation
....ಮುಂದುವರಿಯುವುದು





No comments:
Post a Comment